ಮೈಸೂರು: ಕೋವಿಡ್-19 ನಿಂದ ಉಂಟಾಗಿರುವ ಈ ಲಾಕ್ ಡೌನ್ ಅನ್ನು ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ತೆಗದುಕೊಳ್ಳಿ. ಈ ಸಮಯವನ್ನು ಓದಿಗೆ, ಜ್ಞಾನರ್ಜನೆಗೆ ಬಳಸಿ ಹಾಗೂ ನಿಮ್ಮ ಕೇರಿಯರ್‌ಯನ್ನು ಉತ್ತಮಗೊಳಿಸಬಹುದಾದ ಯೋಜನೆಯನ್ನು ರೂಪಿಸಿಕೊಳ್ಳಲು ಬಳಸಿಕೊಳ್ಳಿ ಎಂದು ರಾಜವಂಶಸ್ಥ ಯದುವೀರ್ ಕೃ?ದತ್ತ ಚಾಮರಾಜ ಒಡೆಯರ್ ಅವರು ಪರೀಕ್ಷಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಆಯೋಜಿಸಿರುವ 50 ದಿನಗಳ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷಾ ಆನ್ಲೈನ್ ತರಬೇತಿ ಶಿಬಿರಕ್ಕೆ ಶನಿವಾರ ಆನ್‌ಲೈನ್ ಮೂಲಕ ಚಾಲನೆ ನೀಡಿ ಶುಭಹಾರೈಸಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳು ಆದರ್ಶ ಪೂರ್ವಕವಾಗಿ ಕಾರ್ಯನಿರ್ವಹಿಸುತ್ತಿವೆ. ಸಮಾಜಕ್ಕೆ ಹಾಗೂ ಯುವ ಸಮುದಾಯವನ್ನು ವಿದ್ಯಾವಂತರನ್ನಾಗಿಸುವ ತತ್ವದ ಮೇಲೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಕಾರ್ಯನಿರ್ವಹಿಸುತ್ತಿದೆ. ಅದರಂತೆ ಕೊವಿಡ್ ಸಮಯದಲ್ಲೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಆನ್‌ಲೈನ್ ತರಬೇತಿ ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ಇದೊಂದು ಮಾದರಿ ಕಾರ್ಯವಾಗಿದೆ ಎಂದು ವಿಶ್ವವಿದ್ಯಾನಿಲಯ ಕಾರ್ಯ ವೈಖರಿಗೆ ಮೆಚ್ಚಿಗೆ ವ್ಯಕ್ತಪಡಿಸಿದರು.
ಕೋವಿಡ್-19 ಜಾಗತಿಕ ಸಾಂಕ್ರಾಮಿಕದಿಂದ ಬದಲಾದ ಕಾಲಘಟ್ಟದಲ್ಲಿ ಎಲ್ಲರ ಜೀವನದಲ್ಲಿ ಬಹಳ? ಬದಲಾವಣೆ ತಂದಿದೆ. ಈ ಸಾಂಕ್ರಾಮಿಕ ಉಂಟು ಮಾಡಿರುವ ಸಮಯದಿಂದ ಖಿನ್ನತೆಗೆ ಒಳಗಾಗಬೇಕಿಲ್ಲ. ಸಕಾರಾತ್ಮಕ ಭಾವನೆಯಿಂದ ಇರಬೇಕು. ಇಂಥ ಸಮಯದಲ್ಲಿ ವಿದ್ಯಾರ್ಥಿಗಳು ಈ ತರಹದ ಶಿಬಿರಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿ ಮುಕ್ತ ವಿಶ್ವವಿದ್ಯಾಲಯ ಆಯೋಜಿಸಿರುವ ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಯ ಆನ್‌ಲೈನ್ ತರಬೇತಿ ಶಿಬಿರ ಬಹಳ? ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂದರು.
ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಮಾತನಾಡಿ, ಕೋವಿಡ್-19 ನಿಂದ ದೊರೆತಿರುವ ಸಮಯವನ್ನು ವ್ಯರ್ಥ ಮಾಡದೇ, ವಿದ್ಯಾರ್ಥಿಗಳು ಮತ್ತು ಪರೀಕ್ಷಾರ್ಥಿಗಳು ಸುತ್ತದೆ ಉತ್ತಮವಾಗಿ ಬಳಸಿಕೊಳ್ಳಬೇಕು. ತಮ್ಮ ಜ್ಞಾನರ್ಜನೆಗೆ ಈ ಸಮಯವನ್ನು ವ್ಯಹಿಸಬೇಕು ಎಂದರು.
ಹಣದಿಂದ ಎಲ್ಲವನ್ನು ಖರೀದಿಸಬಹುದು, ಆದರೆ ಜ್ಞಾನವನ್ನು ಯಾರಿದಂಲೂ ಖರೀದಿಸಲು ಆಗದು. ಜಗತ್ತಿನಲ್ಲಿ ಖರೀದಿಸಲಾಗದ ಆಸ್ತಿ ಎಂದರೆ ಜ್ಞಾನ ಮಾತ್ರ ಎಂದರು.
