Category: ಮೈಸೂರು ನ್ಯೂಸ್

ಕೊರೋನಾ ಎರಡನೇ ಅಲೆ ಸವಾಲ್ ತಂದೊಡ್ಡಿದೆ:ಬಿಎಸ್‌ವೈ

ಬೆಂಗಳೂರು: ಕೋವಿಡ್-೧೯ ರ ಮೊದಲನೇ ಅಲೆಗಿಂತಲೂ ಎರಡನೇ ಅಲೆ ನಿರೀಕ್ಷೆಗೂ ಮೀರಿ ಎಲ್ಲೆಡೆ ಸಂದಿಗ್ದತೆಯನ್ನು ಹುಟ್ಟು ಹಾಕಿದೆ. ಅಲ್ಲದೆ, ವೈದ್ಯ, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರ ಮೇಲೆ ಹೆಚ್ಚಿನ ಒತ್ತಡ ಹೇರಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ…

ಅದ್ಧೂರಿ ಮದುವೆ: ತಡವಾಗಿ ಪ್ರಕರಣ ದಾಖಲು

ಚಾಮರಾಜನಗರ: ಕೋವಿಡ್-19 ರ ನಿಯಮವನ್ನು ಉಲ್ಲಂಘಿಸಿ ಪುತ್ರನಿಗೆ ಅದ್ಧೂರಿ ವಿವಾಹ ಮಾಡಿದ ಆರೋಪದ ಹಿನ್ನಲೆಯಲ್ಲಿ ಜಿಪಂ ಸದಸ್ಯನ ವಿರುದ್ಧ ತಡವಾಗಿ ರಾಮಾಪುರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ರಾಮಾಪುರ ಕ್ಷೇತ್ರದ ಜಿಪಂ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಬಸವರಾಜು ಹಾಗೂ…

ರಾಜ್ಯಕ್ಕೆ500ಪ್ಲಾಸ್ಮಾ ಘಟಕ ಕೊಡುಗೆ

ಬೆಂಗಳೂರು: ಝೆಕ್ ರಿಪಬ್ಲಿಕ್ ವತಿಯಿಂದ ರಾಜ್ಯಕ್ಕೆ 500 ಪ್ಲಾಸ್ಮಾ ಘಟಕಗಳನ್ನು ದೇಣಿಗೆಯಾಗಿ ನೀಡಲು ಮುಂದಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬೆಂಗಳೂರಿನ ಕಾನ್ಸುಲೇಟ್ ಕಚೇರಿಯ ಕೌನ್ಸಲ್ ಸಿ.ಎಸ್. ಪ್ರಕಾಶ್ ಭೇಟಿ ಮಾಡಿ. ಪ್ರಾಗ್‌ನ ಸೆಂಟ್ರಲ್ ಮಿಲಟರಿ ಆಸ್ಪತ್ರೆಯಲ್ಲಿ ಈಗಾಗಲೇ…

ಅಲೆಮಾರಿಗಳ ಕಷ್ಟಕ್ಕೆ ಸ್ಪಂದಿಸಿದ ಹೋಂಗಾರ್ಡ್ಸ್!

ಮೈಸೂರು: ನಗರದ ಬಲ್ಲಾಳ್ ವೃತ್ತದಲ್ಲಿ ಗುಡಿಸಲಲ್ಲಿ ವಾಸಿಸುತ್ತಾ ಹೊಟ್ಟೆಪಾಡಿಗಾಗಿ ಮಣ್ಣಿನ ಮಡಿಕೆ, ದೇವರ ವಿಗ್ರಹ, ಆಟಿಕೆ, ಹೂವಿನ ಕುಂಡಗಳನ್ನು ನಿರ್ಮಿಸಿ ಮಾರಾಟ ಮಾಡಿ ಜೀವನ ನಡೆಸುತ್ತಿರುವ ಅಲೆಮಾರಿಗಳ ಬದುಕು ಮೂರಾಬಟ್ಟೆಯಾಗಿದೆ. ಈ ಕುಟುಂಬಗಳು ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದು, ಇವರು ಮಾಡಿದ…

