’ಮನುಷ್ಯ’ ಒಂದು ಚಿಂತನಾಶೀಲ ಪ್ರಾಣಿ? ಆದರೆ ೪ಬೇರೆಬೇರೆಪ್ರಾಣಿಗಳ ೧ಸಂಗಮ ಎಂಬುದೆ ಅಸಲಿಯತ್ತು?! ಪಂಚಭೂತಗಳಿಂದಾದ ಮಾನವನು ವೈಯುಕ್ತಿಕ ಶರೀರ ಮತ್ತು ಹೆಸರಿನಿಂದ ಪರಿಚಯಗೊಂಡು ಸ್ವಭಾವ-ವರ್ತನೆ-ಕಾರ್ಯಗಳಿಂದ ಒಳ್ಳೆಯ ಅಥವ ಕೆಟ್ಟದ್ದಾದ ಗುಣದವನೆಂದು ಗುರುತಿಸಲ್ಪಡುತ್ತಾನೆ. ಮಹಾಪುರುಷ-ಪವಾಡಪುರುಷ ಪಂಡಿತ-ಪಾಮರ ಮಹಾರಾಜ-ಚಕ್ರವರ್ತಿ ಸೇನಾಪತಿ-ಕುಲಪತಿ ಕವಿ-ರಾಷ್ಟ್ರಕವಿ ಮಠ-ಪೀಠಾಧಿಪತಿ ಮೊದಲ್ಗೊಂಡು ಪ್ರತಿಯೊಬ್ಬರೂ ತಮ್ಮ ಪೂರ್ಣಆಯುಷ್ಯದಲ್ಲಿ ಬರುವ ೪ಹಂತಗಳು:- [೧]ಹಂದಿ [೨]ಕುದುರೆ [೩]ಕತ್ತೆ ಹಾಗೂ [೪]ಗೂಬೆ ಪ್ರಾಣಿಗಳ ಜೀವನ ಹೊರೆಯಲೇಬೇಕು!? ಹಂದಿಆಯುಷ್ಯ ೭ವರ್ಷ; ಕುದುರೆಆಯುಷ್ಯ ೧೮ವರ್ಷ; ಕತ್ತೆಆಯುಷ್ಯ ೩೫ವರ್ಷ; ಗೂಬೆಆಯುಷ್ಯ ೪೦ವರ್ಷ. ಹೀಗೆ ೪ಪ್ರಾಣಿಗಳ ಒಟ್ಟು ಆಯುಷ್ಯ ಸೇರಿಸಿದರೆ ಮನುಷ್ಯಪ್ರಾಣಿಯ ಆಯುಷ್ಯವು ೧೦೦ವರ್ಷ ಸರ್ವೆಸಾಮಾನ್ಯ! ಆದ್ದರಿಂದ ಪ್ರತಿಯೊಬ್ಬ ಮಾನವನೂ;…..

