ಚಾಮರಾಜನಗರ: ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಸಂವಿಧಾನಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ೧೩೧ ನೇ ಜನ್ಮ ದಿನವನ್ನು ಆಚರಿಸಲಾಯಿತು.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ. ರಾಮಚಂದ್ರ ಮಾತನಾಡಿ,ಅಂಬೇಡ್ಕರ್ ಅವರ ದೂರದೃಷ್ಟಿಯ ಚಿಂತನೆಯ ಫಲವಾಗಿ ಭಾರತ ಇಂದು ವಿಶ್ವದ ಶ್ರೇ? ರಾ?ವಾಗಿ ಹೊರಹೊಮ್ಮುತ್ತಿದೆ. ದೇಶದ ಸಮಗ್ರತೆ, ಏಕತೆ, ಭಾವೈಕ್ಯತೆಯ ಸಂಕೇತವಾಗಿರುವ ಸಂವಿಧಾನ ಮೂಲಾಧಾರವಾಗಿದ್ದು, ಯುವಕರು ಇವರ ಆದರ್ಶಗಳನ್ನು ಕಟ್ಟಿಕೊಳ್ಳುವ ಮೂಲಕ ಸದೃಢ ರಾ? ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಮುಖ್ಯ ಭಾ?ಣ ನೆರವೇರಿಸಿದ ಶಿಕ್ಷಕರಾದ ಸತೀಶ್ ಆಗರ’ ಅಂಬೇಡ್ಕರ್ ಅವರ ಚಿಂತನೆಗಳು ಸಾರ್ವಕಾಲಿಕವಾಗಿದ್ದು,
ವಿವಿಧ ಭಾ? ,ಮತ,ಧರ್ಮ, ಜನಾಂಗೀಯ ವ್ಯವಸ್ಥೆಯ ಒಳಗಡೆ ಎಲ್ಲ ಜನರನ್ನು ಪ್ರೀತಿಸುವ ಗೌರವಿಸುವ ಮೂಲಕ ಸರ್ವರ ಏಳಿಗೆಯನ್ನು ಬಯಸುವ ಪ್ರೀತಿಪೂರ್ವಕ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಭಾರತದ ಏಕತೆಗೆ ಭಂಗ ಬಾರದ ಹಾಗೆ ತಮ್ಮದೇ ಶೈಲಿಯಲ್ಲಿ ಯೋಚಿಸಿ ಚಿಂತಿಸಿ ರಾಷ್ಟ್ರೀಯ ಭಾವನೆಯನ್ನು ಕಲ್ಪಿಸಿಕೊಟ್ಟವರು ಡಾ. ಬಿಆರ್ ಅಂಬೇಡ್ಕರ್ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿ?ತ್ತಿನ ಅಧ್ಯಕ್ಷರಾದ ಸುರೇಶ್ ಋಗ್ವೇದಿ’
ಭಾರತದಲ್ಲಿ ಸಾಮಾಜಿಕ ವ್ಯವಸ್ಥೆಯಲ್ಲಿ ಅನೇಕ ಲೋಪದೋ?ಗಳು ಉಂಟಾಗಿ ರಾಷ್ಟ್ರೀಯತೆಯ ಭಾವನೆಯ ಕೊರತೆ ಉಂಟಾಗಿತ್ತು. ಸ್ವಾತಂತ್ರ್ಯನಂತರದಲ್ಲಿ ನವಭಾರತದ ನಿರ್ಮಾಣದ ಎಲ್ಲ ದೃಷ್ಟಿಕೋನದ ಚಿಂತನೆಯ ಫಲವಾಗಿ ಸಂವಿಧಾನವನ್ನು ರಚಿಸಿ ಇಡೀ ಜಗತ್ತಿಗೆ ಭಾರತ ವಿಶ್ವ ರಾ?ವಾಗಿ ನಿಲ್ಲುವಂತಹ ಸ್ಥಿತಿಗೆ ತಂದಿರುವುದು ಸಂವಿಧಾನ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ,ಗುಜರಾತಿನಿಂದ ನಾಗಾಲ್ಯಾಂಡ್ ವರೆಗೆ ಸಮಗ್ರ ಭಾರತೀಯ ನೆಲೆಗಟ್ಟಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಪಥದತ್ತ ಸಾಗುತ್ತಿರುವುದಕ್ಕೆ ಸಂವಿಧಾನದ ಆಡಳಿತವೇ ಕಾರಣ ಎಂದು ತಿಳಿಸಿದರು
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿ?ತ್ ಅಧ್ಯಕ್ಷ ಎಸ್. ಶೈಲ ಕುಮಾರ್ ವಹಿಸಿದ್ದರು.
ಸಾಹಿತ್ಯ ಪರಿ?ತ್ ಪ್ರಧಾನ ಕಾರ್ಯದರ್ಶಿಗಳಾದ ಮಹಾಲಿಂಗರ್ಗಿ, ನಾಗಲಕ್ಷ್ಮಿ, ಸಾಹಿತಿ ಸೋಮಶೇಖರ ಬಿಸಲ್ವಾಡಿ, ಕನ್ನಡ ಹೋರಾಟಗಾರರಾದ ಶಾ. ಮುರಳಿ, ಶ್ರೀನಿವಾಸಗೌಡ, ಗುರು ಲಿಂಗಮ್ಮ ,ಧನಲಕ್ಷ್ಮಿ ,ಕಿರಣ್ ಗಿರ್ಗಿ ಗೋವಿಂದರಾಜು, ರವಿಚಂದ್ರ ಪ್ರಸಾದ್ ಹಾಜರಿದ್ದರು.