ವರದಿ.(ಮಂಜುನಾಥ ಬಿ.ಆರ್)
ಮನುಷ್ಯನ ದೇಹದ ಸೃಷ್ಟಿ ಕೇವಲ ಮಾತಿಗೆ ಹೇಳಿದಂತೆ ನೋಟಕ್ಕೆ ಕಂಡಂತೆ ಮೂಳೆ ನರ ಮಾಂಸಖಂಡಗಳ ವ್ಯವಸ್ಥೆಯೇ ಆಗಿರಬಹುದು.ಆದರೆ ಆ ಮೂಳೆ ನರ ಮಾಂಸಖಂಡಗಳ ವ್ಯವಸ್ಥೆಯು ನಾವೂ ಊಹಿಸಲು ಸಾಧ್ಯವಿರದ ಸ್ಥಿತಿಯಲ್ಲಿ ರಚನೆಯಾಗಿದೆ ಹಾಗೂ ಕಾರ್ಯವನ್ನು ಕೈಗೊಳ್ಳುತ್ತಿದೆ.ನಮ್ಮ ದೇಹದ ಅಂಗಾಂಗಗಳು ತನ್ನದೇ ಆದ ಕರ್ತವ್ಯವನ್ನು ನಿಯಮಬದ್ಧವಾಗಿ ಪಡೆದುಕೊಂಡಿದೆ ಹಾಗೂ ಬಾಹ್ಯ ಮತ್ತು ಆಂತರಿಕ ಸಮಸ್ಯೆಗಳಿಂದ ತಕ್ಷಣವೇ ಪ್ರಾಥಮಿಕ ಹೋರಾಟವನ್ನು ಆರಂಭಿಸುತ್ತವೆ ಇದು ನಮಗೆ ಅರಿವಿಲ್ಲದೇ ನಡೆಯುವಂತಹ ಕ್ರಿಯೆ. ಆದರೆ ಮನುಷ್ಯನ ದಿನಚರಿ ಚಟುವಟಿಕೆಗಳು ಅವ್ಯವಸ್ಥೆಯ ಹವ್ಯಾಸಗಳಿಂದ ಕೂಡಿಸಿಕೊಂಡಿರುವುದರಿಂದ ಅವನ ದೇಹದ ಅಂಗಾಂಗಗಳನ್ನು ಅವನೇ ಸ್ವತಃ ಕೊಲ್ಲುವಂತೆ ಮಾಡಿಕೊಂಡು ಸಮಸ್ಯೆಗಳ ಪರಿಹಾರಕ್ಕೆ ಹುಡುಕುತ್ತಾನೆ ಗೋಳಾಡುತ್ತಾನೆ.ಈ ಮೊದಲೇ ಇರುವುದನ್ನು ಕಾಪಾಡಿಕೊಳ್ಳದೆ ಪರಿತಪಿಸುತ್ತಾನೆ
. ಮಾನವನ ದೇಹದ ಅಂಗಗಳಾದ ಹೃದಯ, ಕಿಡ್ನಿ, ಶ್ವಾಸಕೋಶ ಇವುಗಳ ಪರಿಚಯ ಸಾಮಾನ್ಯವಾಗಿ ಅಪಾರ ಇರುತ್ತದೆ. ಆದರೆ ಮಾನವನ ದೇಹದಲ್ಲಿರುವ ಗ್ರಂಥಿಗಳು ಬಹುಪಾಲು ಸಾಮಾನ್ಯರಿಗೆ ಸ್ವಲ್ಪ ಅಪರಿಚಿತವಾಗಿವೆ.ಗ್ರಂಥಿಗಳು ಮಾನವನ ಪ್ರತಿಯೊಂದು ಅಂಗಕ್ಕೂ ಮುಖ್ಯವಾಗಿ ಒಂದೊಂದು ಗ್ರಂಥಿಗಳು ರಚನೆಯಾಗಿವೆ.ಪೀನಿಯಲ್,ಪಿಟ್ಯುಟರಿ, ಅಡ್ರಿನಲ್, ಹೀಗೆ ಹಲವು ಗ್ರಂಥಿಗಳು ಮಾನವನ ದೇಹದಲ್ಲಿ ಮುಖ್ಯಪಾತ್ರ ನಿರ್ವಹಿಸುತ್ತವೆ.
