
ಹಿನ್ನೆಲೆ?:-
ಕ್ರಿ.ಶ.೩ನೇಶತಮಾನದಲ್ಲಿ ಜರುಗಿದ ಒಂದು ಅಹಿತಕರ ಘಟನೆ ವ್ಯಾಲೆಂಟೈನ್ಸ್-ಡೇಗೆ ಮೂಲಕಾರಣವಾಯ್ತು ಎಂಬುದು ವಿಚಿತ್ರ ಮತ್ತು ನಂಬಲಸಾಧ್ಯ. ವ್ಯಾಲೆಂಟೈನ್ ಎಂಬ ರೋಮನ್ ಸಂತನಿಂದ ಉಗಮವಾದ ಇದರ ಬಗ್ಗೆ ಹಲವು ಭಿನ್ನಾಭಿಪ್ರಾಯವಿದ್ದು ಯಾವುದೆ ಖಚಿತ ಮಾಹಿತಿ/ಆಧಾರ ಈವರೆಗೆ ದೊರಕಿಲ್ಲ. ಕ್ರೈಸ್ತಧರ್ಮ ತ್ಯಜಿಸುವುದಿಲ್ಲವೆಂದು ಪ್ರತಿಭಟಿಸಿ ರಾಜಾಜ್ಞೆ ಧಿಕ್ಕರಿಸಿದವನಿಗೆ ಜೀವಾವಧಿ ಜೈಲುಶಿಕ್ಷೆ ನೀಡಲಾಯಿತು.ಈತ ಐರೋಪ್ಯದವನೊ, ಪಾಶ್ಚಾತ್ಯದವನೊ? ಎಂಬುದು ಈಗಲೂ ಚರ್ಚೆಗೆ ಗ್ರಾಸವಾಗಿದ್ದು [ವಿ]ವಾದಕ್ಕೆ ಎಡೆಮಾಡಿಕೊಟ್ಟಿದೆ. ಇವನ ಹುಟ್ಟು ತಂದೆ-ತಾಯಿ ವಿದ್ಯಾಭ್ಯಾಸ ಉದ್ಯೋಗ ಇನ್ನಿತರ ಪೂರ್ವಾಪರ ಬಗ್ಗೆ ಸ್ಪಷ್ಟ ಉಲ್ಲೇಖ ಎಲ್ಲಿಯೂ ಕಂಡುಬಂದಂತಿಲ್ಲ!
ಫ಼ೆಬ್ರವರಿ ೧೪ರಂದು ಆಚರಿಸಬೇಕು ಏಕೆ?:-
ಕ್ರಿ.ಶ.೨೬೯ ಫ಼ೆಬ್ರವರಿ ೧೪ರಂದು ವ್ಯಾಲೆಂಟೈನ್ ಮರಣಹೊಂದಿದ್ದು ಅಂದಿನಿಂದ ಈತ ಹುತಾತ್ಮನಾದನೆಂಬ ವದಂತಿ? ಇತಿಹಾಸ ತಜ್ಞರ ಪ್ರಕಾರ ಈತ ಉತ್ತರಫಿನ್‌ಲ್ಯಾಂಡ್[ಲ್ಯಾಪ್‌ಲ್ಯಾಂಡ್] ಸಾಂತಕ್ಲಾಸ್‌ಸಾಮ್ರಾಜ್ಯದ ಅರ್ಚಕನಾಗಿದ್ದಾಗ ಧರ್ಮ[ದೈವ]ದ್ರೋಹ ಇತ್ಯಾದಿ ಅಪರಾಧಗಳಡಿಯಲ್ಲಿ ಕ್ರಿ.ಶ.೪೯೬ರಲ್ಲಿ ಕಾರಾಗೃಹಕ್ಕೆ ಕಳುಹಿಸಲ್ಪಟ್ಟಿತ್ತು! ಕೆಲವರ ಪ್ರಕಾರ ಈತನನ್ನು ದೇಶಭ್ರಷ್ಟ[ರಾಷ್ಟ್ರದ್ರೋಹಿ] ಆರೋಪದಡಿ ಗಡೀಪಾರ್ ಮಾಡಲಾಗಿತ್ತು! ಇನ್ನೊಂದು ಮಾಹಿತಿಯಂತೆ ವ್ಯಾಲೆಂಟೈನ್ ಸೆರೆಮನೆಯಲ್ಲಿದ್ದಾಗ ಜೈಲರ್ ಮಗಳ ಸ್ನೇಹ ಸಂಪಾದಿಸಿ ತನ್ನ ಬಿಡುಗಡೆಯ ದಿನ[ಫ಼ೆಬ್ರವರಿ೧೪] ಅವಳಿಗೊಂದು ಪತ್ರ ಬರೆದು ಜೈಲಿನಲ್ಲೆ ಬಿಟ್ಟುಹೋಗಿದ್ದ. ಅದರಲ್ಲಿ ನಿನ್ನವನೇ ಆದ ವ್ಯಾಲೆಂಟೈನ್ ಎಂದು ಸಹಿಮಾಡಿದ್ದ. ಹಾಗಾಗಿ ಫ಼ೆಬ್ರವರಿ೧೪ರಂದು ಅವನ ದಿನಾಚರಣೆ ಆಚರಿಸುವ ಪದ್ಧತಿ ಪ್ರಾರಂಭವಾಯಿತು?! ಆದರೆ, ಕಿಡಿಗೇಡಿಗಳು ಸಮಾಜ ಘಾತುಕರು ಸ್ವಾರ್ಥಮೂರ್ತಿಗಳು ಮಿಥ್ಯದ್ದಾದ ಪ್ರೇಮಿಗಳನ್ನು ಒಂದುಗೂಡಿಸಿದನು? ಪೋಷಕರಿಂದ ತಿರಸ್ಕರಿಸಲ್ಪಟ್ಟ ಪ್ರೇಮಿಗಳ ವಿವಾಹ ಮಾಡಿಸಿದನು?ಇತ್ಯಾದಿ ಕಾಲ್ಪನಿಕ ಕತೆಕಟ್ಟಿ? ಹಾಡಿಹೊಗಳಿ, ವ್ಯರ್ಥವಿಜೃಂಭಿಸಿ, ಉಪ್ಪುಹುಳಿಖಾರ ಬೆರೆಸಿ, ತಪ್ಪು[ಮಾಹಿತಿ] ತಿಳುವಳಿಕೆ ನೀಡಿ ಯುವಕರಿಗೆ ದಾರಿತಪ್ಪಿಸುತ್ತಿದ್ದಾರೆ. ಕೆಲವು (ಭಗ್ನ) ಪ್ರೇಮಿಗಳು ತಮ್ಮಬೇಳೆ ಬೇಯಿಸಿಕೊಳ್ಳಲು ‘ಪ್ರೇಮಿಗಳ ದಿನಾಚರಣೆ’ ಎಂದು ಬ್ರಾಂಡ್ ಮಾಡಿ ಬಿಂಬಿಸಿ ಅ[ಪ್ರಾಪ್ತ]ಮಾಯಕ ಪ್ರೇಮಿಗಳನ್ನು ಹುರಿದುಂಬಿಸಿ ದುರಂತಹಂತಕ್ಕೆ ತಲುಪಿಸುತ್ತಿದ್ದಾರೆ! ಈದಿನದಂದು ಪ್ರಾಪ್ತವಯಸ್ಕರು ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವ ಬದಲು ಚಾಕಲೇಟ್ ಕೇಕ್ ತಿಂಡಿ ತಿನಿಸು ಒಡವೆ ವಸ್ತ್ರ ಗ್ರೀಟಿಂಗ್ಸ್ ಜತೆಗೆ ತನು-ಮನ ವಿನಿಮಯ [ಡೇಟಿಂಗ್]ಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ! ಶ್ರಮದ ದುಡಿಮೆ ಹಣದ ಬೆವರಿನಬೆಲೆಯಿಂದ ಖರೀದಿಸಿದ ಅಮೂಲ್ಯ ಕೊಡುಗೆ ಗಳನ್ನು ಯಾವುದೆ ಸಂಬಂಧವಿಲ್ಲದ ಯಾವನೊ ಪರದೇಶಿ ‘ಖೈದಿ’ ಹೆಸರಿನಲ್ಲಿ ಫ಼ೆಬ್ರವರಿ ೧೪ರಂದೆ ಏಕೆ ವಿನಿಮಯ ಮಾಡಿಕೊಳ್ಳಬೇಕು?
