ಮೈಸೂರು – ಸಾಧನೆಯು ಕೇವಲ ಹೆಸರನ್ನು ತರಲು ಇರುವುದಲ್ಲ ಉಸಿರನ್ನು ಉಳಿಸಬೇಕು ಎನ್ನುವ ಹಾದಿಯಲ್ಲಿ ಹಲವು ಕ್ಷೇತ್ರಗಳಿವೆ.ಆ ಕ್ಷೇತ್ರಗಳಲ್ಲಿ ಎಂ. ಆರ್ ಕಿಶೋರ್ ಅವರು ಆಯ್ಕೆ ಮಾಡಿಕೊಂಡದ್ದು ಯೋಗಕ್ಷೇತ್ರ.ಯೋಗದ ಅರ್ಥ ಕೇವಲ ವ್ಯಾಯಾಮವಲ್ಲ ಎಲ್ಲವನ್ನೂ ಸಮನ್ವಯಗೊಳಿಸುವುದು,ಒಂದುಗೂಡಿಸುವುದು,ಹಾಗೂ ಉತ್ತೇಜಿತಗೊಳಿಸುವುದಾಗಿದೆ ಎನ್ನುವುದು ಕಿಶೋರ್ ಅವರ ಯೋಗ ತಾತ್ಪರ್ಯ. ಎಂ.ಆರ್ ಕಿಶೋರ್ ಅವರು ಹುಟ್ಟಿದ್ದು ಶಾಸ್ತಿçಯ ಸಂಗೀತಕ್ಕೆ ಹೆಸರಾದ ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನ ಸಂಸ್ಕೃತಿಯ ಭಾಗವಾಗಿರುವ ನಂಜನಗೂಡು ತಾಲ್ಲೂಕಿನಲ್ಲಿ. ಕಿಶೋರ್ ಅವರ ತಂದೆ ರಂಗನಾಥ್ ,ತಾಯಿ ಕಮಲಮ್ಮ. ಮಧ್ಯಮ ಕುಟುಂಬದಲ್ಲಿ ಜನಿಸಿದ ಇವರು ತಮ್ಮ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ನಂಜನಗೂಡಿನ ಶಿಕ್ಷಣ ಸಂಸ್ಥೆಗಳಲ್ಲಿ ಪಡೆದಿರುತ್ತಾರೆ.ಉನ್ನತ ವ್ಯಾಸಂಗವಾಗಿ ಮೈಸೂರಿನ ಟಿ.ಟಿ.ಎಲ್ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಹಾಗೂ ಬೆಂಗಳೂರಿನ ಆಚಾರ್ಯ ತಾಂತ್ರಿಕ ಸಂಸ್ಥೆಯಲ್ಲಿ ಎಂ.ಬಿ.ಎ ಪದವಿಯನ್ನು ಪಡೆದಿರುತ್ತಾರೆ. ಕಿಶೋರ್ ಅವರು ಕ್ರಿಕೇಟ್ ಹಾಗೂ ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ಆಸಕ್ತಿ ಹೊಂದಿದವರು.ಹೀಗಿರುವಾಗ ಒಂದು ದಿನ ಆಕಸ್ಮಿಕವಾಗಿ ಯೋಗ ತರಬೇತುದಾರರ ಶಿಬಿರವನ್ನು ಕಂಡು ಈ ಯೋಗ ಶಾಸ್ತçದಲ್ಲಿರುವುದನ್ನು ಕಲಿಯಬೇಕೆಂದು ಸ್ವಪ್ರೇರೇಪಿತಗೊಂಡು ಹಿತೈಷಿಗಳಾದ ರಘು ಅವರ ಸಹಾಯ ಪಡೆದು ಯೋಗಶಾಲೆಗೆ ಸೇರಿಕೊಂಡರು ಹಾಗೂ ಯೋಗವನ್ನು ಹವ್ಯಾಸವಾಗಿ ಸ್ವೀಕರಿಸಿದರು. ಈಗ ಯೋಗ ಅವರ ನಿತ್ಯ ಬದುಕಾಗಿದೆ.2002 ನೇ ಇಸವಿಯಲ್ಲಿ ಮೇರುಯೋಗ ಗುರು ಬಿ.