ತೌಕ್ತೆ ಚಂಡಮಾರುತದ ಅಬ್ಬರಕ್ಕೆ ನಲುಗಿದ ಕರಾವಳಿ

ಮಂಗಳೂರು: ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಕರಾವಳಿ ನಲುಗಿದ್ದು, ಸಮುದ್ರದಲ್ಲಿ ಅಲೆಗಳು ವೀರಾವೇಶ ತೋರುತ್ತಿದ್ದು ಕಡಲ್ಕೊರೆತ ಸೇರಿದಂತೆ ಹಲವು ರೀತಿಯ ಹಾನಿಗಳು ಸಂಭವಿಸಿದ್ದು ವ್ಯಾಪಕ ಮಳೆ ಸುರಿಯುತ್ತಿದೆ. ಅರಬ್ಭಿ ಸಮುದ್ರದ ಆಗ್ನೇಯ ಭಾಗದಲ್ಲಿ ಕಾಣಿಸಿಕೊಂಢಿರುವ ‘ತೌಕ್ತೇ’ ಚಂಡಮಾರುತದ ಪರಿಣಾಮ ಶನಿವಾರ ಬೆಳಿಗ್ಗಿನಿಂದ ಭಾರಿ…

ವಿದ್ಯಾರ್ಥಿಗಳಿಗೆ ಯದುವೀರ್ ಒಡೆಯರ್ ಕಿವಿಮಾತು!

ಮೈಸೂರು: ಕೋವಿಡ್-19 ನಿಂದ ಉಂಟಾಗಿರುವ ಈ ಲಾಕ್ ಡೌನ್ ಅನ್ನು ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ತೆಗದುಕೊಳ್ಳಿ. ಈ ಸಮಯವನ್ನು ಓದಿಗೆ, ಜ್ಞಾನರ್ಜನೆಗೆ ಬಳಸಿ ಹಾಗೂ ನಿಮ್ಮ ಕೇರಿಯರ್‌ಯನ್ನು ಉತ್ತಮಗೊಳಿಸಬಹುದಾದ ಯೋಜನೆಯನ್ನು ರೂಪಿಸಿಕೊಳ್ಳಲು ಬಳಸಿಕೊಳ್ಳಿ ಎಂದು ರಾಜವಂಶಸ್ಥ ಯದುವೀರ್ ಕೃ?ದತ್ತ ಚಾಮರಾಜ ಒಡೆಯರ್ ಅವರು…

ಮೈಸೂರಲ್ಲಿ ಬೀದಿನಾಯಿಗಳಿಗೆ ಬಾಳೆಲೆ ಬೋಜನ

ಮೈಸೂರು: ಮೈಸೂರು ನಗರದ ಬಹುತೇಕ ಬಡಾವಣೆಗಳಲ್ಲಿರುವ ಬೀದಿ ನಾಯಿಗಳಿಗೆ ಪುಷ್ಕಳ ಬೋಜನ ಸವಿಯುವ ಅವಕಾಶವನ್ನು ಡಿಕೆ ಶಿವಕುಮಾರ್ ಅಭಿಮಾನಿ ಬಳಗವು ಮಾಡಿಕೊಟ್ಟಿದೆ. ಪ್ರತಿಯೊಂದು ನಾಯಿಗೂ ಬಾಳೆಲೆಯಲ್ಲಿ ಬೋಜನವನ್ನು ಬಡಿಸುವ ಮೂಲಕ ಹೊಟ್ಟೆ ತುಂಬಾ ತಿನ್ನಲು ಅವಕಾಶ ಮಾಡಿಕೊಡಲಾಯಿತು. ಈಗಾಗಲೇ ಬೀದಿ ನಾಯಿಗಳಿಗೆ…

