Category: ಚಾಮರಾಜನಗರ

ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಕೌಶಲ್ಯಾಧರಿತ ಜ್ಞಾನ ಅಗತ್ಯ : ಹಿರಿಯ ನ್ಯಾಯಾಧೀಶ ಬಿ.ಎಸ್. ಹೊನ್ನಸ್ವಾಮಿ

ಚಾಮರಾಜನಗರ: ವಿದ್ಯಾರ್ಥಿಗಳಿಗೆ ಸಾಂಪ್ರಾದಾಯಿಕ ಶಿಕ್ಷಣದ ಜೊತೆಗೆ ಕೌಶಲ್ಯ ಆಧಾರಿತ ಶಿಕ್ಷಣ ದೊರೆತಾಗ ಮಾತ್ರ ಸೂಕ್ತ ಉದ್ಯೋಗ ದೊರೆಯಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ಬಿ.ಎಸ್. ಹೊನ್ನಸ್ವಾಮಿ ತಿಳಿಸಿದರು.ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂದು ಜಿಲ್ಲಾಡಳಿತ,…

ಆಷಾಢ ವೈಭವ ಗೀತಾಗಾಯನ ಕಾರ್ಯಕ್ರಮ

ಚಾಮರಾಜನಗರ: ಚಾಮರಾಜನಗರ ಆಷಾಢಮಾಸದಲ್ಲಿ ಜರುಗುವ ಚಾಮರಾಜೇಶ್ವರಸ್ವಾಮಿ ಜಾತ್ರೆ ಮಹೋತ್ಸವ ರಾಜ್ಯದಲ್ಲೇ ವಿಶಿಷ್ಟ ಪರಂಪರೆಯುಳ್ಳ ಆಚರಣೆಯಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಎ.ಎಂ.ನಾಗಮಲ್ಲಪ್ಪ ಹೇಳಿದರು.ಆಷಾಢ ಮಾಸದಲ್ಲಿ ನಡೆದ ನಗರದ ಚಾಮರಾಜೇಶ್ವರ ಜಾತ್ರೆ ಮಹೋತ್ಸವದ ಅಂಗವಾಗಿ ನಗರದ ಚಾಮರಾಜೇಶ್ವರ ದೇವಾಯದ ಆವರಣದಲ್ಲಿ ಚೇತನಕಲಾವಾಹಿನಿ ವತಿಯಿಂದ ನಡೆದ…

ಸಂಘಗಳು ಶೋಷಿತರ ದನಿಯಾಗಿ ಕಾರ್ಯನಿರ್ವಹಿಸಲಿ: ನಿಜಧ್ವನಿ ಗೋವಿಂದರಾಜು

ನಗರದಲ್ಲಿ ನಿಜಧ್ವನಿಸೇನಾಸಮಿತಿಯ 20 ನೇ ವಾರ್ಷಿಕೋತ್ಸವಚಾಮರಾಜನಗರ: ನಗರದ ನಿಜಧ್ವನಿಸೇನಾಸಮಿತಿಯ ೨೦ ನೇ ವಾರ್ಷಿಕೋತ್ಸವ ಹಾಗು ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ನಗರದ ದೇವಾಂಗಸಮುದಾಯಭವನದಲ್ಲಿ ಶುಕ್ರವಾರ ನಡೆಯಿತು.ಇದೇವೇಳೆ ಸಮಿತಿ ಜಿಲ್ಲಾಧ್ಯಕ್ಷ ಸಿ.ಎನ್.ಗೋವಿಂದರಾಜು ಅವರು ನೂತನ ಪದಾಧಿಕಾರಿಗಳಿಗೆ ಬುದ್ದ, ಬಸವ, ಅಂಬೇಡ್ಕರ್ ಹೆಸರಿನಲ್ಲಿ…

ಸಿಎ ಪರೀಕ್ಷೆಯಲ್ಲಿ ಶೀಲಾ ಮಹದೇವಶೆಟ್ಟಿ ಉತ್ತೀರ್ಣ: ಜಿಲ್ಲಾ ಉಪ್ಪಾರ ಯುವಕರ ಸಂಘದಿಂದ ಸನ್ಮಾನ

ಚಾಮರಾಜನಗರ: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ವತಿಯಿಂದ ನಡೆದ ಪರೀಕ್ಷೆಯಲ್ಲಿ ತಾಲೂಕಿನ ಬ್ಯಾಡಮೂಡ್ಲು ಗ್ರಾಮದ ಮಹದೇವಶೆಟ್ಟಿ ಅವರ ಧರ್ಮಪತ್ನಿ ಶೀಲಾ ಅವರು ೪೦೦ ಅಂಕಗಳಿಗೆ ೨೧೪ ಅಂಕಗಳನ್ನು ಪಡೆದು, ಉತ್ತೀರ್ಣರಾಗಿದ್ದು, ಇವರ ಸಾಧನೆಗೆ ಪೂರಕವಾಗಿ ಜಿಲ್ಲಾ ಉಪ್ಪಾರ ಯುವಕರ…