೧.]ಹಂದಿಜೀವನ[೭ವರ್ಷಕಾಲ]:-ಹುಟ್ಟಿದ ದಿನದಿಂದ ಹಲ್ಲು ಬೀಳುವವರೆಗೆ [ಕತ್ತೆ]ಹಾಲು ಕುಡಿದ ಹೆಚ್ಚು ಕಾಲ ನಿದ್ದೆ ಹೊಡೆದು ಮಲಗಿದ್ದ [ಮಗ್ಗಲ]ಲ್ಲೆ ಒಂದಾ ಎರಡಾ ಮಾಡಿಕೊಂಡು ಮಲಮೂತ್ರ ಧೂಳುಕೆಸರು ಕಲ್ಲುಮಣ್ಣಲ್ಲಿ ಬಿದ್ದುಒದ್ದಾಡಿ ಮೈಕೈಬಾಯ್ಗೆ ಮೆತ್ತಿಸಿಕೊಂಡು ಉಗಿ[ದು]ಸಿ ಕೊಂಡು, ಹೊಡೆ[ದು]ಸಿಕೊಂಡು, ಬೈ[ದು]ಸಿಕೊಂಡು ಕಚ್ಚಿ[ಸಿ]ಕೊಂಡು ಕಣ್ಣೀರು-ಗೊಣ್ಣೆ ಬಾಯ್ಗೆ ಬರಿಸಿಕೊಂಡು ಅಜ್ಜೀಗುಜ್ಜಿ, ಕೂಸುಮರಿ, ಅವಲಕ್ಕಿಪವಲಕ್ಕಿ, ಕಣ್ಣಾಮುಚ್ಚಾಲೆ, ಕುಂಟಾಬಿಲ್ಲೆ, ಜೂಟಾಟ, ಚೆಂಡಾಟ ಇತ್ಯಾದಿ ಆಡುತ್ತ; ಪೆಪ್ಪರ್‌ಮೆಂಟ್ ಬಿಸ್ಕತ್ ಲಾಲಿಪಾಪ್ ಬೊಂಬೆ ಮಿಠಾಯಿ ಕಂಡಿ[ಸಿಕ್ಕಿ]ದ್ದೆಲ್ಲಾ ಕದ್ದುಮುಚ್ಚಿ [ಕಾಗೆ]ಎಂಜಲು ತಿನ್ನುತ್ತ; ಕೆಳಗೆಬಿದ್ದುದನ್ನು ಒರೆ[ಸಿ]ಸದೆ ತಿಂದು ಹಂದಿಯಂತೆ ಕೊಳಕು ಜೀವನ ಹೊರೆಯುತ್ತಾನೆ! ಇಷ್ಟಾದರೂ, ಅಂಬೆಗಾಲು, ೩ಚಕ್ರದ ನಡೆಗಾಲಿ ಹಿಡಿದು, ಅರ್ಧಪೆಡಲ್ ಸೈಕಲ್‌ಹೊಡೆದು, ಬಿದ್ದು ಮಾಡಿಕೊಂಡ ಗಾಯಕ್ಕೆ ಮಣ್ಣು/ಎಂಜಲು ಸವರಿ ಚಿಕಿತ್ಸೆ ಮಾಡಿಕೊಂಡು, ಯಾವುದನ್ನು ತಿನ್ನ [ಬೇಕು]ಬಾರದು, ಶುದ್ಧಾಶುದ್ಧದ, ವಿಷಾಮೃತದ, ಶುಚಿರುಚಿಯ, ಪರಿವೆಯಿಲ್ಲದೆ, ಕಪಟ ಮೋಸ ವಂಚನೆ ಸುಳ್ಳು ಕಳ್ಳತನ ಒಳ್ಳೇ[ವ್ರು]ದು-ಕೆಟ್ಟ[ವ್ರು]ದ್ದು ಅರಿವಿಲ್ಲದೆ, ಸ್ಪಟಿಕದಂಥ ಮನಸ್ಸಿನ ಕಮಲದಂಥ ಕೋಮಲ ಹೃದಯದ ಪವಿತ್ರ ಮಗುವಿನ ಹಂತವೂ ಇದಾಗಿದೆ.!

