ರಾಷ್ಟ್ರ ಪ್ರಶಸ್ತಿ ಪುರಸ್ಕøತ ,ಪ್ರತಿಭಾವಂತ,ಸುಂದರ ಯುವ ನಟ ಶ್ರೀ ಸಂಚಾರಿ ವಿಜಯ್ ರವರಅಕಾಲಿಕ ಮರಣದಿಂದ ನಮಗೆ ಆಘಾತವಾಗಿದ್ದು,ಸಮಾಜಕ್ಕೆ ,ಚಿತ್ರರಂಗಕ್ಕೆ ಅತೀವ ನಷ್ಟವಾಗಿದೆ.ಹೆಚ್ಚು ಸಾಧನೆಯ ಹಂತದಲ್ಲಿದ್ದಾಗಲೇ ಈ ರೀತಿಮೃತಪಟ್ಟಿರುವುದು ನಿಜಕ್ಕೂ ಇದು ದುರದೃಷ್ಟ ಮತ್ತು ದುರಂತವೇ ಸರಿ.ಶಂಕರ್ ನಾಗ್, ಸುನಿಲ್ ರವರ ಅಕಾಲಿಕ ಮರಣಕಂಡಿದ್ದೇವೆ.
ಅವರ ಸಾಲಿಗೆ ಇವರೊಬ್ಬರು ಸೇರ್ಪಡೆಯಾದರು. ಛೇ ಎಂಥಹ ವಿಧಿಯಾಟ.ಮುಂದಿನ ದಿನಗಳಲ್ಲಿ ಈ ದುರಂತಗಳ ಸರಮಾಲೆ ಬಾರದಿರಲಿ ಎಂದು ಪ್ರಾರ್ಥಿಸೋಣ.ಕೊರೊನಾ ಸಮಯದಲ್ಲಿ ಸಂಚಾರಿ ವಿಜಯ್‍ನೊಂದಜೀವಗಳಿಗೆ ಹಗಲಿರುಳು ಸ್ಪಂದಿಸಿದ ರೀತಿ ಅತ್ಯಂತ ಅವಿಸ್ಮರಣೀಯ.ಸರಳ ಸಜ್ಜನಿಕೆ ,ಮಾನವೀಯ ಸೇವೆಯಗಳಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದ ಸಂಚಾರಿವಿಜಯ್, ಇಷ್ಟು ಬೇಗ ಲೋಕ ಸಂಚಾರ ಮುಗಿಸುತ್ತಾರೆಂದು ಯಾರು ಊಹಿಸಿರಲಿಲ್ಲ. ಸರಮಾಲೆಗಳ ಕನಸೊಂದು ,ಭರವಸೆಯೊಂದು ಕಣ್ಮರೆಯಾಗಿದೆ . 62 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ “ನಾನು ಅವನಲ್ಲ ..ಅವಳು “ಚಿತ್ರಕ್ಕೆ ಇವರಿಗೆ “ಅತ್ಯುತ್ತಮ ನಟ ಪ್ರಶಸ್ತಿ” ಯನ್ನು ನೀಡಲಾಗಿದೆ.
ಈ ಚಿತ್ರ ದಲ್ಲಿ ತೃತೀಯ ಲಿಂಗಿಯ ಪಾತ್ರದಲ್ಲಿ ಅದ್ಭುತ ನಟನೆ ನೀಡಿದ್ದು , ಈಗ ಸಂಚಾರಿ ವಿಜಯ್ ರವರು ಜೀವನದ ಸಂಚಾರ ನಿಲ್ಲಿಸಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ.ಇವರ ಅಂಗಾಂಗಳನ್ನು ಕುಟುಂಬ ವರ್ಗದವರು ದಾನ ಮಾಡಲು ನಿರ್ದಾರ ಕೈಗೊಂಡು ಅದರಂತೆ ದಾನ ಮಾಡಿರುವುದು
ನಿಜಕ್ಕೂಅಭಿನಂದನೀಯ.ಇದರಿಂದ ಏಳು ಜನರ ಬಾಳಿಗೆ ಬೆಳಕಾದ ಸಂಚಾರಿ ವಿಜಯ್.ಮರಣದ ನಂತರವೂ ಬದುಕಿರುವುದು ಇದೇನಾ ?ಸಾಧಕರ ಬದುಕೇ ಹಾಗೆ ,ಅದು ಸಮಾಜಕ್ಕೆದಾರಿ ದೀಪ.ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ.ಅವರ ಕುಟುಂಬ ವರ್ಗದವರಿಗೆ,ಅಭಿಮಾನಿಗಳಿಗೆನೋವು ಭರಿಸುವ ಶಕ್ತಿ ದೊರೆಯಲಿ ಎಂದುಆ ದೇವರಲ್ಲಿ ಪ್ರಾರ್ಥಿಸುತ್ತೇನೆ.
ಎಂ.ಜಯಶಂಕರ್‍ಅಧ್ಯಕ್ಷಸ್ಪಂದನ ಸಂಸ್ಥೆಮೈಸೂರು.