Category: ಮೈಸೂರು ನ್ಯೂಸ್

ರಂಗಕರ್ಮಿಗಳಿಗಾಗಿ ವೈದ್ಯಕೀಯ ರಂಗಮಿತ್ರ ಸಹಾಯವಾಣಿ

ಮೈಸೂರು: ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯು ಮೈಸೂರು ರಂಗಕರ್ಮಿಗಳಿಗಾಗಿ ವೈದ್ಯಕೀಯ ರಂಗಮಿತ್ರ ಎಂಬ ಸಹಾಯವಾಣಿಯನ್ನು ಆರಂಭಿಸಿದೆ. ಈ ಸಹಾಯವಾಣಿಯನ್ನು ಸಂಪರ್ಕಿಸುವ ಮೈಸೂರಿನ ರಂಗಕರ್ಮಿಗಳಿಗೆ ವೈದ್ಯಕೀಯ ನೆರವು ಸಲಹೆ ಗಳನ್ನು ಒದಗಿಸಿಕೊಡಲಿದೆ. ಹಿರಿಯ ರಂಗಕರ್ಮಿಗಳಾದ ಸಿ. ಬಸವಲಿಂಗಯ್ಯ, ಮಂಡ್ಯ ರಮೇಶ್, ರಾಜಶೇಖರ ಕದಂಬ…

ಪರಿಸರ ಉಳಿಸೋಣ ಆಮ್ಲಜನಕ ಪಡೆಯೋಣ ಕಾರ್ಯಕ್ರಮ

ಮೈಸೂರು: ನಗರದ ರಾಷ್ತ್ರಿಯ ಹಿಂದೂ ಸಮಿತಿ ಹಾಗೂ ವಿಕೆಎಸ್ ಫೌಂಡೇಷನ್ ವತಿಯಿಂದ ವಿವೇಕಾನಂದನಗರದ ಉದ್ಯಾನದಲ್ಲಿ ಪರಶುರಾಮ ಜಯಂತಿ ಮತ್ತು ಬಸವ ಜಯಂತಿಯನ್ನು ಸಸಿ ನೆಡುವ ಮೂಲಕ “ಪರಿಸರ ಉಳಿಸೋಣ ಆಮ್ಲಜನಕ ಪಡೆಯೋಣ” ಪರಿಸರ ಸಂರಕ್ಷಣೆ ಸಂದೇಶದೊಂದಿಗೆ ವಿವಿಧ ಜಾತಿಯ ಇಪ್ಪತೈದು ಸಸಿ…

ಚಾಮರಾಜನಗರ: ಕಡಿಮೆಯಾಗದ ಸೋಂಕು.. ಜನರಲ್ಲಿ ನಿಲ್ಲದ ಆತಂಕ..

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದ್ದು ಸದ್ಯ ಸಕ್ರಿಯ ಪ್ರಕರಣ 4512ಕ್ಕೇರಿದೆ. ಹೀಗಾಗಿ ಸೋಂಕಿನ ಸರಪಳಿ ತಡೆಗೆ ವಾರದ ನಾಲ್ಕು ದಿನ ಸಂಪೂರ್ಣ ಬಂದ್ ಮಾಡಲಾಗುತ್ತಿದ್ದು ಉತ್ತಮ ಸ್ಪಂದನೆ ದೊರೆಯುತ್ತಿದೆ. ಗುರುವಾರ ಒಂದೇ ದಿನ 799…

ಕೊರೊನಾ ವಾರಿಯರ್ಸ್ ಗೆ ಟೀ ಬಿಸ್ಕತ್ ವಿತರಣೆ

ಪಾಂಡವಪುರ: ತಮ್ಮ ಕುಟುಂಬಸ್ಥರು ಹಾಗೂ ಜೀವದ ಹಂಗನ್ನು ತೊರೆದು ಕೋವಿಡ್-19ರ ಕರ್ತವ್ಯ ನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್‌ಗಳಾದ ಪೊಲೀಸರು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೆ ಟೋರಾ ಸಂಸ್ಥೆ ಸದಸ್ಯರು ಟೀ, ಬಿಸ್ಕತ್ತು ಹಾಗೂ ಕುಡಿಯುವ ನೀರು ವಿತರಿಸಿದರು. ಟೋರಾ ಸಂಸ್ಥೆ ಅಧ್ಯಕ್ಷ…

