೨೦೧೫ರಿಂದ ಈತಹಲ್‌ವರೆಗೆ ಸ್ವಚ್ಚಭಾರತ್‌ಅಭಿಯಾನ, ಸ್ಮಾರ್ಟ್‌ಸಿಟಿಮಿಶನ್, ಎ.ಟಿ.ಎಸ್, ಪ್ರಧಾನಮಂತ್ರಿಆವಾಜ಼್, ಜನ ಔಷಧ್, ಮುಂತಾದ ೨೫೦ಕ್ಕೂ ಹೆಚ್ಚು ಷಟ್‌ವಾರ್ಷಿಕ ಯೋಜನೆಗಳು ಶೇ.೧೦೦ರಷ್ಟು ಅನುಷ್ಠಾನಗೊಂಡಿವೆ. ಇವೆಲ್ಲಾ ರಾಷ್ಟ್ರೀಯ ಯೋಜನೆಗಳ ಯಶಸ್ವಿ ಫ಼ಲಿತಾಂದಿಂದ ಭಾರತವು ಅಂತಾರಾಷ್ಟ್ರ ಮಟ್ಟದಲ್ಲಿ ಸರ್ವತೋಮುಖ ಸುಭದ್ರಸ್ಥಿತಿ ತಲುಪುವ ಸನಿಹಕ್ಕೆ ಬಂದಿದೆ. ಪ್ರತಿಯೊಂದು/ಇಸ್ಲಾಂ ದೇಶದ ಬೆಂಬಲಗಳಿಸಿ, ಅಮೆರಿಕ ಚುನಾವಣೆಯಲ್ಲಿ ಪ್ರಥಮಪ್ರಜೆ/ಪ್ರತಿಪ್ರಜೆಯ ಮನ್ನಣೆ ಪಡೆದು ಪ್ರತಿ ಅಂತರ್ರಾಷ್ಟ್ರ ಸಂಸ್ಥೆಯ ಅಭಿವೃದ್ಧಿ ವಿಭಾಗದ ಪ್ರಾತಿನಿಧ್ಯ ಸಂಪಾದಿಸಿ ವಿಶ್ವಸಂಸ್ಥೆಯಲ್ಲಿ ಮಾನ್ಯತೆ ಗಳಿಸಿ ಮುನ್ನಡೆದಿದೆ! ವಿಶ್ವ ಭೂಪಟದಲ್ಲಿ ಸಹಸ್ರಾರು ವರ್ಷದಿಂದ ಭಾರತವನ್ನು-ಭಾರತೀಯರನ್ನು ಧಾರ್ಮಿಕ, ಪಾರಂಪರಿಕ, ಸಾಂಸ್ಕೃತಿಕ ಹಾಗೂ ಐತಿಹ್ಯವಾಗಿ ಮಾತ್ರ ಗುರುತಿಸಲಾಗುತ್ತಿತ್ತು? ಆದರೀಗ ರಕ್ಷಣಾತ್ಮಕ, ಆರ್ಥಿಕ, ಬೌದ್ಧಿಕ, ಆಹಾರ, ಆರೋಗ್ಯ, ಶಸ್ತ್ರಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಪರಿಸರ ಪ್ರಾಕೃತಿಕ ಹಾಗೂ ಮಾನವ ಸಂಪನ್ಮೂಲ ಸಾಮರ್ಥ್ಯದಲ್ಲೂ ಸ್ವಾವಲಂಬಿ ಎಂದು ಗುರುತಿಸಲಾಗುತ್ತಿದೆ! ಸಧ್ಯದಲ್ಲೆ ಇಂಧನ ಮತ್ತು ವಾಣಿಜ್ಯೋದ್ಯಮ ಕ್ಷೇತ್ರದಲ್ಲೂ ಪೂರ್ಣ ಸ್ವಾವಲಂಬಿಯಾಗುವ ಸಾಧ್ಯತೆ ಇದೆ. ಕಳೆದ ೬ ವರ್ಷದ ಶೀಘ್ರ ಅವಧಿಯಲ್ಲಿ ವಿಶ್ವದ ಮುಂದುವರೆದ ರಾಷ್ಟ್ರಗಳಲ್ಲಿ ೩ನೇ ಸ್ಥಾನ ತಲುಪಿರುವ ಭಾರತವನ್ನು ಪ್ರಪಂಚದ ಪ್ರತಿಯೊಂದು ದೇಶವು ವಿಶ್ವಾಸ ಮತ್ತು ಗೌರವದಿಂದ ಕಾಣುತ್ತಿದೆ. ಈ ಕಟುಸತ್ಯವನ್ನು ಎಲ್ಲರು, ಮುಖ್ಯವಾಗಿ [ಒಳ]ಶತ್ರುಗಳೂ ಒಪ್ಪಲೇಬೇಕಾದ ಅನಿವಾರ್ಯತೆ ಬಂದೊದಗಿದೆ?!

