ಚಾಮರಾಜನಗರ: ವರಮಹಾಲಕ್ಷಿ ಹಬ್ಬದ ಅಂಗವಾಗಿ ನಗರದ ಹಳೆ ಬಸ್ ನಿಲ್ದಾಣದ ಬಳಿ ಇರುವ ಶ್ರೀ ಮಾರಮ್ಮ ತಾಯಿ ದೇವಸ್ಥಾನದಲ್ಲಿ ವಿಶೇಷಪೂಜೆ ನಡೆಯಿತು.
ಹಬ್ಬದ ಪ್ರಯುಕ್ತ ನಗರಸಭೆ ಪೌರಕಾರ್ಮಿಕರಿಗೆ ಚಾಮರಾಜನಗರ ಕೃಷಿ ಮಾರುಕಟ್ಟೆ ಸಮಿತಿ ನಿರ್ದೇಶಕರಾದ ವೆಂಕಟರಾವ್‌ಸಾಠೆ ಅವರು ಹಬ್ಬದ ಉಡುಗೊರೆಯಾಗಿ ಸೀರೆ ಮತ್ತು ಪುರುಷರ ವಸ್ತ್ರಗಳನ್ನು ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು ಪ್ರತಿನಿತ್ಯ ನಗರವನ್ನು ಸ್ವಚ್ಚತೆಗೊಳಿಸುವ ಇವರಿಗೆ ನಾವು ಗೌರವ ನೀಡಬೇಕು. ನಮ್ಮ ಮನೆಯಲ್ಲಿ ಯಾವರೀತಿಯಲ್ಲಿ ಹಬ್ಬ ಆಚರಣೆ ಮಾಡುತ್ತಿವೋ ಅದೇ ರೀತಿಯಲ್ಲಿ ವರಮಹಾಲಕ್ಷಿ ಹಬ್ಬವನ್ನು ಆಚರಿಸಲಿ ಎಂದು ನಮ್ಮ ಭಾವನೆ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಂಗಡಿ ಮೋಹನ್, ನಗರಸಭೆ ಅಧ್ಯಕ್ಷೆ ಆಶಾನಟರಾಜು, ನಗರಸಭಾ ಸದಸ್ಯ ಸುದರ್ಶನ್‌ಗೌಡ, ವಾಟಳ್ ಬಾಬು, ವೆಂಕಟರಾವ್ ಕುಟುಂಬದ ಅನಿತಾಭಾಯಿ ಸದಸ್ಯರು ಇದ್ದರು.
೧೫೦ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ವಸ್ತ್ರಗಳನ್ನು ನೀಡಲಾಯಿತು. ವರಮಹಾಲಕ್ಷಿ?ಮ ಹಬ್ಬದ ವಿಶೇಷ ಪೂಜಾ ಕಾರ್ಯಕ್ಕೆ ಮಹಿಳೆಯರು ಹಾಜರಿದ್ದರು.