ಯುವಮುಖಂಡ ಮಹೇಶ್ ಕುದರ್ ಅವರಿಂದ ನೋಟ್‌ಬುಕ್ ವಿತರಣೆ
ಚಾಮರಾಜನಗರ: ನಗರದ ಸರಕಾರಿಪೇಟೆ ಶಾಲಾವರಣದಲ್ಲಿ ಯುವಕಾಂಗ್ರೆಸ್ ಮುಖಂಡ ಮಹೇಶ್ ಕುದರ್ ಅವರ ೫೦ ನೇ ಹುಟ್ಟುಬ್ಬದ ಅಂಗವಾಗಿ ಶಾಲಾವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಲೇಖನಿ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು.
ಇದೇವೇಳೆ ಕ್ಷೇತ್ರಶಿಕ್ಷಣಾಧಿಕಾರಿ ಸೋಮಣ್ಣೇಗೌಡ ಮಾತನಾಡಿ, ಸರಕಾರಿ ಶಾಲೆಗಳಿಗೆ ದಾನಿಗಳ ಅಗತ್ಯ ನೆರವು ಬೇಕಿದೆ, ನಗರದ ಯುವಮುಖಂಡ ಮಹೇಶ್ ಕುದರ್ ಅವರು ತಮ್ಮ ಜನ್ಮದಿನದ ಅಂಗವಾಗಿ ಶಾಲಾಮಕ್ಕಳಿಗೆ ನೋಟ್‌ಬುಕ್ ಹಾಗೂ ಲೇಖನಿ ಸಾಮಾಗ್ರಿ ವಿತರಣೆ ಮಾಡಿರುವುದು ಶ್ಲಾಘನೀಯ ಎಂದರು.
ನೋಟ್‌ಬುಕ್ ವಿತರಿಸಿದ ಮಹೇಶ್ ಕುದರ್ ಮಾತನಾಡಿ, ತಮ್ಮ ಪ್ರತಿಹುಟ್ಟುಹಬ್ಬದ ಸಂದರ್ಭದಲ್ಲಿ ವಿಭಿನ್ನ ಜನಪರ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಇದೇವೇಳೆ ಜಾಮಿಯಾಮಸೀದಿ ಸಮೀಪದ ಸರಕಾರಿ ಉರ್ದು ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ ನಡೆಯಿತು.
ಮುಖ್ಯಶಿಕ್ಷಕ ಎಚ್.ಎಂ.ನಾಗೇಂದ್ರ, ಪ್ರಾಥಮಿಕಶಾಲಾಶಿಕ್ಷಕರ ಜಿಲ್ಲಾಧ್ಯಕ್ಷ ಮಾದಪ್ಪ, ಪ್ರದಾನ ಕಾರ್ಯದರ್ಶಿ ಮಹದೇವಸ್ವಾಮಿ, ತಾಲೂಕು ಅಧ್ಯಕ್ಷ ಲಾಲಿಂಗಸ್ವಾಮಿ, ಕಾರ್ಯದರ್ಶಿ ಮುರುಘ, ರೇಷ್ಮೆಇಲಾಖೆ ನೌಕರರಾದ ಬಸವರಾಜು, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.