ಟೀಮ್ ಅರವಿಂದನಗರದ ವತಿ ಯಿಂದ ಸ್ನೇಹಕ್ಕೆ ಸಾಂಕೇತಿಕವಾಗಿ 30ಕ್ಕೂ ಅಧಿಕ ವಿವಿಧ ಜಾತಿಯ ಗಿಡಗಳನ್ನು ನೆಟ್ಟಿ ವಿಶ್ವ ಸ್ನೇಹಿತರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು
ಇದೇ ಸಂಧರ್ಭದಲ್ಲಿ ಮಾತನಾಡಿದ ಯುವ ಮುಖಂಡ ವಿಕಾಸ್ ಶಾಸ್ತ್ರಿ “ಸ್ನೇಹಿತರ ದಿನವನ್ನು ಗಿಡ ನೆಟ್ಟು ಆಚರಿಸುತ್ತಿರುವುದು ಶ್ಲಾಘನೀಯ ಸ್ನೇಹವೆಂಬುದು ಪವಿತ್ರತೆಯ ಸಂದೇಶ ಈ ಗಿಡಗಳ ಜೊತೆ ನಮ್ಮೆಲರ ಸ್ನೇಹ ಸಂಬಂಧ ಕೂಡ ಹೆಮ್ಮರವಾಗಿ ಬೆಳೆಯಬೇಕು ಅಡ್ಡ ದಿಡ್ಡಿ ಬೆಳೆದ ಕೊಂಬೆಗಳನ್ನು ಹೊಡೆಯುವ ರೀತಿ ಸ್ನೇಹದಲ್ಲಿ ಬರುವ ತೊಂದರೆಗಳನ್ನು ಹೊಡೆಯುತ್ತ ಸಾಗಬೇಕು” ಎಂದರು
ಇದೇ ಸಂಧರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಚಂಪಕ,ಮುಖಂಡರುಗಳಾದ ಗಿರೀಶ್ ರಾಮ್ ಪ್ರಸಾದ್ ಪ್ರದೀಪ್ ಚೇತನ್ ,ಮುನ್ನ, ಸೋಮ,ಶಿವು ,ಶ್ರೀಧರ್ ಉಪಸ್ಥಿತರಿದ್ದರು