ಯೋಗ ಪಿತಾಮಹನಾದ ಪತಂಜಲಿ ಯಾವುದೇ ಯೋಗಾಸನಗಳ ಹೆಸರುಗಳನ್ನಾಗಲೀ, ಮಾಡುವ ಕ್ರಮದ ವಿವರಗಳನ್ನಾಗಲೀ ತನ್ನ ಸೂತ್ರಗಳಲ್ಲಿ ನೀಡಿರುವುದಿಲ್ಲ. ‘ತತ್ರ ಸ್ಥಿರಂ ಸುಖಮಾಸನಂ’ ಇದು ಆಸನಗಳ ಬಗ್ಗೆ ಸಿಗುವ ಸೂತ್ರ. ‘ಸ್ಥಿರವಾಗಿ, ಸುಖವಾಗಿ ಇರಬಲ್ಲ ಭಂಗಿಯೇ ಆಸನ’. ಮುಂದೆ ಹಠಯೋಗ ಪ್ರದೀಪಿಕೆ, ಘೇರಂಡ ಸಂಹಿತೆ ಮೊದಲುಗೊಂಡು ಹಲವಾರು ಗ್ರಂಥಗಳು ಯೋಗಾಸನಗಳ ಸುದೀರ್ಘ ವಿವರಣೆ ನೀಡುತ್ತವೆ.

ಶಾರೀರಕ ದೃಢತೆ ಮತ್ತು ಮಾನಸಿಕ ಸ್ಥಿರತೆ ಈ ಎರಡನ್ನೂ ಒದಗಿಸಬಲ್ಲವು ಯೋಗಾಸನಗಳು.Bend the body mend the mind ಎಂಬ ಮಾತಿದೆ. ಕ್ರಮಬದ್ಧವಾಗಿ ಶರೀರ ಚಾಲನೆ ಮಾಡಿ ಬಗ್ಗಿಸುವುದರ ಜೊತೆಗೆ ಮನಸ್ಸನ್ನೂ ಪಳಗಿಸುವ ಕ್ರಿಯೆ ಇಲ್ಲಿ ನಡೆಯುತ್ತದೆ,