೨]ಕುದುರೆಜೀವನ[೧೮ವರ್ಷಕಾಲ]:-೮ರಿಂದ ೨೫ನೇ ಹರೆಯದ/ಮದುವೆಯಾಗೊ ವರೆಗೆ ೧೮ವರ್ಷ ಲಗಾಮಿಲ್ಲದ ಕುದುರೆಯಂತೆ ಇರುತ್ತಾನೆ. ಪಡ್ಡೆಹುಡ್ಗ ರೇಸ್ ಕುದುರೆಯಂತೆ ಓಟ ಓಡ್ತಾನೆ, ಪಡ್ಡೆಹುಡ್ಗಿ ಪಟ್ಟದ ಕುದುರೆಯಂತೆ ನಡಿಗೆ ಹಾಕ್ತಾಳೆ. ಯಾವಾಗ್ಲು ಹುಡುಗಾಟ, ಚೆಲ್ಲಾಟ, ಹುಡುಗ್ ಮುಂಡೇದಕ್ಕೆ ಚೂರು ಜವಾಬ್ಧಾರಿಯಿಲ್ಲ ಮುಂತಾದ ನಾಣ್ಣುಡಿ ಇವತ್ತಿಗೂ ಅನ್ವಯ? ಹಮ್ಮು ಬಿಮ್ಮು ಉಡಾಫ಼ೆ ಹುಮ್ಮಸ್ಸು ಹೆಚ್ಚುಇದ್ದು ಯಾ[ರ]ವ ಕಾಟವು ಇಲ್ಲದ ಯಾವ ಚಿಂತೆಯು ಒಲ್ಲದ ಯುವಶಕ್ತಿ ವಯಸ್ಸು[ಯಂಗ್‌ಏಜ್]! ೩ಹೊತ್ತು ಓದು ಬರಹ ಪರೀಕ್ಷೆ ಪಾಠ ಊಟ ಆಟ [ಗೋಲಿ ಬುಗುರಿ ಚಿನ್ನಿ ದಾಂಡು ಫ಼ುಟ್ಬಾಲ್ ಕ್ರಿಕೆಟ್ ಚೆಸ್ ಕೇರಮ್ ಕೋಕೋ ಮರಕೋತಿ ಕುಂಟಾಟ ಆಟೋಟ ಅಳ್ಳಿಗುಳಿಮನೆ ಚೌಕಾಬಾರ ಗಟ್ಟಾಮನೆ ಸೈಕಲ್-ಬೈಕ್-ಕಾರ್ ರೈಡ್/ರೇಸ್] ಇವುಗಳದ್ದೆ ದರ್ಬಾರ್! ಯೂತ್ ಸ್ಟೇಜಲ್ಲಿ ಪಾಕೆಟ್‌ಮನಿಗಾಗಿ ಏನನ್ನಾದರು ಸಾಧಿಸುವ ಯಾರನ್ನಾದರು ಎದುರಿಸುವ ಹೇಗಾ[ಎಷ್ಟಾ]ದರು ಸಂಪಾದಿಸುವ ಸುಮಾನ/ಶೋಕಿ ಹೆಚ್ಚಾಗೆ ಇರುತ್ತದೆ. ಸವಾಲ್‌ಹಾಕುವಕ್ರೇಜ಼್ ಸ್ಪರ್ಧೆಗೆಲ್ಲುವಜೋಶ್ ಇದ್ದೇ ಇರುತ್ತದೆ. ವಿತಂಡ[ವಿ]ವಾದ ಡೋಂಟ್‌ಕೇರ್ ಆದರಾಯ್ತು ಹೋದ್ರೆಹೋಯ್ತು ರೆ[ರ]ಫ಼್ಯೂಸ್ ಹೆವಿಸ್ಪೀಡ್ ಲ[ಸ್ಟ್]ವ್ ಇನ್‌ಫ಼್ಯಾಚುಯೇಶನ್ ಅಲ್ಟ್ರಾಮಾಡ್ರನ್ ಪ್ಯಾಶನ್ ಫ಼್ಯಾಶನ್ ಸ್ಟೈಲ್ ಡಿಸೈನ್ ದಿಢೀರ್‌ಸಾಧನೆ/ಇನ್‌ಸ್ಟೆಂಟ್‌ಅಚೀವ್‌ಮೆಂಟ್ ರಾರಾಜಿಸುತ್ತದೆ! ಜತೆಗೆ; ಫ಼ೇಲ್ಯೂರ್ ಟಾರ್ಚರ್ ಹೇಸ್ಟಿಡಿಸಿಶನ್ ಜುಗುಪ್ಸೆ ಆತ್ಮಹತ್ಯೆ/ಹೇಡಿತನ ಬಿಸಿರಕ್ತದ ಅಹಂ ಮುಂತಾದವೂ ಅದ್ದೂರಿಯಾಗಿರುತ್ತದೆ. ಆದರೆ ತಾಯಿತಂದೆ ಗುರುಹಿರಿಯರ ಅನುಭವದ ಹಿತನುಡಿಗೆ, ಬಂಧುವರ್ಗದ ಮಾರ್ಗದರ್ಶನಕ್ಕೆ, ಕವಡೆಯಷ್ಟು ಕಿಮ್ಮತ್ತಿಲ್ಲದ ಯೌವ್ವನದ ಇಗೋ ಹಂತ!

