ಗುಂಡ್ಲುಪೇಟೆ: ತಾಲ್ಲೂಕಿನ ಮರಳಾಪುರ ಗ್ರಾಮದಲ್ಲಿ ಅಖಿಲ ಕರ್ನಾಟಕ ಕುರುಬ ಮಹಾ ಸಭಾದ ನೂತನ ಗ್ರಾಮ ಘಟಕದ ಶಾಖೆಯನ್ನು ರಾಜ್ಯಾಧ್ಯಕ್ಷ ಶಿವಮೂರ್ತಿ ಉತ್ತಂಗೆರೆ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ಶಿವಮೂರ್ತಿ ಉತ್ತಂಗೆರೆ, ಕುರುಬ ಸಮುದಾಯದ ಅಭಿವೃದ್ಧಿಗೆ ಯುವಕರು ಮುಂದೆ ಬರಬೇಕು. ಪ್ರಸ್ತುತ ಮುಂದಾಳತ್ವ ವಹಿಸಿರುವ ಜನಾಂಗದ ಮುಂಖಡರು ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಯುವಕರಿಗೆ ಅವಕಾಶ ಹೆಚ್ಚು ಸಿಕ್ಕಿದಂತೆ ಸಮುದಾಯದ ಅಭಿವೃದ್ಧಿಗೆ ಬುನಾದಿಯಾಗುತ್ತದೆ ಎಂದರು.
ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಯಿಂದ ಕುರುಬ ಸಮುದಾಯದ ಬೆಳೆವಣಿಗೆ ಸಾಧ್ಯವಿದ್ದು, ತಳಮಟ್ಟದಿಂದ ಸಮುದಾಯ ಸಂಘಟನೆಗೆ ಹಿರಿಯರು, ಯುವಕರು ಕೈಜೋಡಿಸಬೇಕು. ಜೊತೆಗೆ ನಮ್ಮ ಸಮಾಜವನ್ನು ಎಸ್ಟಿಗೆ ಸೇರಿಸುವವರೆಗೂ ಹೋರಾಟ ನಡೆಸಬೇಕು. ಇದಕ್ಕೆ ಯಾವುದೇ ಅಡೆತಡೆಗಳಿದ್ದರೂ ಎದರದೆ ಮುನ್ನುಗ್ಗೆಬೇಕು ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಕುರುಬ ಸಮುದಾಯ ಒಡೆದು ಇಬ್ಬಾಗವಾಗಿದೆ. ಇದು ಹೀಗೆ ಮುಂದುವರಿದರೆ ಸರ್ಕಾರದಿಂದ ದೊರಕುವ ಸವಲತ್ತುಗಳನ್ನು ಜನರು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಸಾಗಬೇಕು ಎಂದು ಮನವಿ ಮಾಡಿದರು.
ಮರಳಾಪುರ ಗ್ರಾಮ ಘಟಕದ ನೂತನ ಅಧ್ಯಕ್ಷರಾದ ನಾಗರಾಜು ಮರಳಾಪುರ ಮಾತಾನಾಡಿ, ಗ್ರಾಮದಲ್ಲಿ ಹಲವು ದಿನಗಳಿಂದ ಸಮುದಾಯದ ಸಂಘಟನೆ ಮಾಡಬೇಕು ಎಂಬ ಉದ್ದೇಶಿವಿತ್ತು ಅದು ಈಗ ಕೈಗೂಡಿದೆ. ಎಲ್ಲರೂ ಸಹಕಾರ ನೀಡಿದರೆ ಸಮಾಜದ ಅಭಿವೃದ್ಧಿಗೆ ದುಡಿಯಬಹುದು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಕುರುಬ ಮಹಾ ಸಭಾ ಗ್ರಾಮ ಘಟಕದ ಉಪಾಧ್ಯಕ್ಷರಾದ ಅವಿನಾಶ್, ಖಚಾಂಚಿ ಮಂಜುನಾಥ್, ಕಾರ್ಯದರ್ಶಿ ಶಿವಣ್ಣ, ನಿರ್ದೇಶಕರಾದ ಕುಮಾರ, ಮಂಜುನಾಥ, ಸಂಘಟನಾ ಕಾರ್ಯದರ್ಶಿ ಸಿ.ಮಹೇಶ, ವಿಶ್ವನಾಥ, ಗೌರವ ಅಧ್ಯಕ್ಷರಾದ ಕುಮಾರಗೌಡ ಸ್ವಾಮಿ, ರಾಜು ಸೇರಿದಂತೆ ಮರಳಾಪುರ ಗ್ರಾಮಸ್ಥರು, ಯುವಕರು ಹಾಜರಿದ್ದರು.
ವರದಿ: ಬಸವರಾಜು ಎಸ್ ಹಂಗಳ