Category: ಸಿನಿಮಾ

ಚಂದನವನ ಚರಿತ್ರೆ(ಸ್ಯಾಂಡಲ್‌ವುಡ್ ಸ್ಟೋರಿ)-೫೨ ಇಂಡಿಯನ್ ಬ್ರೂಸ್‌ಲೀ ಅರ್ಜುನ್‌ಸರ್ಜಾ

ಕರ್ನಾಟಕ ಮೂಲದ ಪಕ್ಕಾ ಕನ್ನಡ ಹುಡುಗ. ಇಡೀ ದೇಶದಲ್ಲಿ ಅದರಲ್ಲೂ ದ.ಭಾರತದಲ್ಲಿ ವಿಶೇಷವಾಗಿ ತಮಿಳು ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ನಟ ಎನಿಸಿದ ಪ್ರತಿಭಾನ್ವಿತ ಕಲಾವಿದ. ಕನ್ನಡ ಚಿತ್ರ(ನಾಟಕ)ರಂಗದ ಖ್ಯಾತ ಖಳನಟ ಶಕ್ತಿಪ್ರಸಾದ್‌ರ ಸುಪುತ್ರ, ಖ್ಯಾತನಟ ರಾಜೇಶ್‌ರ ಅಳಿಯ ಹಾಗೂ ಚಂದನವನದ ಹೀರೋಯಿನ್…

ಚಂದನವನ ಚರಿತ್ರೆ(ಸ್ಯಾಂಡಲ್ವುಡ್ ಸ್ಟೋರಿ)-೫೦

ಕರಾಟೆಕಿಂಗ್ ಶಂಕರ್‌ನಾಗ್ ಉತ್ತರಕನ್ನಡ ಜಿಲ್ಲೆ ಹೊನ್ನಾವರದಲ್ಲಿ ಜನಿಸಿದ ಬ್ಯಾಂಕ್ ಉದ್ಯೋಗಿಯಾದ ಈತ ನಾಯಕನಾಗಿ ನಟಿಸಿದ್ದ ಪ್ರಪ್ರಥಮ ಸಿನಿಮಾ ’ಒಂದಾನೊಂದು ಕಾಲದಲ್ಲಿ’ ಚಿತ್ರವು ರಾಷ್ಟ್ರಪ್ರಶಸ್ತಿ ಗಳಿಸಿತು. ಭಾರತದಲ್ಲೆ ಮೊಟ್ಟಮೊದಲ ಬಾರಿಗೆ ’ಕಂಟ್ರಿ ಕ್ಲಬ್’ ಸ್ಥಾಪಿಸಿದ ಪ್ರಪ್ರಥಮ ಸಿನಿಮಾ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದರು.…

ಚಂದನವನ ಚರಿತ್ರೆ(ಸ್ಯಾಂಡಲ್‌ವುಡ್ ಸ್ಟೋರಿ)-೫೧
ಕ್ರೇಜಿಸ್ಟಾರ್ ರವಿಚಂದ್ರನ್

೧೯೬೦ರ ದಶಕದಲ್ಲಿ ತಮಿಳುನಾಡಿನಿಂದ ಕನ್ನಡನಾಡಿಗೆ ಆಗಮಿಸಿದ ಎನ್.ವೀರಾಸ್ವಾಮಿಯವರು ಬೆಂಗಳೂರಿನ ಗಾಂಧಿನಗರದ ಗಂಗರಾಜ್‌ರವರ ಸಹಾಯ ಮತ್ತು ಗೆಳೆತನ ಸಂಪಾದಿಸುವುದರ ಜತೆಗೆ ಹಗಲಿರುಳು ಶ್ರಮ ಮತ್ತು ಕನ್ನಡಿಗರ ಸಹಕಾರ ಮತ್ತು ಧಾರಾಳ ತನದಿಂದ ಈಶ್ವರಿಹಂಚಿಕೆ ಸಂಸ್ಥೆಯನ್ನು ಸ್ಥಾಪಿಸಿದರು. ಇಂಥ ಮಹಾನ್ ಉದ್ಯಮಿಯ ಪುತ್ರ ವಿ.ರವಿಚಂದ್ರನ್!…

ಚಂದನವನ ಚರಿತ್ರೆ(ಸ್ಯಾಂಡಲ್‌ವುಡ್ ಸ್ಟೋರಿ)-೪೯: ಶ್ರೀನಿವಾಸಮೂರ್ತಿ

೧೯೪೯ಮೇ೧೫ರಂದು ಕೋಲಾರಜಿಲ್ಲೆ ಜಡಲತಿಮ್ಮನಹಳ್ಳಿಯ ಶ್ರೀಮತಿನಾಗಮ್ಮ ಶ್ರೀಕೃಷ್ಣಪ್ಪ ದಂಪತಿಯ ಪುತ್ರರಾಗಿ ಜನಿಸಿದರು. ಪ್ರಾರಂಭದಿಂದಲೂ ತಮ್ಮ ಹಳ್ಳಿ ಹೋಬಳಿ ತಾಲ್ಲೂಕು ಸುತ್ತಮುತ್ತ ಪ್ರದರ್ಶನವಾಗುತ್ತಿದ್ದ ನಾಟಕಗಳಲ್ಲಿ ಅಭಿನಯಿಸಲು ಹಂಬಲಿಸುತ್ತಿದ್ದರು. ಆದರೆ ಸಂಪ್ರದಾಯ ಕುಟುಂಬದ ಶಿಸ್ತುಬದ್ಧ ಹಿರಿಯರ ನಿರಾ ಕರಣೆಯಿಂದ ಸಾಧ್ಯವಾಗಲಿಲ್ಲ. ಕಾಲಕ್ರಮೇಣ ಸರ್ಕಾರಿ ನೌಕರಿ ಪಡೆದು…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೮

ಸುರೇಶ್ ಹೆಬ್ಳೀಕರ್ ದಿ.೨೨.೨.೧೯೪೮ರಂದು ಧಾರವಾಡ ನಗರದ ಮಧ್ಯಮವರ್ಗದ ಆದರೆ ವಿದ್ಯಾವಂತರೆ ಹೆಚ್ಚಿದ್ದಂಥ ಕುಟುಂಬದಲ್ಲಿ ಜನನ. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಗಳಿಸಿದ ನಂತರ ಇಂಟರ್‌ವ್ಯು ಮೂಲಕ ದೊರಕಿದ ಭಾರತ/ಕೇಂದ್ರ ಸರ್ಕಾರದ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಪ್ರಕೃತಿಯು ಕೈಬೀಸಿ ಕರೆಯಲಾಗಿ ಹಸಿರೇ-ಉಸಿರು ಮಂತ್ರದಿಂದ…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೬
ಕೋಕಿಲ ಮೋಹನ್

ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಮುಳಬಾಗಿಲು ಟೌನ್‌ನಲ್ಲಿ ೨೩.೮.೧೯೫೬ರಂದು ಜನಿಸಿದ ಮಧ್ಯಮದ ವರ್ಗದ ಈ ಕಿಲಾಡಿಯು ಪದವಿ ವಿದ್ಯಾಭ್ಯಾಸದ ಹಂತ ತಲುಪುವ ಮುನ್ನವೆ ಹೊಟೇಲ್ ಬಿಸಿನೆಸ್ ಕಡೆಗೆ ದೌಡಾಯಿಸಿದನು. ಉಪಾಹಾರ ಮಂದಿರದಲ್ಲಿ ಈತನನ್ನು ಗುರುತಿಸಿದ ಪ್ರಖ್ಯಾತ ನಾಟಕ-ಸಿನಿಮಾ ಕ್ಷೇತ್ರದ ದಿಗ್ಗಜ ಬಿ.ವಿ.ಕಾರಂತರು…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೫