೩]ಕತ್ತೆಜೀವನ[೩೫ವರ್ಷಕಾಲ]:-೨೬ರಿಂದ ೬೦ವಯಸ್ಸಿನ/ನಿವೃತ್ತಿಯಾಗೊ ವರೆಗೆ ೩೫ವರ್ಷಕಾಲ ಪ್ರತಿಫ಼ಲಾಪೇಕ್ಷೆ ಇಲ್ಲದೆ ದುಡಿವ ಕತ್ತೆಯಂತೆ!. ಯಾರೂ ಕತ್ತೆಯನ್ನು ಸಾಕುವುದಿಲ್ಲ ಆದರೆ ೧ಕತ್ತೆಯು ೧೦ಮಂದಿಯನ್ನು ಸಾಕಬಲ್ಲದು! ’ಕತ್ತೆವಯಸ್ಸಾದ್ರು ಬುದ್ಧಿಬರಲಿಲ್ಲ, ದುಡಿಮೆಯಿಲ್ಲ ಸಂಪಾದನೆಯಿಲ್ಲ, ಮದುವೆಯೂಆಗಲಿಲ್ಲ, ಉದ್ಯೋಗಂ ಪುರುಷ ಲಕ್ಷಣಂ’ ಮುಂತಾದ ಸಹಸ್ರನಾಮ ಕೇಳಬೇಕಾಗುತ್ತದೆ. ಸ್ವಯಂ ಸುಖಕ್ಕಾಗಿ ಅಲ್ಲದಿದ್ದರೂ ಕುಟುಂಬದ[ಹೆಂಡ್ತಿ,ಮಕ್ಕಳು,ಅಳಿಯ,ಸೊಸೆ,ಮೊಮ್ಮಕ್ಕಳು] ಖರ್ಚು-ವೆಚ್ಚ ಉಳಿತಾಯ-ಹಣ ಆಸ್ತಿ-ಅಂತಸ್ತು ನಗದು-ಚಿನ್ನ ಮನೆ- ಜಮೀನು ಜಾತ್ರೆ-ಜಾನುವಾರು ಮನೆಕಟ್ಟು-ಮದುವೆಮಾಡು ವರದಕ್ಷಿಣೆ-ವರೋಪಚಾರ ಮುಯ್ಯಿ-ದೇಣಿಗೆ ಬಸುರಿ-ಬಾಣಂತನ ನಾಮಕರಣ-ಹರಕೆ ಹಬ್ಬ-ಹರಿದಿನ ದಾನ-ಧ[ಕ]ರ್ಮ ಮಾನಾಭಿಮಾನ-ಮರ್ಯಾದೆ ಭಂಡಾಟ-ಕಾದಾಟ ಶಾಂತಿ-ಸಹನೆ ಮಿತ್ರ[ಶತ್ರು]ತ್ವ ದಂಡ-ಶುಲ್ಕ ಸಸ್ಪೆಂಡ್-ಪ್ರಮೋಶನ್, ಟೆನ್ಶನ್-ಪೆನ್ಷನ್, ರೋಗ-ರುಜಿನ ಕಷ್ಟ-ನಷ್ಟ ಸಾವು-ನೋವು ಮುಂತಾದ ಹೊಣೆಗಾರಿಕೆಯನ್ನು ಹೊರಲೇಬೇಕು. ಮಾಡುವ ಉದ್ಯೋಗ ಯಾವುದೆಇರಲಿ ಸರಿದಾರಿಯಲ್ಲಿ ಜೀವನಸಾಗಿಸಲು ೧ಕತ್ತೆಯಷ್ಟು ಅವಧಿವರೆಗೆ ದುಡಿಯ[ಲೇ]ಬೇಕು. ಆಗಮಾತ್ರ ’ಯಜಮಾನ/ಹೆಡ್‌ಆಫ಼್‌ದಿಫ಼್ಯಾಮಿಲಿ’ ಎಂಬ ಗೌರವ ಸಿಗಬಹುದು?!
