ದರ್ಶನ್ ಅವರ ಅಂಗಾಂಗಗಳು ದಾನ ಮಾಡಿ ೫ ಜೀವಗಳನ್ನು ಉಳಿಸಲಾಯಿತು
ಮೈಸೂರು, ಜನವರಿ ೨೧, ೨೦೨೨: ೨೪ ವರ್ಷ ವಯಸ್ಸಿನ ಶ್ರೀ ದರ್ಶನ್ ಅವರನ್ನು ಗಂಭೀರ ಸ್ಥಿತಿಯಲ್ಲಿ ಮೈಸೂರಿನ ಗೋಪಾಲಗೌಡ ಆಸ್ಪತ್ರೆಯಿಂದ ೧೮ ಜನವರಿ ೨೦೨೨ ರಂದು ಮಂಗಳವಾರ ರಾತ್ರಿ ೯.೨೭ ಕ್ಕೆ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ಕರೆತರಲಾಯಿತು. ಆರಂಭಿಕ ಸಿಟಿ ಸ್ಕ್ಯಾನಿಂಗ್ ನಲ್ಲಿ ಮೆದುಳಿನ ಕಾಂಡದ ಇನ್ಫಾರ್ಕ್ಟ್ ಗೋಚರಿಸಿತು. ಜೀವ ಬೆಂಬಲ ಮತ್ತು ತೀವ್ರ ನಿಗಾಗಾಗಿ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು.
ಶ್ರೀ ದರ್ಶನ್ ಅವರ ಆರೋಗ್ಯವು ಬಹಳ ಗಂಭೀರ ಸ್ಥಿತಿಯಲ್ಲಿದ್ದಾಗ ಎರಡು ದಿನಗಳ ಕಾಲ ಲೈಫ್ ಸಪೋರ್ಟ್ನಲ್ಲಿ ಇರಿಸಲಾಗಿತ್ತು. ಮೂರನೇ ದಿನ ಜನವರಿ ೨೧ ರಂದು ಬೆಳಗ್ಗೆ ೪.೦೦ ಗೆ, ಮಾನವ ಅಂಗಾಂಗ ಕಸಿ ಕಾಯಿದೆ ೧೯೯೪ ರ ಆಸ್ಪತ್ರೆಯ ಪ್ರೋಟೋಕಾಲ್ ಪ್ರಕಾರ ಮೆದುಳಿನ ನಿಷ್ಕ್ರಿಯೆ “ಬ್ರೆನ್ ಡೆಡ್” ಯಂದು ಅಪೋಲೊ ಬಿ.ಜಿ.ಎಸ್ ಆಸ್ಪತ್ರೆಯ ಪ್ಯಾನೆಲ್ಲಿಸ್ಟ್ ನಲ್ಲಿರುವ ವೈದ್ಯರು ಘೋಷಿಸಿದರು.
ಅಪೋಲೊ ಬಿ.ಜಿ.ಎಸ್ ಆಸ್ಪತ್ರೆಯು,ಈಗ ಮಲ್ಟಿಆರ್ಗನ್ ಟ್ರಾನ್ಸ್ ಪ್ಲಾಂಟ್ ಪರವಾನಗಿ ಪಡೆದ ಕೇಂದ್ರವಾಗಿದೆ. ಈ ಘಟನೆಯ ಮೊದಲು ಶ್ರೀ ದರ್ಶನ್ ರವರು ಆರೋಗ್ಯವಾಗಿದ್ದರು ಮತ್ತು ಹಲವಾರು ಪರೀಕ್ಷೆಗಳಿಂದ ಅವರು ಅಂಗಾಂಗ ದಾನಕ್ಕೆ ಅರ್ಹರು ಎಂದು ಖಚಿತ ಪಡಿಸಲಾಯಿತು. ನಿಗದಿತ ಪ್ರೋಟೋಕಾಲ್ಗಳ ಪ್ರಕಾರ ಅಂಗಾಂಗ ದಾನಕ್ಕಾಗಿ ಅವರ ಕುಟುಂಬದವರಿಗೆ ಸಲಹೆ ನೀಡಲಾಯಿತು, ಈ ಸಂದರ್ಭದಲ್ಲಿ ಶ್ರೀ ದರ್ಶನ್ ರವರ ತಂದೆ ಅಂಗಾಂಗ ದಾನ ಮಾಡಲು ಮುಂದೆ ಬಂದರು.
ಅಂಗಾಂಗ ದಾನ ಪ್ರೋಟೋಕಾಲ್ಗಳ ಪ್ರಕಾರ, ಮೊದಲು ZCCK ಎಂದು ಕರೆಯಲ್ಪಡುತ್ತಿದ್ದ ಜೀವ ಸಾರ್ಥಕಥೆಯ ಅಧಿಕಾರಿಗಳು ಅಂಗ ಸ್ವೀಕರಿಸುವವರ ಕಾಯುವ ಪಟ್ಟಿಗೆ ಅನುಗುಣವಾಗಿ ಪ್ರಕ್ರಿಯೆಯನ್ನು ಪ್ರಾರಂಭಿಸಿದರು.
ಇಂದು ಜನವರಿ ೨೧ ರಂದು ೨.೪೫ pm ಗೆ, ಶ್ರೀ ದರ್ಶನ್ ರವರ ಅಂಗಾಗಗಳನ್ನು (ಹೃದಯ, ಶ್ವಾಸಕೋಶಗಳು, ೨ ಮೂತ್ರಪಿಂಡಗಳು, ೧ ಯಕೃತ್ತು ಮತ್ತು ಕಾರ್ನಿಯಾಗಳನ್ನು) ಮೈಸೂರಿನ ದಾನ ಮಾಡಿದ ಅಂಗ
ಅಂಗ ದಾನ ಪಡೆದ ಆಸ್ಪತ್ರೆ೧.ಹೃದಯ. ಚೆನ್ನೈನ ಒಉಒ ಹೆಲ್ತ್ಕೇರ್ಗೆ ತುರ್ತು ಹೃದಯ ಕಸಿಗಾಗಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಏರ್ ಲಿಫ್ಟ್ ಮಾಡಲಾಗಿದೆ೨.ಒಂದು ಕಿಡ್ನಿ ಮತ್ತು ಯಕೃತ್ತು.ಅಪೋಲೊ ಬಿಜ಼ಿಎಸ್ ಆಸ್ಪತ್ರೆ, ಮೈಸೂರು ೩.ಒಂದು ಕಿಡ್ನಿಆಸ್ಟರ್ ಸಿಎಂಐ, ಬೆಂಗಳೂರು೪.ಕಾರ್ನಿಯಾಎSS ಐ ಬ್ಯಾಂಕ್ ಮೈಸೂರು ಅಪೋಲೋ ಬಿಜಿಎಸ್ ಆಸ್ಪತ್ರೆಯಿಂದ ಕೆಳಗಿನ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