“ಕ್ರಮಬದ್ಧವಾದ ಶಾರೀರಿಕ ಚಲನೆಯ ಅಂತಿಮ ಹಂತದಲ್ಲಿ ಸ್ಥಿರವಾಗಿ ಮತ್ತು ಸುಖವಾಗಿ ಇರಬಲ್ಲ ಭಂಗಿಯೇ ಆಸನ” ಎಂದು ಆಸನವನ್ನು ಸೂತ್ರೀಕರಿಸಬಹುದು.
ನಾವು ಮೈ ಮುರಿದು, ಬೆವರು ಸುರಿಸಿ ಕೆಲಸ ಮಾಡುತ್ತೇವೆ, ವೇಗ ನಡಿಗೆ ಮಾಡುತ್ತೇವೆ, ಒಳ್ಳೆಯ ರೀತಿ ಆಟವಾಡುತ್ತೇವೆ, ವ್ಯಾಯಾಮ ಮಾಡುತ್ತೇವೆ, ನಮಗೆ ಯೋಗ ಏಕೆ ಬೇಕು? ಎಂದು ಕೇಳುವವರಿದ್ದಾರೆ. ಹೌದು ಇವೆಲ್ಲ ಶಾರೀರಿಕ ಸ್ವಾಸ್ಥö್ಯಕ್ಕೆ ಪ್ರಾಧಾನ್ಯ ನೀಡುತ್ತವೆ. ಯೋಗ ಎಂದರೆ ವ್ಯಾಯಾಮ ಎಂದು ವ್ಯಾಖ್ಯಾನಿಸುವವರೂ ಇದ್ದಾರೆ. ಆದರೆ ಆಸನಗಳಿಗೂ, ವ್ಯಾಯಾಮಗಳಿಗೂ ಹಲವಾರು ವ್ಯತ್ಯಾಸಗಳಿವೆ. ಅವುಗಳನ್ನು ಪ್ರತಿಯೊಬ್ಬ ಯೋಗಾಭ್ಯಾಸಿಯೂ ತಿಳಿಯುವ ಅವಶ್ಯಕತೆಯಿದೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಗಮನಿಸಬಹುದು.
ವ್ಯಾಯಾಮಗಳ ಅಭ್ಯಾಸ ಆಸನಗಳ ಅಭ್ಯಾಸ
೧.ವೇಗಗತಿಯ ಅಭ್ಯಾಸ. ನಿಧಾನಗತಿಯ ಅಭ್ಯಾಸ.
೨.ಶಾರೀರಿಕ ಶ್ರಮ ಅಧಿಕ. ಶಾರೀರಿಕ ಶ್ರಮ ಕಡಿಮೆ.
೩.ಉಸಿರಾಟಕ್ಕೆ ಪ್ರಾಧಾನ್ಯವಿಲ್ಲ. ಉಸಿರಾಟಕ್ಕೆ ಪ್ರಾಧಾನ್ಯ.ಶ್ವಾಸದೊಡನೆ ಅಭ್ಯಾಸ
೪.ಸ್ನಾಯುಗಳ ಮೇಲೆ ಹೆಚ್ಚು ಪ್ರಭಾವದ ಸ್ನಾಯು, ಗ್ರಂಥಿಗಳ ಮೇಲೂ
ಕಾರಣದಿಂದಾಗಿ ಸ್ನಾಯುಗಳಲ್ಲಿ ಒತ್ತಡ ಪ್ರಭಾವ, ಸ್ನಾಯುಗಳಿಗೆ
ಬಿಗಿತ ಉಂಟಾಗುತ್ತದೆ.ಸಡಿಲತೆ,ಚುರುಕುತ ಉಂಟಾಗುತ್ತದೆ.
೫.ಶಾರೀರಿಕ ಚಾಲನೆಗೆ ಹೆಚ್ಚು ಪ್ರಾಧಾನ್ಯ. ಶರೀರದೊಡನೆ ಮನಸ್ಸನ್ನು
ಪಳಗಿಸುವ ಕ್ರಿಯೆ.
೬.ಶಕ್ತಿಯ ವ್ಯಯ ಹೆಚ್ಚು, ಶಕ್ತಿಯ ವೃದ್ಧಿಯಾಗುತ್ತದೆ
೭.ರೋಗ ರಹಿತವಾದ ಶರೀರವನ್ನು ರೋಗಯುಕ್ತ ಶರೀರವನ್ನು ರೋಗ
ಸದೃಢಗೊಳಿಸಬಲ್ಲದು.ರಹಿತವನ್ನಾಗಿ ಮಾಡಿ, ಕಾಂತಿಯುಕ್ತ ವನ್ನಾಗಿಸುತ್ತ, ರೋಗ ನಿರೋಧಕ ಶಕ್ತಿ ಯನ್ನು ವರ್ಧಿಸುತ್ತದೆ.
೮.ಬಹಿರ್ಮುಖ ಸಾಧನೆಗೆ ಹೆಚ್ಚು ಆಂತರAಗಿಕ ಸಾಧನೆಗೆ ಪÀÇರಕ ಗಮನ.
೯.ಬಾಹ್ಯ ಪ್ರದರ್ಶನಕ್ಕೆ ಪ್ರಾಧಾನ್ಯತೆ. ಅಂತರ್ದರ್ಶನಕ್ಕೆ ಸಹಕಾರಿ.ಇಚ್ಛಾಶಕ್ತಿ,ಸಂಕಲ್ಪ ಶಕ್ತಿಯ ವರ್ಧನೆಗೆ ಸಹಕಾರಿ.
೧೦.ಮನುಷ್ಯ ಸ್ವಭಾವಗಳವರ್ತನೆಯಲ್ಲಿ ಪರಿವರ್ತನೆ, ಮಾನಸಿಕ
ವರ್ತನೆಗಳ ಮೇಲೆಸಂಸ್ಕಾರ ವರ್ಧನೆ ಸಾಧ್ಯ. ಪರಿಣಾಮ ಕಡಿಮೆ.

By admin