– ಜಾನು ಕೀಲು ಚಾಲನೆ – ಯೋಗಾಸನ ಅಭ್ಯಾಸಕ್ಕೆ ಪೂರ್ವ ಸಿದ್ಧತೆ. ಕುಳಿತು ಕೊಂಡು ಮಾಡುವ ಶರೀರ ಚಾಲನೆ ಕ್ರಿಯೆ. ಒಂದು ಕಾಲನ್ನು ನೀಳವಾಗಿ ನೀಡಿ ಕೊಂಡುಉಸಿರನ್ನು ದೀರ್ಘ ವಾಗಿ ಎಳೆದು ಕೊಂಡು ಕಾಲನ್ನು ಮಡಿಸಿ ಉಸಿರನ್ನು ದೀರ್ಘವಾಗಿ ಹೊರಗಡೆ ಬಿಡುವ ಪ್ರಕ್ರಿಯೆ. ಎರಡು ಬದಿಯಲ್ಲಿ ಕನಿಷ್ಠ ಹತ್ತು ಬಾರಿ ಮಾಡಬಹುದು. ಇದರಿಂದ ಕಾಲುಗಳಿಗೆ ಮಂಡಿ ಚಿಪ್ಪುಗಳಿಗೆ ಪೂರ್ಣ ಪ್ರಮಾಣದ ಸಂಚಲನೆ ಉಂಟಾಗಿ ಪ್ರಾರಂಭದ ಹಂತದ ಸರಳ ಯೋಗಾಸನ ಮಾಡಲು ಶರೀರಕ್ಕೆ ಮತ್ತು ಮನಸ್ಸಿಗೆ ಹುಮ್ಮಸ್ಸು ಉಂಟಾಗುತ್ತದೆ. ಬೆನ್ನಿನ ತಳಭಾಗದ ಸಯಾಟಿಕ ನೋವು ನಿಯಂತ್ರಣದಲ್ಲಿ ಇದ್ದು ಯೋಗಪಟುವಿಗೆ ಅರೋಗ್ಯದಲ್ಲಿ ಪ್ರಗತಿ ಕಾಣಲು ಸಾಧ್ಯವಾಗುತ್ತದೆ.ಹಾಗೂ ಯಾವುದೇ ದುಷ್ಪರಿಣಾಮವಿಲ್ಲದ ಯೋಗ ಚಿಕಿತ್ಸಾ ವಿಧಾನದಲ್ಲಿ ಅಪಾರ ನಂಬಿಕೆ ಉಂಟಾಗುತ್ತದೆ.