ಓಂ ಭೂರ್ ಭುವಃ ಸ್ವಃ ತತ್ಸ ವಿತೂಹ್ ವರೇಣ್ಯಂ|| ಭರ್ಗೋ ದೇವಸ್ಯ ಧೀಮಹಿಃ ಧಿಯೋ ಯೋನಃ ಪ್ರಚೋದಯಾತ್
ಗಾಯತ್ರಿ ಮಂತ್ರದ ಕನ್ನಡ ಭಾವಾರ್ಥ:-ನಭೋಮಂಡಲದಲ್ಲಿ ಸ್ವರ್ಗಲೋಕ ಭೂಲೋಕ ಪಾತಾಳಲೋಕ ಎಂಬ ೩ಲೋಕವನ್ನೂ ದೇವ ಮಾನವ ದಾನವ ಎಂಬ ೩ಜೀವರಾಶಿಯನ್ನೂ ಸೃಷ್ಟಿಸಿ, ಇವರೆಲ್ಲರಿಗೆ ಬಂದೊದಗುವ ಕತ್ತಲೆ ಅಜ್ಞಾನ ಅಕಾಲಮೃತ್ಯು ಎಂಬ ತ್ರಿಪೀಡೆಗಳನ್ನು ಶಮನಗೊಳಿಸುವಂಥ ಅದ್ಭುತ ಶಕ್ತಿಯುಳ್ಳ ಭಗವಂತನನ್ನು ಧ್ಯಾನಿಸುವುದು
ಭಗವಂತ ಎಂದರೆ ಯಾರು? ಪ್ರಶ್ನೆಗೆ ’ಪ್ರಜಾಪತಿ’ ’ವಿಶ್ವಕರ್ಮಿ’ ’ವಿಶ್ವವ್ಯಾಪಿ’ ಮುಂತಾದ ಅಸಂಖ್ಯಾತ ಉತ್ತರ ಇರುವುದರಿಂದ ಇದು ಪ್ರಶ್ನಾತೀತ! ಭಗವಂತನಿಗಿರುವ ಅಗಣಿತ ಹೆಸರಲ್ಲಿ ವಿಶ್ವಕರ್ಮವೂ ಒಂದು. ಇದನ್ನು ಗಂಭೀರವಾಗಿ ಪರಿಗಣಿಸುವುದು ಬಿಡುವುದು ಅವರವರಿಚ್ಚೆ. ವೇದೋಪನಿಷತ್ ಕಾಲದಿಂದ ಪರಿಗಣಿಸಲ್ಪಟ್ಟು ಈಗಲೂ ಪ್ರತೀತಿಯಲ್ಲಿರುವ ವಿಶ್ವಕರ್ಮನಸ್ತಿತ್ವದ ವಾಸ್ತವತೆ ಹೀಗಿದೆ: ’ಗಾಯ-ತ್ರೀ’ಎಂಬುದು ’ಓಂ”ಯೇಂ”ಕ್ಲೀಂ’೩ಬೀಜಮಂತ್ರಗಳಿಂದ ಕೂಡಿದೆ. ಓಂ(ಸತ್)=ಅಮರತೆಯನ್ನೂ, ಯೇಂ(ಚಿತ್)=ಅರಿವನ್ನೂ, ಕ್ಲೀಂ(ಆನಂದ)=ಸುಖವನ್ನೂ ಪ್ರಾರ್ಥಿಸುತ್ತವೆ. ಈಮೂರರ ಸಂಗಮವೆ ಸತ್+ಚಿತ್+ಆನಂದ=ಸಚ್ಚಿದಾನಂದ=ಗಾಯತ್ರಿಮಂತ್ರದೊಳಗೆ ಅಡಗಿದೆ ಎಂಬುದೆ ಆಧ್ಯಾತ್ಮಿಕಸತ್ಯ! ಗುರುವಿಂದಶಿಷ್ಯನಿಗೆ ತಂದೆಯಿಂದಮಗನಿಗೆ, ಬೋಧಕನಿಂದಸಾಧಕನಿಗೆ ದೊರಕುವ ೩ಪಂಚಾರತ್ರಿಕ ಗುರುಮಂತ್ರಗಳು:೧.ಗುರುಮಂತ್ರ(ಯೇಂಗುರವೇನಮಃ)೨.ಗೌರಮಂತ್ರ(ಕ್ಲೀಂಗೌರಾಯನಮಃ)೩.ಗೋಪಾಲಮಂತ್ರ(ಕ್ಲೀಂಕೃಷ್ಣಾಯಸ್ವಾಹಾ). ನಂತರ ೩ಪಂಚಾರತ್ರಿಕಗಾಯತ್ರೀಮಂತ್ರಗಳು:೧.ಗುರುಗಾಯತ್ರೀಮಂತ್ರ(ಯೇಂಗಾಯತ್ರಿದೇವಾಯವಿದ್ಮಹೇಕೃಷ್ಣಾನಂದಾಯಧೀಮಹೀತನ್ನೊಗುರುಃಪ್ರಚೋದಯಾತ್) ೨.ಗೌರಗಾಯತ್ರೀಮಂತ್ರ(ಕ್ಲೀಂಚೈತನ್ಯಾಯವಿದ್ಮಹೇವಿಶ್ವಂಭರಾಯಧೀಮಹೀತನ್ನೋಗೌರಃಪ್ರಚೋದಯಾತ್) ೩.ಕಾಮಗಾಯತ್ರೀಮಂತ್ರ(ಕ್ಲೀಂಕಾಮದೇವಾಯ ವಿದ್ಮಹೆ ಪುಷ್ಪ ಬಾನಾಯ ಧೀಮಹೀ ತನ್ನೋ ನಂಗಾಃ ಪ್ರಚೋದಯಾತ್). ಬ್ರಹ್ಮಗಾಯತ್ರಿ ಪಂಚಾರಿತ್ರಿಕ ಮಂತ್ರ ಪದ್ಧತಿಯ ೩ಅವಲೋಕನಗಳು:-(೧)ಸಂಬಂಧಾವಲೋಕನ (೨)ಅಭಿಧೇಯಾವಲೋಕನ ಹಾಗೂ (೩)ಪ್ರಯೋಜನಾವಲೋಕನ.