ವರದಿ:ಮಹೇಶ್ ನಾಯಕ್

.
ಯೋಗ ಎನ್ನುವ ಪದ ಸಂಸ್ಕ್ರತದ ಮೂಲಧಾತುವಾದ “ಯುಜ್” ಎನ್ನುವ ಪದದಿಂದ ಬಂದಿದ್ದು ಬಂದಿಸು, ಕೂಡಿಸು, ಸೇರಿಸು, ಚಿತ್ತವನ್ನು ನಿರ್ದೇಶಿಸು, ಕೇಂದ್ರೀಕರಿಸು, ಉಪಯೋಗಿಸು ಮತ್ತು ಆಸಕ್ತಿ ವಹಿಸು ಎನ್ನುವ ಅರ್ಥಗಳನ್ನು ಅದು ಕೂಡುತ್ತದೆ,

ಸಂಯೋಜನೆ ಅಥಾವಾ ಸಂಸರ್ಗ ಎನ್ನುವ ಅರ್ಥವೂ ಇದಕ್ಕೆ ಇದೆ, ಭಗವಂತನ ಇಚ್ಚೆಯೊಂದಿಗೆ ನಮ್ಮ ಇಚ್ಚೆಯೆ ನಿಜವಾದ ಸಂಸರ್ಗವೆಂದರೆ ಇದೇ ಆಗಿದೆ “ಶರೀರದ ಮನಸ್ಸು ಮತ್ತು ಆತ್ಮದ ಸರ್ವಶಕ್ತಿಗಳನ್ನು ಭಗವಂತನೊಡನೆ ಸಂಯೋಜಿಸುವುದೆ ಯೋಗ ಇದು ಚಿತ್ತ ಮನಸ್ಸು ಭಾವನೆಗಳು, ಇಚ್ಚೆ ಎನ್ನುವ ಯೋಗದ ಮೂಲಭಾವನೆಗಳನ್ನು ಶಿಸ್ತುಗೊಳಿಸುವುದು ಮತ್ತು ಜೀವನದ ಎಲ್ಲಾ ಅಂಶಗಳನ್ನು ಸಮದೃಷ್ಟಿಯಿಂದ ನೋಡಲು ಸಹಾಯಕವಾಗುವ ಆತ್ಮದ ಒಂದು ನಿಲುವು”

 

ಎಂದು ಗಾಂದೀಜಿಯವರ ಗೀತೆಯ ಪುಸ್ತಕದ ಪ್ರಸ್ತಾವನೆಯಲ್ಲಿ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದಿನ ನಿತ್ಯ ಜಂಜಾಟ ಹಾಗೂ ಕೆಲಸದ ಒತ್ತಡದಿಂದ ಸರಿಯಾದ ಜೀವನ ಶೈಲಿಯೇ ಮರೆತಿಂತಾಗಿದೆ, ಈ ಆಧುನಿಕ ಜೀವನ ಶೈಲಿಯಿಂದ ಜನ ಸಾಮನ್ಯರು ಹಲವಾರು ಖಾಯಿಲೆಗೆ ತುತ್ತಾಗುತ್ತ ಇದ್ದಾರೆ ಆದರಿಂದ್ದ ಪ್ರತಿಯೊಬ್ಬರು ಯೋಗ ವ್ಯಾಯಮ ಸರಿಯಾದ ಆಹಾರ ಕ್ರಮ ದಿನ ನಿತ್ಯ ಆಭ್ಯಾಸ ರೂಡಿಸಿಕೊಂಡರೆ ಆರೋಗ್ಯ ನಮ್ಮದಾಗುತ್ತೆದೆ,

ಯಾವ ಸಾಧಕ ಸದಾಕಾಲವು ಯೋಗ ಸಾಧನೆಯನ್ನು ಮಾಡುತ್ತಿರುವನೋ ಅವನು ಬ್ರಹ್ಮಸಾಕ್ಷಾತ್ಕಾರವನ್ನು ಪಡೆಯುತ್ತಾನೆ. ಈ ಹಿಂದೆಯೂ ಅನೇಕ ಸಾಧಕರು ಈ ರೀತಿಯಲ್ಲಿ ಸಾಧನೆ ಮಾಡಿ ನಿತ್ಯತ್ವವನ್ನು ಪಡೆದಿರುತ್ತಾರೆ

ಇದಕ್ಕೆಯೋಗವಿದ್ಯೆಗಿಂತಲೂ ಮಿಗಿಲಾದ ಅಮೃತ ಮಾರ್ಗವು ಬೇರೂಂದಿಲ್ಲ.
ತನ್ನನ್ನು ತಾನು ಅರಿಯುವ ಕಲೆಯೆ ಯೋಗ. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸುವ ವಿಶೇಷ ಕಲೆಯಾಗಿದೆ. ‘ಮನೆಯಲ್ಲೆ ಇರಿ, ಸುರಕ್ಷಿತವಾಗಿರಿ” ಎಂಬುದು ಕೊರೊನಾ ವಿರುದ್ಧದ ಹೋರಾಟದಲ್ಲಿ ಮುನ್ನೆಚ್ಚರಿಕೆಯ ಕ್ರಮ ತೆಗೆದುಕೊಂಡರೆ”ಮನೆಯಲ್ಲಿ ಯೋಗ, ಕುಟುಂಬದೊಂದಿಗೆ ಯೋಗದ ಬಾಂದವ್ಯ ಹೆಚ್ಚಾಗುತ್ತೆ.

 

ಆರೋಗ್ಯ ವೃದ್ದಿ ಯಾಗುತ್ತೆ.ರೋಗಗಳ ಚಿಕಿತ್ಸೆಗೆ ವೈದ್ಯರು ನೀಡುವ ಔಷಧಿಗಳನ್ನು ನಾವು ಹೇಗೆ ತಪ್ಪಿಸದೇ ತೆಗೆದುಕೊಳ್ಳುತ್ತೇವೆಯೋ, ಅದೇ ರೀತಿ ಯೋಗಾಭ್ಯಾಸವನ್ನು ಚಿಕಿತ್ಸೆ ಎಂದೇ ತಿಳಿದುಕೊಂಡರೆ ಸಾಕು. ನಿರಂತರ ಯೋಗಾಭ್ಯಾಸ ಮಾಡುತ್ತ ಮನಸ್ಸು ಮತ್ತು ಹೃದಯ ಒಂದಾಗುತ್ತದೆ. ದೇಹದ ಮೇಲಿನ ಪ್ರೀತಿ ಹೆಚ್ಚಳವಾಗುತ್ತದೆ.

‘ಕೋವಿಡ್-19 ಆತಂಕದಿಂದಾಗಿ ವಿಶ್ವಾದ್ಯಂತ ಜನರು ನಿತ್ಯ ಆತಂಕ, ಖಿನ್ನತೆ, ಇತರ ರೀತಿಯ ಒತ್ತಡದಿಂದ ದಿನಗಳನ್ನು ದೂಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಮನೆ ಮಂದಿಯೆಲ್ಲಾ ಮನೆಯಲ್ಲಿ ಯೋಗಾಭ್ಯಾಸ ಮಾಡಿ ತುಸು ಮಾನಸಿಕ ನೆಮ್ಮದಿ ದೊರೆಯುವಲ್ಲಿ ಎರಡು ಮಾತಿಲ್ಲ.

 

By admin