ಚಾಮರಾಜನಗರ: ಅಸಂಘಟಿತ ವಲಯ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವ ಸಿ.ಬಿ.ನಾಗರಾಜು, ಆರೋಗ್ಯ ರಕ್ಷ ಸಮಿತಿ ಸದಸ್ಯೆ ದಾಕ್ಷಾಯಿಣಿ ಅವರನ್ನು ನಗರದ ಮೇಗಲಉಪ್ಪಾರ ಬಡಾವಣೆ ನಿವಾಸಿಗಳು ಸನ್ಮಾನಿಸಿದರು.
ಇದೇವೇಳೆ ಬಡಾವಣೆ ನಿವಾಸಿ ಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿನ ಅಸಂಘಟಿತ ವಲಯದ ಕಾರ್ಮಿಕರನ್ನು ಗುರುತಿಸುವ ಮೂಲಕ ಅವರ ಹೆಸರನ್ನು ನೊಂದಾವಣೆ ಮಾಡಿಸಿ, ಸರಕಾರದಿಂದ ಸಿಗುವ ಸವಲತ್ತುಗಳನ್ನು ಕೊಡಿಸುವತ್ತ ನೂತನ ಅಧ್ಯಕ್ಷರು ಮುಂದಾಗಬೇಕು ಎಂದರು.
ಆರೋಗ್ಯ ರಕ್ಷ ಸಮಿತಿ ಸದಸ್ಯರು ಸಹ ಆರೋಗ್ಯ ಇಲಾಖೆಯಿಂದ ಅನುಷ್ಠಾನವಾಗುವ ಕಾರ್ಯಕ್ರಮಗಳ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸಿ, ಅವುಗಳ ವಿತರಣೆಗೆ ಕ್ರಮವಹಿಸಬೇಕು ಎಂದು ಮನವಿಮಾಡಿದರು. ನಂಜುಂಡಶೆಟ್ಟಿ, ದಿಲೀಪ್, ಅನಂತ್, ಜಯಸೂರ್ಯ ಸೇರಿದಂತೆ ನಿವಾಸಿಗಳು ಹಾಜರಿದ್ದರು.