ದಿ(ಟ)ಟ್ಟಪ್ರೇಮಿಗಳು ಅವರ ಪದ್ಧತಿ-ಸಂಪ್ರದಾಯಗಳಿಗೆ ಅನುಗುಣವಾಗಿ ಮುಯ್ಯಿ ವಿನಿಮಯ ಮಾಡಿಕೊಂಡರೆ ಬೇಡ ಎನ್ನುವವರಾರು? ‘ಹಿತ್ತಲಗಿಡಮದ್ದಲ್ಲ’ ಎನ್ನುವಂತೆ ಸ್ವಂತದ್ದನ್ನು ಕಡೆಗಣಿಸಿ ಪರಕೀಯನಿಗೆ ಮಣೆ ಹಾಕುವುದು ಯಾವ ನ್ಯಾಯ ನೀತಿ ಧರ್ಮ? ಈ ದಿನಾಚರಣೆ ಮೂಲಕ ಪ್ರೇಮಿಗಳಿಗೆ ಗೆಲುವು ಸಂತೋಷ ಸಿಗುತ್ತದೆ ಅವರ ಗುರಿಯನ್ನು ಮುಟ್ಟುವರು ಎಂಬುದೆಲ್ಲ ಕೇವಲ ಭ್ರಮೆಯಾಗಿದ್ದು ತಮಗೆ ಅರಿವಿಲ್ಲದೆ ಮಾಡುತ್ತಿರುವ ಧರ್ಮಾಪರಾಧ? ಇಂಥ ನಿಷ್ಠುರದ ಪ್ರಶ್ನೆಗಳಿಗೆ ಪುಷ್ಠಿ ನೀಡುವ ಉಧಾ:- ೨೦೧೦ರಲ್ಲಿ ಹಾಲಿವುಡ್‌ನ ಖ್ಯಾತ ನಿರ್ದೇಶಕ ಗ್ಯಾರಿಮಾರ್ಷಲ್, ಕ್ಯಾತರಿನ್‌ಫ಼್ಯುಗೇಟ್‌ನ ಕಥೆ-ಚಿತ್ರಕತೆ ಆಧರಿಸಿ ವ್ಯಾಲೆಂಟೈನ್ಸ್-ಡೇ ಎಂಬ ಹಾಸ್ಯ ಚಿತ್ರವನ್ನು ನಿರ್ಮಿಸಿ ಬಿಡುಗಡೆ ಗೊಳಿಸಿ ಅಪಹಾಸ್ಯಕ್ಕೆ ಗುರಿಯಾಗಿ ಛೀಮಾರಿ ಹಾಕಿಸಿಕೊಂಡನು. ಈ ಚಿತ್ರವು ಅಟ್ಟರ್‌ಫ಼್ಲಾಪ್ ಆಗಿದ್ದು ಇವನ[ಪುಣ್ಯ?]ಪಾಪ!. ಇನ್ನೊಂದು ಉದಾ:- ವ್ಯಾಟಿಕನ್ ನಗರದಲ್ಲಿ ಜರುಗಿದ ವಿಶ್ವ ಕ್ರೈಸ್ತರ ಸಮ್ಮೇಳನದಲ್ಲಿ ಅಮೆರಿಕವನ್ನು ಪ್ರತಿನಿಧಿಸಿದ್ದ ಪಾದ್ರಿಯೊಬ್ಬರು ವ್ಯಾಲೆಂಟೈನ್-ಡೇ ಬಗ್ಗೆ ಧರ್ಮಗುರು ಪೋಪ್‌ರನ್ನು ಕುರಿತು ಪ್ರಶ್ನಿಸಿದ್ದು:- (Q)Should a Christian celebrate Valentine’s day? (ಪ್ರಶ್ನೆ) ಒಬ್ಬ ಕ್ರೈಸ್ತನು ವ್ಯಾಲೆಂಟೈನ್ಸ್ ಡೇ ಆಚರಿಸ ಬೇಕೆ? ಪ್ರತಿಯಾಗಿ ಪೋಪ್ ಉತ್ತರಿಸಿದ್ದು:- (A)A sincere Bible Christian will not celebrate it!! (ಉ) ಓರ್ವ ಬೈಬಲ್ ಕ್ರಿಶ್ಚಿಯನ್ ಅದನ್ನು ಆಚರಿಸುವುದಿಲ್ಲ! ಇದರ ತಾತ್ಪರ್ಯ:-ಟ್ರೂ ಕ್ರಿಶ್ಚಿಯನ್ ಎಂದಿಗೂ ವ್ಯಾಲೆಂಟೈನ್ಸ್-ಡೇ ಆಚರಿಸುವುದಿಲ್ಲ, ಎಂಬುದನ್ನು ಒತ್ತಿಹೇಳುತ್ತದೆ. ಕ್ರೈಸ್ತರೆ ಇರುವ ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲಿ ಇದನ್ನು ಆಚರಿಸುತ್ತಿಲ್ಲವೆಂಬ ವಾಸ್ತವಾಂಶ ತಿಳಿದುಬರುತ್ತದೆ. ಪವಿತ್ರ ಬೈಬಲ್‌ನಲ್ಲೂ ಈ ಕುರಿತು ಯಾವುದೆ ಉಲ್ಲೇಖವಿಲ್ಲ, ಆದ್ದರಿಂದ ಕ್ರಿಶ್ಚಿಯನ್ನರು ಇದನ್ನು ಆಚರಿಸುವಂತಿಲ್ಲ; ಎಂದು ಕ್ರೈಸ್ತ ಧರ್ಮಗುರುಗಳೆ ಸ್ಪಷ್ಟಪಡಿಸಿದ್ದಾರೆ!