ಕೆ.ಎಸ್ ಅಯ್ಯಂಗಾರ್ ಅವರ ಶಿಷ್ಯ ಗೋಪಾಲಕೃಷ್ಣ ಅಯ್ಯಂಗಾರ್ ಅವರಲ್ಲಿ ಕಿಶೋರ್ ಯೋಗ ಕಲಿಕೆ ಆರಂಭಿಸಿದರು.ಈ ರೀತಿ ಯೋಗ ಕಲಿಕೆಯನ್ನು ಆರಂಭಿಸಿದ ಎರಡು ಮೂರು ವರ್ಷಗಳಲ್ಲೇ ಯೋಗಭ್ಯಾಸದಲ್ಲಿ ಪ್ರಾವಿಣ್ಯತೆಯನ್ನು ಹೊಂದಿ ಹಲವು ಯೋಗ ಸ್ಪರ್ಧೆಗಳನ್ನು ಗೆದ್ದಿದ್ದಾರೆ 2004 ಮತ್ತು 2005 ನೇ ಇಸವಿಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರಧಿನಿದಿಸುತ್ತ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಸ್ಪರ್ಧೆಯಲ್ಲಿ ಪಂಜಾಬ್ ರಾಜ್ಯದ ಅಮೃತಸರದ ಗುರುನಾನಕ್ ದೇವ್ ವಿಶ್ವವಿದ್ಯಾನಿಲಯ ಹಾಗೂ 2005 ಮತ್ತು 2006 ನೇ ಇಸವಿಯಲ್ಲಿ ರಾಜಸ್ಥಾನ ರಾಜ್ಯದ ಉದಯಪುರದ ಮೋಹನ್ ಲಾಲ್ ಸುಕಾಧ್ಯ ವಿಶ್ವ ವಿದ್ಯಾನಿಲಯದಲ್ಲಿ ಸ್ಪರ್ಧಿಸಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಕಿಶೋರ್ ಅವರ ಯೋಗ ಸಾಧನೆ ಇಷ್ಟಕ್ಕೇ ನಿಲ್ಲದೆ.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಸೂಳ್ಯ ಮತ್ತು ಹುಬ್ಬಳ್ಳಿ ಇಲ್ಲಿ ಸ್ಪರ್ಧಿಸಿ ದ್ವಿತೀಯ ಸ್ಥಾನವನ್ನು ಹಾಗೂ ಮೈಸೂರು ವಿ.ವಿ.ಯಲ್ಲಿ ಪುನಃ ಎರಡು ಬಾರಿ ಸ್ಪರ್ಧಿಸಿ ನಾಲ್ಕನೇ ಮತ್ತು ಐದನೇ ಸ್ಥಾನವನ್ನು ಗೆದ್ದಿದ್ದಾರೆ.ಹೀಗೆ ನಿರಂತರವಾಗಿ ಯೋಗ ಸ್ಪರ್ಧೆಯಲ್ಲಿ ಗೆದ್ದು ಸಾಧನೆ ಮಾಡುವುದರ ಜೊತೆಗೆ ಗುರುಸ್ಥಾನವನ್ನು ವಹಿಸಿ ಹಲವು ಶಿಕ್ಷಣ ಸಂಸ್ಥೆಗಳಾದ ಮೈಸೂರು ಜಿಲ್ಲಾ ವ್ಯಾಪ್ತಿಯ ಆಯ್ದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾವರ್ಧಕ ತಾಂತ್ರಿಕ ಕಾಲೇಜು ಮೈಸೂರು ಇಲ್ಲಿನ ವಿದ್ಯಾರ್ಥಿಗಳಿಗೆ ಮತ್ರು ಔದ್ಯೋಗಿಕ ಸಂಸ್ಥೆಗಳಾದ ಭಾರತೀಯ ನೆಸ್ಲೆ ಸಂಸ್ಥೆ ನಂಜನಗೂಡು,ಬ್ರಿವೇರಿಯಸ್ ಖಾಸಗಿ ಉದ್ಯಮ ನಂಜನಗೂಡು,ಟ್ರಿಟೋನ್ ವೇಲ್ಸ್ ಸಂಸ್ಥೆ ಮೈಸೂರು. ಇಲ್ಲಿ ಕೆಲಸ ನಿರ್ವಹಿಸುವವರಿಗೆ ಹಾಗೂ ಮೈಸೂರಿನ ರೈಲ್ವೆ ಅಧಿಕಾರಿಗಳಿಗೆ, ಕರ್ನಾಟಕ ಪೋಲಿಸ್ ಸಿಬ್ಬಂದಿ ಮೈಸೂರು ಇವರಿಗೆ ಯೋಗದ ಮಹತ್ವ ಹಾಗೂ ಥೆರಪಿ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿ ಆಸಕ್ತರಿಗೆ ಯೋಗ ಕಲಿಸಿಕೊಟ್ಟಿದ್ದಾರೆ ಅವರೆಲ್ಲರೂ ಸಧೃಢ ಆರೋಗ್ಯಹೊಂದಲು ಸಹಕಾರಿಯಾಗಿದ್ದಾರೆ. ಜೊತೆಗೆ ಇತ್ತೀಚಿಗೆ ಇಡೀ ವಿಶ್ವಕ್ಕೆ ಮಾರಕವಾಗಿ ಕಾಣಿಸಿಕೊಂಡ ಕರೋನ ಹೆಮ್ಮಾರಿ ಖಾಯಿಲೆಯ ಸಂಧರ್ಭದಲ್ಲಿ ವಿಶೇಷವಾಗಿ ಕಾಳಜಿವಹಿಸಿ ಮೈಸೂರು , ಮಂಡ್ಯ, ಚಾಮರಾಜನಗರ , ನಂಜನಗೂಡು ಭಾಗಗಳಲ್ಲಿ ಕರೋನ ವಾರಿಯರ್ ಆಗಿ ಯೋಗ ಚಿಕಿತ್ಸೆಯ ಮೂಲಕ ಹಲವು ಜನರು ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯ ಹೊಂದಲು ಶ್ರಮಿಸಿದ್ದಾರೆ.ಹೀಗೆ ಕಿಶೋರ್ ಅವರು ಯೋಗದ ವಿವಿಧ ಆಯಾಮಗಳನ್ನು ಭಿನ್ನವಾಗಿ ಸುಮಾರು 30 ರಿಂದ 35 ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.
ಕಿಶೋರ್ ಅವರು ಪಟಿಯಾಲ್ ಗೆ ಹೋಗುವ ಮುನ್ನ ಆರೋಗ್ಯ ಇಲಾಖೆಯಲ್ಲಿ ಜಿಲ್ಲಾ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತಿದ್ದರು. ಇಷ್ಟೆಲ್ಲಾ ಪೂರ್ವನಿಯೋಜಿತವಾಗಿ ಶ್ರಮ ಮತ್ತು ಸಾಧನೆಗೈದ ಫಲವಾಗಿ 2017 ರಲ್ಲಿ ಪಂಜಾಬ್‌ನ ಪಟಿಯಾಲದಲ್ಲಿರುವ ರಾಷ್ಟಿಯ ಕ್ರೀಡಾ ಪ್ರಾಧಿಕಾರದ ಮೂಲ ತರಬೇತಿ ಕೇಂದ್ರವಾದ ನೇತಾಜಿ ಸುಭಾಷ್ ರಾಷ್ಟಿಯ ಕ್ರೀಡಾ ಸಂಸ್ಥೆ (ಎನ್.ಎಸ್ .ಎಸ್.ಐ.ಎಸ್) ಯಲ್ಲಿ ತರಬೇತಿ ಪಡೆಯಲು ಅವಕಾಶ ದೊರೆಯುತ್ತದೆ.ಈ ವಿಷಯವಾಗಿ ಕಿಶೋರ್ ಅವರನ್ನು ಸಂದರ್ಶಿಸಿದಾಗ ಅವರು ಎನ್.ಎಸ್ .ಎಸ್.ಐ.ಎಸ್ ನ ಬಗ್ಗೆ ಅಭಿಪ್ರಾಯ ಮತ್ತು ಅನುಭವ ತಿಳಿಸಿದ್ದು ಈ ರೀತಿಯಾಗಿ.