ಸಚಿವರ ವರ್ಷದ ವೇತನ ಕೋವಿಡ್ ಪರಿಹಾರ ನಿಧಿಗೆ

ಬೆಂಗಳೂರು: ಹೆಚ್ಚುತ್ತಿರುವ ಕೊರೋನಾ ಸೋಂಕನ್ನು ನಿಯಂತ್ರಿಸಿ ಮಹಾಮಾರಿಯಿಂದ ರಾಜ್ಯದ ಜನರನ್ನು ಕಾಪಾಡುವುದು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಸವಾಲ್ ಆಗಿ ಪರಿಣಮಿಸಿದೆ. ಮತ್ತೊಂದೆಡೆ ಕೇಂದ್ರದ ಮಲತಾಯಿ ಧೋರಣೆ ಮುಂದುವರೆದಿದ್ದು ಕೋವಿಡ್ ನಿರ್ವಹಣೆ ಹೇಗೆಂಬ ಚಿಂತೆ ಸರ್ಕಾರವನ್ನು ಕಾಡತೊಡಗಿದೆ. ಲಾಕ್ ಡೌನ್ ನಿಂದ ಪ್ರತಿ…

ಹಾಸನದಲ್ಲಿ  100ಬೆಡ್ ಗಳ ಕೊರೋನಾ ಕೇರ್ ಸೆಂಟರ್ ನಿರ್ಮಾಣ

ಹಾಸನ: ಕೊರೋನಾ ಸೋಂಕು ಹೆಚ್ಚುತ್ತಿರುವ ಕಾರಣ ಬೆಡ್ ಗಳ ಸಮಸ್ಯೆ ವುಂಟಾಗಿರುವುದರಿಂದ ಸೋಂಕಿತರ ಅನುಕೂಲಕ್ಕಾಗಿ ನಗರದ ಹೊಸಲೈನ್ ರಸ್ತೆಯಲ್ಲಿರುವ ಷರೀಫ್ ಚ್ಯಾರಿಟೀಸ್ ಕಟ್ಟಡದಲ್ಲಿ 100 ಬೆಡ್ ಗಳುಳ್ಳ ತಾತ್ಕಾಲಿಕ ಕೊರೋನಾ ಕೇರ್ ಕೇಂದ್ರವನ್ನು ನಿರ್ಮಾಣ ಮಾಡಲಾಗಿದ್ದು ಮೇ.14ರಂದು ಲೋಕಾರ್ಪ‍ ಣೆ ಮಾಡಲಾಗುತ್ತಿದೆ.…

ಮೈಸೂರು ಜಿಲ್ಲಾಡಳಿತದ ವಿರುದ್ಧ ಆನ್ ಲೈನ್  ಜನಾಂದೋಲನ

ಮೈಸೂರು: ಮೈಸೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ತಡೆಯುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿರುವ ಎಸ್ ಯುಸಿಐ ಕಮ್ಯೂನಿಸ್ಟ್‌ ಪಕ್ಷದ ಜಿಲ್ಲಾ ಸಮಿತಿ ಒಂಬತ್ತು ಬೇಡಿಕೆಗಳ ಈಡೇರಿಕೆಗಾಗಿ ಆನ್ ಲೈನ್ ಜನಾಂದೋಲನವನ್ನು ಗುರುವಾರ ನಡೆಸಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಸಮಿತಿಯ ಪದಾಧಿಕಾರಿಗಳು…

