ಮೈಸೂರು: ಪ್ರೀ ವೆಡ್ಡಿಂಗ್‌ ಫೋಟೊ ಶೂಟ್‌ ಮಾಡಿಸಿಕೊಳ್ಳುತ್ತಿದ್ದ ವೇಳೆ ವಧು-ವರ ನದಿಪಾಲಾಗಿರುವ ಘಟನೆ ತಿ.ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿ ಸೋಮವಾರ ನಡೆದಿದೆ.

ಮೈಸೂರು ಜಿಲ್ಲೆಯ ಕ್ಯಾತಮಾರನಹಳ್ಳಿಯ ಶಶಿಕಲಾ (20) ಮತ್ತು ಚಂದ್ರು (28) ಮೃತಪಟ್ಟ ವಧು-ವರ. ಇದೇ ತಿಂಗಳು 22ರಂದು ಇವರಿಬ್ಬರ ಮದುವೆ ನಿಶ್ಚಯವಾಗಿತ್ತು.

ತಲಕಾಡಿನ ಜಲದಾಂಬ ರೆಸಾರ್ಟ್‌ ಬಳಿಯಿರುವ ಕಾವೇರಿ ನದಿಯ ಬೋಟ್‌ನಲ್ಲಿ ಪ್ರೀ ವೆಡ್ಡಿಂಗ್‌ ಫೋಟೊ ಶೂಟ್‌ ಮಾಡಿಸುತ್ತಿದ್ದ ವೇಳೆ ವೇಳೆ ಆಯಾತಪ್ಪಿ ಶಶಿಕಲಾ ಕೆಳಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಹೋಗಿ ಚಂದ್ರು ಕೂಡ ನದಿಗೆ ಬಿದ್ದು, ಇಬ್ಬರೂ ಸಾವಿಗೀಡಾಗಿದ್ದಾರೆ.

ಈ ಸಂಬಂಧ ತಲಕಾಡು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By admin