ಪ್ರಸ್ತುತ ಇಡೀ ವಿಶ್ವಕ್ಕೆ ಮಾರಕವಾಗಿರುವ ಕರೋನಾ ವೈರಸ್ ಪ್ರತಿಬಂಧಕವಾಗಿ ನಮ್ಮ ದೇಹ ಈಗಾಗಲೇ ವಿಜ್ಞಾನಿಗಳು ಸಂಶೋಧಿಸಿ ತಿಳಿಸಿರುವಂತೆ ೧೪ ದಿನಗಳವರೆವಿಗೆ ಪೂರ್ವ ಯೋಜಿತವಾಗಿ ನಮ್ಮ ದೇಹ ಹೋರಾಡುವಷ್ಟು ಶಕ್ತವಾಗಿರುತ್ತದೆ.ಈ ದೃಷ್ಟಿಯಲ್ಲಿ ಪ್ರಮುಖವಾಗಿ ಥೈಮಸ್ ಗ್ರಂಥಿಯ ಪಾತ್ರವನ್ನು ಗಮನಿಸಬಹುದು.ಕರೋನಾ ವೈರಸ್ ; ಅಲರ್ಜಿಗಳಾದ ಶೀತ,ಕೆಮ್ಮು,ಗಂಟಲು ಉರಿ ಮತ್ತು ಊತ ಉಸಿರಾಟದ ತೊಂದರೆ ಈ ಲಕ್ಷಣಗಳನ್ನು ತಂದು ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ.ಆನಂತರ ಮನುಷ್ಯನ ಸಂಪೂರ್ಣ ಅಂತ್ಯಕ್ಕೆ ನಾಂದಿ ಆಡುತ್ತದೆ.ಇಲ್ಲಿ ಥೈಮಸ್ ಗ್ರಂಥಿಯು ಕರೋನಾ ವೈರಸ್ ರೀತಿಯ ಹಲವು ವೈರಸ್ ಗಳ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿಯನ್ನು ಉತ್ಪಾದಿಸುತ್ತದೆ.ಈ ಗ್ರಂಥಿಯು ದುಗ್ಧರಸ ವ್ಯವಸ್ಥೆಯ ಮುಖ್ಯ ಅಂಗವಾಗಿದೆ. ಮೇಲ್ಭಾಗದ ಎದೆಯಲ್ಲಿರುವ ಈ ಗ್ರಂಥಿಯ ಪ್ರಾಥಮಿಕ ಕಾರ್ಯವೆಂದರೆ ಟಿ.ಲಿಪೋಸೈಟ್ಸ್ ಎಂಬ ಪ್ರತಿರಕ್ಷಣಾ ವ್ಯವಸ್ಥೆಯ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುವುದು.ಟಿ.ಲಿಂಪೋಸೈಟ್ಸ್ ಅಥವಾ ಟಿ.ಕೋಶಗಳು ಬಿಳಿರಕ್ತಕಣಗಳಾಗಿವೆ.ಇದು ಸೋಂಕು ತಗುಲುವ ಬ್ಯಾಕ್ಟೀರಿಯಾ ಮತ್ತು ವೈರಸ್ ನಿಂದ ರಕ್ಷಿಸುತ್ತದೆ ಹೀಗೆ ರಕ್ಷಿಸುವ ಥೈಮಸ್ ಗ್ರಂಥಿಯನ್ನು ಉತ್ತಮ ಆಹಾರ,ವ್ಯಾಯಾಮ ಮತ್ತು ಯೋಗಾಸನಗಳಿಂದ ಸದಾ ಕಾರ್ಯೋನ್ಮುಖವಾಗಿರುವಂತೆ ನೋಡಿಕೊಳ್ಳುವುದು