ಮೈಸೂರಲ್ಲಿ ಲಾಕ್ ಡೌನ್ ಉಲ್ಲಂಘನೆ:128 ಪ್ರಕರಣ ದಾಖಲು

ಮೈಸೂರು: ನಗರದಲ್ಲಿ ಕೋವಿಡ್ ಲಾಕ್ ಡೌನ್ ಮಾರ್ಗ ಸೂಚಿಯನ್ನು ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರ ಪೊಲೀಸರು ವಾಹನ ಸಂಚಾರ ನಿರ್ಬಂಧ ಉಲ್ಲಂಘಿಸಿದ 129 ವಾಹನಗಳನ್ನು ವಶಪಡಿಸಿಕೊಂಡು, ಮಾಸ್ಕ್ ಧರಿಸದ 128 ಪ್ರಕರಣ ದಾಖಲಿಸಿ 24 ಸಾವಿರ ರೂ. ದಂಡ ವಿಧಿಸಿದ್ದಾರೆ.…

ಪತ್ನಿ ಸಾವಿಗೆ ಕಾರಣನಾಗಿ ಜೈಲ್ ಸೇರಿದ್ದಾತ ಆತ್ಮಹತ್ಯೆಗೆ ಶರಣು

ಮೈಸೂರು: ಮದುವೆಯಾಗಿ ಹೆಂಡತಿಯನ್ನು ಸಾಕಬೇಕಾದ ಪತಿಮಹಾಶಯ ಆಕೆಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಿ ಆಕೆ ಆತ್ಮಹತ್ಯೆಗೆ ಶರಣಾಗುವಂತೆ ಮಾಡಿದ್ದನು. ಈ ಆರೋಪದಡಿ ಜೈಲ್ ಸೇರಿದ್ದ ಆತ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾನೆ. ಶ್ರೀರಾಂಪುರ ನಿವಾಸಿ ಪ್ರದೀಪ್ ಎಂಬಾತನೇ ಜೈಲ್ ನಲ್ಲಿ ನೇಣಿಗೆ ಶರಣಾದ…

ಚಾಮರಾಜನಗರದಲ್ಲಿ 24 ಮಂದಿ ಸಾವು ಪ್ರಕರಣ: ಮೈಸೂರು ಡಿಸಿ ನಿರಾಳ!

ಬೆಂಗಳೂರು: ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಮಂದಿ ಸೋಂಕಿತರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೇಮಿಸಿದ್ದ ಮೂವರು ಸದಸ್ಯರ ಸಮಿತಿ ಸಲ್ಲಿಸಿದ ವರದಿ ಬಹಿರಂಗವಾಗಿದ್ದು, ಘಟನೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಂದ ಯಾವುದೇ ರೀತಿಯ ಕರ್ತವ್ಯ ಲೋಪವಾಗಿಲ್ಲ…

ಕೆ.ಆರ್.ನಗರದಲ್ಲಿ 200 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಆರಂಭ

ಮೈಸೂರು: ಕೊರೋನಾ ಎರಡನೇ ಅಲೆಯಿಂದ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ ಎದುರಾಗಿರುವ ಕಾರಣ ಅದನ್ನು ಹೋಗಲಾಡಿಸುವ ಸಲುವಾಗಿ ಶಾಸಕ ಸಾ.ರಾ.ಮಹೇಶ್ ಅವರು ಕೆ.ಆರ್.ನಗರದಲ್ಲಿರುವ ತಮ್ಮ ಒಡೆತನದ ಗಾರ್ಮೆಂಟ್ಸ್ ಕಟ್ಟಡವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸುವ ಮೂಲಕ ಕೋವಿಡ್ ಸೋಂಕಿತರ ಕಷ್ಟಕ್ಕೆ…

ಹುರಾ ಗ್ರಾಮದಲ್ಲಿ ಸಿಕ್ಕಿ ಬಿದ್ದ ನಕಲಿ ವೈದ್ಯ

ಮೈಸೂರು: ವ್ಯಕ್ತಿಯೊಬ್ಬ ಜನರಿಗೆ ವೈದ್ಯನೆಂದು ನಂಬಿಸಿ ಕ್ಲಿನಿಕ್ ನಡೆಸುತ್ತಿದ್ದ ಘಟನೆ ನಂಜನಗೂಡು ತಾಲೂಕಿನ ಹುರಾ ಗ್ರಾಮದಲ್ಲಿ ನಡೆದಿದ್ದು, ತಾಲೂಕು ಆಡಳಿತ ಕೋವಿಡ್ ನಿಯಮ ಪಾಲನೆ ಪರಿಶೀಲನೆಗೆ ತೆರಳಿದಾಗ ಸಿಕ್ಕಿಬಿದ್ದಿದ್ದಾನೆ ಕೊರೋನಾ ಸೋಂಕಿನ ನೆಪ ಹೇಳಿಕೊಂಡು ಒಂದಲ್ಲ ಒಂದು ರೀತಿಯಿಂದ ಜನರಿಂದ ಹಣ…