ಕಮಲ್‌ಹಾಸ್ಸನ್ ಮಲಯಾಳಂ ಮಾತೃಭಾಷೆಯ ಕಮಲ್‌ಹಾಸ್ಸನ್ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಪರಮಕುಡಿಯಲ್ಲಿ ೭.೧೧.೧೯೫೪ರಂದು ಜನಿಸಿದರು. ೧೯೬೦ರಲ್ಲಿ ಬಾಲನಟನಾಗಿ ತನ್ನ ಮೊದಲ ಫಿಲಂ ’ಕಳತ್ತೂರ್ ಕಣ್ಣಮ್ಮ ತಮಿಳು ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದ ಪ್ರತಿಭಾವಂತ. ಕಾಲಕ್ರಮೇಣ ಕಾಲಿವುಡ್ನ ಖ್ಯಾತ ನಿರ್ದೆಶಕ ಕೆ.ಬಾಲಚಂದರ್ ಗರಡಿಯಲ್ಲಿ…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೪

ಸ್ಟೈಲ್‌ಕಿಂಗ್ ರಜನಿಕಾಂತ್ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಜನಿಸಿ ಬಿ.ಟಿ.ಎಸ್.ಬಸ್ ಕಂಡಕ್ಟರ್ ಹುದ್ದೆಗೆ ಸೇರಿದ ಶಿವಾಜಿರಾವ್‌ರವರ ಮಾತೃ ಭಾಷೆ ಮರಾಠಿ. ಆದರೂ ಪಕ್ಕಾ ಕನ್ನಡಿಗ ಎಂಬುದರಲ್ಲಿ ಸಂದೇಹ ಬೇಡ ಎಂದು ಸ್ವಯಂ ಅವರೇ ಸಾವಿರಾರು ಸಲ ನೂರಾರು ವೇದಿಕೆಗಳಲ್ಲಿ ಜಗಜ್ಜಾಹೀರು ಪಡಿಸಿದ್ದಾರೆ.…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೧ಅಶೋಕ್

ರಾಜ್‌ಕುಮಾರ್‌ರವರ ಐದಾರು ಚಿತ್ರಗಳಲ್ಲಿ ಅವರ ಮಗನ ಪಾತ್ರವನ್ನು ಒಪ್ಪವಾಗಿ ಅಭಿನಯಿಸುವ ಮೂಲಕ ಸ್ವಯಂ ಡಾ.ರಾಜ್ ಅವರ ಮುಕ್ತ ಕಂಠದಿಂದ ಪ್ರಶಂಸೆ ಮತ್ತು ಪ್ರೋತ್ಸಾಹ ಕಂಡ ಯುವನಟ. ಒಂದು ಕಾಲದಲ್ಲಿ ನಟಸಾರ್ವಭೌಮರ ಮುಖದೊಡನೆ ಇವರ ವರ್ಚಸ್ಸು-ಹೋಲಿಕೆ ಎಷ್ಟಿತ್ತೆಂದರೆ ಕೋಟ್ಯಾಂತರ ಚಲನಚಿತ್ರ ಪ್ರೇಕ್ಷಕರು ರಾಜ್…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೦ ಸಾಫ಼್ಟ್‌ಸ್ಟಾರ್ ಅನಂತನಾಗ್

ಮೂಲತಃ ಉತ್ತರಕನ್ನಡ ಜಿಲ್ಲೆ ಭಟ್ಕಳದ ನಾಗರಕಟ್ಟೆ ಎಂಬ ಪುಟ್ಟ ಗ್ರಾಮದಲ್ಲಿ ವಾಸವಿದ್ದ ಕೊಂಕಣಿ ಕುಟುಂಬವು ಕಾರಣಾಂತರದಿಂದ ಭಾರತ ದೇಶದ ಸ್ವಾತಂತ್ರ್ಯಕ್ಕೂ ಮುನ್ನವೆ ಬಾಂಬೆ ನಗರಕ್ಕೆ ಶಿಫ಼್ಟ್ ಆಯಿತು. ಹಾಗಾಗಿ ದಿನಾಂಕ ೪.೯.೧೯೪೮ರಂದು ಮುಂಬೈ ನಗರದ ಚೌಪಾತಿಯಲ್ಲಿ ಅನಂತ ನಾಗರಕಟ್ಟೆ ಜನಿಸಿದರು. ಡಾಕ್ಟರ್…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೩೮ ಚಾಕ್ಲೆಟ್‌ಬಾಯ್ ರಾಮಕೃಷ್ಣ

