ಗುಂಡ್ಲುಪೇಟೆ: ತಾಲೂಕಿನ ಮೇಲುಕಾಮನಹಳ್ಳಿ ಎಂ.ಸಿ.ರೆಸಾರ್ಟ್‍ನಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡುತ್ತಿರುವ ಸಂಬಂಧ ಹಂಗಳ ಗ್ರಾಪಂ ಪಿಡಿಒ ಶಾಂತಮಲ್ಲಪ್ಪ ತಹಸೀಲ್ದಾರ್ ಕಚೇರಿಗೆ ಸದರಿ ಜಾಗದ ವಿಸ್ತೀರ್ಣ ಪ್ರದೇಶವನ್ನು ಸರ್ವೆ ಮಾಡಿ ಗಡಿ ಗುರುತಿಸಿಕೊಡಬೇಕು ಪತ್ರ ಬರೆದಿದ್ದಾರೆ.

ಎಂ.ಸಿ.ರೆಸಾರ್ಟ್‍ಗೆ ಮೇಲುಕಾಮನಹಳ್ಳಿ ಸ.ನಂ.112ರಲ್ಲಿ ಒಂದು ಎಕರೆ ಜಾಗದಲ್ಲಿ ಹೋಟೆಲ್ ಉದ್ಯಮ ಕಟ್ಟಡ ಉದ್ದೇಶಕ್ಕಾಗಿ ಅನ್ಯಕ್ರಾಂತವಾಗಿದ್ದು, ಈ ಪ್ರದೇಶವನ್ನು ಸರ್ವೆ ಮಾಡಿ ಗಡಿ ಗುರುತಿಸಿಕೊಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸ.ನಂ.112 ರಲ್ಲಿ ಒಂದು ಎಕರೆ ಪ್ರದೇಶದಲ್ಲಿ ಹೋಟೆಲ್ ಅನುಮತಿ ಪಡೆದು ಮೂರು ಎಕರೆ ಪ್ರದೇಶಕ್ಕಿಂತ ಹೆಚ್ಚು ಜಾಗದಲ್ಲಿ ಐಷಾರಾಮಿ ವಸತಿ ಗೃಹಗಳು, ಸ್ವಿಮ್ಮಿಂಗ್ ಪೂಲ್, ಡಾರ್ಮೆಟರಿ ನಿರ್ಮಿಸಿದ್ದಾರೆ. ಅನಧಿಕೃತ ಕಟ್ಟಡಗಳ ನಿರ್ಮಾಣವಾಗುತ್ತಿವೆ ಎಂದು ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ ಎನ್.ಪಿ.ನವೀನ್‍ಕುಮಾರ್, ಹಂಗಳ ಪಿಡಿಒ ಶಾಂತಮಲ್ಲಪ್ಪ ಎಂ.ಸಿ.ರೆಸಾರ್ಟ್ ಮಾಲೀಕ ಎಂ.ಸಿ.ನಾಗರಾಜುಗೆ ಪರಿಸರ ಸೂಕ್ಷ್ಮ ನಿರ್ವಹಣಾ ಸಮಿತಿ ಅನುಮತಿ ಪಡೆಯದೆ ಕಟ್ಟಡದ ಕಾಮಗಾರಿ ನಡೆಸದಂತೆ ರೆಸಾರ್ಟ್ ಮಾಲೀಕ ಎಂ.ಸಿ.ನಾಗರಾಜುಗೆ ಎಚ್ಚರಿಕೆ ನೋಟೀಸ್ ನೀಡಿದ್ದರು. ಆದರೂ ತಮ್ಮ ರಾಜಕೀಯ ಪ್ರಭಾವ ಬಳಸಿಕೊಂಡು ಕೆಡವಿದ್ದ ಕಟ್ಟಡಗಳ ನಿರ್ಮಾಣಕ್ಕೆ ಮುಂದಾಗಿದ್ದರು.

ವರದಿ: ಬಸವರಾಜು ಎಸ್.ಹಂಗಳ