ದಿನೇದಿನೇ (ಹಿತ)ಶತ್ರುಗಳ ಕಾಟವು ಹೆಚ್ಚುತ್ತಿರುವುದರಿಂದ ನಿರೀಕ್ಷೆಯಷ್ಟು ಗುರಿಯನ್ನು ಮುಟ್ಟುವಲ್ಲಿ ಮಂದಗತಿ ಬಂದೊದಗಿದೆ. (ಮಿತ್ರ)ದ್ರೋಹಿಗಳ ಹುಟ್ಟಡಗಿಸಿ ಮಟ್ಟಹಾಕುವುದು ಕಷ್ಟವೇನಲ್ಲ. ಆದರೆ, ಅಭ್ಯಾಸದ ಸಹನೆ, ಸಹಿಷ್ಣುತೆಯ ದಾಕ್ಷಿಣ್ಯ, ಅಡ್ಡಬರುತ್ತಿದೆ? ಇವುಗಳನ್ನು ಒತ್ತಟ್ಟಿಗಿರಿಸಿ ಗಂಭೀರವಾಗಿ ಪರಿಗಣಿಸಿದ್ದೆ ಆದಲ್ಲಿ ೧೨ ಗಂಟೆಯೊಳಗೆ ಹೊರ-ಒಳ(ಸಂಚು) ಶತ್ರುಗಳನ್ನು ಸದೆ ಬಡಿಯ ಬಹುದು! ಕಪ್ಪುಹಣ ಕಾಳಸಂತೆಕೋರರು, ಕೋಮುಗಲಭೆ ಕಿಡಿಗೇಡಿಗಳು, ಷಂಡ ಭಯೋತ್ಪಾದಕರು, ಹೇಡಿ ದೇಶದ್ರೋಹಿಗಳು, ಮುಂತಾದ ಸಮಾಜ ಘಾತುಕ ಶಕ್ತಿಗಳನ್ನು ಮುಲಾಜಿಲ್ಲದೆ ನಾಶಪಡಿಸಬಹುದು! ಭಾರತೀಯರಲ್ಲಿ ಮಾನವೀಯತೆ ಮೈಗೂಡಿದೆ, ಆದರೂ ಅಧರ್ಮ-ಅಮಾನುಷತೆ ಮಿತಿಮೀರಿದಾಗ ದೊಡ್ಡ ಆಸ್ಫೋಟವಂತೂ ನಿಶ್ಚಯ! ಇಂಥ ಸಂಧಿಗ್ಧ ಸಂದರ್ಭವು ಅನಿವಾರ್ಯ ಅಲ್ಲವಾದರೂ ಆಶ್ಚರ್ಯವಂತು ಹೌದು!
