ಮೈಸೂರುಫೆ.೨- ಶ್ರೀ ವೀರ ಮದಕರಿ ನಾಯಕ ಯುವ ಬಳಗದ ವತಿಯಿಂದ ಹಿರಿಯ ಯೋಗ ಪಟು ಹಾಗೂ ಹಿಮಾಲಯ ಫೌಂಡೇಶನ್‌ನ ಮುಖ್ಯಸ್ಥ ಎನ್.ಅನಂತು ಅವರಗೆ ಶ್ರೇಷ್ಟ ಯೋಗ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

 

ನಗರದ ಸುಣ್ಣದಕೇರಿಯ ನಾರಾಯಣ ರಸ್ತೆಯಲ್ಲಿ ಇರುವ ನಕ್ಷತ್ರ ಕಾಂಪ್ಲೆಕ್ಸ್ ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಕಾ0ಗ್ರೆಸ್ ಮುಖಂಡ ನವೀನ್, ಪ್ರಶಸ್ತಿ ನೀಡಿ ಗೌರವಿಸಿದರು.

ಬಳಿಕ ಮಾತನಾಡಿದ ಅವರು, ಹಿಮಾಲಯ ಫೌಂಡೇಶನ್ ಮೂಲಕ ಯೋಗ ಕ್ಷೇತ್ರಕ್ಕೆ ತಮ್ಮದೆಯಾದ ಕೊಡುಗೆ ನೀಡುತ್ತಿರುವ ಅನಂತು ಅವರ ಸಾಧನೆ ಮಹತ್ವದ್ದಾಗಿದೆ. ಯೋಗ ಕ್ಷೇತ್ರದಲ್ಲಿ ಭಾರತ ವಿಶ್ವದ ಗಮನ ಸೆಳೆದಿದೆ ಎಂದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ, ವಿಶ್ವ ಸಂಸ್ಥೆಯು ವಿಶ್ವ ಯೋಗ ದಿನಾಚರಣೆ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನವನ್ನು ವಿಶ್ವ ಜ್ಞಾನದಿನ ಹಾಗೂ ಮಹಾತ್ಮ ಗಾಂಧೀಜಿಯವರ ಜನ್ಮದಿವನ್ನು ಅಂತರಾಷ್ಟಿçಯ ಅಹಿಂಸಾ ದಿನವನ್ನಾಗಿ ಘೋಷಣೆ ಮಾಡಿದೆ ಎಂದರೆ ದೇಶ ವಿಶ್ವಕ್ಕೆ ನೀಡಿರುವ ಕೊಡುಗೆ ಅರಿವಾಗುತ್ತದೆ. ಮೈಸೂರಿನಲ್ಲಿ ೬೦ ಸಾವಿರಕ್ಕೂ ಹೆಚ್ಚು ಮಂದಿ ಒಂದೇ ಕಡೆ ಯೋಗದಿನಾಚರಣೆ ಆಚರಣೆ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ. ಇಂತಹ ಯೋಗ ಪಟುಗಳನ್ನು ನಿರ್ಮಾಣ ಮಾಡುತ್ತಿರುವ ಅನಂತು ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

 

ಲಕ್ಷಿö್ಮಪುರಂ ಪೊಲೀಸ್ ಠಾಣೆ ಇನ್ಸ್ಸ್ಪೆಕ್ಟರ್ ವೆಂಕಟೇಶ್ ಮಾತನಾಡಿ, ಯೋಗಕ್ಕೂ ಇತರೆ ಕ್ರೀಡೆಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಯೋಗ ಸಾಧನೆಗೆ ವಯಸ್ಸಿನ ಮಿತಿಯಿಲ್ಲ. ಚಿಕ್ಕವಯಸ್ಸಿನಿಂದಲೂ ಯೋಗಾಬ್ಯಾಸ ಮಾಡುವುದುರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗುತ್ತೇವೆ ಎಂದರು.

ಕಾ0ಗ್ರೆಸ್ ಮುಖಂಡ ನವೀನ್, ವ್ಯಂಗ್ಯಚಿತ್ರಕಾರ ನಾಗೇಂದ್ರ ಬಾಬು, ಶ್ರೀ ವೀರ ಮದಕರಿ ನಾಯಕ ಯುವ ಬಳಗದ ಮಹೇಶ್, ಆನಂದ್, ರಾಜು ವಿಜೇಂದ್ರ ಶ್ರೀಕಾಂತ್ ಗಂಗುಮತ್ತಿತರರು ಉಪಸ್ಥಿತರಿದ್ದರು.

By admin