
ಮೈಸೂರು, ಫೆ.೨೬:- ಮೈಸೂರು ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಎಂಜಿನಿಯರಿಂಗ್ ವತಿಯಿಂದ ಇಂದು ಮಾನಸ ಗಂಗೋತ್ರಿ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಮ್ಯಾರಥಾನ್ ದಿನಾಚರಣೆಯಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ರಾಷ್ಟ್ರೀಯ ಹಾಕಿಪಟು ಸೀತಮ್ಮ ಬಿ.ಕೆ. ಚಾಲನೆ ನೀಡಿದರು.

ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ ನಾನು ಪ್ರೊಫೆಸರ್ ಆಗಿದ್ದಾಗಲೇ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸುವ ಕನಸು ಕಂಡಿದ್ದೆ. ನಂತರ ಕುಲಪತಿ ಆಗಿ ಬಂದ ಮೇಲೆ ಅದಕ್ಕೆ ಅವಕಾಶ ದೊರಕಿತು. ಸರಕಾರದ ಅನುಮತಿ ಪಡೆದು ಈ ವರ್ಷದಿಂದ ಐದು ಎಂಜಿನಿಯರಿಂಗ್ ಕೋರ್ಸ್ ಪ್ರಾರಂಭಮಾಡಲಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು. ನಮ್ಮ ಎಂಜಿನಿಯರಿಂಗ್ ಕಾಲೇಜು ರಾಜ್ಯದ ೨೪೦ ಎಂಜಿನಿಯರಿಂಗ್ ಕಾಲೇಜಿಗಿಂತ ಭಿನ್ನವಾಗಿ ನಿಲ್ಲಬೇಕು ಎಂದರು. ಅಲ್ಲದೆ, ಪತ್ಯೇತರ ಚಟುವಟಿಕೆ ಆಯೋಜಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮ್ಯಾರಥಾನ್ ನಲ್ಲಿ ಎಂಜಿನಿಯರಿಂಗ್ ಕಾಲೇಜಿನ ಒಟ್ಟು ೮೪ ಮಕ್ಕಳು ಭಾಗವಹಿಸಿದ್ದರು. ಸುಮಾರು ೪ ಕಿ.ಮೀ ಓಡಿದರು. ಎಂಜಿನಿಯರಿಂಗ್ ಕಾಲೇಜಿನಿಂದ ಶುರುವಾದ ಓಟ ಕ್ಲಾಕ್ ಟವರ್, ಕುವೆಂಪು ಪ್ರತಿಮೆ, ಜೆ ಸಿ ಕಾಲೇಜು ತಲುಪಿ ಮತ್ತೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮುಕ್ತಾಯಗೊಂಡಿತು. ಮೊದಲು ಗುರಿ ತಲುಪಿದ ೧೦ ವಿದ್ಯಾರ್ಥಿಗಳು ಹಾಗೂ ೧೦ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ಸ್ಕೂಲ್ ಆಫ್ ಎಂಜಿನಿಯರ್ ನಿರ್ದೇಶಕ ಪ್ರೊ.ಅನಂತಪದ್ಮನಾಭ ಟಿ, ಮೈವಿವಿ ವಿಶೇಷಾಧಿಕಾರಿ ಡಾ.ಚೇತನ್ ಎಚ್.ಕೆ. ರವಿ,ಟಿ ಎಸ್ ಸಹಾಯಕ ನಿದೇರ್ಶಕರು ಮೈ ದೈಹಿಕ ವಿಭಾಗ ಹಾಗೂ ಸಂಯೋಜನಾಧಿಕಾರಿ ಭರತ್ ಭಾರ್ಗವ್ ಭಾಗವಹಿಸಿದ್ದರು.

