ಮೈಸೂರು-11 ಪರಿಶುದ್ಧವಾದ ಹಸಿರು ವಾತಾವರಣದಿಂದ ಆರೋಗ್ಯ ವೃದ್ಧಿಸುತ್ತದೆ ಸುವರ್ಣ ಬೆಳಕು ಫೌಂಡೇಷನ್ ಅಧ್ಯಕ್ಷ ಮಹೇಶ,ಎಸ್ ಅಭಿಪ್ರಾಯಪಟ್ಟರು. ಮೈಸೂರಿನ ಕುವೆಂಪು ನಗರದಲ್ಲಿ ಕುವೆಂಪು ಪ್ರತಿಮೆ ಬಳಿ ಇರುವ ಉದ್ಯಾನವನದಲ್ಲಿ ಇಂದು ಸರಳವಾಗಿ ಗಿಡ ನೆಡುವ ತಮ್ಮ ಹುಟ್ಟಹಬ್ಬ ಹಾಗೂ ರಾಮನವಮಿಯ ಹಬ್ಬದ ಪ್ರಯುಕ್ತ ಮೂಲಕ ಚಾಲನೆ ನೀಡಿದರು.

ಪ್ರತಿಯೊಬ್ಬರ ಆರೋಗ್ಯ ಮತ್ತು ಜೀವನಕ್ಕೆ ಪರಿಶುದ್ಧವಾಗ ಗಾಳಿಯ ಅಗತ್ಯ ಇರುತ್ತದೆ, ಆದರೂ ಇಂದು ನಾವೆಲ್ಲರೂ ಯಾವುದೊ ಕಾರಣಕ್ಕಾಗಿ ಮರಗಿಡಗಳನ್ನು ಕಡಿದು ಪರಿಸರವನ್ನು ನಾಶ ಮಾಡುತ್ತಿದ್ದೇವೆ ಎಂದರು. ಪ್ರತಿಯೊಬ್ಬರು ವನ ಸಂಪತ್ತು ಹಾಗೂ ಪರಿಸರದ ಬಗ್ಗೆ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿರಬೇಕು, ಗಿಡಗಳನ್ನು ನೆಟ್ಟು ಬೆಳೆಸುವುದರಿಂದ ಸಸ್ಯ ಸಂಪತ್ತು ಅಭಿವೃದ್ಧಿಯಾಗುತ್ತದೆ, ಅರಣ್ಯ ಸಂಪತ್ತು ಹಾಗೂ ಪರಿಸರ ಸಂಪತ್ತಿನಿಂದ ಜಲ ಸಂಪತ್ತು ಅಭಿವೃದ್ಧಿಯಾಗುತ್ತದೆ, ಇದರಿಂದ ಕಾಲಕ್ಕೆ ತಕ್ಕಂತೆ ಮಳೆಯಾಗುತ್ತದೆ ಅರಣ್ಯ ಹಾಗೂ ಪರಿಸರ ದೇಶದ ಅತಿ ದೊಡ್ಡ ಸಂಪತ್ತಾಗಿದೆ ಎಂದರು.ಕಾರ್ಯಕ್ರಮದಲ್ಲಿ ಮಹೇಶ್,ಟಿ.ಕೆ.ಲೇಔಟ್. ರವಿ, ಕುಮಾರ್,ಹಾಜರಿದ್ದರು.