ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಮೂಲ ತರಬೇತಿ ಕೇಂದ್ರವಾದ ನೇತಾಜಿ ಸುಭಾಷ್ ರಾಷ್ಟ್ರೀಯ ಕ್ರೀಡಾ ಸಂಸ್ಥೆ, ಪಾಟಿಯಾಲ, ಪಂಜಾಬ್‍ನಲ್ಲಿ ಪ್ರತಿ ವರ್ಷವೂ ನಡೆಯುವ ಯೋಗ ತರಬೇತುದಾರರ ಅರ್ಹತೆಯ ಪಟ್ಟಿಗೆ ಕರ್ನಾಟಕದಿಂದ ಕಿಶೋರ್ ಎಂ. ಆರ್. ಆಯ್ಕೆಯಾದ ಮೊದಲ ಕನ್ನಡಿಗರಾಗಿದ್ದಾರೆ.

ಇವರು ಮೂಲತಃ ನಂಜನಗೂಡಿನ ರಂಗನಾಥ್-ಕಮಲಮ್ಮ ದಂಪತಿಯ ಪುತ್ರರಾದ ಕಿಶೋರ್ ಎಂ.ಆರ್. ರವರು ಮೈಸೂರಿನ ಟಿ.ಟಿ.ಎಲ್ ಕಾಲೇಜಿನಲ್ಲಿ ಬಿ. ಕಾಂ. ಮುಗಿಸಿ ನಂತರ ಬೆಂಗಳೂರು ಆಚಾರ್ಯ ತಾಂತ್ರಿಕ ಸಂಸ್ಥೆಯಲ್ಲಿ ಎಂ.ಬಿ.ಎ. ವಿದ್ಯಾಭ್ಯಾಸ ಮುಗಿಸಿದ ಇವರು, 2002ರಲ್ಲಿ ಯೋಗ ಕಲಿಕೆಯನ್ನು ಯೋಗಭೀಷ್ಮ ಎಂದೇ ಖ್ಯಾತರಾದ ಬಿ.ಕೆ.ಎಸ್. ಐಯ್ಯಂಗಾರ್ ರವರ ಶಿಷ್ಯರಾದ ಗೋಪಾಲಕೃಷ್ಣ ಐಯ್ಯಂಗಾರ್ ಅವರಲ್ಲಿ ಯೋಗ ತರಬೇತಿಯನ್ನು ಆರಂಬಿಸಿದರು. ನಂತರ 2016-17ನೇ ಸಾಲಿನಲ್ಲಿ ಎನ್.ಎಸ್.ಎನ್.ಐ.ಎಸ್ ನಲ್ಲಿ ಒಂದು ವರ್ಷದ ಯೋಗ ತರಬೇತಿಗಾಗಿ ಆಯ್ಕೆಯಾಗಿ ನಂತರ ಅಲ್ಲಿ ಯೋಗ ಮಾನ್ಯತೆ ಪಡೆದಿರುವ ಇವರು ಇಂದು ಮೈಸೂರು ವಿಶ್ವವಿದ್ಯಾನಿಯದಲ್ಲಿ ಯೋಗ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

2018-19ನೇ ಸಾಲಿನಲ್ಲಿ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಮೂಲ ತರಬೇತಿ ಕೇಂದ್ರವಾದ ನೇತಾಜಿ ಸುಭಾಷ್ ರಾಷ್ಟ್ರೀಯ ಕ್ರೀಡಾ ಸಂಸ್ಥೆ, ಪಾಟಿಯಾಲ, ಪಂಜಾಬ್‍ನಲ್ಲಿ ಪ್ರತಿ ವರ್ಷವೂ ನಡೆಯುವ ತರಬೇತುದಾರರಾಗಲು ಅರ್ಹತೆಯ ವಿದ್ಯಾರ್ಹತೆ ಸದರಿ ಸಾಲಿನಲ್ಲಿ ಯೋಗ ಕ್ರೀಡಾ ವಿಭಾಗದಲ್ಲಿ ಸುಮಾರು 250 ವಿದ್ಯಾರ್ಥಿಗಳು ಅರ್ಜಿಗಳನ್ನು ಭಾರತದ್ಯಾಂತ ಸಲ್ಲಿಸಲಾಗಿದ್ದು, ಇದರಲ್ಲಿ ಸುಮಾರು 50 ರಿಂದ 60 ವಿದ್ಯಾರ್ಥಿಗಳು ಮಾತ್ರ ಅರ್ಹತಾ ಸುತ್ತಿಗೆ ಅರ್ಹತೆಯನ್ನು ಪಡೆದಿರುತ್ತಾರೆ. ಕೊನೆಯ 5 ಸುತ್ತಿನ ಆಯ್ಕೆ ಪ್ರಕ್ರಿಯೆಯಲ್ಲಿ 11 ಮಂದಿಗೆ ಮಾತ್ರ ದಾಖಲಾತಿ ನೀಡಲಾಗಿರುತ್ತದೆ. 20 ವಿದ್ಯಾರ್ಥಿಗಳಿಗೆ ಅವಕಾಶವಿದ್ದರೂ ಸಹ ಉತ್ತಮ ಅರ್ಹತೆಯೊಂದಿದ 11 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

ಈ ಹನ್ನೊಂದು ವಿದ್ಯಾರ್ಥಿಗಳಲ್ಲಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿಯಾದ ಕಿಶೋರ್ ಎಂ.ಆರ್. ಎನ್.ಐ.ಎಸ್. ತರಬೇತಿಯಲ್ಲಿ ಮಾನ್ಯತೆ ಪಡೆದು ಯೋಗ ತರಬೇತುದಾರರಾಗಿ ಹೊರಹೊಮ್ಮಿದ ಇವರು ಈಗ ರಾಷ್ಟ್ರಮಟ್ಟದ ತೀರ್ಪುಗಾರರಿದ್ದಾರೆ.

 

By admin