ಚಾಮರಾಜನಗರ: ಎನ್‌ಎಸ್‌ಎಸ್ ಘಟಕ ಹಾಗೂ ವೈಆರ್‌ಸಿಯು ಮತ್ತು ಕೆವಿಕೆ, ಕೃಷಿ ವಿಶ್ವ ವಿದ್ಯಾಲಯ ಬೆಂಗಳೂರು ಹಾಗೂ ಕೃಷಿ ಮಹಾವಿದ್ಯಾಲಯ ಚಾಮರಾಜನಗರ ವತಿಯಿಂದ ೮ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗಾಭ್ಯಾಸ ನಡೆಸಲಾಯಿತು.
ನಮ್ಮ ಚಂಚಲ ಮನಸ್ಸನ್ನು ಏಕಾಗ್ರತೆಗೊಳಿಸಲು ಯೋಗ ಉತ್ತಮ ವ್ಯಾಯಾಮವಾಗಿದೆ. ಮನಸ್ಸನ್ನು ಶಾಂತಗೊಳಿಸುವ ಸುಂದರ ಉಪಾಯವೇ ಯೋಗ ಎಂದು ಡಾ.ಕೀಶೋರ್ ತಿಳಿಸಿದರು.
ಯೋಗ ಈ ನೆಲದ ಅಸ್ಮಿತೆ ಜಗತ್ತಿಗೆ ಈ ನೆಲವು ಕೂಡ ಅಪೂರ್ವವಾದ ಕೊಡುಗೆ ಇದು ಕಸರತ್ತಲ್ಲ ಪ್ರಕೃತಿಯೊಡನೆ ಸಮೀಕರಿಸಿಕೊಂಡು ನಮ್ಮ ನಮ್ಮನ್ನು ನಾವು ಕಂಡು ಕೊಳ್ಳುವ ಪರಿ ಎಂದು ಡಾ.ಕಿಶೋರ್ ತಿಳಿಸಿದರು.