ಚಾಮರಾಜನಗರ: ಕಳೆದ ಕೆಲದಿನಗಳಿಂದ ಸುರಿದ ಸತತ ಸುರಿದ ಮಳೆ ಜತೆಗೆ ತಾಲೂಕಿನ ಸುವರ್ಣಾವತಿ ಜಲಾಶಯದಿಂದ ಹೆಚ್ಚುವರಿ ನೀರುಬಿಟ್ಟ ಹಿನ್ನೆಲೆಯಲ್ಲಿ ತಾಲೂಕಿನ ದೊಡ್ಡಮೋಳೆ, ಡೊಳ್ಳಿಪುರ, ಕಾನಿಕರೆ ಗ್ರಾಮಗಳ ಕೃಷಿಜಮೀನುಗಳು ಜಲಾವೃತವಾಗಿವೆ.
ಜಮೀನುಗಳಲ್ಲಿ ಬಾಳೆ, ಅಡಿಕೆ, ಸಸಿ, ಟೊಮೆಟೋ, ಕೋಸು ಬೆಳೆಗಳನ್ನು ರೈತರು ಬೆಳೆದಿದ್ದು, ಇದೀಗ ನೀರು ನಿಂತಿರುವುದರಿಂದ ಬೆಳೆಕೊಳೆಯುವ ಹಂತದಲ್ಲಿದೆ. ಸಾಲಸೋಲಮಾಡಿ, ಬೆಳೆದ ಬೆಳೆಯು ನೀರುಪಾಲಾಗಿದೆ.
ಕಳೆದ ೧೫ ದಿನಗಳಿಂದ ಸುರಿದನಿರಂತರ ಮಳೆ ಜತೆಗೆ ಸುವರ್ಣಾವತಿ, ಜಲಾಶಯದಲ್ಲಿ ಹೆಚ್ಚುವರಿ ಸಂಗ್ರಹವಾದ ನೀರನ್ನು ಹೊರಬಿಟ್ಟ ಪರಿಣಾಮ ಈ ಭಾಗದ ಜಮೀನುಗಳಿಗೆ ನೀರುನುಗ್ಗಿದೆ. ಜಲಾಶಯ ಭರ್ತಿಯಾದ ಹೆಚ್ಚುವರಿ ನೀರನ್ನು ಬಿಡಲಾಗುವುದರಿಂದ ಜಮೀನುಗಳು ಜಲಾವೃತವಾಗುತ್ತಿವೆ. ಜಲಾಶಯದಿಂದ ಹೊರಬಿಡಲಾಗುವ ಹೆಚ್ಚುವರಿ ನೀರು ರೈತರ ಜಮೀನುಗಳಿಗೆ ನುಗ್ಗದಂತೆ ಜಿಲ್ಲಾಡಳಿತ ಶಾಶ್ವತ ಪರಿಹಾರ ಒದಗಿಸಬೇಕು, ನಷ್ಟವಾಗಿರುವ ಬೆಳೆಗಳಿಗೆ ಸಂಬಂಧಪಟ್ಟ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ನಷ್ಟದ ಅಂದಾಜು ಪರಿಶೀಲಿಸಿ ಪರಿಹಾರ ಕೊಡಿಸಲು ಕ್ರಮವಹಿಸಬೇಕು ಎಂದು ದೊಡ್ಡಮೋಳೆ ಗ್ರಾಮದ ರೈತದೊರೆಸ್ವಾಮಿ ಆಗ್ರಹಿಸಿದ್ದಾರೆ.