ಆಧ್ಯಾತ್ಮಿಕಗ್ರಂಥವಿಷ್ಣುಧರ್ಮೋತ್ತಾರ ಪುರಾಣದ ೧೬೫ನೆ ಅಧ್ಯಾಯದಲ್ಲಿ ವಜ್ರಮಹಾರಾಜನು ಮಾರ್ಕಂಡೇಯ ನನ್ನು ಕುರಿತು:-ಸೂರ್ಯವಂಶಜ ವೈಷ್ಣವನು ಪ್ರತಿನಿತ್ಯ ವಿಷ್ಣು ಅಥವ ಸೂರ್ಯನನ್ನು ಪೂಜಿಸುವಾಗ ಬ್ರಹ್ಮಗಾಯತ್ರಿಯನ್ನು ಹೊಗಳಿ ಪ್ರಾರ್ಥಿಸುವನೇಕೆ?ಎಂದು ಕೇಳಿದಾಗ ಮಹರ್ಷಿಮಾರ್ಕಂಡೇಯನು ವಜ್ರಮಹಾರಾಜನಿಗೆ ಉತ್ತರಿಸಿದ್ದು ಹೀಗೆ:ಕಾಮಕಾಮೋಲಾಭೇತ್ ಕಾಮಂಃಗತಿಕಾಮಸ್ ತು ಸದ್ಗತೀಂಃ ಅಕಾಮಸ್‌ತು ತದ್‌ಅವಾಪ್ನೋತಿಃ ಯದ್ ವಿಷ್ಣೋಃ ಪರಮಂಪದಂ[ತಾತ್ಪರ್ಯ:ಯಾವುದೇ ವ್ಯಕ್ತಿ ತನ್ನ ಜೀವನ್ ಮುಕ್ತಿಗಾಗಿ ಅಥವ ವಸ್ತು-ಅಂತಸ್ತು-ಅಧಿಕಾರ ಪಡೆವ ಸಲುವಾಗಿ ಗಾಯತ್ರಿ ಮಂತ್ರವನ್ನು ಜಪಿಸುತ್ತಾನೆ. ಆದರೆ, ಭಕ್ತಿಯಿಂದ ವಿಷ್ಣುಧ್ಯಾನ-ಪೂಜೆ ಮಾಡಿದ್ದಾದರೆ ವೈಕುಂಠಕ್ಕೇ ಹೋಗುವ ಅತ್ತ್ಯುನ್ನತಮಟ್ಟ ತಲುಪುತ್ತಾನೆ] ಎಂದು ಉಪಸಂಹಾರ[ಕಂಕ್ಲುಶನ್] ಮಾಡುತ್ತಾರೆ.
ಬ್ರಹ್ಮನು ಕಾಮಗಾಯತ್ರಿ ಧ್ಯಾನಮಾಡಲಾಗಿ ಶುಕ್ರಾಚಾರ್ಯ ಜನಿಸಿದರು. ಎಲ್ಲಕಾಲಕ್ಕೂ ಗೋಪಾಲಮಂತ್ರ ಮತ್ತು ಕಾಮಗಾಯತ್ರಿ ಮಂತ್ರಗಳನ್ನು ಪಡಕೊಳ್ಳುವ ಪಂಚಾರತ್ರಿಕ ಪದ್ಧತಿಯು ವೇದಪದ್ಧತಿಗಿಂತಲೂ ಹೀನಾಯವಲ್ಲ ಎಂಬುದೆ ಕಟುಸತ್ಯ. ಏಕೆಂದರೆ, ಇವೆರಡೂ ಪದ್ಧತಿ ಸರಿಸಮಾನವಾಗಿ ಮೋಕ್ಷಕ್ಕೆ ಅಗತ್ಯವಾದ ಪಾವಿತ್ರ್ಯತೆ ಶಕ್ತಿಭಕ್ತಿ ಹಾಗೂ ಸ್ಥಾನಮಾನ ಪಡೆದಿವೆ. ಸಂಸ್ಕರಣ ಗೊಳಿಸಿದ ಓಂಕಾರ! ಮತ್ತು ಮೂಲವೇದಗಳಲ್ಲಿ ಮೊಳಗಿದ ಪ್ರಥಮಪದವೆ ಗಾಯತ್ರೀಮಂತ್ರ! ಒಮ್ಮೆ ಮಧು ಮತ್ತು ಕೈಟವ್ಯ ಎಂಬ ದಾನವರು ಆಕಸ್ಮಿಕವಾಗಿ ಬ್ರಹ್ಮನ ಮೆದುಳಿಂದ ವೇದ-ಮಂತ್ರ ಕದ್ದೊಯ್ದ ಬಳಿಕ ಮಹಾವಿಷ್ಣುವು ಪ್ರಥಮಬಾರಿ ಸೃಷ್ಟಿಸಿದ ಹೊಸಾಮಂತ್ರವು ಗಾಯತ್ರಿದೇವಿ ಮೂಲಕ ಪಂಚಾರತ್ರಿಕ ಪದ್ಧತಿಯನ್ನು ಬ್ರಹ್ಮನಿಗೇ ಅರಿವಿಲ್ಲದಂತೆ ಅವನ ಚತುರ್‌ಮುಖದಪ್ರಮುಖಕ್ಕೆ ಪುನರಅಳವಡಿಸಿದನು. ಕಾಲಕ್ರಮೇಣ ಬ್ರಹ್ಮನು ವಿಷ್ಣುವಿನ ಮಗಳು ಕಾಮಗಾಯತ್ರಿಯ ಪುತ್ರಿ ದಿವ್ಯಸರಸ್ವತಿಯ(ವಿಷ್ಣುವಿನಮೊಮ್ಮಗಳ)ನ್ನುವಿವಾಹವಾಗುತ್ತಾನೆ. ಬ್ರಹ್ಮ-ಸರಸ್ವತಿ ದಾಂಪತ್ಯಕ್ಕೆ ಕಾಮಗಾಯತ್ರಿ ಮತ್ತು ವಿಷ್ಣು ಇವರಿಬ್ಬರ ಕೃಪಾಕಟಾಕ್ಷವೆ ಕಾರಣ. ಬ್ರಹ್ಮದೇವ ತಾನು ಸೃಷ್ಟಿಸಿದ ಮಗಳು ಸರಸ್ವತಿಯನ್ನೆ ಮದುವೆಯಾದ ಎಂಬುದು ಸುಳ್ಳು! ಈ ಸತ್ಯವು ಪುರಾಣವನ್ನು ಸರಿಯಾಗಿ ಓದಿದವರಿಗೆ ಮಾತ್ರ ತಿಳಿಯುತ್ತದೆ!