ಯಾವ ರಾಷ್ಟ್ರಗಳಲ್ಲಿ ಆಚರಣೆ?
ಅಮೆರಿಕ ಕೆನಡ ವಿಂಡೀಸ್ ಬ್ರಿಟನ್ ಫ಼್ರಾನ್ಸ್ ಇಟಲಿ ಆಸ್ಟ್ರಿಯ ಸ್ವಿಜ಼ರ್‌ಲ್ಯಾಂಡ್ ಸ್ಪೇನ್ ಆಸ್ಟ್ರೇಲಿಯ ಸಿಂಗಾಪೂರ್ ಹಾಂಕಾಂಗ್ ಹಾಗೂ ಅಮೆರಿಕ-ಬ್ರಿಟಿಷ್ ಆಡಳಿತಕ್ಕೊಳಪಟ್ಟ ಕೇಂದ್ರಾಡಳಿತ ಪ್ರದೇಶಗಳು. ವಿನಾಶಕಾಲೇ ವಿಪರೀತಬುದ್ಧಿ ಎಂಬಂತೆ, ಕೆಲವು ದೇಶಗಳಲ್ಲಿ ಫ಼ೆಬ್ರವರಿ ೧೨,೧೩,೧೪, ೩ದಿನವೂ ವಿವಿಧ ಕಾರ್ಯಕ್ರಮದೊಡನೆ ವೈಭವದಿಂದ ಆಚರಿಸುತ್ತಾರೆ?!
ಯಾವ ರಾಷ್ಟ್ರಗಳಲ್ಲಿ ಬಹಿಷ್ಕಾರ?
ಭಾರತದಲ್ಲಷ್ಟೆ ಏಕೆ ವಿಶ್ವದಾದ್ಯಂತ ಅವರವರ ಧರ್ಮವನ್ನು ಸರಿಯಾಗಿ ತಿಳಿದುಕೊಂಡಿರುವ ಯಾರೇಆಗಲಿ ಇದನ್ನು ಆಚರಿಸುವಂತಿಲ್ಲ. ಈಬಗ್ಗೆ ಮನಮಂಥನ ಮಾಡಿದರೆ ಅವರವರ ಪದ್ಧತಿ ಆಚಾರವಿಚಾರ ಸಂಪ್ರದಾಯಗಳನ್ನು ತಲತಲಾಂತರದಿಂದ ಅನುಸರಿಸುತ್ತ ಬಂದ ಧರ್ಮನಿಷ್ಠರು ಇದನ್ನು ಆಚರಿಸಲು ಒಪ್ಪುವುದಿಲ್ಲ. ಮೆಕ್ಸಿಕೊ ದಕ್ಷಿಣಅಮೆರಿಕ ಅರ್ಜೆಂಟಿನ ಚಿಲಿ ದಕ್ಷಿಣಆಫ್ರಿಕ ನೈಜೀರಿಯ ಟಾಂಜಾನಿಯ ಈಜಿಪ್ಟ್ ಇರಾನ್ ಇರಾಖ್ ಸೌದಿಅರೇಬಿಯ ಕುವೈತ್ ಖತಾರ್ ಅರಬ್‌ಸಂಯುಕ್ತಸಂಸ್ಥಾನ ಪ್ಯಾಲೆಸ್ಟೈನ್ ಆಪ್ಘಾನಿಸ್ತಾನ್ ಪಾಕಿಸ್ತಾನ್ ಕಜ಼ಕೀಸ್ಥಾನ್, ರಷ್ಯಾಸುತ್ತಮುತ್ತಲ ದೇಶಗಳು ಚೀನಾ-ಟಿಬೆಟ್-ನೇಪಾಳ ಬಾಂಗ್ಲಾದೇಶ ಜರ್ಮನಿ ಜಪಾನ್ ದ.ಕೊರಿಯ ಉ.