ಮೈಸೂರು 30: ಸುವರ್ಣಬೆಳಕು ಟ್ರಸ್ಟ್ (ರಿ)ಮೈಸೂರು” ಮೈಸೂರಿನ ದಿನಕೂಲಿ ಕಾರ್ಮಿಕರ ಅಥವಾ ನೌಕರರ ಪರಿಸ್ಥಿತಿಯು ತುಂಬಾ ಶೋಚನೀಯವಾಗಿದೆ. ಆಟೋ ಚಾಲಕರು, ರಸ್ತೆ ಬದಿ ವ್ಯಾಪಾರಸ್ಥರು, ಮಾಮೂಲಿ ದಿನಗಳಲ್ಲೇ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವಾಗ ಈ ಕರೋನಾ ಸಂಧರ್ಭದಲ್ಲಿ ಪರದಾಡುವಂತಾಗಿದೆ. ಬ್ಯಾಂಕು ಮತ್ತು ವಾರದ ಸಂಘಗಳಲ್ಲಿ ಸಾಲ ತೆಗೆದು ಸಣ್ಣ ಪ್ರಮಾಣದ ಬಂಡವಾಳ ಹೂಡಿದ ಸರಕುಗಳೆಲ್ಲವೂ ಅವಧಿ ಮುಗಿದು ಕೆಡುತ್ತಿರುವುದರಿಂದ ಹಾಗೂ ದಿನದಿನಕ್ಕೆ ಸಾಲದ ಬಡ್ಡಿ ಏರುತ್ತಿರುವ ಯೋಚನೆಯಲ್ಲಿ ಮಾನಸಿಕ ಆರೋಗ್ಯವನ್ನೂ ಸಹ ಕೆಡಿಸಿಕೊಳ್ಳುತ್ತಿದ್ದಾರೆ.ಇತ್ತ ಸರ್ಕಾರದ ತೆರಿಗೆ ನೀತಿಗಳು,ಅವಶ್ಯಕ ಸರಕುಗಳ ಮೇಲಿನ ದಿಢೀರ್ ಬೆಲೆ ಏರಿಕೆ ಒಂದು ಹೊತ್ತು ಊಟಕ್ಕೂ ಪರದಾಡುವಂತೆ ತಡಕಾಡುವಂತೆ ಬಡಜನರು ಹಿಂಸೆಗೆ ಒಳಗಾಗಿದ್ದಾರೆ. ಈ ಕರೋನಾ ಸಂಧರ್ಭದಲ್ಲಿ ಕಠಿಣ ನಿಯಮಗಳ ಕಪ್ರ್ಯೂ ಅಥವಾ ಲಾಕ್ಡೌನ್ ಸರ್ಕಾರದ ಉತ್ತಮ ತುರ್ತು ತೀರ್ಪಾಗಿ ಅಗತ್ಯವಾಗಿದೆ. ಈ ನಿರ್ಧಾರವನ್ನು ಗೌರವಿಸುತ್ತೇವೆ.ಆದರೆ ಜೊತೆಗೆ ಪೂರ್ವನಿಯೋಜಿತವಾಗಿ ಸರ್ಕಾರ ಯೋಜನೆಗಳನ್ನು ಹಾಕಿಕೊ ಳ್ಳದೇ ಇರುವುದರ ಮೇಲೆಯೂ ವಿಷಾದವಿದೆ. ಇನ್ನೊಂದು ಕಡೆ ಸ್ವಾಭಿಮಾನದಿಂದ ಆರ್ಥಿಕ ಸಾಮಾಜಿಕ ಸಂಕಷ್ಟದಲ್ಲಿದ್ದರೂ ಯಾರ ಬಳಿಯೂ ಸಹಾಯ ಹಸ್ತ ಕೈಚಾಚದೆ ಮನೆಯೊಳಗೇ ಇದ್ದು ನೋವು ತ್ತಿನ್ನುತ್ತಿರುವವರ ಬದುಕಂತೂ ಹೇಳತೀರದು.