ವಿಶ್ವದ ನಂಬರ್-೧ ಬಹದ್ದೂರ್ ಪ್ರಧಾನಿ ನರೇಂದ್ರ ಮೋದಿಜೀಯವರ ನೇತೃತ್ವದಲ್ಲಿ ಭಾರತವು ಸುಭದ್ರವಾಗಿದೆ ಸುಭಿಕ್ಷವಾಗಿದೆ. ಒಂದುವೇಳೆ, ಮಹಾಮಾರಿ ಕೊರೋನಾ ಮಾರಿಮುಂಡೇದು ವಕ್ಕರಿಸದಿದ್ದಿದ್ರೆ ಭಾರತ ಪ್ರಪಂಚದಲ್ಲೆ ನಂಬರ್-೧ ಸ್ಥಾನ ತಲುಪುತ್ತಿತ್ತು! ಕೊವಿಡ್ ವ್ಯಾಕ್ಸಿನೇಟೆಡ್ ಜನಸಂಖ್ಯಾ ರಾಷ್ಟ್ರಗಳಲ್ಲಿ ಇಂಡಿಯಾ ಅಗ್ರಸ್ಥಾನದಲ್ಲಿದೆ? ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯನು ಪ್ರತಿಜ್ಞೆ ಮಾಡಲಿ, ನಮ್ಮೆಲ್ಲರ ನೆಚ್ಚಿನ ನ.ಮೋ.ಜೀ ಬದುಕಿರುವವರೆಗೂ ದೇಶದ ಪ್ರಧಾನಮಂತ್ರಿಯಾಗಿ ಕಾರ್ಯ ನಿರ್ವಹಿಸುವಂತಾಗಲಿ, ಈ ದಿಶೆಯಲ್ಲಿ ನಾವೆಲ್ಲರೂ ಜಾತಿ-ಮತ-ಧರ್ಮ-ಭೇಧ ಮರೆತು ಪಕ್ಷಾತೀತವಾಗಿ ಅವರಿಗೆ ಸಾಥ್ ನೀಡಿ ಸಕಲ ಪ್ರೋತ್ಸಾಹದಿಂದ ಬೆಂಬಲಿಸೋಣ! ನಮೋಜೀ ಆಳ್ವಿಕೆಯಲ್ಲಿ ಜರುಗಿದ ಅನೇಕ ಸತ್ಕಾರ್ಯಗಳಲ್ಲಿ ಒಂದು ಉದಾಹರಣೆಯನ್ನು ಇಲ್ಲಿ ನೀಡಲಾಗಿದೆ. ಬ್ರಿಟಿಷ್ ಎಂಜಿನಿಯರ್‌ಗಳ ಯೋಜನೆಯಂತೆ ೧೯೨೧-೧೯೨೭ರಲ್ಲಿ ನಿರ್ಮಿತಗೊಂಡ ಮೂಲ ಪಾರ್ಲಿಮೆಂಟ್ ಭವನದ ಎದುರೇ ಪರ್ಯಾಯವಾಗಿ ಮತ್ತೊಂದು ನವ ಪಾರ್ಲಿಮೆಂಟ್ ಕಟ್ಟಡ ತೆಲೆಯೆತ್ತುತ್ತಿದೆ! :-

ಸುವರ್ಣ ಚರಿತ್ರಾರ್ಹದ ನವ ಭಾರತ್ ಸಂಸತ್ ಭವನ! ಹಾಲಿ ಪಾರ್ಲಿಮೆಂಟ್ ಕಟ್ಟಡದ ಎದುರಿನಲ್ಲೆ ಸುಮಾರು ೧೨ ಎಕರೆ ಸ್ಥಳದಲ್ಲಿ ನ್ಯೂ ಪಾರ್ಲಿಮೆಂಟ್ ಕಟ್ಟಡ ನಿರ್ಮಾಣಕ್ಕೆ ನಿರ್ಧಾರ ಮಾಡಿದ ಪ್ರಧಾನಿ ಮೋದಿಜೀ ಕೇಂದ್ರ ಮಂತ್ರಿ ಮಂಡಲದ ಒಪ್ಪಿಗೆ ಯೊಡನೆ ೨೦೧೯ ರಲ್ಲಿ ಸೆಂಟ್ರಲ್ ವಿಸ್ಟ ರೀ-ಡೆವಲಪ್‌ಮೆಂಟ್ ಪ್ರಾಜೆಕ್ಟ್ ಅಸ್ತಿತ್ವಕ್ಕೆ ತಂದರು! ದಿನಾಂಕ ೧೦.೧೨.