ಮೈಸೂರು ರಾಜವಂಶದ ಅರಸರಾದ ಶ್ರೀ ಯದುವೀರ್ ಶ್ರೀಕಂಠದತ್ತ ಒಡೆಯರವರ ಜನ್ಮ ದಿನದ ಅಂಗವಾಗಿ ಮೈಸೂರಿನ 23ನೆಯ ವಾಡಿನಲ್ಲಿರುವ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಮುಡಾ ಸದಸ್ಯರಾದ ನವೀನ್ ಕುಮಾರ್ ಅವರು ಶಾಲೆಯ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಎಳನೀರನ್ನು ವಿತರಿಸಿದರು
ನಂತರ ಮುಡಾ ಸದಸ್ಯರಾದ ನವೀನ್ ಕುಮಾರ್ ಅವರು ಮಾತನಾಡಿ
ಮೈಸೂರಿನ ಇತಿಹಾಸದಲ್ಲಿ ಕೆಲವೊಂದು ಗಟ್ಟಿ ಅಂಶಗಳು ಗಮನ ಸೆಳೆಯುತ್ತದೆ. ಸ್ವಾತಂತ್ರ್ಯ ಪೂರ್ವದವರೆಗಿನ ಮೈಸೂರು ರಾಜಾಡಳಿತದ ದಿನಗಳನ್ನು ಇತಿಹಾಸದ ಪುಟಗಳಲ್ಲಿ ನೋಡುವುದಾದರೆ ಸುಮಾರು 550 ವರ್ಷಗಳ ಕಾಲ ಸುಮಾರು 27 ಮಹಾರಾಜರು ಮೈಸೂರು ಸಂಸ್ಥಾನವನ್ನು ಆಳಿದ ಬಗ್ಗೆ ತಿಳಿದು ಬರುತ್ತದೆ.ಈಗ ಪ್ರಸಿದ್ಧರಾಗಿರುವ ಯದುವೀರರನ್ನು ಯದುವಂಶದ 27ನೆಯ ಅಧಿಕಾರಿಯಾಗಿ, ‘ಮಹಾರಾಣಿ ಪ್ರಮೋದಾದೇವಿ’ಯವರು 2005ರ, ಫೆಬ್ರವರಿ 23, ರಂದು ದತ್ತುಪುತ್ರನಾಗಿ ಸ್ವೀಕರಿಸಿದರು, ಎಂದು ಹೇಳಿದರು,ಈ ಸಂದರ್ಭದಲ್ಲಿ ಮೇಲ್ಕೋಟೆ ಇಳೆಯಾಳ್ವಾರ್ ಸ್ವಾಮೀಜಿ ,ಲಕ್ಷ್ಮೀ ಶ್ರೀನಿವಾಸ್ ವಿಘ್ನೇಶ್ವರ ಭಟ್ ನವೀನ್ ರವಿಚಂದ್ರ ಶಿವಕುಮಾರ್ ಮತ್ತು ವಸಿಷ್ಟ ಮುಂತಾದವರು ಉಪಸ್ಥಿತರಿದ್ದರು.