ಮೈಸೂರು:ಡಿ.05: ರಾಜ್ಯದಲ್ಲಿ ಕನ್ನಡ ಸಂಘಟನೆಗಳಿಂದ ಬಂದ್ ಕರೆ ನೀಡಿದೆ ಎಲ್ಲೆಡೆ ಪ್ರತಿಭಟನೆ, ಧರಣಿಗಳು ನಡೆಯುತ್ತಿದ್ದರೆ ಪ್ರೀವೆಡ್ಡಿಂಗ್ ಫೋಟೋ ಶೂಟ್‍ನಲ್ಲಿ ನೂತನ ವಧು-ವರ ಬ್ಯೂಸಿಯಾಗಿದ್ದಾರೆ.
ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಸರ್ಕಾರದ ವಿರುದ್ಧ ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೆ ಸಾಂಸ್ಕøತಿಕ ನಗರಿ ಮೈಸೂರಿನ ಅರಮನೆ ಮುಂಭಾಗ 3ಕ್ಕೂ ಹೆಚ್ಚು ನವ ಜೋಡಿಗಳು ಕುದುರೆ ಸಾರೋಟ್‍ನಲ್ಲಿ ಫೆಟೋಶೂಟ್ ಮಾಡಿಸುತ್ತಾ, ಬಂದ್‍ಗೂ ನಮಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಪೋಸ್ ನೀಡುತ್ತಿದ್ದು ನೋಡುಗರಿಗೆ ಹಾಗೂ ಪ್ರತಿಭಟನಾಕಾರರನ್ನು ಕೆರಳಿಸುತ್ತಿದೆ.
ಬಂದ್‍ಗೆ ಕೈ ಜೋಡಿಸಿ ಎಂದು ಸಂಘಟನೆಗಳು ಕರೆ ನೀಡಿದರೆ ಈ ಜೋಡಿಗಳು ಕೈ-ಕೈ ಹಿಡಿದು ಫೋಟೋ ಶೂಟ್ ಮಾಡಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಈ ಅಸಡ್ಡೆ ವರ್ತನೆ ಚರ್ಚೆಗ್ರಾಸವಾಗಿರುವುದು ವಿಪರ್ಯಾಸವೇ ಸರಿ.