ಮೈಸೂರು: ಮೇ ೦೩. ನಗರದ ಕುವೆಂಪುನಗರದಲ್ಲಿ ವಿಶ್ವ  ಪತ್ರಿಕಾ ಸ್ವಾತಂತ್ರ್ಯ  ದಿನಾಚರಣೆಯ ಪ್ರಯುಕ್ತ ಸುವರ್ಣ ಬೆಳಕು ಫೌಂಡೇಷನ್ ಹಾಗೂ  ಬ್ರಹ್ಮಶ್ರೀ ನಾರಾಯಣ ಗುರು ಯೋಗ ಮಂದಿರ ಸಮ್ಮುಖದಲ್ಲಿ ಕೊರೋನ ವೈರಸ್ ಸಮಸ್ಯೆಯ ಜಾಗೃತಿ ಮೂಡಿಸುವುದರೊಂದಿಗೆ ದೈಹಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಕನ್ನಡ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಜನತೆಯಲ್ಲಿ ಕಡಿಮೆಯಾಗುತ್ತಿರುವುದರಿಂದ ಬರೀ ಮೊಬೈಲ್, ಕಂಪ್ಯೂಟರ್, ಟಿವಿ, ನಕಾರಾತ್ಮಕ ಸುದ್ದಿಗಳಲ್ಲಿ ಮುಳುಗಿರುವ ಜನತೆಗೆ

ಈ ಲಾಕ್ ಡೌನ್ ಸಂದರ್ಭದಲ್ಲಿಯೂ ಮನೆ ಬಾಗಿಲಿಗೆ ಬರುವ ಪತ್ರಿಕೆಗಳನ್ನುಕೊಂಡು ಓದುವ ಮೂಲಕ ಸಕಾರಾತ್ಮಕ, ಸಾಮಾಜಿಕ ಚಿಂತನೆ ಮೂಡಿಸಿಕೊಳ್ಳುವಂತೆ ಅರಿವು ಮೂಡಿಸಲಾಯಿತು.  ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವುದರೊಂದಿಗೆ ಈ ಅಭ್ಯಾಸವನ್ನು ನಿರಂತರವಾಗಿ ಕಾಯ್ದುಕೊಂಡು ಹೋಗುವಂತೆ ಪತ್ರಕರ್ತರಿಗೆ ಮತ್ತು ಪತ್ರಿಕೆಗಳನ್ನು ಮನೆಗೆ ತಲುಪಿಸುವವರಿಗೆ ಎಲ್ಲರಿಗೂ ಸಮಾನ ಗೌರವದಿಂದ ಪ್ರೀತಿಯಿಂದ ಕಾಣುವುದು ಸಮಾಜದ ಕರ್ತವ್ಯವಾಗಿರುತ್ತದೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಯೋಗ ಮಂದಿರದ ಯೋಗ ಶಿಕ್ಷಕರಾದ ಪುರುಷೋತ್ತಮ್ ಅಗ್ನಿ ಈ ಸಂದರ್ಭದಲ್ಲಿ ತಿಳಿಸಿದರು.

ಸುವರ್ಣ ಬೆಳಕು ಫೌಂಡೇಶನ್ ನ ಅಧ್ಯಕ್ಷರಾದ ಮಹೇಶ್ ನಾಯಕ್ .ಎಸ್ ,  ಯೋಗಿತಾ , ಗದಾಧರ ವರ್ಧಮಾನ್ ಇನ್ನಿತರರು ಉಪಸ್ಥಿತರಿದ್ದರು.

By admin