ಮಧ್ವಾಚಾರ್ಯರ ’ತಂತ್ರಸಾರ’ ಪುಸ್ತಕದಲ್ಲಿ ಗಾಯತ್ರಿಪಾಠ ಸಾರಾಂಶವು ಒಳಗೊಂಡ ೨೪ ವರ್ಣಗಳ ಪಠ್ಯಕ್ರಮ:-ತ ತ್ಸ ವಿ ತೂ ವ ರೇ ಣಿ ಯಂ ಭ ರ್ಗೋ ದೇ ವ ಸ್ಯ ಧೀ ಮ ಹೆ ಧೀ ಯೋ ಯೊ ನಃ ಪ್ರ ಚೋ ದ ಯಾತ್. ಇವು ವಿಷ್ಣುವಿನ ೨೪ ಕೃಷ್ಣ ಕೇಶವ ನಾರಾಯಣ ಮಾಧವ ಗೋವಿಂದ ಮಧುಸೂದನ ತ್ರಿವಿಕ್ರಮ ವಾಮನ ಶ್ರೀಧರ ಹೃಷಿಕೇಶ ಪದ್ಮನಾಭ ದಾಮೋದರ ವಾಸುದೇವ ಪ್ರದ್ಯುಮ್ನ ಅನಿರುದ್ಧ ಪುರುಷೋತ್ತಮ ಅಧೋಕ್ಷಜ ನರಸಿಂಹ ಅಚ್ಯುತ ಅನಂತ ಜನಾರ್ಧನ ಉಪೇಂದ್ರ ಹರಿ ಶ್ರೀಪತಿ-ವರ್ಣಮಾಲೆಗಳೂ ಹೌದು! ಪುರಾಣದ ಪ್ರಕಾರ ಆದಿ (ಸತ್ಯ)ಯುಗದ ಒಂದುಘಟನೆ:-ಬ್ರಹ್ಮ ಸೃಷ್ಟಿಸಿದ ಪುತ್ರರಲ್ಲಿ ಜೇಷ್ಠನೂ ಶ್ರೇಷ್ಠನೂ ಆದ ಪರಬ್ರಹ್ಮನ ಕಸುಬು ’ಕುಶಲಕರ್ಮ’. ಈತನನ್ನು ಕುಶಲಕರ್ಮಿ, ವಿಶ್ವಕರ್ಮಿ ಎಂದೂ ಕರೆಯುತ್ತಾರೆ. ಜೀವಿಗಳಿಗೆ ಅನುಗುಣವಾಗಿ ಮನೆಮಠ ಊರುಕೇರಿ ಪಟ್ಟಣಪಾಳ್ಯ ಅರಮನೆ ಗುರುಮನೆ ಕಟ್ಟುವ ಕಾಯಕವನ್ನು ವಿಶ್ವಕರ್ಮನಿಗೆ ವಹಿಸಲಾಯಿತು. ಹಲವಾರು ಗ್ರಂಥಗಳಲ್ಲಿ ಇವನನ್ನು ಗಾಯತ್ರಿ ಗರ್ಭಸಂಜಾತ ವಿಶ್ವಕರ್ಮಣ್ಯೇ ಪರಬ್ರಹ್ಮಶಿಲ್ಪಿ ಆದಿಬ್ರಹ್ಮಣ್ಯೇ ವಿಶ್ವಕರ್ಮಕುಲಸ್ಥಾಪನಾಃಉಲ್ಲೇಖವಿದೆ. ಆದ್ದರಿಂದ ವಿಶ್ವಶಿಲ್ಪಿ ದೇವಶಿಲ್ಪಿ ಆದಿಬ್ರಾಹ್ಮಣ? ವಿಶ್ವಕರ್ಮಿ ಮುಂತಾದ ನಾಮಧೇಯದಿಂದ ತ್ರಿಲೋಕಗಳಲ್ಲಿ ಜಗಜ್ಜಾಹೀರಾದರು. ವಿಶ್ವಕರ್ಮ ಜನಾಂಗದ ಕುಲಾಚಾರ್ಯ ಶುಕ್ರಾಚಾರ್ಯ ಮತ್ತು ಕುಲದೇವತೆ ಗಾಯತ್ರಿ(ಕಾಳಿಕಾಂಬ) ಪ್ರಥಮಪೂಜ್ಯರು!
ದೇವಲೋಕಕ್ಕೆ ಬೃಹಸ್ಪತಾಚಾರ್ಯರೂ ಭೂಲೋಕಕ್ಕೆ ಶುಕ್ರಾಚಾರ್ಯರೂ ಗುರುವಿನಸ್ಥಾನ ಅಲಂಕರಿಸುತ್ತಾರೆ. ಬೃಹಸ್ಪತಿಯು ದೇವರ ಪಕ್ಷಪಾತಿ ಆದಮೇಲೆ ಶುಕ್ರಾಚಾರ್ಯರು ದಾ(ಮಾ)ನವ ಪಕ್ಷಪಾತಿ ಆಗುತ್ತಾರೆ. ಆಚಾರ್ಯದ್ವಯರು ಉತ್ತರಧ್ರುವ-ದಕ್ಷಿಣಧ್ರುವ ಗಳಂತೆ ಬದುಕುತ್ತಿದ್ದರು. ಶುಕ್ರಾಚಾರ್ಯರು ಬೃಹಸ್ಪತಿಯ ಪಟ್ಟುಗಳಿಗೆ ಜಗ್ಗದೆ ಪ್ರತಿಪಟ್ಟು ಹೂಡುತ್ತಿದ್ದರು. ಸ್ವಾವಲಂಬಿಆಗಿ ಉದಾತ್ತ ನಿರ್ಧಾರ ತೆಗೆದುಕೊಳ್ಳುತ್ತ ನಂಬಿಬಂದವರನ್ನು ಕಾಪಾಡುತ್ತಿದ್ದರು. ಬೃಹಸ್ಪತಿಯ ಚಿತಾವಣೆಯಿಂದ ಗಂಧರ್ವ ಕಿನ್ನರ ಕಿಂಪುರುಷ ದೇವತೆಗಳು ಶುಕ್ರಾಚಾರ್ಯರ ವಿರುದ್ಧ ಅಸಹಕಾರ ತೋರಿಸಿದರೂ ಢೃತಿಗೆಡದೆ ಮುನ್ನುಗ್ಗುತ್ತಾ ದಾನವ-ರಕ್ಷಕ ಬಿರುದನ್ನು ಮಾನವ-ಗುರುಶ್ರೇಷ್ಠ ಪಟ್ಟವನ್ನು ಗಳಿಸಿದ್ದರು. ಪ್ರತಿಫಲಾಪೇಕ್ಷೆ ಇಲ್ಲದೆ ನೆರವಾಗುತ್ತ ಪರೋಪಕಾರಿ ನಡವಳಿಕೆಯಿಂದ ಪ್ರಖ್ಯಾತರಾದರು. ಸ್ಫುರದ್ರೂಪಿ ಶುಕ್ರಾಚಾರ್ಯರು ಒಕ್ಕಣ್ಣು ಶುಕ್ರಾಚಾರಿಆದ ದುರಂತಕಥೆ:ಮಹಾವಿಷ್ಣುವು ವಾಮನಅವತಾರದಲ್ಲಿ ಬಲಿಚಕ್ರವರ್ತಿಯಿಂದ ದಾನಪಡೆಯೊವೇಳೆ ಶುಕ್ರಾಚಾರ್ಯರು ಕೀಟವಾಗಿ ಕಮಂಡಲದ ಜಲತಡೆದಾಗ ವಾಮನು ಕಮಂಡಲಬಾಯಿಗೆ ದರ್ಭೆತುರುಕಿ ಶುಕ್ರಾಚಾರ್ಯರ ಕಣ್ಣಿಗೆ ಚುಚ್ಚಿದಾಗ ಕಣ್ಣು ಕಳೆದುಕೊಂಡರು! ತುಂಬುರು-ನಾರದರ ನಡುವೆ ಸಂಗೀತಸ್ಪರ್ಧೆ ಜರುಗಿ ನಾರದರು ಸೋತಾಗ ಬೃಹಸ್ಪತಿಯಿಂದ ’ಸಂಗೀತ ಸಂವೇದ’ ಕೃತಿ ರಚಿಸಲ್ಪಡುತ್ತದೆ. ಆಗಲೇ ಶುಕ್ರಾಚಾರ್ಯರು ’ಸಂಗೀತ ಸಂಮೋಹಿನಿ’ಎಂಬ ಕೃತಿಯನ್ನು ರಚಿಸಿ ರಾಗ-ತಾಳ-ಪಲ್ಲವಿಗಳನ್ನು ಮೂರುಲೋಕ ಅಚ್ಚರಿಪಡುವಂತೆ ವರ್ಣಿಸಿದ್ದರು. ಅತ್ತ ಬೃಹಸ್ಪತಿಯು ಬ್ರಹ್ಮಸಂಹಿತೆ, ವಿಷ್ಣುಸಂಹಿತೆ, ಶಿವಸಂಹಿತೆ ಗ್ರಂಥಗಳನ್ನು ರಚಿಸಿ ಖ್ಯಾತರಾದರೆ, ಇತ್ತ ಶುಕ್ರಾಚಾರ್ಯರು ಪ್ರಭುಸಂಹಿತೆ, ಮಿತ್ರಸಂಹಿತೆ, ಕಾಂತಸಂಹಿತೆ, ಗ್ರಂಥಗಳನ್ನು ರಚಿಸಿ ಪ್ರಖ್ಯಾತರಾದರು!
ಅಕ್ಕ(ಅರ್ಕ)ಸಾಲಿಗ ಆಚಾರಿ ವಾಜ ಚಿನಿವಾರ ವಿಶ್ವಕರ್ಮ ಕಮ್ಮಾರ ಕಂಬಾರ ಇತ್ಯಾದಿಯಾಗಿ ಗುರುತಿಸಲ್ಪಡುವ ವಿಶ್ವಕರ್ಮ ಜನಾಂಗವು ಬ್ರಹ್ಮಾಂಡದ ಮೂಲಸಂತತಿ! ನಿಕೃಷ್ಠವಲ್ಲದ ಇವುಗಳ ಗೂಢಾರ್ಥ ತಿಳಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ:-
[೧]ಅಕ್ಕಸಾಲಿಗ:-ಮದುವೆಯಾಗಿ ಹೋದ ಅಕ್ಕನು ತನ್ನ ಗಂಡ ಮನೆ ಮಕ್ಕಳ ಹಾಗೂ ಅತ್ತೆಮನೆಯ ಹಿತಕ್ಕಾಗಿ ನೆರೆಹೊರೆಯಿಂದ ಸಾಲ ಮಾಡಿರುತ್ತಾಳೆ? ಇದನ್ನು ತಿಳಿದ ಈಕೆಯ ಸೋದರ ತನ್ನ ದುಡಿಮೆಯಿಂದ ಅಕ್ಕನ ಸಾಲ ತೀರಿಸಲು ಪಣತೊಡುವನು. ತನ್ನಕ್ಕನ ಕಣ್ಣೀರು ಒರೆಸಲು ಎಂಥ ತ್ಯಾಗಕ್ಕು ಸಿದ್ಧನಾಗಿ ಅಕ್ಕಬಾವನ ಸುಖ ಶಾಂತಿ ನೆಮ್ಮದಿಗಾಗಿ ಸದಾ ನಿಸ್ವಾರ್ಥ ಸೇವೆ ಮಾಡುತ್ತಿರುವವನೆ ಅಕ್ಕನ ಸಾಲಿಗ?
[೨]ಅರ್ಕಸಾಲಿ:-ಅರ್ಕ ಎಂದರೆ ಜಗತ್ತಿಗೆ ಬೆಳಕು ನೀಡುವ ಸೂರ್ಯ. ಪ್ರತಿದಿನ ಬೆಳಗ್ಗೆ ಎಲ್ಲರು ನಿದ್ದೆಯಿಂದೆದ್ದು ಕಾರ್ಯೋನ್ಮುಖರಾಗಲು ಅರ್ಕೇಶ ಎಚ್ಚರಿಸುವನು. ಕೋಟ್ಯಾಂತರ ಜೀವಿಗಳನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಜ್ಯೋತಿರ್ದೇವನಾದ ಈತ ಅಚಲ ಆಗುವುದು ಅಸಾಧ್ಯ, ಒಂದುವೇಳೆ ಚಲಿಸದೇ ನಿಂತರೆ ಜಗತ್ತು ಜೀವಸಂಕುಲ ಸರ್ವನಾಶ. ಅದೇರೀತಿ ವಿಶ್ವಕರ್ಮ ತನ್ನ ಕೆಲಸ ಕಾರ್ಯ ಮಾಡದೆ ಸ್ಥಿರವಾದರೆ ಎಲ್ಲ[ರೂ]ವೂ ಮುಕ್ತಾಯ! ಆದ್ದರಿಂದ ಪ್ರಪಂಚದ ಜನರು ಅರ್ಕನ ಸಾಲಿಗರು ಅಥವ ಋಣಿಗಳು ಎಂಬುದೆ ಇದರ ಗೂಢಾರ್ಥ, ಜಿಜ್ಞಾಸೆಏಕೆ?!
