ಯೋಗ್ಯ ಅಭ್ಯರ್ಥಿ ಗಳನ್ನು ಗೆಲ್ಲಿಸಿ: ಸಚಿವ ಸುರೇಶ್ ಕುಮಾರ್
ಗುಂಡ್ಲುಪೇಟೆ: ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು, ಬರಗಿ, ಹಂಗಳ, ತೆರಕಣಾಂಬಿ, ಕಬ್ಬಹಳ್ಳಿ ಕ್ಷೇತ್ರದ ಕೆಲವು ಗ್ರಾಮಗಳಿಗೆ ಗ್ರಾಪಂ ಚುನಾವಣೆ ಹಿನ್ನಲೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಕಾರ್ಯಕರ್ತರು, ಮುಖಂಡರ ಜೊತೆ ಚರ್ಚಿಸಿದರು.
ಹಸಗೂಲಿ ಗ್ರಾಮದಲ್ಲಿ ಮಾತನಾಡಿದ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ಪಂಚಾಯಿತ್ ರಾಜ್ ಬಗ್ಗೆ ಅಬ್ದುಲ್ ನಜೀರ್ ಸಾಬ್ ರವರು ಚಿಂತನೆ ಮಾಡದೆ ಇದ್ದಿದ್ದರೆ ಗ್ರಾ.ಪಂ ಇರುತ್ತಿತ್ತೋ ಏನೋ ಅಂದು ನಜೀರ್ ಸಾಹೇಬರು ಕಲ್ಪಿಸಿದ ಗ್ರಾ.ಪಂಗೆ ಇಂದು ನರೇಂದ್ರ ಮೋದಿಯವರು ಹೆಚ್ಚು ಸಕ್ತಿ ತುಂಬುತಿದ್ದಾರೆ ಎಂದರು.
ಬಹಳಷ್ಟು ಜವಾಬ್ದಾರಿ ಗ್ರಾಪಂ ಸದಸ್ಯರಿಗೆ ಇರುತ್ತದೆ. ಒಬ್ಬ ವಿಧಾನಸಭೆ ಸದಸ್ಯ, ಸಂಸತ್ ಸದಸ್ಯನಿಗಿಂತ ಹೆಚ್ಚು ಕೆಲಸ ಮಾಡಬಹುದು, ಆದ್ದರಿಂದ ಯೋಗ್ಯ, ಒಳ್ಳೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಲ್ಲಾ ಸಮಯಗಳನ್ನು ಗ್ರಾಮಿದ ಅಭಿವೃದ್ಧಿ ಗೆ ಮೀಸಲಿಟ್ಟು ಸ್ವಚ್ಚಗ್ರಾಮ, ಅಭಿವೃದ್ಧಿ ಗ್ರಾಮವನ್ನಾಗಿ ಮಾಡುವಂತಾಗಲಿ ಎಂದರು.
ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಮಾತನಾಡಿ, ಎಲ್ಲರ ಒಟ್ಟಾಗಿ ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಅಭ್ಯರ್ಥಿ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲಧ್ಯಕ್ಷ ಜಗದೀಶ್, ಶಂಕರಪ್ಪ, ಹೆಚ್,ಆರ್. ಪ್ರಸಾದ್, ಉಮೇಶ್, ಮಹೇಂದ್ರ ಪ್ರಸಾದ್ ಸೇರಿದಂತೆ ಮತ್ತಿತರರಿದ್ದರು.
ವರದಿ: ಬಸವರಾಜು ಎಸ್ ಹಂಗಳ