????????????????????????????????????

ಚಾಮರಾಜನಗರ: ವಿದ್ಯುತ್ ಕ್ಷೇತ್ರದ ಬೆಳವಣಿಗೆಗಾಗಿ ಇಂಧನ ಇಲಾಖೆಯಿಂದ ಜಾರಿಗೊಳಿಸಿರುವ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಹಾಗೂ ರೈತಾಪಿ ವರ್ಗದವರಿಗೆ ವ್ಯಾಪಕ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಎನ್.ಟಿ.ಪಿ.ಸಿ, ಕೇಂದ್ರ ಭಾರತ ಸರ್ಕಾರದ ವಿದ್ಯುತ್ ಸಚಿವಾಲಯ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಇನ್ನಿತರ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ‘ಉಜ್ವಲ ಭಾರತ ಉಜ್ವಲ ಭವಿ?’ ಕುರಿತು ಆಯೋಜಿಸಲಾಗಿದ್ದ ವಿದ್ಯುತ್ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಂತ್ರಜ್ಞಾನ ಅಭಿವೃದ್ಧಿಯಿಂದಾಗಿ ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಇಂದು ಭಾರತ ಸ್ವಾವಲಂಬಿಯಾಗಿದೆ. ಬಡವರಿಗೆ ಭಾಗ್ಯಜ್ಯೋತಿ, ಬೆಳಕು ಯೋಜನೆ, ಕುಟೀರ ಜ್ಯೋತಿ ಸೇರಿದಂತೆ ಇನ್ನಿತರೆ ಜನಪರ ಯೋಜನೆಗಳನ್ನು ಅನು?ನಗೊಳಿಸಿದ್ದು ಈ ಬಗ್ಗೆ ಅರಿವು ಮೂಡಿಸಬೇಕು. ಗಾಮೀಣ ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆಯ ಸೌಲಭ್ಯವನ್ನು ಸಮರ್ಪಕವಾಗಿ ತಲುಪಿಸಬೇಕು ಎಂದರು.
ಕೃಷಿ, ಕೈಗಾರಿಕೆ, ವಾಣಿಜ್ಯ, ಗೃಹಬಳಕೆಗೆ ಇಂದು ವಿದ್ಯುತ್ ಅನಿವಾರ್ಯವಾಗಿದ್ದು, ಎಲ್ಲರೂ ಸಹ ವಿದ್ಯುತ್ ಅನ್ನು ಅವಲಂಬಿಸಬೇಕಾದ ಇಂದಿನ ಸನ್ನಿವೇಶದಲ್ಲಿ ಪ್ರತಿಯೊಬ್ಬರಿಗೂ ವಿದ್ಯುತ್ ಯೋಜನೆಗಳ ಕುರಿತು ಹೆಚ್ಚಿನ ಮಾಹಿತಿ ನೀಡಬೇಕು. ಯೋಜನೆಗಳ ಸಾಧಕ ಬಾಧಕಗಳ ಬಗ್ಗೆ ಚಿಂತನೆ ನಡೆಸಿ ರೈತಾಪಿ ವರ್ಗದವರಿಗೆ ತಿಳಿವಳಿಕೆ ನೀಡಬೇಕು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ ನಟರಾಜು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದಿನ ದಿನನಿತ್ಯದ ಜೀವನದಲ್ಲಿ ಎಲ್ಲರಿಗೂ ವಿದ್ಯುತ್ ಬೇಕಾಗಿದೆ. ಪ್ರತಿಯೊಂದು ಗೃಹೋಪಯೋಗಿ ಕೆಲಸ ಕಾರ್ಯಗಳಿಗೆ ವಿದ್ಯುತ್ ಅವಶ್ಯಕವಾಗಿದೆ. ಕೃಷಿ ಕ್ಷೇತ್ರದ ಪ್ರಗತಿಗಾಗಿ ಆದ್ಯತೆ ನೀಡಿ ರೈತರಿಗೆ ಅಗತ್ಯವಿರುವ? ವಿದ್ಯುತ್ ಪೂರೈಸಬೇಕು ಎಂದು ಹೇಳಿದರು.
ಚಾಮರಾಜನಗರ-ಕೊಡಗು ವೃತ್ತದ ಅಧೀಕ್ಷಕ ಎಂಜಿನಿಯರ್ ಎಲ್. ಸೋಮರಾಜು ಅವರು ಮಾತನಾಡಿ ದೇಶವು ೭೫ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಯೋಜನೆ, ಸಾಧನೆಗಳ ಕುರಿತು ಜಾಗೃತಿ ಮೂಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂದು ಉಜ್ವಲ ಭಾರತ ಉಜ್ವಲ ಭವಿ? ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಸ್ತುತ ಹೆಚ್ಚಿನ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ದೇಶದ ಮೂಲೆಮೂಲೆಗಳಿಗೂ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ನೆರೆ ರಾ?ಗಳಿಗೂ ವಿದ್ಯುತ್ ಪೂರೈಸುವ? ಸಾಮಥ್ರ್ಯವನ್ನು ಭಾರತ ಹೊಂದಿದೆ ಎಂದರು.