ಕತ್ತೆಜೀವನದ ಅವಿಭಾಜ್ಯ ಅಂಗವೆ ಸಂಸಾರಿ:- ಗೃಹಸ್ಥ, ರೈತ, ಯೋಧ, ಅಧಿಕಾರಿ, ಪರಿಚಾರಕ, ಟೆಕ್ಕಿ, ಚಿತ್ರ್ಯೋದ್ಯಮಿ, ಪತ್ರಿಕೋದ್ಯಮಿ, ವ್ಯಾಪಾರಿ, ಕೂಲಿ, ಪುಢಾರಿ, ಅವರ್ಯಾರೆ ಆಗಿರಲಿ ತಂತಮ್ಮ ಕೆಲಸದಲ್ಲಿ ಸೈ ಅನಿಸಿ[ಕೊಂಡರು]ಕೊಳ್ಳದಿದ್ದರು ತ್ಯಾಂಕ್‌ಲೆಸ್ ಜಾಬ್ ಸ್ಯಾಟಿಸ್‌ಫ಼್ಯಾಕ್ಷನ್ ಇಲ್ಲ ಎಂದು ನಿರಾಶೆಗೊಂಡರೂ ನ್ಯಾಯ ಪಂಚಾಯ್ತಿ, ಪೊಲೀಸ್, ಕೋರ್ಟ್, ರಾಜಿ, ತೀರ್ಮಾನ, ಬೀಜ, ಗೊಬ್ಬರ, ಬೆಳೆ, ಸಕ್ಕರೆಕಾರ್ಖಾನೆ, ಲೇವಾದೇವಿ, ಬ್ಯಾಂಕ್‌ಸಾಲ, ಆತ್ಮಹತ್ಯೆ, ಬರ[ನೆರೆ]-ಪರಿಹಾರ, ಪಾಲಿಟಿ[ಟ್ರಿ]ಕ್ಸ್, ಟೆರರಿಸ್ಟ್, ಸರ್ಜಿಕಲ್‌ಸ್ಟ್ರೈಕ್, ವಾರ್, ಸೀಸ್‌ಫ಼ೈರ್, ಹುತಾತ್ಮ, ಫ಼್ಲೆಕ್ಸ್‌ಬೋರ್ಡ್, ಪಾಪಪುಣ್ಯ ಮುಂತಾದ ಸಾಮಾಜಿಕ ಜವಾಬ್ಧಾರಿಯಿಂದ ತೊಡಗಿಸಿಕೊಂಡರೂ ಭೇಷ್ ಎನಿಸಿ ಕೊಳ್ಳಲು ’ಕತ್ತೆ ದುಡಿಮೆ/ಕರ್ತವ್ಯ’ ಮಾತ್ರ ಪ್ರಮುಖ ಪಾತ್ರ ವಹಿಸುತ್ತದೆ. ಕಡೆಗೊಮ್ಮೆ ಗು[ಬ್ಯಾ]ಡ್ ಬೈ ಹೇಳುವ ಕತ್ತೆಜೀವನದ ಹಂತವೂ ಶ್ಲಾಘನೀಯವೆ?!