ಕೊರಿಯ ವಿಯೆಟ್ನಾಂ ಮಲೇಶಿಯ ಮಯನ್ಮಾರ್ ಶ್ರೀಲಂಕ ಮಾರಿಷಸ್ ಮುಂತಾದವು. ಬ್ರೆಜ಼ಿಲ್‌ದೇಶವು ಬಹಿಷ್ಕರಿಸಿದ್ದರೂ ಪರ್ಯಾಯವಾಗಿ ತಮ್ಮ ಪದ್ಧತಿಯ ‘ದಿಡೇ ಆಫ಼್‌ದಿ ಎನಾಮೋರ್ಡ್’ ದಿನಾಚರಣೆಯನ್ನು ಪ್ರತಿವರ್ಷ ಜೂ.೧೨ರಂದು ಆಚರಿಸಲು ಅನುಮತಿಸಿ ದೇಶೀಯ ಸಂಸ್ಕೃತಿಗೆ ಧಕ್ಕೆ ಬಾರದಂತೆ ಎಚ್ಚರಿಕೆ ವಹಿಸಲು ಕಟ್ಟಾಜ್ಞೆ ಮಾಡಿದೆ !
ಭಾರತಕ್ಕೆ ಈ ಮಹಾಮಾರಿ ಪ್ರವೇಶ ಯಾವಾಗ-ಹೇಗೆ?:-
೧೯೯೯ ನೇ ಇಸವಿಯವರೆಗೆ ‘ವ್ಯಾಲೆಂಟೈನ್ಶ್ ಡೇ’ (ಪ್ರೇಮಿಗಳ ದಿನಾಚರಣೆ) ಹೆಸರೇ ಕೇಳಿರದ ಭಾರತೀಯರು ೨೦೦೦ನೇ ಇಸವಿಯಿಂದ ಅನಿವಾಸಿ ಭಾರತೀಯರಿಂದ, ವಿದೇಶೀ ಪ್ರವಾಸಿಗರಿಂದ, ಚಲನಚಿತ್ರ-ದೂರದರ್ಶನದಿಂದ, ಸೆಲ್‌ಫೋನ್, ಪತ್ರಿಕೋದ್ಯಮ, ಅಂತರ್ಜಾಲ, ಇತ್ಯಾದಿ ಮಾಧ್ಯಮಗಳ ಮೂಲಕ ಭಾರತಕ್ಕೆ ಎಂಟ್ರಿ. ಮುಂಬಯಿ ಕೊಲ್ಕತ್ತ ಚೆನ್ನೈ ಗೋವ ಪಾಂಡಿಚೇರಿ ಕಲ್ಲಿಕೋಟೆ ಮಂಗಳೂರು ವಿಶಾಖಪಟ್ಟಣ ಮುಂತಾದ ಪ್ರಮುಖ ಬಂದರುನಗರಗಳ ಮೂಲಕ ಈ ಮಹಾಮಾರಿಯ ಪ್ರವೇಶವಾಯಿತು. ಪ್ರಾರಂಭದ ೩-೪ವರ್ಷಗಳು ಮೆಟ್ರೊನಗರಗಳಲ್ಲಿ ಮಾತ್ರ ತೆವಳುತ್ತ ಸಾಗಿದ್ದ ಈವ್ಯಾಧಿಯು ಶೇ.೩ರಷ್ಟು ಯುವ ಪ್ರೇಮಿಗಳನ್ನು ಮಾತ್ರ ಆಕರ್ಷಿಸಿಸಲು ಸಾಧ್ಯವಾಯ್ತು! ನಂತರದ ೩-೪ ವರ್ಷಗಳಲ್ಲಿ ಹೇಗೋ ಯುವ ಪೀಳಿಗೆಯನ್ನು ತನ್ನ ತೋಳ್ತೆಕ್ಕೆಗೆ ಸಿಕ್ಕಿಸಿಕೊಂಡು ಶೇ.