ಗುಂಡ್ಲುಪೇಟೆ: ತಾಲೂಕಿನ ಬೆಂಡಗಳ್ಳಿ ಗ್ರಾಮದ ಯುವಕ ಜಿ.ಪ್ರಶಾಂತ್(21) ಆಲಿಯಾಸ್ ಚಿನ್ನು ನಾಪತ್ತೆಯಾಗಿದ್ದಾನೆ ಎಂದು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜು.21ರಂದು ಬೆಳಗ್ಗೆ 8 ಗಂಟೆ ವೇಳೆ ಪಟ್ಟಣದ ದುರ್ಗದರ್ಶಿನಿ ಹೋಟೆಲ್‍ಗೆ ತಿಂಡಿ ತಿನ್ನಲು ಹೋದ 21 ವರ್ಷದ ಜಿ.ಪ್ರಶಾಂತ್ ಕಾಣೆಯಾಗಿದ್ದಾನೆ. ನಂತರ ಸಂಬಂಧಿಕರು, ಸ್ನೇಹಿತರ ಮನೆಗಳಲ್ಲಿ ವಿಚಾರಿಸಿದರೂ ಸುಳಿವು ತಿಳಿದು ಬಂದಿಲ್ಲ. ಇದರಿಂದ ತಂದೆ ಭಯಭೀತರಾದ ಹಿನ್ನೆಲೆ ಯುವಕನ ಸಂಬಂಧಿಕ ಬಿ.ಎನ್.ಮಂಜುನಾಥ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವಕನ ಪತ್ತೆಗೆ ಕ್ರಮ ವಹಿಸಿದ್ದಾರೆ. ಜೊತೆಗೆ ಯುವಕನ ಬಗ್ಗೆ ಮಾಹಿತಿ ದೊರೆತಲ್ಲಿ ಹತ್ತಿರ ಪೋಲೀಸ್ ಠಾಣೆ ಅಥವಾ ಚಾಮರಾಜನಗರ ಪೋಲೀಸ್ ಕಂಟ್ರೋಲ್ ರೂಂ ಅಥವಾ ಗುಂಡ್ಲುಪೇಟೆ ಪೋಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೋಲಿಸರು ಕೋರಿದ್ದಾರೆ.

ವರದಿ: ಬಸವರಾಜು ಎಸ್.ಹಂಗಳ

By admin