೨೦೨೦ರಲ್ಲಿ ಶಂಕು ಸ್ಥಾಪನೆ ಮಾಡಿದರು. ನಿರ್ಮಾಣ ಕಾಮಗಾರಿಯು ಹಗಲು-ರಾತ್ರಿಯೆನ್ನದೆ ೨೨ತಿಂಗಳು ಪರ್ಯಂತ ಸತತವಾಗಿ ನಡೆಯಲು ಅನುವು ಮಾಡಿಕೊಟ್ಟರು. ಷಟ್‌ಕೋನ ಆಕಾರದ ೨೪೨ ಕಂಬಗಳ ೨೨೪೫೦ ಚದರಡಿ ವಿಸ್ತೀರ್ಣದ ನೆಲಅಂತಸ್ತು ಮತ್ತು ೧೭೩೫೦ ಚದರಡಿ ವಿಸ್ತೀರ್ಣದ ಮಹಡಿಅಂತಸ್ತು ಇರುತ್ತದೆ. ಒಟ್ಟು ೮೫೦ ಕೊಠಡಿವುಳ್ಳ ೧೨೭೨ [ಲೋಕಸಭೆಗೆ ೮೮೮ + ರಾಜ್ಯಸಭೆಗೆ ೩೮೪] ಆಸನಗಳ, ೧೫೦ ಕಚೇರಿಯುಳ್ಳ ನೂತನ ಭಾರತೀಯ ಪಾರ್ಲಿಮೆಂಟ್ ಭವನವು ಆಗಸ್ಟ್ ೨೦೨೨ಕ್ಕೆ ಉದ್ಘಾಟನೆ ಆಗಲಿದೆ?! ಪ್ಲಾಸ್ಟರ್ ಆಫ಼್ ಪ್ಯಾರಿಸ್, ಬೆಲ್ಜಿಯಂ ಗಾಜು, ಹಿಂಡ್ ಅಲ್ಯುಮಿನಿಯಂ, ಬೀಟೆ-ತೇಗ-ಗಂಧದಮರಗಳ ಕೆತ್ತನೆಯ ಚಿತ್ತಾರಗಳಿಂದ ಅಲಂಕೃತ ವಾಗಲಿದೆ. ಸ್ಪೀಕರ್ ಆಸನವು ಸದಸ್ಯರ ಸ್ಥಳದಿಂದ ೧೫ ಅಡಿ ಎತ್ತರದಲ್ಲಿ ೩೬ ಅಡಿ ಅಂತರದಲ್ಲಿ ಇರುತ್ತದೆ. ಪ್ರತಿಯೊಬ್ಬ ಸದಸ್ಯರ ಆಸನಗಳಲ್ಲಿ ಕಾರ್ಡ್‌ಲೆಸ್ ಮೈಕ್, ಕುಶನ್ ರೈಟಿಂಗ್ ಡೆಸ್ಕ್, ಪರಸ್ಪರ ಸದಸ್ಯರ ನಡುವೆ ೨ಅಡಿ ಅಂತರವಿರುತ್ತದೆ. ಇಡೀ ಭವನವು ಏರ್‌ಕಂಡೀಶನ್‌ನಿಂದ, ೭೫೫ಸಿಸಿ ಕ್ಯಾಮರ+ಸ್ಪೀಕರ್‌ಗಳಿಂದ ಸಜ್ಜುಗೊಳ್ಳುತ್ತಿದೆ. ಬುಲೆಟ್ ಪ್ರೂಫ಼್ ಗೋಡೆ ಮತ್ತು ಅಪರಿಚಿತರ ಆಗಮನವನ್ನು ತಿಳಿಸುವ ಸೈರನ್ ಇತ್ಯಾದಿ ಅಲ್ಟ್ರಾ ಮಾಡ್ರನ್ ಫ಼ರ್ನಿಶಿಂಗ್‌ಗಳಿಂದ ಸುಸಜ್ಜಿತವಾಗಿ ನಿರ್ಮಿಸಲಾಗುತ್ತಿದೆ. ಇಡೀ ಭವನದ ಒಟ್ಟು ಅಂದಾಜು ವೆಚ್ಚ ೮೬೫ ಕೋಟಿ ರೂಪಾಯಿಗಳು, ಆಯುಷ್ಯ ೧೦೦ ವರ್ಷಗಳು?! ಇಂಥ ಜ್ವಲಂತ ನಿದರ್ಶನವುಳ್ಳ ನೂರಾರು ಪೂರಕ ಲೇಖನಗಳು ಸುಸಮಯದಲ್ಲಿ ಪ್ರಕಟವಾಗಲಿದೆ. ನಿರೀಕ್ಷಿಸಬಹುದು!

ಬೆಂಗಳೂರು-೫೬೦೦೭೨