ಕೆ.ಆರ್.ಎಸ್. ನಿಂದ ಕಾವೇರಿ ನದಿಗೆ ನೀರು: ಜಿಲ್ಲೆಯ ನದಿ ಪಾತ್ರದ ಗ್ರಾಮಗಳ ಜನರು ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಮನವಿ

ಚಾಮರಾಜನಗರ: ಕೃಷ್ಣರಾಜಸಾಗರ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಹೆಚ್ಚಿನ ನೀರು ಬರುತ್ತಿದ್ದು, ಜಲಾಶಯದಿಂದ ಸುಮಾರು ೭೫,೦೦೦ ರಿಂದ ೧,೫೦,೦೦೦ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಯ ಕಾವೇರಿ ನದಿ ಪಾತ್ರದಲ್ಲಿ ಬರುವ…

ಚಂದುಕಟ್ಟೆಮೋಳೆಯ ದೊಡ್ದಮೋರಿ ಅಭಿವೃದ್ದಿ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ

ಚಾಮರಾಜನಗರ: ತಾಲ್ಲೂಕಿನ ಚಂದುಕಟ್ಟೆ ಮೋಳೆ ಗ್ರಾಮದಲ್ಲಿ ವಿಶೇ?ಘಟಕ ಯೋಜನೆಯಡಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ೮೫ ಲಕ್ಷ ರೂ.ವೆಚ್ಚದ ದೊಡ್ಡಮೋರಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.ನಂತರ ಅವರು ಮಾತನಾಡಿ, ಗ್ರಾಮದಲ್ಲಿ ಬಳಸಿ ಹರಿಸುವ ನೀರು ಸರಾಗವಾಗಿ ಹರಿದು ಹೋಗಲು…

ಕಾವೇರಿ ನದಿ ಪಾತ್ರದ ಗ್ರಾಮಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ : ಪರಿಶೀಲನೆ

ಚಾಮರಾಜನಗರ: ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಕೃಷ್ಣರಾಜ ಹಾಗೂ ಕಬಿನಿ ಜಲಾಶಯದಿಂದ ಹೆಚ್ಚು ನೀರನ್ನು ಕಾವೇರಿ ನದಿಗೆ ಬಿಡುತ್ತಿರುವ ಹಿನ್ನೆಲೆಯಲ್ಲಿ ದರಿಂದ ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಯ ಕಾವೇರಿ ನದಿ ಪಾತ್ರದ ಗ್ರಾಮಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು…

18 ಕೋಟಿ ರೂ ಗಳಿಗೂ ಹೆಚ್ಚಿನ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ

ಚಾಮರಾಜನಗರ: ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆಯಡಿ ತಾಲೂಕಿನ ಸಂತೇಮರಹಳ್ಳಿ ಬಳಿಯ ಮೂಗೂರು ಕ್ರಾಸ್‌ನಿಂದ ಸಂತೇಮರಹಳ್ಳಿ, ಕುದೇರಿನಿಂದ ಮರಿಯಾಲ ರಸ್ತೆ ಅಭಿವೃದ್ದಿ ಪಡಿಸುವ ೧೮ ಕೋಟಿ ರೂ ಗಳಿಗೂ ಹೆಚ್ಚಿನ ವೆಚ್ಚದ ಕಾಮಗಾರಿಗೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ…

ಜನಸಾಮಾನ್ಯರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡಿ : ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ತಾಕೀತು

ಚಾಮರಾಜನಗರ: ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಇನ್ನು ಮುಂದೆ ತಮ್ಮ ಧೋರಣೆಯನ್ನು ಬದಲಿಸಿಕೊಳ್ಳಬೇಕು. ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಬೇಕು. ಬಡವರ ಜನಸಾಮಾನ್ಯರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡಬೇಕು. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಬೇಕೆಂದು ವಸತಿ, ಮೂಲ ಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ…