ಅಲ್ಲಿ ಇಲ್ಲಿ ಒಮ್ಮೊಮ್ಮೆ ಎನ್.ಜಿ.ಓ ಸಂಸ್ಥೆಗಳು,ಅನುಕೂಲಸ್ಥ ಮಾನವೀಯ ಮೌಲ್ಯವುಳ್ಳ ಕುಟುಂಬಗಳು,ಚಿಕ್ಕ ಪುಟ್ಟ ಸಂಘ ಸಂಸ್ಥೆಗಳು ಸ್ವತಃ ಮುಂದೆ ಬಂದು ಅಗತ್ಯ ಸರಕುಗಳನ್ನು ಹಾಗೂ ಅನ್ನದಾಸೋಹವನ್ನು ನಡೆಸುವಾಗ ಸಾಮಾನ್ಯ ಜನರ ನೂಕುನುಗ್ಗಲು ಕರಳುಹಿಂಡುವಂತದ್ದು.ಬದುಕುವುದಕ್ಕಾಗಿ ದುಡಿಯೋಣವೆಂದೂ ಹೊರಗೆ ಬಂದರೂ ಕರೋನಾ ವೈರಸ್ ಗೆ ಬಲಿಯಾಗುತ್ತೇವೆ ಎನ್ನುವ ಭಯ, ಆತಂಕ ,ಸಾವಿನ ಆಕ್ರಂದನ ಸಾಮಾನ್ಯ ಜನತೆಯಲ್ಲಿ ಹೆಚ್ಚಾಗಿದೆ.ಇಲ್ಲ ಮನೆಯೊಳಗಿದ್ದರೂ ಸಮಸ್ಯೆಗಳು ಬದುಕನ್ನು ಛಿದ್ರಗೊಳಿಸುತ್ತದೆನ್ನುವ ಭವಿಷ್ಯದ ಆತಂಕ ಅವರ ಮನಸ್ಸನ್ನು ಆವರಿಸುತ್ತಿದೆ.ಕೊರೋನಾ ಸೋಂಕು ಸಮಸ್ಯೆ ಯಾವಾಗ ಕೊನೆಯಾಗುತ್ತದೆಯೋ ಗೊತ್ತಿಲ್ಲ.ಅಲ್ಲಿಯವರೆಗೆ ಬದುಕುವುದು ಹೇಗೆ ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ ದಿನಗೂಲಿ ನೌಕರರು.ಆದರೆ ಸುದೀರ್ಘ ಲಾಕ್ ಡೌನ್ ನಿಂದ ದಿನಗೂಲಿ ನೌಕರರ ಕತೆ ಬೀದಿ ಪಾಲಾಗಲಿದೆ.ಬೆಸ್ಥಾಗೇರಿ, ಸುಣ್ಣದಕೇರಿ ಮೈಸೂರಿಗರ ಪರಿಸ್ಥಿತಿಯನ್ನು ಖುದ್ದಾಗಿ ವಿಚಾರಿಸಿದಾಗ ಈ ಮೇಲಿನ ಪರಿ ಸಂಕಷ್ಟದ ಅಳಲನ್ನು ತೋಡಿಕೊಂಡರು.ಎಲ್ಲರೂ ಕರೋನಾ ವೈರಸ್ ವಿರುದ್ಧ ಹೋರಾಡೋಣ ಸರ್ಕಾರದ ನಿಯಮಗಳಿಗೆ ಬದ್ಧರಾಗೋಣಾ.ಸರ್ಕಾರವೂ ಸಹ ನಮ್ಮ ನೋವುಗಳಿಗೆ ಬಹುಬೇಗ ಹೆಚ್ಚೆಚ್ಚು ಒಳ್ಳೆಯ ರೀತಿಯಲ್ಲಿ ಸ್ಪಂದಿಸಲಿ