ಮೈಸೂರಿಗೆ ಹೆಚ್ಚುವರಿ ಧವಸ, ಧಾನ್ಯ ಬಿಡುಗಡೆ

ಮೈಸೂರು: ಕೋವಿಡ್ -19 ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರ ಪಿ.ಎಂ.ಜಿ.ಕೆ.ಎ.ವೈ ಯೋಜನೆಯಡಿ ಅಂತ್ಯೊದಯ ಪಡಿತರ ಚೀಟಿ, ಆದ್ಯತಾ ಪಡಿತರ ಚೀಟಿಯ ಪ್ರತಿ ಸದ್ಯಸರಿಗೆ ಮೇ ತಿಂಗಳಿಗೆ 5 ಕೆ ಜಿ ಅಕ್ಕಿಯನ್ನು ಹೆಚ್ಚುವರಿ ಬಿಡುಗಡೆ ಮಾಡಿದೆ ಎಂದು ಆಹಾರ, ನಾಗರಿಕ ಸರಬರಾಜು…

ರಾಜ್ಯ ರಾಜಧಾನಿಗೆ ಬಂತು ಪ್ರಾಣ ವಾಯು!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಸೋಂಕಿತರಿಗೆ ಆಕ್ಸಿಜನ್ ಸಿಗದೆ ಸಾವುಗಳು ಮೇಲಿಂದ ಮೇಲೆ ಸಂಭವಿಸತೊಡಗಿದ್ದವು. ಜತೆಗೆ ರಾಜ್ಯದಲ್ಲಿ ಆಕ್ಸಿಜನ್ ಹಾಹಾಕಾರ ಉಂಟಾಗಿರುವುದು ಭಾರೀ ಸುದ್ದಿಯಾಗಿತ್ತು. ಕರ್ನಾಟಕದಲ್ಲಿ ಆಕ್ಸಿಜನ್ ಕೊರತೆ ಸುದ್ದಿ ಹರಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ರಾಜ್ಯಕ್ಕೆ ಆಕ್ಸಿಜನ್…

ತೌಕ್ತೆ ಚಂಡಮಾರುತದ ಎಫೆಕ್ಟ್… ಮೈಸೂರಲ್ಲಿ ವರುಣ ಸಿಂಚನ..

ಮೈಸೂರು: ಬಿಸಿಲ ಬೇಗೆಯಿಂದ ತತ್ತರಿಸಿದ ಜನರಿಗೆ ವರುಣ ತಂಪನ್ನೀಡಿದ್ದಾನೆ. ಶನಿವಾರ ಮುಂಜಾನೆಯಿಂದಲೇ ತುಂತುರಾಗಿ ಆರಂಭವಾದ ಮಳೆ ಕ್ರಮೇಣ ಬಿರುಸು ಪಡೆದಿದೆ. ಕಳೆದ ಕೆಲವು ದಿನಗಳಿಂದ ಭಾರೀ ಸೆಖೆಯಿತ್ತಾದರೂ ಮಳೆಯೊಂದಿಗೆ ಇಳೆ ತಂಪಾಗಿದೆ. ಈ ಬಾರಿಯ ಬೇಸಿಗೆಯಲ್ಲಿ ಧಾರಾಕಾರ ಮಳೆ ಸುರಿದಿರಲಿಲ್ಲ. ಸಾಧಾರಣ…