೪]ಗೂಬೆಜೀವನ[೪೦ವರ್ಷ]:-೬೦ವಯಸ್ಸು[ನಿವೃತ್ತಿ]ನಂತರದ ವೃದ್ಧಾಪ್ಯ ಜೀವನವು[೩೬೦ಡಿಗ್ರಿ ಕತ್ತುತಿರುಗಿಸುವ]ಗೂಬೆಯಂತೆ! ಪಿಂಚಣಿ ರ[ಸ]ಹಿತದ ’ಬೋನಸ್ ಲೈಫ಼್’ನ ಬಿರುದುಗಳು:- ಹಳೇಮಿಶಿನ್ ವೇಸ್ಟ್‌ಬಾಡಿ ಮುದಿಗೂಬೆ ದಂಡಪಿಂಡ ಭೂಮಿಗೆಭಾರಅನ್ನಕ್ಕೆದಂಡ ಆಟಕ್ಕುಂಟು ಲೆಕ್ಕಕ್ಕಿಲ್ಲ ಇತ್ಯಾದಿ. ಪ್ರತಿದಿನ ಮನೆಯಲ್ಲಿ ಮೊದಲು ಎಲ್ಲರದ್ದು ಆದ ಮೇಲೆ ಕಟ್ಟಕಡೆಗೆ [ಕರೆಂಟ್/ಗೀಜ಼ರ್/ಸೌದೆ ಅವಲಂಬಿಸಿದ ಬಿಸಿನೀರು/ತಣ್ಣೀರು]ಸ್ನಾನ, ಪೂಜೆ, ಕಾಫ಼ಿ, ತಿಂಡಿ! ಸೊಸೆಯು ಹೌಸ್ ಮೇಕರ್ ಆಗಿದ್ರೆ ಎಲ್ಲವು ಬಿಸಿ! ಉದ್ಯೋಗಿಯಾದಲ್ಲಿ ಎಲ್ಲಾ ತಣ್ಣಗೆ! ಮಹಡಿಹಂತದ ಕೆಳಗಿನ [ಹಳೆ] ದಿವಾನ್‌ಕಾಟ್‌ನ ಹರುಕು ಹಾಸಿಗೆಮೇಲೆ ’ಕುಳಿತು-ಮಲಗಿ-ಮತ್ತೆ ಎದ್ದುಕುಳಿತು’ ತೆಪ್ಪಗಿರಬೇಕು. ಒಂದುವೇಳೆ ಸೊಳ್ಳೆ/ನೊಣ/ತಿಗಣೆ ಇದ್ದರೆ ಮರ್ಡರ್ ಮಾಡಬೇಕು. ಅವರಿಷ್ಟಪಟ್ಟ ಕಾರ್ಯಕ್ರಮದ ರೇಡಿಯೋ ಕೇಳಿಸಿಕೊಳ್ಳಬೇಕು, ಟಿ.ವಿ.ನೋಡಬೇಕು. ಅಪರೂಪಕ್ಕಾದ್ರು ನಮ್ಮಿಷ್ಟಕ್ಕೆ ಇರಲು ಬೆಲೆಇಲ್ಲದಾಗ ಮೌನವು ಅನಿವಾರ್ಯ! ಇವೆಲ್ಲ ನಿರಾಶೆ ಮಧ್ಯೆ ತಾತಾಎಂದು ಕರೆಯುವ ಮುದ್ದುಮೊಮ್ಮಕ್ಕಳ ತೊದಲುನುಡಿ ಸ್ಪರ್ಶಸುಖ ಆಟಪಾಠ ಆಶ್ಚರ್ಯಕರ/ನಿರುತ್ತರದ ಪ್ರಶ್ನೆಯಾದರೂ ನೆಮ್ಮದಿ-ಸಂತಸ ಸಿಗುತ್ತದೆ. ಬದುಕಬೇಕೆಂಬ ಆಶಾಕಿರಣ ಮರಳಿಬಂದು ವೈರಾಗ್ಯವು