ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಕೃಷ್ಣಮೂರ್ತಿಪುರಂನಲ್ಲಿರುವ ಗೋವುಗಳಿಗೆ ಪೂಜೆ ಸಲ್ಲಸಿ ಗೋಗ್ರಾಸ ನೀಡಿ ಸಂಭ್ರಮಿಸಲಾಯಿತು..
ಇದೇ ಸಂಧರ್ಭದಲ್ಲಿ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ.ಪ್ರಕಾಶ್ ರವರು ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ವಿಶೇಷ ಸ್ಥಾನವಿದೆ. ಇಂತಹ ದೇಶದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ದಶಕಗಳೇ ಕಾಯಬೇಕಾಯಿತು ,
ಸರ್ಕಾರ ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ ಇದರಿಂದ ಹಿಂದೂ ಸಮಾಜದ ನಂಬಿಕೆಗಳಿಗೆ ಪುರಾಣ ಇತಿಹಾಸಕ್ಕೆ ಮನ್ನಣೆ ಸಿಕ್ಕಿದೆ, ಆದರೆ ಕಾಯ್ದೆ ಸಮರ್ಪಕವಾಗಿ ಜಾರಿಯಾಗಬೇಕು, ಇದರ ಬಗ್ಗೆ ಕಾನೂನಿನ ಅರಿವು ಮತ್ತು ಪರಿಪಾಲನೆ ಹಾಗೂ ಗೋರಕ್ಷಣೆಗೆ ಗೋಶಾಲೆ ಮತ್ತು ವಿಷೇಷ ಗೋರಕ್ಷಕ ದಳ ರಚಿಸುವಲ್ಲಿ ಆರಕ್ಷಕ ಇಲಾಖೆ ಮುಂದಾಗುವಂತೆ ಸರ್ಕಾರ ಸೂಚಿಸಬೇಕು ಎಂದರು
ನಂತರ ಮಾತನಾಡಿದ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ರವರು ಮಾತನಾಡಿ ಗೋವು ಹಿಂದು ಧರ್ಮದ ಸಂಸ್ಕೃತಿಯ ಜೀವವಿದ್ದಂತೆ, ಕೋಟ್ಯಂತರ ಹಿಂದುಗಳಿಗೆ ಅತೀವ ಸಂತಸ ತಂದಿದೆ, ಕಾಯ್ದೆ ಜಾರಿ ಮಾಡಿದ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಿಂದೂ ಸಮಾಜದ ಪರವಾಗಿ ಅಭಿನಂದನೆಗಳು, ರಾಷ್ಟ್ರದ ಪ್ರಾಣಿ ಹುಲಿಯ ಬದಲಾಗಿ ಗೋವು ರಾಷ್ಟ್ರ ಪ್ರಾಣಿಯಾಗಲಿ
ಗೋವು ಇತರರಿಗಾಗಿಯೇ ಜೀವನ ಸಾಗಿಸುತ್ತದೆ. ಗೋಹತ್ಯೆ ನಿಷೇಧಿಸಬೇಕು ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಆಶಯಯಂತೆ ಇಂದು ಕಾನೂನಾತ್ಮಕವಾಗಿ ಮನ್ನಣೆ ಸಿಕ್ಕಿರುವುದು ಧಾರ್ಮಿಕತೆ ಜೊತೆಯಲ್ಲೆ ರೈತಾಪಿ ಜೀವನಾಡಿಗೆ ಶಕ್ತಿಬಂದಂತೆ ಎಂದರು. ಇದೇ ಸಂದರ್ಭದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ,ಉಪಾಧ್ಯಕ್ಷರಾದ ಅಪೂರ್ವ ಸುರೇಶ್ ,ಮಾಜಿ ನಗರ ಪಾಲಿಕೆ ಸದಸ್ಯರಾದ ಎಂ ಡಿ ಪಾರ್ಥಸಾರಥಿ ,ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಯುವವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಅಜಯ್ ಶಾಸ್ತ್ರಿ ,ಕಡಕೊಳ ಜಗದೀಶ್ ,ಸುಚೀಂದ್ರ, ಚಕ್ರಪಾಣಿ ,ಪ್ರಶಾಂತ್ ,ರಂಗನಾಥ್ ,ಗಣೇಶ್ ಪ್ರಸಾದ್ ,ಹಾಗೂ ಇನ್ನಿತರರು ಹಾಜರಿದ್ದರು