ನಮಗೆ ಲಾಭದಾಯಕವಾಗಿದೆ.ಯೋಗಾಸನದಿಂದ ಕೇವಲ ಒಂದೆರೆಡು ಸಮಸ್ಯೆಯಲ್ಲ ಎಲ್ಲಾ ರೀತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದೆಂದು ನಿಮಗೆಲ್ಲರಿಗೂ ತಿಳಿದ ವಿಷಯ.ಇತ್ತೀಚಿಗೆ ಮೈಸೂರಿನಲ್ಲಿ ನನಗೆ ಪಟಿಯಾಲದಲ್ಲಿ ತರಬೇತಿ ಪಡೆದು ಬಂದ ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಯೋಗಾಚಾರ್ಯ ಕಿಶೋರ್ ಎಂ.ಆರ್ ಅವರ ಪರಿಚಯದಿಂದಾಗಿ ಈ ಮೇಲಿನ ಮಾಹಿತಿ ಎಲ್ಲವೂ ತಿಳಿಯಲ್ಪಟ್ಟಿತು.ಕಿಶೋರ್ ಅವರು ಈ ಮೊದಲು ಕರೋನಾ ಮೊದಲ ಅಲೆಯು ಆರಂಭವಾದಾಗ ಮೈಸೂರು ಮತ್ತು ನಂಜನಗೂಡಿನಲ್ಲಿ ಕರೋನಾ ವಾರಿಯರ್ ಆಗಿ ಸೇವೆ ಸಲ್ಲಿಸಿ ಈ ಸಂದಿಗ್ಧತೆಯ ಪರಿಸ್ಥಿತಿಯನ್ನು ಎದುರಿಸುವಲ್ಲಿ ಸಾಕಷ್ಟು ಅನುಭವವನ್ನು ಪಡೆದುಕೊಂಡಿದ್ದಾರೆ.
ಪ್ರಾಕೃತಿಕ ಚಿಕಿತ್ಸೆ, ಫಿಸಿಯೋ ಥೆರಪಿ,ಯೋಗಾಸನಗಳ ಮೂಲಕ ಅದೆಷ್ಟೋ ಕರೋನಾ ರೋಗಿಗಳಲ್ಲಿ ಮಾನಸಿಕ ಸ್ಥೈರ್ಯವನ್ನು ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸಿದ್ದಾರೆ.ಇವರು ಹೇಳಿಕೊಡುವ ಯೋಗಮಾರ್ಗದಲ್ಲಿ ಮಾಂತ್ರಿಕ ಶಕ್ತಿ ಇದ್ದಂತೆ ಕಾಣುತ್ತದೆ. ಏಕೆಂದರೆ ಹಲವು ರೋಗಿಗಳು ಮಾನಸಿಕ ಅಸ್ವಸ್ಥತೆಯುಳ್ಳವರು ಇವರ ಚಿಕಿತ್ಸೆಯಲ್ಲಿ ಗುಣಮುಖರಾಗಿದ್ದಾರೆ.ಇವರು ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದ ಯೋಗ ಮತ್ತು ಕ್ರೀಡಾ ವಿಭಾಗದಲ್ಲಿ ಯೋಗ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಇವರ ಬಳಿ ಸಮಸ್ಯೆ ಎಂದು ಯಾರೇ ಬರಲಿ ಎಲ್ಲರಿಗೂ ನಿಸರ್ಗ ಚಿಕಿತ್ಸೆ ಮತ್ತು ಯೋಗಚಿಕಿತ್ಸೆಯನ್ನು ನೀಡಲು ಸದಾ ಉತ್ಸಾಹಿಯಾಗಿದ್ದಾರೆ.