೬ರಷ್ಟು ತನ್ನತ್ತ ಸೆಳೆಯಿತು. ೨೦೦೯-೧೦ರಲ್ಲಿ ಇದರ ಪ್ರಮಾಣ ದಿಢೀರನೆ ೧೩%ರಷ್ಟಾಗಿದ್ದು ದುರಂತ! ೨೦೧೧-೧೨ ಎರಡೇ ವರ್ಷಾವಧಿಯಲ್ಲಿ ಈ ಅಂಟುರೋಗವು ದೇಶದ ಏಕೈಕ ‘ಕಾಸ್ಮೊಪಾಲಿಟನ್ ಸಿಟಿ’ ಬೆಂಗಳೂರು ಸೇರಿದಂತೆ ದೆಹಲಿ ಆಗ್ರಾ ಚಂದೀಘಡ್ ಅಲಹಾಬಾದ್ ಗಾಂಧಿನಗರ ಅಹಮದಾಬಾದ್ ಹೈದರಾಬಾದ್ ಪೂನಾ ಕೊಯಮತ್ತೂರು ಕನ್ಯಾಕುಮಾರಿ ತಿರುವನಂತಪುರ ಎರ್ನಾಕುಲಂ ಕಣ್ಣಾನೂರು ಬೆಳಗಾವಿ ಹುಬ್ಬಳ್ಳಿ ಮೈಸೂರು ಇನ್ನಿತರ ಪ್ರಮುಖ ನಗರಗಳಲ್ಲಿ ತನ್ನ ಕರಾಳಛಾಯೆ ಸ್ಥಾಪಿಸಿ ೨೦೨೦ರಿಂದ ದೇಶದ-ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲೂ ಕಾಲಿಟ್ಟಿರು ವುದು ಪರಮಾಶ್ಚರ್ಯ ಮತ್ತು ವಿಷಾದನೀಯ. ಮುಂದೊಂದಿನ ಪಶ್ಚಾತ್ತಾಪ ಪಡಬೇಕಾಗಬಹುದು, ಎಚ್ಚರಿಕೆ…ಹುಶಾರ್..!
ನಗರ ಮತ್ತು ಗ್ರಾಮೀಣ ಪ್ರದೇಶದ [ಅ]ವಿದ್ಯಾವಂತ ಮುಗ್ಧ ಯುವಜನರ ದಾರಿತಪ್ಪಿಸಲು ವ್ಯಾಲೆಂಟೈನ್ಸ್-ಡೇ ಬರುತ್ತದೆ ಎಂಬ ಭಯದ ನೆರಳು ಸಂಪ್ರದಾಯಬದ್ಧ ಕುಟುಂಬಗಳಲ್ಲಿ ಈಗಾಗಲೆ ಮನೆಮಾಡಿ ಈಗಿರುವ ನೆಮ್ಮದಿ-ಶಾಂತಿ ಕದಡುವುದರಲ್ಲಿ ಸಂಶಯವಿಲ್ಲ! ಆಧುನಿಕ ಜಗತ್ತು ಜಾಗತೀಕರಣ ಪಾಶ್ಚಾತ್ಯರ ಸಂಸ್ಕೃತಿ-ನಾಗರಿಕತೆ ಕೇವಲ ಆಕರ್ಷಣೆಯಷ್ಟೆ. ಯುವಪಡೆಗೆ ಕ್ಷಣಿಕಸುಖ ತೋರಿಸಿ ನಂತರ ನಿರಂತರ ನರಳುವಂತೆ ಮಾಡುತ್ತದೆ ಜೋಕೆ..ಎಚ್ಚರಿಕೆ! ಇಂಥ ತಾತ್ಕಾಲಿಕ ಮೋಜಿನ ಜೀವನಕ್ಕೆ ಹದಿ ಹರೆಯದವರು ಶರಣಾಗಿ ಬಲಿಪಶು ಆಗದೆ ಸಾತ್ವಿಕ ಆಹಾರ ತಾತ್ವಿಕ ವಿಚಾರ ಹಾಗೂ ಸಂಪ್ರದಾಯದ ಬದುಕನ್ನು ಆರಿಸಿಕೊಂಡಾಗ ಶಾಶ್ವತಸುಖ ಸಿಗುತ್ತದೆ. ಇತ್ತೀಚೆಗೆ ಪಾಶ್ಚಾತ್ಯರೂ ಯೂರೋಪಿಯನ್ನರೂ ಭಾರತೀಯ ಸಂಸ್ಕೃತಿ-ನಾಗರಿಕತೆಗೆ ಮನಸೋತು ಸನ್ಮತಿಯೆಡೆ ಸಾಗಿಬರುತ್ತಿದ್ದಾರೆ. ಹಿಂದೂ ಧರ್ಮದಲ್ಲಿರುವ [ಅ]ಲೌಕಿಕ ಗೂಢಾರ್ಥ ತಿಳಿದುಕೊಂಡು ಆಬಗ್ಗೆ ಸೂಕ್ತ ವಿಮರ್ಷೆ-ವಿವೇಚನೆ ಮಾಡಲು ನಿರ್ಧರಿಸಿರುವುದು ಸ್ವಾಗತಾರ್ಹ ಶ್ಲಾಘನೀಯ ಸಂಗತಿ. ತಾಯಿ,ತಂದೆ,ದೇವರು,ಸೋದರ,ಸೋದರಿ,ಬಂಧು,ಮಿತ್ರರು,ಇತ್ಯಾದಿ ಅನುಭವಾಮೃತಗಳನ್ನು ಅರ್ಥೈಸಿಕೊಂಡು ಜೀವನಕ್ಕೆ ಅಳವಡಿಸಿಕೊಂಡು ಉತ್ತಮಬದುಕನ್ನು ಆರಿಸಿಕೊಂಡರೆ ಮಾತ್ರ ಸುಖ ಸಿಗುತ್ತದೆ.
ಈ ನಿತ್ಯಸತ್ಯವನ್ನು ಪೋಷಕರು ಗುರುಹಿರಿ ಯರು, ಸಾಧುಸಂತರು ಯುವಕರಿಗೆ ಮನವರಿಕೆಯಾಗುವಂತೆ ಮಾರ್ಗದರ್ಶನ ಮಾಡಿದರೆ ಮಾತ್ರ ಇಂಥ ಅ(ದಿ)ನಾಚರಣೆ ಅತ್ಯಾಚಾರ ಅಕೃತ್ಯಗಳಿಗೆ ಅಂತ್ಯ ಸಿಗಬಹುದು? ಭಾರತದ/ಕರ್ನಾಟಕದ ೯೫%ಪ್ರೇಮಿಗಳಿಗೆ ಈಬಗ್ಗೆ ಶೂನ್ಯ ಅರಿವಿದೆ! ಅಷ್ಟೇಏಕೆ ಇದರ ಉಚ್ಛಾರಣೆ [ಸ್ಪೆಲ್ಲಿಂಗ್]ಬಾರದವರೂ ಕೇವಲ ಫ಼್ಯಾಶನ್‌ಗಾಗಿ ಆಚರಿಸುತ್ತಾರೆ ಎಂಬುದು ನಾಚಿಕೆಗೇಡು? ಈ ಅತಿರೇಕಕ್ಕಿಂತ ಮತ್ತೊಂದು ಅವಿವೇಕತನ ಯಾವುದು? ಹಾಗಾಗಿ, ನಮ್ಮ ಯುವಕರು ಪ್ರೇಮಿಗಳದಿನಾಚರಣೆ[ವ್ಯಾಲೆಂಟೈನ್ಸ್-ಡೇ]ಗೆ ಕಿಮ್ಮತ್ತು ನೀಡದಿರಲಿ ಎಂಬುದೇ ನನ್ನ ಸಲಹೆ.
ಒಂದುವೇಳೆ ಈ ಅನಾಗರಿಕ ಅಸಾಮಾಜಿಕ ಪದ್ಧತಿಯನ್ನು ಮೊಳಕೆಯಲ್ಲೆ ಚಿವುಟಿಹಾಕದೆ ಹೆಮ್ಮರವಾಗಿ ಬೆಳೆಯಲು ಬಿಟ್ಟರೆ, ಈ ಅಜ್ಞಾನಕ್ಕೆ ಅಸಹಾಯಕತೆಯ ಮಣೆಹಾಕಿದರೆ, ಭವಿಷ್ಯದಲ್ಲಿ ಭಾರತದ ಸಾಂಸ್ಕೃತಿಕ ಬೆಳವಣಿಗೆಯನ್ನು ಕುಂಠಿತಗೊಳಿಸಿದಂತೆ ಆಗುತ್ತದೆ. ಹಿಂದುತ್ವದ ಉನ್ನತಿ ಮತ್ತು ಅವಿಭಕ್ತ ಕುಟುಂಬದ ನಿರ್ವಹಣೆ ಇವೆರಡೂ ಅವನತಿಗೊಳ್ಳುತ್ತದೆ. ಸಮಾಜದಲ್ಲಿ ಆರೋಗ್ಯಕರ ವಾತಾವರಣ ಕಾಣಲು ಕಷ್ಟ ಸಾಧ್ಯವಾಗುತ್ತದೆ. ಆದ್ದರಿಂದ, ಈ ಪುನರುತ್ಥಾನದ ಕೈಂಕರ್ಯವನ್ನು ಸಂಸ್ಕೃತಿ ಉದ್ಧಾರಕರು ತ್ರಿಕರಣ ಶುದ್ಧಿಯಿಂದ ಮನಸ್ಸು ಮಾಡಿ ಮುಂದಾಳತ್ವ ವಹಿಸಿದರೆ ಪ್ರತಿಯೊಬ್ಬ ಭಾರತೀಯನು ಇವರೊಡನೆ ಕೈಜೋಡಿಸುತ್ತಾನೆ.
ಡೌಲು-ಢಂಭಾಚಾರದ ಈ ಅನಿಷ್ಟ ದಿನಾಚರಣೆ ಕೆಲವೇ ವರ್ಷದೊಳಗೆ ಬುಡಸಹಿತ ಕಿತ್ತೊಗೆಯಬಹುದು. ನಾವೀಗ ಆಲಸ್ಯದಿಂದ ಕೈಚೆಲ್ಲಿ ಕುಳಿತರೆ ಮುಂದಿನ ೧೦-೧೫ ವರ್ಷದೊಳಗೆ ವ್ಯಾಲೆಂಟೈನ್ಸ್-ಡೇ ಪೆಡಂಭೂತವು ತನ್ನ ಪ್ರಬಲ ಕಬಂಧಬಾಹುಗಳನ್ನು ಹಳ್ಳಿಹಳ್ಳಿಗಳಲ್ಲಿ ಗಲ್ಲಿಗಲ್ಲಿಗಳಲ್ಲಿ ಚಾಚುತ್ತ ಚಾಟಿಂಗ್‌ನಿಂದ ಬಡ್ತಿ ಪಡೆದು ಡೇಟಿಂಗ್ ಎಂಬ ಅನೈತಿಕ ಪದ್ದತಿ ಅಳವಡಿಸಿಕೊಳ್ಳಲು ಬುನಾದಿಯಾಗುತ್ತದೆ. ಭಾರತದ ಪರಂಪರಾನುಗತ ಪವಿತ್ರ ಸಂಸ್ಕೃತಿ ಸರ್ವನಾಶ ಆಗುತ್ತದೆ! ಈ ಅನಿಷ್ಟಾ[ದಿನಾ]ಚರಣೆ ಇಲ್ಲದೆಹೋದರೆ ಯಾರಿಗೂ ಯಾವುದೆ ನ[ಕ]ಷ್ಟ ಆಗಲಾರದು. ಬದಲಿಗೆ ವಿನಯತೆಯ ಶುಭವು ವಿವೇಕದ ಲಾಭವು ವೃದ್ಧಿಸುತ್ತದೆ, ಯುವಶಕ್ತಿಯ ಸದುಪಯೋಗವಾಗುತ್ತದೆ. ಭಾರತದ ಆರ್ಥಿಕ ಶೈಕ್ಷಣಿಕ ವೈಜ್ಞಾನಿಕ ಸಾಮಾಜಿಕ ಕ್ಷೇತ್ರಗಳ ಸರ್ವತೋಮುಖ ಬೆಳವಣಿಗೆಯಿಂದ ದೇಶವು ಪ್ರಬಲವಾಗುತ್ತದೆ. ಭಾರತೀಯರಾಗಿ ನಮ್ಮ ಜನ್ಮವು ಸಾರ್ಥಕತೆ ಪಡೆಯುತ್ತದೆ?! ಜೈ ಯುವ ಜನತೆ! ಜೈ ಸಂಸ್ಕೃತಿ ನಾಗರಿಕತೆ!!

ಕುಮಾರಕವಿ ಬಿ.ಎನ್.ನಟರಾಜ್ [೯೦೩೬೯೭೬೪೭೧]
ಬೆಂಗಳೂರು-೫೬೦೦೭೨