ಚಾಮರಾಜನಗರ: ಹರದನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧಮ್ಮ ಅವರು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಿದರು.
ಗ್ರಾ.ಪಂ. ಅಧ್ಯಕ್ಷೆ ಯಶೋಧಮ್ಮ ಅವರು ಮಾತನಾಡಿ, ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚು ಜಾಗೃತಿ ಕಾರ್ಯಕ್ರಮವನ್ನು ನಡೆಸಬೇಕು. ಪ್ರತಿ ಮನೆಗೊಂದು ಮರಗಳನ್ನು ನೆಡುವ ಮೂಲಕ ಪರಿಸರ ಪ್ರಜ್ಞೆಯನ್ನು ಮತ್ತಷ್ಟು ಹೆಚ್ಚಿಸಬೇಕು. ಇಡೀ ದೇಶವನ್ನೇ ಸಂಪೂರ್ಣ ಹಸರೀಕರಣ ಮಾಡುವ ಮೂಲಕ ಮುಂದಿನ ಪಿಳೀಗೆಗೆ ಉತ್ತಮ ಪರಿಸರವನ್ನು ನಾವು ಕೊಡುಗೆಯಾಗಿ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಸದಸ್ಯರಾದ ಕಲಿಂಉಲ್ಲಾ, ಕಾರ್ಯದರ್ಶಿ ಶ್ರೀಕಾಂತ ನಾಯಕಜೆ.ಎಸ್., ಡಿಇಓ ಎಲ್.ಮಹದೇವನಾಯ್ಕ, ವಾಟರ್‌ಮನ್ ರಾಮಚಂದ್ರ, ಅಟೆಂಡರ್ ಕೆಂಪಶೆಟ್ಟಿ ಇದ್ದರು.