ಇವರು ಮೇಲೆ ತಿಳಿಸಿದ ಥೈಮಸ್ ಗ್ರಂಥಿಯನ್ನು ಉತ್ತೇಜಿಸಲು ಹಲವು ಮಾರ್ಗಗಳನ್ನು ತಿಳಿಸಿದರು ಅದರಲ್ಲಿ ಪ್ರಮುಖವಾಗಿ ಯೋಗಾಸನವು ಮುಖ್ಯವಾಗಿ ಅತೀ ಹೆಚ್ಚು ಪ್ರಭಾವವನ್ನು ಬೀರಿ ಮನುಷ್ಯನ ದೇಹದಲ್ಲಿನ ಥೈಮಸ್ ಗ್ರಂಥಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಶ್ರವಿಸಲು ಸಹಾಯ ಮಾಡುತ್ತದೆಂದು ವಿಷಯ ತಿಳಿಸಿದರು.ಅಂಥಹ ಯೋಗಾಸನಗಳೆಂದರೆ ಉತ್ಕಟಾಸನ,ಅಧೋಮುಖ ಶ್ವಾನಾಸನ,ದ್ವಿಪಾದ ವಿಪರೀತ ದಂಡಾಸನ,ವಿಪರೀತ ಕಾರಿಣಿ ಆಸನ,ಶಿರಾಸನ, ಹಲಾಸನ, ಇನ್ನೂ ಅನೇಕ ಆಸನಗಳಿವೆ ಜೊತೆಗೆ ಪ್ರಾಣಯಾಮಗಳನ್ನು ಸ್ವರ ನಿಯಮಬದ್ಧವಾಗಿ ಮಾಡಿದರೆ ಥೈಮಸ್ ಗ್ರಂಥಿಯನ್ನು ಉತ್ತೇಜಿಸಬಹುದು ಮತ್ತು ಆರೋಗ್ಯದಾಯಕವಾದ ದೈಹಿಕ ಸ್ಥಿತಿಯನ್ನು ಕಾಪಾಡಿಕೊಳ್ಳಬಹುದು. ಪ್ರಸ್ತುತ ಕರೋನಾ ವೈರಸ್ ಅನ್ನು ಸ್ವತಃ ಈ ಯೋಗಾಭ್ಯಾಸಗಳಿಂದ ಹತ್ತಿಕ್ಕಬಹುದು ಎಂದು ಉತ್ತಮ ಮಾರ್ಗದರ್ಶನವನ್ನು ನೀಡಿದರು.ಹಾಗು ಸಾಮಾನ್ಯರಲ್ಲಿ ಸಲಹೆಯಿತ್ತರು ಯೋಗಾಸನಗಳನ್ನು ಯೋಗ ತರಬೇತುದಾರರಿಂದ ಸಮಯ ನಿಯಮಾನುಸಾರವಾಗಿ ಕಲಿತರೆ ಒಳಿತು ಆನಂತರ ಸ್ವತಃ ಅಭ್ಯಾಸ ಮಾಡಿಕೊಳ್ಳಿ ಎಂದರು.ಮೈಸೂರಿನ ಸುತ್ತಮುತ್ತಲ ಸಾವಿರಕ್ಕೂ ಅಧಿಕ ಇವರ ವಿಶ್ವಾಸಿಗರು ಇವರಿಂದ ಸಾಕಷ್ಟು ಆರೋಗ್ಯ ಲಾಭದಾಯಕ ಸಲಹೆಗಳನ್ನು ಪಡೆದುಕೊಂಡಿದ್ದಾರೆ.
ಕಿಶೋರ್ ಎಂ.ಆರ್ ಅವರು ಡಾ.ನವೀನ್ ಕುಮಾರ್ ಹೆಚ್.ಎನ್(B.A.M.S)ಆಯುರ್ವೇದ ವೈದ್ಯರು.ಇವರೊಡನೆ ಸಹಭಾಗಿತ್ವದಲ್ಲಿ ತಿ.ನರಸೀಪುರದಲ್ಲಿ ಆಯುಷ ಕ್ಲಿನಿಕಲ್(kishoryoga@gmail.com ,9035930994) ಹೆಸರಿನಲ್ಲಿ ಆಯುರ್ವೇದ ಶರೀರ ಮತ್ತು ಮನೋಲ್ಲಾಸ ಕೇಂದ್ರವನ್ನು ನಡೆಸುತ್ತಿದ್ದಾರೆ.