ಚಾಮರಾಜನಗರ: ನಗರದ ಪ್ರಮುಖ ರಸ್ತೆಗಳು ಸೇರಿದಂತೆ ನಾನಾಕಡೆ ಪರಿಸರ ಪ್ರೇಮಿ ಸಿ. ಎಂ. ವೆಂಕಟೇಶ್ ಅವರು ನೆಟ್ಟಿರುವ ಸಾಲು ಗಿಡಗಳಿಗೆ ದಾನಿಯೊಬ್ಬರು ಗಿಡಗಳಿಗೆ ನೀರುಣಿಸಿದ್ದಾರೆ.
ನಗರದ ಸೆಸ್ಕ್ ನಲ್ಲಿ ಲೆಕ್ಕಾದಿಕಾರಿಯಾಗಿರುವ ಮಹೇಶ್ ಮತ್ತು ರೇಖಾದಂಪತಿಗಳು ತಮ್ಮ ೧೨ನೇ ವ?ದ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ನಗರದ ಗ್ರಾಮಾಂತರ ಠಾಣೆ ರಸ್ತೆಯಬದಿ ನೆಡಲಾಗಿರುವ ಗಿಡಗಳಿಗೆ ನೀರು ಹಾಕಿಸುವ ಮೂಲಕ ಪರಿಸರ ಕಾಳಜಿ ಮೆರೆದರು.
ನ್ಯಾಯಲಯ ರಸ್ತೆ, ರಥದ ಬೀದಿ, ಡಿವಿಯೇ?ನ್ ರಸ್ತೆ, ಕೇಂದ್ರೀಯ ವಿದ್ಯಾಲಯ, ಜಿಲ್ಲಾ ಅಂಬೇಡ್ಕರ್ ಕ್ರೀಡಾಂಗಣ, ನಂಜನಗೂಡು ರಸ್ತೆ, ರೈಲು ನಿಲ್ದಾಣ ರಸ್ತೆ, ಸತ್ಯಮಂಗಲ ರಸ್ತೆ, ಸಂಪಿಗೆ ರಸ್ತೆ, ಬಿ. ರಾಚಯ್ಯ ಜೋಡಿ ರಸ್ತೆ, ಸಂತೇಮರಳ್ಳಿ ರಸ್ತೆ, ಕರಿನಂಜನಪುರ ರಸ್ತೆಯಲ್ಲಿ ಸಿ.ಎಂ.ವೆಂಕಟೇಶ್ ಅವರು ಚಿತ್ರನಟರ, ಗಾಯಕರು, ದಾರ್ಶನಿಕರ ಹುಟ್ಟುಹಬ್ಬದ ಸಂದರ್ಭದಲ್ಲಿ ಸಾಲು ಗಿಡಗಳನ್ನು ನೆಡುವ ಕಾರ್ಯ ಕೈಗೊಂಡಿದ್ದಾರೆ, ಪ್ರತಿ ವ? ಜನವರಿ ಯಿಂದ ಜೂನ್ ತಿಂಗಳ ವರೆಗೆ ಗಿಡಗಳಿಗೆ ನೀರು ಹಾಕುವುದು ಅನಿವಾರ್ಯ ವಾಗಿದೆ ಆ ನಿಟ್ಟಿನಲ್ಲಿ ದಾನಿಗಳನ್ನು ಸಂಪರ್ಕಿಸಿ, ಅವರಿಂದ ನೆರವು ಪಡೆದು.
ತಾವು ನೆಟ್ಟಿರುವ ಗಿಡಗಳಿಗೆ ನೀರುಣಿಸಿ, ಪೋಷಣೆಗೆ ಕಳೆದ ಐದು ವ?ಗಳಿಂದ ಪೋ?ಣೆ ಮುಂದಾಗಿದ್ದಾರೆ.