ನೇಮಕಾತಿಯಲ್ಲಿ ಮೊದಲಿಗೆ ಖಡತಗಳ ಪರಿಶೀಲನೆ,ಸಾಮಾನ್ಯ ವಿಷಯ ಪರೀಕ್ಷೆ ಮತ್ತು ಯೋಗದ ಬಗ್ಗೆಯೇ ಐಚ್ಛಿಕ ಪ್ರಶ್ನೆ ಪತ್ರಿಕೆ ಆನಂತರ ಪ್ರಾಯೋಗಿಕ ಪರೀಕ್ಷೆ. ಇದರಲ್ಲಿ ನಾವು ಕಲಿಕಾರ್ಥಿಯಾಗಿ ಹಾಗೂ ಗುರುವಾಗಿ ಯೋಗಾಸನಗಳನ್ನು ಮಾಡಬೇಕಾಗಿರುತ್ತದೆ. ಎನ್.ಎಸ್.ಎಸ್.ಐ.ಎಸ್.ನ ಮುಖ್ಯ ನಿರ್ದೇಶಕರೇ ಖುದ್ದಾಗಿ ಸಂದರ್ಶನ ಮಾಡುತ್ತಾರೆ. ಆಯ್ಕೆಯಲ್ಲಿ ಯಾವುದೇ ವಂಚನೆ ಇರುವುದಿಲ್ಲ ಎಲ್ಲವೂ ನಿಷ್ಠೆಯಿಂದ ಜರಗುತ್ತದೆ. ಈ ರೀತಿ ಪರೀಕ್ಷೆಯಲ್ಲಿ ವಿವಿಧ ವಿಭಾಗಗಳಿಂದ 265 ಮಂದಿ ಪಾಲ್ಗೊಂಡು 11 ಮಂದಿ ತೇರ್ಗಡೆ ಯಾದೆವು. ಆ 11 ಮಂದಿಯಲ್ಲಿ ನಾನೂ ಒಬ್ಬನಾಗಿದ್ದೆ. ಈ ಹಿಂದೆ ಕರ್ನಾಟಕದಿಂದ ಸ್ಪರ್ಧಿಸಿದವರು ಗೆದ್ದಿರಲಿಲ್ಲ ಹಾಗಾಗಿ ಕರ್ನಾಟಕದಿಂದ ಎನ್.ಎಸ್.ಎಸ್.ಐ.ಎಸ್ ನ ಮೊದಲ ತರಬೇತುದಾರನಾಗಿ ಸಾಧಿಸಿ ಹೊರಬರುವ ಅದೃಷ್ಟ ನನ್ನದಾಯಿತು. ಯೋಗವನ್ನು ವೃತ್ತಿಯಾಗಿ ತೆಗೆದುಕೊಳ್ಳವ ಯಾವುದೇ ಕನಸ್ಸು ಹಾಗೂ ಉದ್ದೇಶ ಇರಲಿಲ್ಲ ಆದರೆ ಯೋಗದಲ್ಲಿ ನಾನು ನಿರತ ಕಲಿಕೆದಾರನಾಗಿದ್ದರಿಂದ ಈ ರೀತಿಯ ಗುರುಸ್ಥಾನ ಒದಗಿ ಬಂದಿತು ಎನ್ನುತ್ತಾರೆ ಕಿಶೋರ್.ಎಲ್ಲೇ ಹೋದರು ನಾನು ಒಬ್ಬ ಯೋಗ ಕಲಿಕಾರ್ಥಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದೆ ಆದರೆ ಪಟಿಯಾಲದ ತರಬೇತಿ ನನಗೆ ಗುರುಸ್ಥಾನವನ್ನು ದೃಢವಾಗಿ ತಂದುಕೊಟ್ಟಿತು ಎಂ ದು ಹೇಳಲು ಸಂತೋಷವಾಗುತ್ತದೆ ಎನ್ನುತ್ತಾರೆ ಕಿಶೋರ್.3000 ಸಾವಿರ ಕೀ.ಮೀ ದೂರದಲ್ಲಿರುವ ಪಟಿಯಾಲದಲ್ಲಿ ತರಬೇತಿ ಪಡೆಯುವುದು ನನಗೆ ಅಷ್ಟು ಸುಲಭವಾಗಿರಲಿಲ್ಲ. ಅಲ್ಲಿಯ ವಾತಾವರಣ ಹೆಚ್ಚು ಉಷ್ಣಾಂಶದಿ0ದ ಮತ್ತು ಹೆಚ್ಚು ಶೀತಾಂಶದಿAದ ಕೂಡಿರುತ್ತದೆ.