[೩]ಆಚಾರಿ:-ಆಚಾರ್ಯ ಪದದ ತದ್ಭವ ಆಚಾರಿ ಗುರು ಜ್ಞಾನಿ ವಿದ್ವಾಂಸ ವಿದ್ಯಾ-ಬುದ್ಧಿವಂತ ಕುಲೀನ ಪ್ರಾಚಾರ್ಯ ವಿದ್ವನ್ಮಣಿ ಮುಂತಾದ ಅರ್ಥನೀಡುವ ಅ-ಸಾಮಾನ್ಯನೇ ಆಚಾರಿ! ಮಾತೃದೇವೋಭವ ಪಿತೃದೇವೋಭವ ನಂತರದ ಸ್ಥಾನವೆ ಆಚಾರ್ಯದೇವೋಭವ! ಕೃಪಾ-ದ್ರೋಣಾ-ಶಂಕರ-ರಾಮಾನುಜ-ಮಧ್ವಾಚಾರ್ಯ ಮುಂತಾದವರು ಇವರ ಪಂಕ್ತಿಗೆ ಸೇರುತ್ತಾರೆ. ಇತಿಹಾಸ ಸಂಶೋಧಕರು ಬಹಿರಂಗ ಪಡಿಸುವಂತೆ ಕಾಳಿಕಾದೇವಿಯ ವರಪುತ್ರನು ಮೂಲತಃ ಕಾಳಿದಾಸಾಚಾರ್ಯ! ಕಲಿಯುಗದಲ್ಲಿ ಪ್ರಸ್ತುತ ವಿಶ್ವಕರ್ಮ ಜನಾಂಗವು ಅಲ್ಪ ಸಂಖ್ಯಾತರೆಂಬ ಕಾರಣಕ್ಕೆ ಪುರಾಣೇತಿಹಾಸವನ್ನೆ ತಿರುಚಿರಬಾರದೇಕೆ? ’ಬೆಂದಕಾಳೂರು’ ಬೆಂಗಳೂರು ಎಂಬುದಾಗಿ ಬದಲಾವಣೆ ಆದಂತೆ ಆಚಾರ್ಯ ಪದದ ವಿಕಸನವೆ ಆಚಾರಿ ಆಗಿರಬಹುದು, ಸಂದೇಹವೇಕೆ?!
[೪]ವಿಶ್ವಕರ್ಮಿ:-ಶತಮಾನಗಳಿಂದ ಯಾರೊಡನೆಯೂ ’ರಾಜಿ’ ಆಗದೆ ಜೀವಿಸುವ ಸಮುದಾಯ. ಉಷಾಕಾಲದಲ್ಲೆದ್ದು ಸಂಧ್ಯಾವಂದನೆ ಮುಗಿಸಿ ದೈನಂದಿನ ಕಾಯಕ ಪ್ರಾರಂಭಿಸುವನು. ಭೂಮಿತಾಯಿ ಚೊಚ್ಚಲಮಗ ರೈತನಂತೆ ಮಾನವ ಶ್ರೇಷ್ಠನಾಗಿ ಕಾಯಕವೆ ಕೈಲಾಸ ಸಿದ್ಧಾಂತ ಅಳವಡಿಸಿ ವೃತ್ತಿಗನುಗುಣವಾದ ಪಂಚಮಸಾಲಿ ಉಪಜಾತಿ ಇದ್ದರೂ ತನ್ನ ಕರ್ಮಗಳನ್ನು ತಾನೇ ಮಾಡಿಕೊಳ್ಳುವ ಶ್ರಮಜೀವಿ. ವಿಶ್ವಸಮಾಜದಲ್ಲಿ ತಮಗೆದುರಾಗುವ ವಿವಿಧ ಜಾತಿಮತಧರ್ಮದ ಪ್ರತಿಯೊಬ್ಬರ ಮರ್ಮತಿಳಿದು ಯಾರನ್ನು ನೋಯಿಸದಂತೆ ಎಲ್ಲರೊಡನೆ ಸಹಕರಿಸುವ ಸಮರ್ಥರು, ನವರಸಕಲೆಗಳಿಗೆ ಜೀವತುಂಬುವ ನಿಷ್ಠಾವಂತರು.
[೫]ಮಹಾಶಿಲ್ಪಿ:-’ಕಲ್ಲಿನಲಿಕೆತ್ತಿದನು ಶಿಲ್ಪಿಯವಶಿವನಾ, ದೇಗುಲದಿಕೂಡಿದನು ವೈದಿಕನುಅವನಾ’ ಸಾಲುಗಳ ಗೂಢಾರ್ಥ: ದೇವರ ವಿಗ್ರಹ ಕೆತ್ತಿ ಅಣಿ ಮಾಡುವವ ವಿಶ್ವಕರ್ಮಿ. ಆದರೆ ಪ್ರತಿಫಲ ಅನುಭವಿಸುವವ ಮಾತ್ರ ಅರ್ಚಕ ವಿಶ್ವಕರ್ಮದವರೂ ಯಜುರ್ ಉಪಾಕರ್ಮದಂದು ಯಜ್ಞೋಪವೀತ ಬದಲಾಯಿಸಿಕೊಳ್ಳುತ್ತಾರೆ. ವಿಶ್ವಕರ್ಮಿ ಜನಿವಾರದ ೯ದಾರನಾಮಗಳು: ಶ್ರವಣಂ ಕೀರ್ತನಂ ಸ್ಮರಣಂ ಪಾದಸೇವನಂ ಅರ್ಚನಂ ವಂದನಂ ದಾಸ್ಯಂ ಸಖ್ಯಂ ಹಾಗೂ ಆತ್ಮನಿವೇದನಂ. ಇವು ೯ಕ್ರಿಯಾ ವಾಡಿಕೆಗಳ ಚಿಹ್ನೆಯಾಗಿ ನವದ್ವಾರ ಶುದ್ಧೀಕರಿಸುವ ಮತ್ತು ನವರಸ ಪ್ರತಿಬಿಂಬಿಸುವ ಹಾಗೂ ನವದ್ವೀಪಗಳನ್ನು ಪ್ರತಿನಿಧಿಸುವ ಸಂಕೇತಾರ್ಹ ಅರ್ಥಗಳು.
