ಮೈಸೂರಿಗೆ ಆಗಮಿಸಿದ್ದ ಮಾನ್ಯ ಜನಪ್ರಿಯ ನಿಕಟಪೂರ್ವ ಮುಖ್ಯಮಂತ್ರಿಗಳು ಹಾಗೂ ರೈತನಾಯಕ ಶ್ರೀ ಬಿ.ಎಸ್.ಯಡಿಯೂರಪ್ಪನವರು ಲಲಿತ ಮಹಲ್ ಗೆ ಸೌಹಾರ್ದಯುತ ಭೇಟಿ ನೀಡಿದ್ದರು. ಈ ವೇಳೆ ಲಘು ಉಪಹಾರ ಸವಿದು ಮೆಚ್ಚುಗೆ ವ್ಯಕ್ತ ಪಡಿಸಿದರು. ದೋಸೆ, ಕಾಫಿ, ಸವಿದು ಉಪಹಾರಗಳ ಮಾಹಿತಿ ಪಡೆದು, ಸ್ವಚ್ಚತೆ, ಆಧಾಯ ಹಾಗೂ ಜಂಗಲ್ ಲಾಡ್ಜಸ್ ಸಾಗುತ್ತಿರುವ ಹಾದಿ ಬಗ್ಗೆ ತಿಳಿದುಕೊಂಡರು.

ಅರಣ್ಯ ವಸತಿ ವಿಹಾರಧಾಮಗಳ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ.ಅಪ್ಪಣ್ಣನವರು ಜಂಗಲ್ ಲಾಡ್ಜಸ್ ಸಾಗುತ್ತಿರುವ ಹಾದಿ,ಪ್ರವಾಸಿಗರಿಗೆ ಸಿಗುತ್ತಿರುವ ಸೌಲಭ್ಯಗಳನ್ನು ತಿಳಿಸಿಕೊಟ್ಟರು.

ಆಧಾಯ ಹೆಚ್ಚಿಸಿ ಬೆಂಗಳೂರಿನಲ್ಲಿ ನಿಗಮವು ಸ್ವಂತ ಕಟ್ಟಡ ಖರೀದಿಸಿರುವುದಾಗಿ ತಿಳಿಸಿದರು. ಮಂಗಳೂರು, ಬೈಂದೂರು ಹಾಗೂ ಇತರೆಡೆ ಹೊಸ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಲಲಿತ್ ಮಹಲ್ ರಿನೋವೇಷನ್ ಮಾಡಲು ಸುಣ್ಣ, ಬಣ್ಣ ಒಡೆಸುವ ಕಾರ್ಯ ಕೈಗೊಳ್ಳಲಿದ್ದು, ಲಲಿತ ಮಹಲ್ ಅನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿರ್ಮಿಸಿ 100 ವರ್ಷಗಳಾಗಿದ್ದು ಸುವರ್ಣ ಮಹೋತ್ಸವ ಆಚರಿಸಲು ಯೋಜನೆ ರೂಪಿಸಿದ್ದು,
ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮನೋಜ್ ಕುಮಾರ್ ಅವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್.ಟಿ.ಸೋಮಶೇಖರ್ ಅವರೊಂದಿಗೆ ತಮ್ಮ ಬಳಿ ಚರ್ಚಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾನ್ಯ ಯಡಿಯೂರಪ್ಪನವರ ಸ್ನೇಹಿತರಾದ ಶ್ರೀ ಶಂಕರ್ ರಾವ್ ಅವರು,ಮೂಡಾ ಅಧ್ಯಕ್ಷರಾದ ಶ್ರೀ ರಾಜೀವ್ ಅವರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಮಲ್ಲಿಕಾರ್ಜುನಪ್ಪನವರು, ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಳಾ ಸೋಮಶೇಖರ್ ಅವರು, ಕೆ.ಎಸ್.ಟಿ.ಡಿ.ಸಿ ಅಧ್ಯಕ್ಷರಾದ ಶ್ರೀ ಸಿದ್ದಲಿಂಗಸ್ವಾಮಿ ಅವರು, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮಹದೇವಸ್ವಾಮಿ ಅವರು, ದೇವರಾಜ ಅರಸು ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷರಾದ ಶ್ರೀ ಕೌಟಿಲ್ಯ ರಘು ಅವರು, ಅರಣ್ಯ ವಸತಿ ಹಾಗೂ ವಿಹಾರಧಾಮಗಳ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.