ಕನ್ನಡ ಚಿತ್ರರಂಗದ ಪ್ರಪ್ರಥಮ ’ಚಾಕ್ಲೆಟ್ ಬಾಯ್’ ಅವತ್ತಿನ ಕಾಲಕ್ಕೆ ಕಿರಿಯ ವಯಸ್ಸಿನ ಮುದ್ದು ನಟ! ’ಬಭ್ರುವಾಹನ’ ಚಿತ್ರದಲ್ಲಿ ಭಗವಾನ್ ಶ್ರೀಕೃಷ್ಣನ ಪಾತ್ರದಲ್ಲಿ ಅಭಿನಯಿಸಿದ್ದು, ಒಂದು ಸನ್ನಿವೇಷದಲ್ಲಿ ಅರ್ಜುನನ ಪಾತ್ರ ಅಭಿನಯಿಸಿದ್ದ ಮೇರುನಟ ಡಾ.ರಾಜ್‌ರವರು ಶ್ರೀಕೃಷ್ಣನ ಆಶೀರ್ವಾದ ಪಡೆಯಲು ಪಾದ ಮುಟ್ಟಿ ನಮಸ್ಕರಿಸುವಾಗ…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-37 ರೆಬೆಲ್‌ಸ್ಟಾರ್ ಡಾ||ಅಂಬರೀಷ್

ಏಕತಂತಿ ಪಿಟೀಲು ತಯಾರಿಸಿ ಸಪ್ತಸ್ವರಗಳನ್ನು ನುಡಿಸಿ ಹೊಸ ಇತಿಹಾಸ ಬರೆದ ವಿಖ್ಯಾತ ಕಲಾವಿದ ಪದ್ಮಶ್ರೀ ಟಿ. ಪಿಟೀಲು ಚೌಡಯ್ಯನವರ ಮಗಳಮಗ ಅಮರನಾಥ್ ೨೯.೫.೧೯೫೨ರಂದು ಮೈಸೂರಿನಲ್ಲಿ ಜನಿಸಿದರು. ಚಿಕ್ಕಂದಿನಿಂದ ಒರಟು ಸ್ವಭಾವದ ಆದರೆ ಬೆಣ್ಣೆಯಂಥ ಹೃದಯವಂತ. ಬುಲೆಟ್/ಜಾವಾ/ಬೇರಾವುದೆ ಬೈಕ್ ರೈಡಿಂಗ್, ಕಾರ್ ಡ್ರೈವಿ(ರೇಸಿ)ಂಗ್…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೩೩

ಗೆಂಡೆತಿಮ್ಮ ಲೋಕೇಶ್ ಕನ್ನಡ ಚಿತ್ರರಂಗದ ಪ್ರಪ್ರಥಮ ಚಿತ್ರ ’ಸತಿ ಸುಲೋಚನ’ ಚಿತ್ರದ ಪ್ರಪ್ರಥಮ ನಾಯಕನಟ ದಿವಂಗತ ಸುಬ್ಬಯ್ಯ ನಾಯ್ಡುರವರ ಪುತ್ರ. ಬಾಲ್ಯದಿಂದಲೂ ಇವರಿಗೆ ರಂಗಭೂಮಿ ಮತ್ತು ಸಿನಿಮಾ ರಂಗದ ಅನುಭವ ಹೆಚ್ಚು. ಇವರ ದೇಹದಲ್ಲಿ ಕಲಾಸರಸ್ವತಿಯ ರಕ್ತ ಹರಿಯುತ್ತಿರುವುದರಿಂದ ಇವರ ಇಡೀ…