ಚಾಮರಾಜನಗರ: ಧರೆಗೆ ಗಂಗೆಯನ್ನು ಕರೆತಂದ ಮಹಾನ್ ಪುರುಷ ಭಗೀರಥಮಹರ್ಷಿ ಅವರ ಜಯಂತಿಯನ್ನು ತಾಲೂಕು ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ವತಿಯಿಂದ ನಗರದ ಶಿಕ್ಷಕರಭವನದಲ್ಲಿ ಆಚರಿಸಲಾಯಿತು.
ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಜಿಲ್ಲಾಧ್ಯಕ್ಷ ಕೆ.ಎಸ್.ಮಾದಪ್ಪ ಮಾತನಾಡಿ, ಇತಿಹಾಸ ಮಹಾಪುರುಷರನ್ನು ಸ್ಮರಣೆ ಮಾಡುವುದರ ಮೂಲಕ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು, ಹಾಗಾದಾಗ ಅವರ ಜಯಂತಿ ಆಚರಣೆ ಅರ್ಥಪೂರ್ಣ ಎಂದರು.
ತಾಲ್ಲೂಕು ಅಧ್ಯಕ್ಷ ಲಾಲಿಂಗಸ್ವಾಮಿ ಮಾತನಾಡಿ, ಮಹಾನ್ ಪುರುಷರ ಇತಿಹಾಸವನ್ನು ಹಿಂದೆ ಕೇಳಿತಿಳಿದಿದ್ದೇವು, ಇಂದು ಅವರ ಜಯಂತಿಯನ್ನೇ ಆಚರಣೆ ಮಾಡಲಾಗುತ್ತಿದೆ. ಮಕ್ಕಳಿಗೆ ಮಹಾನ್‌ಪುರುಷರ ಇತಿಹಾಸದ ಕುರಿತು ಮನವರಿಕೆ ಮಾಡಿಕೊಡಬೇಕಿದೆ ಎಂದರು.
ಜಿಲ್ಲಾ ಪ್ರಧಾನಕಾರ್ಯದರ್ಶಿ ಮಹದೇವಸ್ವಾಮಿ, ಜಿಲ್ಲಾಸಂಘಟನಾ ಕಾರ್ಯದರ್ಶಿ ಮಹದೇವಸ್ವಾಮಿ, ತಾಲ್ಲೂಕು ಸಂಘದ ಕಾರ್ಯದರ್ಶಿ ಭರತ್ ಭೂಷಣ್, ಬಿ.ಕೃಷ್ಣಮೂರ್ತಿ ತಾ.ಸಂಘಟನಾ ಕಾರ್ಯದರ್ಶಿ ಮಹದೇವಸ್ವಾಮಿ ತಾ, ದೈಹಿಕಶಿಕ್ಷಕರ ಸಂಘದ ಅಧ್ಯಕ್ಷ ಚಿಕ್ಕಬಸವಯ್ಯ ಕುಮಾರಸ್ವಾಮಿ, ಎಂ.ಡಿ.ಮಹದೇವಯ್ಯ, ರೇವಣ್ಣ ಸಿದ್ದರಾಜು ನಿವೃತ ಶಿಕ್ಷಕ ವೀರಣ್ಣ ಸೇರಿದಂತೆ ಇತರರು ಹಾಜರಿದ್ದರು.