೬೪ವಿದ್ಯೆಗೆ ಸಮಾನ ಸ್ಫೂರ್ತಿ ತುಂಬುವ, ಅಡಿಪಾಯವಿಲ್ಲದೆ ಗರುಡಗಂಬ ನಿಲ್ಲಿಸುವ, ಗಾಳಿಯಲ್ಲಿ ಗೋಪುರ ಕಟ್ಟುವ ವಿಮಾನ-ಹೆಲಿಕಾಪ್ಟರ್ ಹಾರಿಸುವ ನಿಪುಣ. ನೇರದೃಷ್ಟಿ ದಿವ್ಯದೃಷ್ಟಿ ವಕ್ರದೃಷ್ಟಿಯಿಂದ ಕಣ್ಣಿಗೆಕಂಡದ್ದನ್ನು ಯಥಾವತ್ ಸೃಷ್ಟಿಸುವ ತ[ಯ]ಂತ್ರಜ್ಞ. ಪಂಚಭೂತಗಳನ್ನು ತನ್ನೊಳಗೆ ಕ್ರೋಢೀಕರಿಸಿ ಪಂಚೇಂದ್ರಿಯವಿದ್ಯೆ ಕರತಲಾಮಲಕ ಮಾಡಿಕೊಂಡ ಮಾಂತ್ರಿಕ. ಇದಾಗದು ಎನ್ನದ ನಿಸ್ಸೀಮ. ಅರಿಷಟ್‌ವರ್ಗವನ್ನು ನಿಗ್ರಹಿಸಿ ಏಕಾಗ್ರತೆ ಕಲಿಸುವ ದೌರ್ಬಲ್ಯನಿಯಂತ್ರಣಾಧಿಕಾರಿ. ಎಂಥದ್ದನ್ನೂ ಸಾಧ್ಯವಾಗಿಸಿ ಬದುಕಿನಕಲೆ ಜೋಡಿಸುವ ಪ್ರಯೋಗಶಾಲೆ ಪರಿಣಿತ. ಸಮಾಜಕಾರ್ಯಾಗಾರದ ಕಾರ್ಯಪಾಲಕಅಭಿಯಂತರ.ಅವಿದ್ಯಾವಂತ, ಅನಾಗರಿಕ, ಅಮಾಯಕ, ಮುಗ್ಧ, ಮಂದಮತಿ, ಯಾರೇ ಇರಲಿ, ಕನಿಷ್ಠ ಜಾಣತನ, ಕ್ರಮಬದ್ಧ ಜೀವನ, ಕಲಿಸಿಕೊಡುವ ಚತುರ! ಧನ, ಧಾನ್ಯ, ಜಲ, ಅಗ್ನಿ ಹಾಗೂ ವೀರ್ಯ ಎಂಬ ಪಂಚ-ಆರ್ಥಿಕ ವೆಚ್ಚಗಳನ್ನು ಜವಾಬ್ಧಾರಿ-ಜಾಗರೂಕತೆಯಿಂದ ಬಳಸುವ ತಿಳುವಳಿಕೆ ನೀಡಿದ ಮಾರ್ಗದರ್ಶಿ.
ಕುಟುಂಬ ಬಂಧುಬಳಗ ಸತ್ಕರಿಸುವ ಹೊಣೆಗಾರಿಕೆ, ಕಾರ್ಯ ಕಟ್ಟಳೆ ಜರುಗಿಸುವ ಪಾಠ ಹೇಳಿದ ಆಚಾರ್ಯ. ಆಯವ್ಯಯ ಮಂಡಿಸುವರಿಗೆ ಗಳಿಕೆ ಉಳಿಕೆ ಕೂಡಿಕೆ ಹೂಡಿಕೆ ಲೆಕ್ಕಾಚಾರ ಕಲಿಸಿದ ಆಡಿಟರ್. ಗದ್ಯಪದ್ಯ ಟೀಕೆಟಿಪ್ಪಣಿ ಸಾಹಿತ್ಯದ ಲೇಖಕ, ಮುದ್ರಕ, ಪ್ರಕಾಶಕ ಆದಿಯಾಗಿ ಶಾಸಕಾಂಗ, ಆಡಳಿತಾಂಗ, ನ್ಯಾಯಾಂಗ, ವ್ಯಾಪಾರ, ವ್ಯವಹಾರಕ್ಕೆ ಅಗತ್ಯವಿರುವ ಲೇಖನಿ ಶಾಯಿ ತಾಳೆಗರಿ ಹಾಳೆ ಪುಸ್ತಕ, ಕಟ್ಟಡ ಕಚೇರಿ ಪೀಠೋಪಕರಣ ರೂಪಿಸಿಕೊಟ್ಟ ರೂವಾರಿ. ತಾನೂಬದುಕಿ ಇತರರನ್ನೂಬದುಕಲು ಬಿಡುವ ಮಾದರಿಮನುಷ್ಯ! ವಿಶ್ವಕರ್ಮಿಯನ್ನು ತ್ರೇತಾ-ದ್ವಾಪರಯುಗಗಳಲ್ಲಿ ಶಿಲ್ಪಿ ಕಲಾವಿದ ನಿರ್ಮಾತೃ ದಿಗ್ಧರ್ಶಕ ತಾಂತ್ರಿಕ ಚಾಣಾಕ್ಷ ಚತುರಮತಿ ಕುಶಾಗ್ರಮತಿ ಸಕಲಕಲಾವಲ್ಲಭ ಮುಂತಾದ ಹೆಸರಿನಿಂದ ಕರೆಯಲ್ಪಡುತ್ತಿದ್ದರು. ಕಲಿಯುಗದಲ್ಲಿ:-Architecture ArtDirector Carpenter Craftsman Draftsman