ಕೊರೋನಾ ಸಂಕಷ್ಟ ಕಾಲದಲ್ಲಿ ಚಂಡಮಾರುತದ ಅಬ್ಬರ

ಬೆಂಗಳೂರು: ಕೊರೋನಾದಿಂದ ಕಂಗಾಲು ಆಗಿರುವ ವೇಳೆಯಲ್ಲಿಯೇ ಗಾಯದ ಮೇಲೆ ಬರೆ ಎಳೆದಂತೆ ತೌಕ್ತೆ ಚಂಡ ಮಾರುತ ಅಪ್ಪಳಿಸುತ್ತಿದ್ದು, ಅದರ ಪರಿಣಾಮ ರಾಜ್ಯದ ಮೇಲೆ ಬೀರಿರುವುದು ಕಂಡು ಬಂದಿದೆ. ಈಗಾಗಲೇ ಕರಾವಳಿ ಮತ್ತು ಮಲೆನಾಡುಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಅರಮನೆ ನಗರಿಯಲ್ಲಿ…

ಕೆ.ಆರ್.ನಗರದಲ್ಲಿ ಆಹಾರದ ಕಿಟ್ ವಿತರಣೆ

ಕೆ.ಆರ್.ನಗರ: ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿರುವ ಬಿಜೆಪಿ ಕಛೇರಿಯಲ್ಲಿ ಜಿಲ್ಲಾ ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷ ಹೊಸಹಳ್ಳಿವೆಂಕಟೇಶ್ ಮತ್ತು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷೆ ತಾರಾಸುಂದರೇಶ್ ಅವರು ವೈಯುಕ್ತಿಕ ಆಹಾರದ ಕಿಟ್‌ಗಳನ್ನು ವಿತರಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ಮಹಿಳಾ ಅಧ್ಯಕ್ಷೆ ಮಂಗಳಾಸೋಮಶೇಖರ್…

ಕಲ್ಲಿಗೌಡನ ಹಳ್ಳಿಯಲ್ಲಿ ಚಿರತೆಗೆ ಕರು ಬಲಿ

ಚಾಮರಾಜನಗರ: ಕೊರೊನಾದಿಂದ ಹೈರಾಣರಾಗಿರುವ ರೈತರಿಗೆ ಚಿರತೆಯ ಹಾವಳಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನ ಕಲ್ಲಿಗೌಡನ ಹಳ್ಳಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ತೋಟದ ಮನೆಯಲ್ಲಿ ಕಟ್ಟಿ ಹಾಕಿದ್ದ ಕರುವೊಂದನ್ನು ಕೊಂದು ತಿನ್ನುವ ಮೂಲಕ ಭಯದ ವಾತಾವರಣ ಸೃಷ್ಟಿ ಮಾಡಿದೆ. ಕಲ್ಲೀಗೌಡನಹಳ್ಳಿ…

ಸಿ.ಟಿ.ರವಿ ಬಂಧನಕ್ಕೆ ಆಗ್ರಹಿಸಿ ಏಕಾಂಗಿ ಪ್ರತಿಭಟನೆ

ಮೈಸೂರು: ಕೋವಿಡ್ ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಹಾಗೂ ನ್ಯಾಯಾಂಗವನ್ನು ನಿಂದನೆ ಮಾಡಿದ ಸಿ.ಟಿ.ರವಿ ಅವರನ್ನು ಬಂಧಿಸುವಂತೆ ಆಗ್ರಹಿಸಿ ಮೈಸೂರು ನಗರ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ಅವರು ಶುಕ್ರವಾರ ನಗರದ ಕೋರ್ಟ್ ಬಳಿ…

ವೈದ್ಯರ ಮೇಲೆ ಹಲ್ಲೆ ನಡೆದರೆ ಕಠಿಣ ಕ್ರಮ: ಎಸ್.ಟಿ.ಎಸ್

ಮೈಸೂರು: ಕೊರೊನಾ ಕಾಲದಲ್ಲಿ ವೈದ್ಯರ ಮೇಲೆ ಹಲ್ಲೆ ನಡೆದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಗೌಸಿಯಾ ನಗರದ ೫೫ ವರ್ಷದ ಸೋಂಕಿತರೊಬ್ಬರು ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದರು. ಕೊನೆಯ ವೇಳೆ ಆಸ್ಪತ್ರೆಗೆ ರೋಗಿ…