ವಿಶ್ವವಿದ್ಯಾಲಯ ಕಳೆದ ಎರಡು ವ?ದಲ್ಲಿ ಅನೇಕ ಆವಿ?ರಗಳನ್ನು ತಂದಿದೆ. ಕೋವಿಡ್-19 ಸಂದರ್ಭದಲ್ಲಿ ತನ್ನ ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿದೆ. ಕಳೆದ ವ? ಈ ಸಂದರ್ಭದಲ್ಲಿ ಕೋವಿಡ್19ತಂದಿಟ್ಟ ಲಾಕ್‌ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳು ಸುಮ್ಮನೆ ಕೂರಬಾರದು. ಮೂಲೆಗುಂಪು ಆಗಬಾರದೆಂದು ಐಎಎಸ್, ಕೆಎಎಸ್, ಬ್ಯಾಂಕಿಂಗ್ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್‌ಲೈನ್ ಮೂಲಕ ತರಬೇತಿಯನ್ನು ಆರಂಭಿಸಿದ್ದೇವು. ಇದಕ್ಕೆ ಕೆಎಸ್‌ಓಯು ಕನೆಕ್ಟ್ ಎಂಬವೇದಿಕೆಯನ್ನಾಗಿ ನಿರ್ಮಿಸಿದ್ದೇವೆ. ಕಳೆದ ಬಾರಿಯ ಆರಂಭಿಸಿದ ಈ ಶಿಬಿರಕ್ಕೆ ಆನ್‌ಲೈನ್ ತರಬೇತಿಯನ್ನು ಉನ್ನತ ಶಿಕ್ಷಣ ಸಚಿವ, ಡಿಸಿಎಂ ಅಶ್ವತ್ಥನಾರಾಯಣ ಅವರು ಉದ್ಘಾಟಿಸಿ ಮುಕ್ತ ವಿಶ್ವವಿದ್ಯಾಲಯವು ಕೋವಿಡ್ ಸಂದರ್ಭದಲ್ಲಿ ಆರಂಭಿಸಿರುವ ಕೆಲಸಗಳು ಮಾದರಿಯಾಗಿದೆ. ಮುಕ್ತ ವಿಶ್ವವಿದ್ಯಾನಿಲಯವು ರಾಜ್ಯಕ್ಕೆ ಮಾದರಿ ಎಂದು ಶ್ಲಾಘಿಸಿದ್ದರು. ಇವರ ಘೋಷಣೆಯನ್ನು ಗಟ್ಟಿಗೊಳಿಸಬೇಕೆಂದು ಕಾರ್ಯ ಪ್ರವೃತ್ತರಾಗಿದ್ದೇವೆ. ವಿಶ್ವವಿದ್ಯಾನಿಲಯದ ಎಲ್ಲಾ ಪ್ರಾಧ್ಯಾಪಕರಿಗೆ ಲ್ಯಾಪ್‌ಟಾಪ್ ವಿತರಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಲರು ಆನ್‌ಲೈನ್ ಪಾಠ ಮಾಡಲು ಸೂಚನೆ ನೀಡಲಾಗಿದೆ. ಕಳೆದ ಕೋವಿಡ್ ಸಂದರ್ಭದಲ್ಲಿ ಆರಂಭದಲ್ಲಿ ಆರಂಭವಾದ ನಮ್ಮ ಚಟುವಟಿಕೆಗಳು ಇನ್ನು ನಿಂತಿಲ್ಲ. ನಿರಂತರವಾಗಿ ಸಾಗುತ್ತಿದೆ ಎಂದು ತಿಳಿಸಿದರು.
ಮುಕ್ತ ವಿವಿ ಕುಲಸಚಿವ ಪ್ರೊ.ಆರ್.ರಾಜಣ್ಣ ಮಾತನಾಡಿ, ಕಳೆದ ಬಾರಿ ಕೋವಿಡ್ ಮತ್ತು ಲಾಕ್ಡೌನ್ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ತೊಂದರೆಯಾಗದಂತೆ ಆನ್‌ಲೈನ್ ಮೂಲಕ ತರಬೇತಿ ನೀಡಿದ್ದ, ಮುಕ್ತ ವಿಶ್ವವಿದ್ಯಾಲಯವು ಈ ಬಾರಿಯು ಪರೀಕ್ಷಾ ಆಕಾಂಕ್ಷಿಗಳಿಗೆ ಆನ್‌ಲೈನ್ ತರಬೇತಿ ಶಿಬಿರ ಆರಂಭಿಸಿದೆ ಎಂದು ತಿಳಿಸಿದರು.
ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಡಾ.ಎ.ಖಾದರ್ ಪಾಷಾ ಅವರು ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಸಿದ್ದತೆ ಕುರಿತು ಮಾಹಿತಿ ನೀಡಿದರು.
ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣ ಗೌಡ ಅವರು ಶಿಬಿರದ ಮಾಹಿತಿ ನೀಡಿದರು.

By admin