ರಸ್ತೆ ಕಾಮಗಾರಿ ವೀಕ್ಷಿಸಿದ ನಗರಸಭೆ ಅಧ್ಯಕ್ಷೆ ಆಶಾನಟರಾಜು

ಚಾಮರಾಜನಗರ: ನಗರದಲ್ಲಿ ಬುಧವಾರ ನಡೆಯಲಿರುವ ಚಾಮರಾಜೇಶ್ವರಸ್ವಾಮಿ ಬ್ರಹ್ಮರಥೋತ್ಸವ ಅಂಗವಾಗಿ ರಥಸಾಗುವ ಮಾರ್ಗದಲ್ಲಿ ಬಿದ್ದಿರುವ ಹಳ್ಳಕೊಳ್ಳಗಳನ್ನು ಮುಚ್ಚಿಸುವ ರಸ್ತೆ ಕಾಮಗಾರಿಯನ್ನು ನಗರಸಭೆ ಅಧ್ಯಕ್ಷೆ ಆಶಾನಟರಾಜು ವೀಕ್ಷಿಸಿದರು.ನಗರಸಭೆ ಸದಸ್ಯ ಶಿವರಾಜು,ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್, ಮರಿಸ್ವಾಮಿ s sಸಿ.ಎಸ್ ನಾಗರಾಜು ಇತರರು ಇದ್ದರು.

ಸರಕಾರದ ಸವಲತ್ತು ಪಡೆಯಲು ಮಹಿಳಾಸಂಘಟನೆ ಬಲಗೊಳ್ಳಲಿ

ಚಾಮರಾಜನಗರ: ಸಮುದಾಯದ ಮಹಿಳೆಯರ ಪರವಾಗಿ ಹೋರಾಟ ಮಾಡಲು ಬಲಿ? ಸಂಘಟನೆಯ ಅಗತ್ಯವಿದೆ ಎಂದು ಉಪ್ಪಾರ ಮಹಾಸಭೆ ರಾಜ್ಯಾಧ್ಯಕ್ಷ ವಿ? ಲಾಥೂರ್ ಹೇಳಿದರು.ನಗರದ ವರ್ತಕರ ಭವನದಲ್ಲಿ ರಾಜ್ಯ ಉಪ್ಪಾರ ಮಹಾಸಭೆ ವತಿಯಿಂದ ಉಪ್ಪಾರ ಮಹಿಳಾ ಮತ್ತು ಯುವ ಜಾಗೃತ ಕಾರ್ಯಕ್ರಮದ ಅಂಗವಾಗಿ ಉಪ್ಪಾರ…

ಪೌರಕಾರ್ಮಿಕರಿಗೆ ವಿವಿಧ ಸೌಲಭ್ಯ, ಸವಲತ್ತುಗಳನ್ನು ಹೊಣೆಗಾರಿಕೆಯಿಂದ ತಲುಪಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚನೆ

ಚಾಮರಾಜನಗರ:ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪೌರಕಾರ್ಮಿಕರಿಗೆ ವಸತಿ, ವೇತನ ಪಾವತಿ ಸೇರಿದಂತೆ ವಿವಿಧ ಸೌಲಭ್ಯ, ಸವಲತ್ತುಗಳನ್ನು ಹೊಣೆಗಾರಿಯಿಂದ ತಲುಪಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ (ಜು.೦೮) ನಡೆದ…

2.7೦ ಕೋಟಿ ರೂ.ವೆಚ್ಚದಲ್ಲಿ ಗ್ರಾಮಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ

ಚಾಮರಾಜನಗರ: ತಾಲೂಕಿನ ಹಂಡರಕಳ್ಳಿಮೋಳೆ, ಬೂದಿತಿಟ್ಟು ಗ್ರಾಮದಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ೨.೭೦ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುತ್ತಿರುವ ಗ್ರಾಮ ಪರಿಮಿತಿಸಂಪರ್ಕ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಅವರು ಕೂಡ್ಲೂರು ಗ್ರಾಮದಿಂದ ಬೂದಿತಿಟ್ಟು ಮಾರ್ಗವಾಗಿ ಬಿಳಿಗಿರಿರಂಗನಬೆಟ್ಟಕ್ಕೆ ಸಂಪರ್ಕಿಸುವ…

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರು ಸಾಮಾಜಿಕ ಜಾಲಾತಾಣಗಳಿಂದ ದೂರವಿರುವುದು ಒಳಿತು : ಎಂ. ರಾಮಚಂದ್ರ

ಚಾಮರಾಜನಗರ: ಸ್ಪರ್ಧಾತ್ಮಕ ಯುಗದಲ್ಲಿ ಪರೀಕ್ಷೆಗಳನ್ನು ಎದುರಿಸುವವರು ವಿದ್ಯಾಭ್ಯಾಸಕ್ಕೆ ತೊಡಕಾಗಿರುವ ಮೊಬೈಲ್ ಹಾಗೂ ಸಾಮಾಜಿಕ ಮಾಧ್ಯಮಗಳಿಂದ ದೂರವಿರುವುದು ಒಳಿತು ಎಂದು ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಅಭಿಪ್ರಾಯಪಟ್ಟರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು,…