Designer Engineer Decorator Goldsmith Blacksmith Manufacturer Industrialist Foreman Art-Director ಮುಂತಾದ ಪದನಾಮದಿಂದ ಗುರುತಿಸುತ್ತಾರೆ! ಈಎಲ್ಲ್ಲ ಕಲ್ಯಾಣಗುಣಗಳು ಶುಕ್ರಾಚಾರ್ಯರಲ್ಲಿತ್ತು! ಇವರಿಂದ ಬಳುವಳಿಯಾಗಿ ಬಂದು ಪ್ರತಿಯೊಬ್ಬ ವಿಶ್ವಕರ್ಮ ಪ್ರಜೆಯಲ್ಲಿ ರಕ್ತಗತವಾಗಿದೆ. ಯಾವುದೆ ಕಲೆಯಿರಲಿ ಶೀಘ್ರಾವಧಿಯಲ್ಲಿ ಅಚ್ಚುಕಟ್ಟಾಗಿ ನಿರ್ಮಿಸುವ ಪ್ರದರ್ಶಿಸುವ ಅರ್ಹತೆ ಪ್ರತಿಭೆ ವಿಶ್ವಕರ್ಮ ಜನಾಂಗಕ್ಕಿದೆ. ಹೆಣ್ಣು-ಹೊನ್ನು-ಮಣ್ಣು ಸದುಪಯೋಗದ ಬಗ್ಗೆ ಜಾಗೃತಿ ಮೂಡಿಸಿ, ದುರುಪಯೋಗದ ಬಗ್ಗೆ ಮನನ ಮಾಡಿಸಿದ ಮಾರ್ಗದರ್ಶಕ. ಗೃಹಿಣಿಗೆ ರೂಪೇಶುಲಕ್ಷಿ ಕಾರ್ಯೇಶುದಾಸಿ ಕರುಣೇಶುಮಂತ್ರಿ ಕ್ಷಮಯಾಧರಿತ್ರಿ ಭೋಜ್ಯೇಶುಮಾತಾ ಶಯನೇಶುರಂಭಾ ಎಂಬ ೬ಗುಣ ಇರಬೇಕು ಎಂದ ಗೃಹಸ್ತ. ಶಕ್ತಿಯುಕ್ತಿ, ಧೈರ್ಯಸ್ಥೈರ್ಯ, ಅಧಿಕಾರಅಂತಸ್ತು ಸದ್ವಿನಿಯೋಗ-ದುರ್ವಿನಿಯೋಗ ಬಗ್ಗೆ ಅರಿವು ಮೂಡಿಸಿದ ವಿದ್ವಾಂಸ. ಸ್ನೇಹಸಂಬಂಧ ಬಂಧುತ್ವಬಾವಣಿಕೆ ಗುಣಾವಗುಣದ ಬಗ್ಗೆ ಸಾಮಾನ್ಯಜ್ಞಾನ ಧಾರೆಎರೆದ ಸುಜ್ಞಾನಿ. ಬಂಗಾರ ಬೆಳ್ಳಿ ತಾಮ್ರ ಹಿತ್ತಾಳೆ ಕಬ್ಬಿಣ ಕಲ್ಲು ಮಣ್ಣು ವೃಕ್ಷ ಗಾಜು ಇನ್ನಿತರ ಲೋಹ; ಮರ ಎಲೆ ಗರಿ ಮುಂತಾದ ಕಲೆಯ ಬಲೆ ಎಣೆವ ಕರಕುಶಲಗಾರ ಇವುಗಳ ಬೆಲೆಕಟ್ಟುವ ಮೌಲ್ಯಗಾರ. ಮೆದುಳಲ್ಲಿ ವಿನ್ಯಾಸಶಾರದೆ ಇರಿಸಿ, ಬೆರಳಲ್ಲಿ ನಾಟ್ಯಮುದ್ರೆ ಅಡಗಿಸಿ ಕೈ-ಕಾಲುಗಳಲ್ಲಿ ಚಾಕಚಕ್ಯತೆ ಬಳಸಿ, ಎಂಥದ್ದೆ (ಪ್ರ)ದರ್ಶನಗಳನ್ನು ನಿರಾಯಾಸವಾಗಿ ನೀಡುವ ಗಾರುಡಿಗ. ನಂಬಿಕೆ ನಾವಿಕರನ್ನು ದಡ ಮುಟ್ಟಿಸುವ ಅಂಬಿಗ. ಜೀವರಾಶಿಗೆ ಬೇಕಾದ ಪಂಜರ-ಗೂಡು ತಯಾರಿಸುವ, ಬೇಡವಾದ ಪಂಜರದಿಂದ ಬಂಧನ ಬಿಡುಗಡೆ ಗೊಳಿಸುವ, ಬೆಸುಗೆದಾರ! ಕಲೆ ನಾಟ್ಯ ನಟನೆ ಸಾಹಿತ್ಯ ಸಂಗೀತ ಸಂಸ್ಕೃತಿ ನಾಗರಿಕತೆ ಜ್ಞಾನ ವಿಜ್ಞಾನಗಳನ್ನು ಧಾರೆ ಎರೆಯುವ ಅಜಾತಶತ್ರು. ತನು-ಮನ-ಧನಗಳನ್ನು, ತ್ರಿಕರಣಶುದ್ಧಿಯಿಂದ, ಸಮರ್ಥ ರೀತಿಯಲ್ಲಿ ನಿಭಾಯಿಸುವ ನಿಸ್ವಾರ್ಥಿ!