ಕೊರೋನಾ ವಿಷಮಸ್ಥಿತಿಯನ್ನು ಆತ್ಮಸ್ಥೈರ್ಯದಿಂದ ಎದುರಿಸಲು ಕರೆ

ಮೈಸೂರು: ಕೊರೋನಾ ಮಹಾಮಾರಿ ಸೃಷ್ಟಿಸಿರುವ ವಿಷಮ ಪರಿಸ್ಥಿತಿಯನ್ನು ಆತ್ಮಸ್ಥೈರ್ಯದಿಂದ ಎದುರಿಸಬೇಕಾಗಿದೆ ಎಂದು ಆಚಾರ್ಯ ಮಹಾಸಭಾ ಕರೆ ನೀಡಿದೆ. ಸುತ್ತೂರು ಶ್ರೀಗಳು, ಆದಿಚುಂಚನಗಿರಿ ಶ್ರೀಗಳು, ಶ್ರೀ ಸ್ವಾಮಿ ಅವದೇಶಾನಂದ ಗಿರಿಯವರು, ಶ್ರೀ ಬಾಬಾ ರಾಮದೇವ್‌ರವರು, ಶ್ರೀ ಪರಮಾತ್ಮನಂದ ಸರಸ್ವತಿಯವರು, ಆಚಾರ್ಯ ಕೃಷ್ಣಮಣಿ ಮಹಾರಾಜ್‌ರವರು,…

ಕೊರೋನಾಕ್ಕಿಲ್ಲದ ಆಯುಷ್ಮಾನ್ ಯೋಜನೆ ಯಾವ ಪುರುಷಾರ್ಥಕ್ಕೆ?

ಬೆಂಗಳೂರು: ಕೊರೋನಾ ಉಚಿತ ಚಿಕಿತ್ಸೆ ಆಯುಷ್ಮಾನ್ ಭಾರತ್ ಫಲಾನುಭವಿಗಳಿಗೆ ನೀಡುವುದಿಲ್ಲವಾದರೆ ಯಾವ ಪುರುಷಾರ್ಥಕ್ಕೆ ಈ ಯೋಜನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಟ್ವೀಟ್ ನಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಅವರು ಕೇಂದ್ರ ಕೊರೋನಾ ಚಿಕಿತ್ಸೆಗೆ ಅನುಕೂಲವಾಗುವಂತೆ ಸರ್ಕಾರದ ಆಯುಷ್ಮಾನ್…

ಬೆಂಗಳೂರಲ್ಲಿ ರೌಡಿಶೀಟರ್ ಮೇಲೆ ಪೊಲೀಸ್ ಫೈರಿಂಗ್

ಬೆಂಗಳೂರು: ಮುಖ್ಯಪೇದೆ ಮೇಲೆ ಹಲ್ಲೆಗೆ ಮುಂದಾದ ರೌಡಿಶೀಟರ್ ಕಾಲಿಗೆ ಸಿಸಿಬಿ ಪೊಲೀಸರು ಗುಂಡು ಹಾರಿಸಿರುವ ಘಟನೆ ನಗರದ ಹೆಚ್‌ಆರ್.ಬಿ.ಆರ್ ಲೇಔಟ್‌ನಲ್ಲಿ ನಡೆದಿದೆ. ಗಾಯಾಳು ರೌಡಿಶೀಟರ್ ಸೂರ್ಯ ಎಂಬಾತನನ್ನು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರೌಡಿಶೀಟರ್ ಸೂರ್ಯ ಎರಡು ಕೊಲೆ ಕೇಸ್ ಸೇರಿದಂತೆ…