ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮದ ಜಯಮ್ಮ ಚಂದ್ರಶೇಖರ್ ಕಲ್ಯಾಣಮಂಟಪದಲ್ಲಿ ಸರಳವಾಗಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಬೆಟ್ಟದಪುರ ಪೊಲೀಸ್ ಠಾಣೆಯಿಂದ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಸಬ್ ಇನ್ಸ್ ಪೆಕ್ಟರ್ ಮಹೇಶ್ ಕುಮಾರ್ ರವರಿಗೆ ಸನ್ಮಾನಿಸಿ ಮಾತನಾಡಿ ಮಹೇಶ್ ಬೆಟ್ಟದಪುರ ಪೊಲೀಸ್ ಠಾಣೆಗೆ ಪ್ರಥಮವಾಗಿ ಸೇವೆಗೆ ನೇಮಕ ಗೊಂಡ 1ವರ್ಷದ ಅವಧಿಯಲ್ಲಿ ಗೋಹತ್ಯೆ ಕಳ್ಳತನ ಪ್ರಕರಣಗಳನ್ನು ಭೇದಿಸಿ ಯಶಸ್ವಿಯಾದರು. ನಾವು ಎಲ್ಲೇ ಸೇವೆ ಸಲ್ಲಿಸಿದರು ಪ್ರಾಮಾಣಿಕವಾಗಿರಬೇಕುಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹೇಶ್ ಕುಮಾರ್ ನನ್ನನ್ನು ಐಜಿಪಿ ವಿಪುಲ್ ಕುಮಾರ್ ಅವರು ಮೊದಲು ಸೇವೆಗೆ ಬೆಟ್ಟದಪುರ ಪೊಲೀಸ್ ಠಾಣೆಗೆ ನೇಮಕ ಮಾಡಿದರು.ಠಾಣೆಯ ಸಿಬ್ಬಂದಿಗಳು ಹೆಚ್ಚು ಸಹಕಾರ ನೀಡಿದ್ದಕ್ಕೆ ನನ್ನ ಸೇವಾವಧಿಯಲ್ಲಿ ಗೋಹತ್ಯೆ ಹಾಗೂ ಕಳ್ಳತನ ಪ್ರಕರಣಗಳನ್ನು ಭೇದಿಸಲು ಸಾಧ್ಯವಾಯಿತು.ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ.ಇಲ್ಲಿನ ಜನತೆ ಸೌಮ್ಯ ಸ್ವಭಾವದವರು ನನ್ನನ್ನು ಕರೆಸಿ ಸಿಸನ್ಮಾನಿಸಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಬೆಟ್ಟದಪುರ ಬೈಲುಕುಪ್ಪೆ ವೃತ್ತ ನಿರೀಕ್ಷಕ ಪ್ರಕಾಶ್ ,ಬೆಟ್ಟದಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಾಶ್ ಯತ್ತಿನಮನಿ , ನಿವೃತ್ತ ಶಿಕ್ಷಕ ಸಣ್ಣಸ್ವಾಮಿಗೌಡ , ಚನ್ನಕಲ್ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಧನರಾಜ್, ಚೌತಿ ಮಲ್ಲಣ್ಣ ‘ಎ ಎಸ್ ಐ ರವಿ , ಪೋಲಿಸ ಸಿಬ್ಬಂದಿಗಳು ಹಾಜರಿದ್ದರು