ಅಸ್ತ್ರ-ವಸ್ತ್ರ, ಶಸ್ತ್ರ್ತ-ಶಸ್ತ್ರಾಸ್ತ್ರ ಹೊಸಿಲು-ನೇಗಿಲು, ಗಾಡಿ-ಸಾರೋಟು, ರಥ-ಪಥ,ಗುಡಿ-ಗೋಪುರ, ಗರಡಿ-ಮಹಡಿ, ಮನೆ-ಅರಮನೆ, ಧರ್ಮಛತ್ರ-ಪಡಸಾಲೆ, ಸಂತೆ-ಜಾತ್ರೆ, ಗುರುಕುಲ ಶಿಷ್ಯಾಶ್ರಮ,ಬಾಲಾಶ್ರಮ-ವೃದ್ಧಾಶ್ರಮ, ಕೊಳ-ಈಜುಕೊಳ, ಕೆರೆ-ಕಟ್ಟೆ, ಸೇತುವೆ-ಆಣೆಕಟ್ಟೆ, ಆಟಿಕೆ-ಮಕ್ಕಳಾಟಿಕೆ ಬಗೆಬಗೆಯ ೩ಕೋಟಿ ಸಲಕರಣೆಗಳನ್ನು ವಿವಿಧ ವಿನ್ಯಾಸಗಳಲ್ಲಿ ತಯಾರಿಸೊ ನಿರ್ಮಾಪಕ. ವಯೋಧರ್ಮಕ್ಕೆ ಅನುಗುಣವಾಗಿ ಅವರವರ ಸಂಸಾರವನ್ನು ಗೌರವ-ಘನತೆಯಿಂದ ಸಾಗಿಸಲು ಸಮಯಕ್ಕೆ ಸರಿಯಾಗಿ ಶಿಸ್ತುಬದ್ಧವಾಗಿ ಕಾಣಿಸಿಕೊಳ್ಳುವ ಸೇವಕ. ಕಸದಿಂದ ರಸತೆಗೆವ ಸಕಲ ಕಲಾವಲ್ಲಭ. ಅನ್ನದಾತನಿಂದ ದೇಶರಕ್ಷಕನವರೆಗೆ ಅವಶ್ಯವಾದ ಪ್ರತಿಯೊಂದು ಸಾಮಾನು ಸರಂಜಾಮು ದೃಢವಾಗಿ ಬಲವಾಗಿ ಹಾಗೂ ಸಮಯೋಚಿತವಾಗಿ ತಯಾರಿಸುವ ಬಂಗಾರದಮನುಷ್ಯ. ದೇಶದಾದ್ಯಂತ ವಿಶೇಷವಾಗಿ ಕರ್ನಾಟಕದ ಬೇಲೂರು, ಹಳೇಬೀಡು, ಸೋಮನಾಥಪುರ, ದೇವಾಲಯಗಳು. ಶ್ರವಣಬೆಳಗೊಳ, ಧರ್ಮಸ್ಥಳ, ಮತ್ತಿತರೆಡೆ ಇರುವ ಬಾಹುಬಲಿ-ಗೊಮ್ಮಟೇಶ್ವರ ಏಕಶಿಲಾ ಮೂರ್ತಿಗಳು. ಮೈಸೂರಿನ ಶಿಲ್ಪಿ ಸಿದ್ಧಲಿಂಗಸ್ವಾಮಿಮಠದ ಕೋಟಿಲಿಂಗ, ಅರಮನೆ-ಗುರುಮನೆಯ ವಿಘ್ನೇಶ್ವರ, ಶಿವ, ಕೃಷ್ಣ, ದತ್ತಾತ್ರೇಯ, ಕಾಳಿ, ಚೌಡೇಶ್ವರಿ, ಚಂಡಿ, ಚಾಮುಂಡಿ, ಮಾರಿ, ಗಾಯತ್ರಿ, ಭುವನೇಶ್ವರಿ, ಮತ್ತಿತರ ದೇವ-ದೇವಿಯರ ಲಕ್ಷಾಂತರ ದೇವಾಲಯಗಳು ಇಂದಿಗೂ ಸಾಕ್ಷೀಭೂತ!
ವಿಶ್ವಕರ್ಮದಿಗ್ಗಜರು:-ಅಮರಶಿಲ್ಪಿಜಕಣಾಚಾರಿ ನಾಟ್ಯವಿದ್ವಾನ್ಮಹದೇವಾಚಾರಿ ಕೀರ್ತನಬ್ರಹ್ಮವಾಸುದೇವಾಚಾರಿ ಸಂಗೀತವಿದ್ವಾನ್ ಗರುಡಾಚಾರಿ ಚಿತ್ರರಂಗದಬಿ.ವಿಠಲಾಚಾರಿ ಹೊನ್ನಪ್ಪಭಾಗವತರ್ ನಾಟಕಟೈಗರ್ವರದಾಚಾರ್ ರಾಜಕಾರಣಿಸಿ.ರಾಜಾಜಿ ಅರಮನೆಮೇಸ್ತ್ರಿ ಯಾಲಕ್ಕಪ್ಪಾಚಾರಿ, ಉದ್ಯಮಿಟಿ.ಟಿ.ಕೃಷ್ಣಮಾಚಾರಿ, ಜ್ಞಾನಪೀಠಪುರಸ್ಕೃತಚಂದ್ರಶೇಖರಕಂಬಾರ, ಮೈ.ವಿ.ವಿ.ಡೀನ್ ಉ.ಕ.ಸುಬ್ರಾಯಾಚಾರ್, ಸ್ವಾತಂತ್ರ್ಯಯೋಧರಾಮಚಂದ್ರಅರ್ಕಾಚಾರಿ ೧೯೧೯ರತಹಶೀಲ್ಧಾರ್ಟಿ.ಎಸ್.ಚನ್ನಪ್ಪಾಚಾರ್, ಅಶೋಕ್-ಲೇಲ್ಯಾಂಡ್ಆರ್ಮುಗಂಆಚಾರಿ, ಮೈಸೂರುಸಂಪ್ರಾದಾಯಚಿತ್ರಕಲಾವಿದಕುಪ್ಪಾಚಾರಿ, ಜ್ಯೋತಿಹೋಂಇಂಡಸ್ಟ್ರೀಸ್ ಬಿ.ಗೋಪಾಲಕೃಷ್ಣಆಚಾರ್ಯ, ಉದ್ಯಮಿಕೆ.ಪಿ.ನಂಜುಂಡಿ, ಮಾಜಿರಾಷ್ಟ್ರಪತಿಜೈಲ್ಸಿಂಗ್, ಹಾಲಿವುಡ್ಸಂಗೀತನಿರ್ದೇಶಕ ಜೆರ್ರಿಗೋಲ್ಡ್ಸ್ಮಿತ್ ಮುಂತಾದ ಸಾವಿರಾರು ವಿಖ್ಯಾತ ವಿಶ್ವಕರ್ಮ ಜನಾಂಗದ ಜ್ವಲಂತ ನಿದರ್ಶನ. ವಿಶ್ವಕರ್ಮ ಮಠ-ಪೀಠಾಧಿಪತಿಗಳು:- ಅರೆಮಾದನಹಳ್ಳಿ ಜಗದ್ಗುರುಶ್ರೀಶಿವಸುಜ್ಞಾನಮೂರ್ತಿಸ್ವಾಮಿಜಿ, ಯಾದ್ಗೀರ್ನ ಶ್ರೀಮನ್ಮೂಲೆಮಠ, ಶ್ರೀಶ್ರೀಮೌನೇಶ್ವರಸ್ವಾಮಿ ದೇವಾಲಯಮಠ ಹಾಗೂ ಮೈಸೂರು ಬೆಂಗಳೂರು ಸೇರಿದಂತೆ ರಾಜ್ಯ ದೇಶ ವಿದೇಶದ ಸಾವಿರಾರು ಸ್ಥಳದಲ್ಲಿರುವ ಶ್ರೀಕಾಳಿಕಾಂಬಾ ದೇವಾಲಯ ಮಠ ಪೀಠಗಳು ವಿಶ್ವಕರ್ಮ ಜನಾಂಗದ ವೈಭವ ಸಾರುತ್ತವೆ : ಜೈ ವಿಶ್ವಕರ್ಮ