ಶೇ. ೪೦ರ? ವಿದ್ಯುತ್ ಅನ್ನು ೨೦೩೦ರೊಳಗೆ ನವೀಕರಿಸಬಹುದಾದ ಇಂಧನಗಳನ್ನು ಉತ್ಪಾದಿಸುವಂತೆ ವಿಶ್ವಸಂಸ್ಥೆ ಭಾರತಕ್ಕೆ ಗುರಿ ನೀಡಿತ್ತು. ಆದರೆ ಈ ಗುರಿಯನ್ನು ೨೦೨೦ರಲ್ಲಿ ತಲುಪಲು ದೇಶವು ಯಶಸ್ವಿಯಾಗಿದೆ. ಎಚ್.ಡಿ, ಎಲ್.ಟಿ. ಮಾರ್ಗ, ನಿರಂತರ ಜ್ಯೋತಿ ಸೇರಿದಂತೆ ೨೯೨೧ ಹೊಸ ಉಪಕೇಂದ್ರಗಳನ್ನು ಸ್ಥಾಪಿಸಿ ವಿಶ್ವದಲ್ಲಿ ಅತೀ ಕಡಿಮೆ ಅವಧಿಯಲ್ಲಿ ವಿದ್ಯುತ್ ಜಾಲವನ್ನು ಬಲಪಡಿಸಲಾಗಿದೆ. ದೇಶದಲ್ಲಿ ಶೇ. ೧೦೦ರ? ಎಲ್ಲಾ ಹಳ್ಳಿಗಳನ್ನು ವಿದ್ಯುಧ್ದೀಕರಣಗೊಳಿಸಲಾಗಿದೆ. ಪಂಪ್‌ಸೆಟ್ ಅಳವಡಿಸಿಕೊಳ್ಳುವ ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಬ್ಸಿಡಿ ನೀಡಿವೆ. ಸಾರ್ವಜನಿಕರ ಅರಿವಿಗಾಗಿ ಗ್ರಾಹಕರ ಹಕ್ಕುಗಳು-೨೦೨೧ನ್ನು ಸರ್ಕಾರ ಜಾರಿಗೊಳಿಸಿದೆ ಎಂದು ಸೋಮರಾಜು ಅವರು ತಿಳಿಸಿದರು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಆರ್. ವಸಂತ್‌ಕುಮಾರ್ ಅವರು ಪ್ರಾಸ್ತವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ ೫ ಉಪವಿಭಾಗಗಳಿದ್ದು, ಪ್ರತಿಯೊಬ್ಬ ಫಲಾನುಭವಿಗೆ ವಿದ್ಯುತ್ ಯೋಜನೆಯನ್ನು ತಲುಪಿಸುವ ಸಲುವಾಗಿ ವಿವಿಧ ಯೋಜನೆಗಳಡಿ ೨ ಲಕ್ಷ ೩೮ ಸಾವಿರಕ್ಕೂ ಹೆಚ್ಚು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಾಗಿದೆ ಎಂದರು.
ಚಾ.ವಿ.ಸ.ನಿ. ನಿಗಮದ ಚಾಮರಾಜನಗರ-ಕೊಡಗು ವೃತ್ತದ ಲೆಕ್ಕಾಧಿಕಾರಿ ಸುಲೋಚನಾ, ಎ??ಟಿಪಿಸಿ ನೋಡೆಲ್ ಅಧಿಕಾರಿ ಸೇತು ಮಾಧವನ್, ಚಾಮರಾಜನಗರ ವಿಭಾಗದ ಲೆಕ್ಕಾಧಿಕಾರಿ ಮಹೇಶ್, ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ವೇದಿಕೆ ಕಾರ್ಯಕ್ರಮದ ಬಳಿಕ ಗ್ರಾಮ ಮತ್ತು ಮನೆಗಳ ವಿದ್ಯುದ್ಧಿಕರಣ, ವಿದ್ಯುತ್ ಜಾಲ ಬಲಪಡಿಸುವಿಕೆ, ಉತ್ಪಾದನಾ ಸಾಮಥ್ರ್ಯ ಹೆಚ್ಚಳ, ನವೀಕರಿಸಬಹುದಾದ ಇಂಧನಗಳ ಉತ್ಪಾದನೆಯ ಬೆಳವಣಿಗೆ ಕುರಿತು ಕಿರುಚಿತ್ರ,ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.