ಮೈಸೂರು, ಭಾರತ, ಅಕ್ಟೋಬರ್ 8, 2023: ವಿನ್ಯಾಸ, ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸೇವೆಗಳನ್ನು ಜಾಗತಿಕ OEM ಮತ್ತು ODM ಗಳಿಗೆ ಒದಗಿಸುವ ಮೈಸೂರಿನ ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಈಗ “Limited” entity ಆಗಿ ಗುರುತಿಸಲ್ಪಟ್ಟಿದೆ.
2023 ರ ಅಕ್ಟೋಬರ್ 6 ರಂದು ನ್ಯಾಶನಲ್ ಸ್ಟಾಕ್ ಎಕ್ಸ್ಚೇಂಜ್ (NSE) ನಲ್ಲಿ Vinyas ಪಟ್ಟಿಮಾಡಲ್ಪಟ್ಟಿದ್ದು, ಈ ಮೂಲಕ ಕಂಪನಿಯ 21 ವರ್ಷಗಳ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಈ ಘೋಷಣೆಯ ಮುಂದುವರಿಕೆಯಲ್ಲಿ, ವಿನ್ಯಾಸ್ NSE ಯಲ್ಲಿ ಆರಂಭಿಕ ಗಂಟೆ ಬಾರಿಸುವ ಮೂಲಕ ಸಂಸ್ಥೆಯ ಬೆಳವಣಿಗೆಯ ಹಾದಿಯಲ್ಲಿ ಯಶಸ್ವಿಯಾಗಿ ಹೊಸ ಅಧ್ಯಾಯಕ್ಕೆ ಹೆಜ್ಜೆ ಹಾಕಿರುತ್ತಾರೆ. ಮುಂಬೈನಲ್ಲಿ ನಡೆದ ಸಾಂಪ್ರದಾಯಿಕ ಬೆಲ್ ರಿಂಗಿಂಗ್ ಸಮಾರಂಭದ ಅಧ್ಯಕ್ಷತೆಯನ್ನು ವಿನ್ಯಾಸ್ ಸಂಸ್ಥೆಯ ನಿರ್ವಾಹಕರು, NSE ಅಧಿಕಾರಿಗಳು ಮತ್ತು ಮರ್ಚೆಂಟ್ ಬ್ಯಾಂಕರ್ ಸಾರಥಿ ಕ್ಯಾಪಿಟಲ್‌ನ ಪ್ರತಿನಿಧಿಗಳು ವಹಿಸಿದ್ದರು.
ಕಾರ್ಯಕ್ರಮವನ್ನು ಕುರಿತು ಪ್ರತಿಕ್ರಿಯಿಸಿದ ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾದ ನರೇಂದ್ರ ನಾರಾಯಣನ್, ಅವರು ಮಾತನಾಡಿ “ನಾವು ತಂಡವಾಗಿ ಸಾಧಿಸಿದ್ದಕ್ಕಾಗಿ ನಾವು ಹೆಮ್ಮೆಪಡುತ್ತೇವೆ ಮತ್ತು ಈ ಯಶಸ್ಸಿನ ಜೊತೆಗೆ ನಮ್ಮ ಹೆಗಲ ಮೇಲೆ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಿದ್ದೇವೆ. 21 ವರ್ಷಗಳ ಕಾಲ ನಮ್ಮ ವ್ಯವಹಾರ ಮೌಲ್ಯಗಳು ಮತ್ತು ನೈತಿಕತೆಯ ತಳಹದಿಯ ಮೇಲೆ ಕೆಲಸ ಮಾಡುತ್ತಾ, ನಾವು ನಮ್ಮ ಬೆಳವಣಿಗೆಯ ಹಾದಿಯ ಮುಂದಿನ ಹಂತವನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇವೆ ಮತ್ತು ನಾವು ಮಾಡುವ ಕೆಲಸದಲ್ಲಿ ಹೆಚ್ಚಿನ ಸಮರ್ಪಣೆ, ಮತ್ತು ಉತ್ಸಾಹದಿಂದ ಇನ್ನಷ್ಟು ಎತ್ತರವನ್ನು ಏರಲು ಸಿದ್ಧರಾಗಿದ್ದೇವೆ. ನಮ್ಮ ಕಠಿಣ ಪರಿಶ್ರಮದ ಜೊತೆಗೆ ನಮ್ಮ ತಂಡದ, ಗ್ರಾಹಕರ, ಪೂರೈಕೆದಾರ ನಿರಂತರ ಬೆಂಬಲಕ್ಕಾಗಿ ಹಾಗೂ ನಮ್ಮ ಬೆಳವಣಿಗೆಯ ಪ್ರಯಾಣದಲ್ಲಿ ಈ ಮೈಲಿಗಲ್ಲನ್ನು ಸಾದಿಸಲು ನಮಗೆ ಸಹಾಯ ಮಾಡಿದ ಎಲ್ಲಾ ಪಾಲುದಾರರಿಗೆ ಧನ್ಯವಾದಗಳನ್ನು ತಿಳಿಸುತ್ತೆನೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ NSEಯ ಪ್ರಾಥಮಿಕ ಮಾರುಕಟ್ಟೆಯ ಅಸೋಸಿಯೇಟ್ ಉಪಾಧ್ಯಕ್ಷರಾದ ಶ್ರೀ ಜಯೇಶ್ ತೌರಿ ಅವರು ಮೈಸೂರು ನಗರದ SME ಗಳ ಅಡಿಯಲ್ಲಿ ಪಟ್ಟಿ ಮಾಡಿದ ವಿನ್ಯಾಸ್ ಸಂಸ್ಥೆಯು ಮೊದಲ ಕಂಪನಿಯಾಗಿದೆ ಎಂದು ಹೇಳಿದರು ಮತ್ತು ವಿನ್ಯಾಸ್ ನ ಈ ಸಾಧನೆಗೆ ಅಭಿನಂದನೆ ಸಲ್ಲಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸರಣಿ ಹೂಡಿಕೆದಾರ ಶ್ರೀ ಅನಿರುದ್ಧ್ ಮೊಹ್ತಾ ಅವರು, “ಶ್ರೀ. ನರೇಂದ್ರ ನಾರಾಯಣನ್ ಅವರನ್ನು EMS ಪಿತಾಮಹ ಎಂದು ಕರೆಯುವುದರಲ್ಲಿ ಯಾವುದೇ ಸಂದೇಹವಿಲ್ಲ ಮತ್ತು ಎರಡು ದಶಕಗಳ ಹಿಂದೆ ಮೈಸೂರಿನಲ್ಲಿ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ವ್ಯವಹಾರವನ್ನು ಮುನ್ನಡೆಸುವ ದಾರ್ಶನಿಕರಲ್ಲಿ ಮೊದಲಿಗರಾಗಿರುತ್ತಾರೆ” ಎಂದು ತಿಳಿಸಿದರು. ಸಂಸ್ಥೆಯ ಈ ಸಾಧನೆಯನ್ನು ಅಭಿನಂದಿಸಿ, ಉತ್ತಮ ಭವಿಷ್ಯಕ್ಕಾಗಿ ಹಾರೈಸಿದರು.
ಶ್ರೀ ದೀಪಕ್ ಶರ್ಮಾ, ಸಾರಥಿ ಕ್ಯಾಪಿಟಲ್ ಅಡ್ವೈಸರ್ಸ್ Pvt. Ltd. ರವರು ಮಾತನಾಡಿ “ವಿನ್ಯಾಸ್‌ನೊಂದಿಗೆ ಈ ಪ್ರಯಾಣ ನನಗೆ ಸಂತೋಷವಾಗಿದೆ ಮತ್ತು ಈ ದಿನದ ಯಶಸ್ಸಿಗೆ ಕಾರಣವಾದ ಸಂಸ್ಥೆಯ ಅಚಲವಾದ ಪ್ರಯತ್ನಗಳು, ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕಾಗಿ ಇಡೀ ತಂಡವನ್ನು ಅಭಿನಂದಿಸುತ್ತೇನೆ” ಎಂದು ತಿಳಿಸಿದರು.
ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಬಗ್ಗೆ:
2001 ರಲ್ಲಿ ಪ್ರಾರಂಭವಾದ ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಕಂಪನಿಯು ಎಲೆಕ್ಟ್ರಾನಿಕ್ ಇಂಡಸ್ಟ್ರಿಯಲ್ಲಿ ಜಾಗತಿಕ OEM ಗಳು ಮತ್ತು ODM ಗಳಿಗೆ ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸೇವೆಗಳನ್ನು ಪೂರೈಸುತ್ತಿದೆ. ಸಪ್ಲೈ ಚೈನ್ ಮ್ಯಾನೇಜ್ಮೆಂಟ್, ಪಿಸಿಬಿ ಅಸೆಂಬ್ಲಿ, ಅಡ್ವಾನ್ಸ್ಡ್ ಟೆಸ್ಟಿಂಗ್, ಪ್ರಾಡಕ್ಟ್ ಇಂಟಿಗ್ರೇಷನ್ ಮತ್ತು ಆಫ್ಟರ್ ಮಾರ್ಕೆಟ್ ಸರ್ವಿಸ್ ಗಳನ್ನು ಹಲವಾರು ಕ್ರಿಟಿಕಲ್ ಅಪ್ಲಿಕೇಶನ್ಗಳಿಗೆ ವಿನ್ಯಾಸ್ ತನ್ನ ಉತ್ಪಾದನಾ ಸೇವೆಗಳನ್ನು ಒದಗಿಸುತ್ತಿದೆ. ವ್ಯಾಪಕವಾದ ಉದ್ಯಮ ಜ್ಞಾನ, ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಬೆಂಬಲಿತವಾಗಿರುವ ವಿನ್ಯಾಸ್ ತನ್ನ ಜಾಗತಿಕ ಗ್ರಾಹಕರಿಗೆ ಅವರ ಗಣನೀಯ ವ್ಯಾಪಾರ ಮೌಲ್ಯವನ್ನು ಸುಲಭಗೊಳಿಸಲು ಹೊಂದಿಕೊಳ್ಳುವ ಹಾಗೆ Low/Medium/High Mix and Volume, High Complexity, Build-to-Specification ಪರಿಹಾರಗಳನ್ನು ಯಶಸ್ವಿಯಾಗಿ ಕಳೆದ 21 ವರ್ಷದಿಂದ ನೀಡುತ್ತಾ ಬಂದಿದೆ.
ಹೆಚ್ಚಿನ ಮಾಹಿತಿಗಾಗಿ, www.vinyasit.com ಗೆ ಭೇಟಿ ನೀಡಿ.