ಓಡಿಹೋಗುತ್ತದೆ. ಮನೆಯಒಳ[ಹೊರ]ಗೆ ’ಏನ್ ಯಜಮಾನ್ರೆ ಹೇಗಿದ್ದಿರಾ’ ಕೇಳಿದವರಿಗೆಲ್ಲ ಒಂದೇ ಉತ್ತರ ಊರುಹೋಗು, ಕಾಡುಬಾ ಎನ್ನುತ್ತಿದೆ ಹೇಳಿಹೇಳಿ ಸಾಕಾಗುತ್ತದೆ. ಗೂಬೆಜೀವನದವರ ಆಸ್ತಿಯೆಂದರೆ; ಬೊಚ್ಚುಬಾಯ್, ಬಾಡಿದಮೈ, ಬಾಂಡ್ಲಿತಲೆ, ಹಳೇದಾದ ಸೋಡಗ್ಲಾಸ್‌ಕನ್ನಡಕ, ಊರುಗೋಲು ಮಂಕಿಟೋಪಿ-ಸ್ವೆಟರ್ ಚತ್ರಿ-ಚಪ್ಪಲಿ? ಯಾವುದೆ ಟೈಮ್‌ಟೇಬಲ್ ಇರುವುದಿಲ್ಲ ಬೆಳಗ್ಗೆ-ಸಂಜೆ ವಾಕಿಂಗ್-ಭಜನೆ ಮಧ್ಯಾಹ್ನದಗೊರಕೆ ಮಧ್ಯರಾತ್ರಿ ಕೆ[ದ]ಮ್ಮು ಬಿಪಿ-ಶುಗರ್ ಕಾಮನ್! ಔಷಧಿ-ಮಾತ್ರೆ [ಅ]ಲಭ್ಯವಾದಾಗಲಂತೂ ಪೀಕಲಾಟ-ನರಳಾಟ. ಯಾವಾಗ ಯಾರೊಡನೆ ಎಲ್ಲಿ ಹೇಗೆ ಏನು ಮಾತಾಡಬೇಕು ಎಷ್ಟು ತಿನ್ನಬೇಕು ಯಾವುದು ತಿನ್ನ[ಮಾತಾಡ]ಬಾರದು ತಿಳಿಯದಂಥ ಅರಳು-ಮರಳು! ತತ್ಪರಿಣಾಮ, ಅವಮಾನ ತಿರಸ್ಕಾರ ಕಣ್ಣೀರು ಬದುಕಿಯೂ ಸತ್ತಂತೆ ಇರಬೇಕಾದ ದಯನೀಯಸ್ಥಿತಿ ವೈರಾಗ್ಯದಗತಿ! ಇಷ್ಟಾದರೂ….. ಮರಿಮಕ್ಕಳನ್ನು ಕಾಣುವಾ[ದುರಾ]ಸೆ ತೀರ್ಥಯಾತ್ರೆ ಮಾಡುವ ಮಹದಾಸೆ ಇರುತ್ತೆ?! ಕಾಲಾಯತಸ್ಮೈನಮಃ ಕೊನೆಯ ಉಸಿರಿನ/ಗುಟುಕಿನ/ತುತ್ತಿನ ಸಮಯ ಬರುವವರೆಗೂ ಹೊ[ರ]ಗೆ ಹಾಕಿಸಿಕೊಳ್ಳೊವರೆಗೂ ತೆಪ್ಪಗಿರಬೇಕಾದ ೬೧ರಿಂದ ೧೦೦ವರ್ಷದ ಮುತ್ಸದ್ದಿಜೀವನವೆ ಗೂಬೆಜೀವನದ ಹಂತ!
ಜೈಮಾನವಪ್ರಾಣಿ

ಕುಮಾರಕವಿ ಬಿ.ಎನ್.ನಟರಾಜ್
ಬೆಂಗಳೂರು ೯೦೩೬೯೭೬೪೭೧