ಚಾಮರಾಜನಗರ: ಕಾರ್ಮಿಕರು ಸಮಾಜ ಹಾಗೂ ರಾಷ್ಟ್ರದ ಮಹಾನ್ ಶಕ್ತಿಯಾಗಿದ್ದು ಅವರ ದೈಹಿಕ ಶಕ್ತಿಯ ಮೂಲಕ ಉತ್ತಮ ಸಮಾಜ ಮತ್ತು ರಾಷ್ಟ್ರವನ್ನು ನಿರ್ಮಾಣ ಮಾಡಿ ಅಭಿವೃದ್ಧಿಯ ಕಡೆಗೆ ಸಾಗಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರು ಹಾಗೂ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು..
ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಅಮಚವಾಡಿ ಗ್ರಾಮದ ಸಿದ್ಧರಾದವರನ್ನ ಗೌರವಿಸಿ ಅಭಿನಂದಿಸಿ ಕಾರ್ಮಿಕರ ಶಕ್ತಿ ನವಭಾರತದ ನಿರ್ಮಾಣಕ್ಕೆ ಸಹಾಯವಾಗುತ್ತದೆ ಶ್ರಮದ ಮೂಲಕ ಕೈಲಾಸವನ್ನು ಕಾಣುವ ಕಾರ್ಮಿಕರ ಜೀವನ ಮತ್ತು ಬದುಕಿನ ಸುಧಾರಣೆಗಾಗಿ ಸರ್ಕಾರ ಹಲವಾರು ಕ್ರಮಗಳನ್ನು ಉಜ್ವಲ ಭವಿಷ್ಯಕ್ಕಾಗಿ ಯೋಜನೆ ರೂಪಿಸುತ್ತಿದೆ.
ಭಾರತದ ಸಂಸ್ಕೃತಿ ಪರಂಪರೆಯ ಸಾಹಿತ್ಯದಲ್ಲಿ ಕೂಡ ಕಾಯಕದ ಮೂಲಕ ಕೈಲಾಸ ಪ್ರಾಪ್ತಿಯಾಗಿ, ಮೋಕ್ಷ ಸಾಧನೆ ಯಾಗುವುದು . ಶ್ರಮದ ಬದುಕು ಗೌರವದ ಬದುಕು. ಪ್ರತಿಯೊಬ್ಬರೂ ತಮ್ಮ ಕ್ಷೇತ್ರದಲ್ಲಿ ಶಕ್ತಿಮೀರಿ ಶ್ರಮಿಸಿದಾಗ ಆತ್ಮಸಂತೋಷ ಉಂಟಾಗುವುದು. ಹೊಸ ಸಮಾಜದ ನಿರ್ಮಾಣಕ್ಕೆ ಕಾರ್ಮಿಕರ ಶಕ್ತಿ ತುಂಬಾ ಅಗತ್ಯವಿದೆಯೆಂದು ಹೇಳಿದರು.
ಸಾಹಿತಿ ಸೋಮಶೇಖರ ಬಿಸಲ್ವಾಡಿ ಮಾತನಾಡಿ ವಿಶ್ವ ಕಾರ್ಮಿಕರ ಶ್ರಮ ಸಮಾಜದ ಪ್ರಗತಿಯಲ್ಲಿ ಅಪಾರವಾದ ಕೊಡುಗೆಯನ್ನು ನೀಡಿದೆ. ಶ್ರಮಿಕವರ್ಗದ ಸೇವೆಗೆ ಬೆಲೆಕಟ್ಟಲಾಗದು. ಕಾರ್ಮಿಕರು ಶಿಕ್ಷಣ ಸಂಘಟನೆ ಸ್ವಾವಲಂಬನೆಯ ಮೂಲಕ ಉತ್ತಮ ಬದುಕನ್ನು ಕಂಡುಕೊಳ್ಳಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಕೀಲರಾದ ಮಹಾಲಿಂಗ ಗಿರ್ಗಿ ವಿಶ್ವ ಕಾರ್ಮಿಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿ ಶ್ರಮಸಂಸ್ಕೃತಿಯ ಗೌರವ ಭಾವನೆ ಸಮಾಜದಲ್ಲಿದೆ.ಶ್ರಮದ ಗೆಲುವು ಅಪಾರ ಸಂತೋಷವನ್ನು ನೀಡುತ್ತದೆ. ಭಾರತದ ಸರ್ಕಾರ ಸಂವಿಧಾನದ ಮೂಲಕ ಕಾರ್ಮಿಕರ ಮೂಲಭೂತ ಹಕ್ಕುಗಳಿಗೆ ಗೌರವವನ್ನು ಕಲ್ಯಾಣ ಕಾರ್ಯಕ್ರಮಗಳನ್ನು ನೀಡುವ ಕಾರ್ಯಯೋಜನೆಯನ್ನು ಮಾಡಿದೆ ಎಂದು ತಿಳಿಸಿದರು. ಕನ್ನಡ ಸಂಘಟನೆಯ ಅಂಕಪಟ್ಟಿ ದರ್ಶನ್ ಲೋಕೇಶ್ ಇದ್ದರು.
