ವರದಿ:ಮಹೇಶ್ ನಾಯಕ್
ಮೈಸೂರು ಮೇ-30 ದೇವರಾಜ ಅರಸು ರಸ್ತೆಯಲ್ಲಿರುವ ಮೈ,ಟಾರ್ಪೌಲಿನ್ ಮಾಲೀಕ ಹಲ್ಲೆ ಮಾಡಿರುವ ಘಟನೆ ಮೈಸೂರಿನ ದೇವರಾಜ ಅರಸ್ ರಸ್ತೆಯಲ್ಲಿ ನೆಡೆದಿದೆ.ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳು ತಮ್ಮ ವ್ಯಾಸಂಗದ ಖರ್ಚಿಗಾಗಿ ಅಲ್ಪಾವಧಿಯ ಕೆಲಸ ನಿಯೋಜಿಸುವ ಏಜೆನ್ಸಿ ಮೂಲಕ ಮೈಸೂರು ಟಾರ್ಪೌಲೀನ್ ವ್ಯಾಪಾರ ಸಂಸ್ಥೆಯ ಪ್ರಚಾರಕ್ಕಾಗಿ ಅರಸು ರಸ್ತೆಯಲ್ಲಿರುವ ಪುಟ್ ಪಾತ್ ಗಳಲ್ಲಿ (Look Walker ads promotion )ಕೊಡುವಾಗ, ಅರಸು ರಸ್ತೆಯಲ್ಲಿರುವ ಮಳಿಗೆ ಸಂಖ್ಯೆ ೮೭ರ ಮೈ ಟಾರ್ಪೌಲೀನ್ ಮಾಲೀಕ ಯಾವುದೋ ಮತ್ಸರದಿಂದ ಅಮಾಯಕ ಯುವಕನಿಗೆ ಮನಬಂದಂತೆ ಥಳಿಸಿದ್ದಾರೆ. ಪ್ರಕರಣದ ಕಾರಣ ಮೈಸೂರು ಟಾರ್ಪಲಿನ್ ಅನ್ನುವ ಅಂಗಡಿ ಹಾಗೂ ಮೈ ಟಾರ್ಪೌಲಿನ್ ಪಕ್ಕ,ಪಕ್ಕದಲ್ಲಿದ್ದು ಹೆಸರು ಹಾಗೇ ಇರುವ ಕಾರಣ ಗ್ರಾಹಕರಿಗೆ ತೊಂದರೆಯಾಗಿದ್ದು. ಮಾಲೀಕರ ಮನಸ್ಥಾಪದಿಂದ್ದ
ವಿದ್ಯಾರ್ಥಿಗಳ ಮೇಲೆ ವಿನಾಕಾರಣ ಕ್ಯಾತೆ ತೆಗೆದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಕೆಟ್ಟ ಕೆಟ್ಟ ಬೈಗುಳಗಳಿಂದ ನಿಂದಿಸಿ ಸಾರ್ವಜನಿಕವಾಗಿ ಹಲ್ಲೆ ಮಾಡಿ ಬೆದರಿಕೆ ಒಡ್ಡಿದ್ದಾರೆ. ಸಾರ್ವಜನಿಕರು ಹುಡುಗನನ್ನು ಹಲ್ಲೆಯಿಂದ ಬಿಡಿಸಿ ಕಳುಹಿಸಿದ್ದಾರೆ. ಈ ಪ್ರಕರಣವನ್ನು ದೇವರಾಜ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.