ಅಲ್ಲಿಯ ಆಹಾರ ಪದ್ಧತಿಯೂ ಬೇರೆ ಜೊತೆಗೆ ನಾವು ಕರ್ನಾಟಕದಲ್ಲಿ ಕಲಿತ ಯೋಗ ತರಬೇತಿಗಿಂತ ಪಟಿಯಾಲದಲ್ಲಿ ನೀಡುವ ಯೋಗ ಶಿಕ್ಷಣ ಭಿನ್ನ ಕಠಿಣ ಅಭ್ಯಾಸವಾಗಿರುತ್ತದೆ.ತರಬೇತಿಯಲ್ಲಿ ಯೋಗದ ವಿವಿಧ ವಿಧಾನಗಳನ್ನು ಹೇಳಿಕೊಡುತ್ತಾರೆ.ಯಾವ ವ್ಯಕ್ತಿಗೆ ಯಾವ ಆಸನಗಳನ್ನು ಹೇಳಿಕೊಟ್ಟರೆ ಹೆಚ್ಚು ಸೂಕ್ತ ಹಾಗೂ ಆ ವ್ಯಕ್ತಿ ಕಲಿಯಬಹುದು. ಒಬ್ಬ ವ್ಯಕ್ತಿಯಲ್ಲಿನ ಸೃಜನಾತ್ಮಕ ಕಲೆಯನ್ನು ಗುರುತಿಸುವುದನ್ನು ಹೇಳಿಕೊಡಲಾಗುತ್ತದೆ.ನಮಗೆ ದಿನನಿತ್ಯ ಪಾಠ ಭೋಧನೆಯೂ ಕ್ರೀಡೆ,ಅಂಗ ಶಾಸ್ತç ,ಮನೋವೈಜ್ಞಾನಿಕ,ಮತ್ತು ಕ್ರೀಡಾ ಅಪಘಾತ ವಿಷಯಗಳಲ್ಲಿ ಜರುಗುತ್ತದೆ.ಕ್ರೀಡೆಯ ಸಂಧರ್ಭದಲ್ಲಿ ಗಾಯಕ್ಕೆ ತುತ್ತಾದ ಕ್ರೀಡಾಪಟುವಿಗೆ ತಕ್ಷಣ ಚಿಕಿತ್ಸೆನೀಡುವುದು ಮತ್ತು ಕ್ರೀಡಾಪಟುವು ಮತ್ತೆ ಸ್ಪರ್ಧಾಳುವಾಗಿ ತಯಾರಾಗುವಷ್ಠರಮಟ್ಟಿಗೆ ಉತ್ತೇಜನ ನೀಡುವ ಅಂಶಗಳನ್ನು ಹೇಳಿ ಕೊಡಲಾಗುತ್ತದೆ.ಇಷ್ಟೆಲ್ಲ ತರಬೇತಿಯನ್ನು ಪಡೆದ ಮೇಲೆ ಅಂತಿಮವಾಗಿ ಪ್ರಶಸ್ತಿ ಪ್ರಧಾನವಾಯಿತು. ಅದುವೆ ಒಲಂಪಿಯನ್ ಶ್ರೇಷ್ಠ ಕುಸ್ತಿಪಟು ಸುಶಿಲ್ ಕುಮಾರ್ ಅವರಿಂದ ನನಗೆ ಅಂದು ತುಂಬಾ ಸಂತೋಷ ತಂದಿತು .ಹಾಗೆಯೇ ತರಬೇತಿ ಸಂಧರ್ಭದಲ್ಲಿ ಅಲ್ಲಿಯ ಕಷ್ಟಗಳನ್ನು ಅನುಭವಿಸಿ ಇಲ್ಲಿಂದ ಹೋಗಿಬಿಡಬೇಕು ಎನ್ನಿಸಿತ್ತು ಆದರೆ ನಮ್ಮ ರಾಜ್ಯದ ಘನತೆಗೆ ತೊಂದರೆತದ0ತಾಗುತ್ತದೆ ಎಂದು ಧೃಢ ನಿಶ್ಚಲ ಮನಸ್ಸಿನಿಂದ ಇದ್ದುದರ ಫಲವಾಗಿ ಅಂದಿನ ಸಮಾರಂಭ ನನಗೆ ಇಂದೂ ನೆನೆದರೆ ಅಷ್ಟೇ ಸಂತೋಷ ಮತ್ತು ಗೌರವ ತರುತ್ತದೆ ಎಂದು ಕಿಶೋರ್ ಅವರು ತಮ್ಮ ಪಟಿಯಾಲದ ಅನುಭವವನ್ನು ಸವ್ವಿವರವಾಗಿ ಸಂತೋಷದಿ0ದ ನಮ್ಮೊಂದಿಗೆ ಹಂಚಿಕೊ0ಡರು .ಕಿಶೋರ್ ಅವರು ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮುಂದಿನ ಯೋಗ ಸಾಧನೆಯ ಬದುಕು ಉಜ್ವಲವಾಗಿರಲಿ.

 

By admin