ಮಾಜಿ ಪ್ರಧಾನ ಮಂತ್ರಿ ಅಜಾತಶತ್ರು ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಅಂಗವಾಗಿ ಜೀವಧಾರ ರಕ್ತನಿಧಿ ಕೇಂದ್ರದ ವತಿಯಿಂದ ಮೈಸೂರು ಮೃಗಾಲಯದಲ್ಲಿ 10.000 ಸಾವಿರ ರೂ ಚಿಂಪಾಂಜಿ ಪ್ರಾಣಿಗಳನ್ನು ದತ್ತು ತೆಗಳುವ ಮೂಲಕ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು ಆನಂತರ ಮೃಗಾಲಯದ ಆವರಣದಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಉಳ್ಳ ಕರಪತ್ರವನ್ನು ಬಿಡುಗಡೆಗೊಳಿಸಿ ಪ್ರವಾಸಿಗರಿಗೆ ರಕ್ತದಾನ ಜಾಗೃತಿ ಕರಪತ್ರ ವಿತರಿಸಿ ಜಾಗೃತಿ ಮೂಡಿಸಲಾಯಿತು ನಂತರ ಮಾತನಾಡಿ ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಾದ ಎಲ್ ಆರ್ ಮಹಾದೇವಸ್ವಾಮಿ ಮಾತನಾಡಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಾಣಿಗಳ ಪ್ರಿಯರು ಹಾಗೆಯೇ ಪ್ರತಿಯೊಬ್ಬರೂ ಅವರವರ ಜನ್ಮ ದಿನಾಚರಣೆಯನ್ನು ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಜನ್ಮ ದಿನಾಚರಣೆಯನ್ನು ವಿಶೇಷವಾಗಿ ಆಚರಿಸ ಬೇಕೆಂದು ಮನವಿ ಮಾಡಿದರು
ನಂತರ ಭಾರತೀಯ ಜನತಾ ಪಾರ್ಟಿ ಮೈಸೂರು ನಗರ ಘಟಕದ ಅಧ್ಯಕ್ಷರಾದ ಟಿ ಎಸ್ ಶ್ರೀವತ್ಸ ಮಾತನಾಡಿ ಅಟಲ್ ಬಿಹಾರಿ ವಾಜಪೇಯಿ ರವರು ಮೂರು ಬಾರಿ ನಮ್ಮ ದೇಶದ ಪ್ರಧಾನಮಂತ್ರಿಗಳಾಗಿ ತಮ್ಮದೇ ಆದ ಅಭೂತಪೂರ್ವ ಸೇವೆ ಸಲ್ಲಿಸಿದ್ದಾರೆ. ಭಾರತೀಯರ ಪ್ರತಿಯೊಬ್ಬರ ಕನಸಾಗಿದ್ದ ಅಯೋಧ್ಯೆ ರಾಮಜನ್ಮ ಭೂಮಿ ನಿರ್ಮಾಣ ಹೋರಾಟ ಸಾಕಾರಗೊಳ್ಳಲು ವಿಜಯಸಂಕಲ್ಪ ಯಾತ್ರೆ ಮೂಲಕ ಯಶಸ್ವಿಯಾಗಲೂ ಯೋಜನೆ ರೂಪಿಸಿದವರೇ ಅಟಲ್ ಜೀ ರವರು, ರಾಜಕರಣದೊಂದಿಗೆ ಅನೇಕ ಸಾಮಾಜಿಕ,ಸಾಂಸ್ಕೃತಿಕ, ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಸೇವೆಗೈದಿದ್ದಾರೆ.1961 ರಿಂದ ಬಹುಕಾಲ ರಾಷ್ಟ್ರೀಯ ಭಾವೈಕ್ಯತಾ ಮಂಡಳಿಯ ಸದಸ್ಯರು ,ಆಲ್ ಇಂಡಿಯಾ ಸ್ಟೇಷನ್ ಮಾಸ್ಟರ್ಸ್ ಹಾಗೂ ಅಸಿಸ್ಟೆಂಟ್ಸ್ ಸ್ಟೇಷನ್ ಮಾಸ್ಟರ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾಗಿಯೂ ದುಡಿದದ್ದು ಅಪಾರ,ಪಂಡಿತ್ ಧೀನ್ ದಯಾಳ್ ಉಪಾಧ್ಯಾಯ ಸ್ಮಾರಕ ಸಮಿತಿ,ಜನ್ಮಭೂಮಿ ಸ್ಮಾರಕ ಸಮಿತಿಗಳ ಸದಸ್ಯರಾಗಿಯೂ ಇವರ ಕೊಡುಗೆ ಕೈಗನ್ನಡಿಯಾಗಿದೆ ಎಂದು ಅವರು ಹೇಳಿದರು.
ಇದಲ್ಲದೇ ರಾಜ್ಯಸಭೆ,ಲೋಕಸಭೆಗಳ ಅನೇಕ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸಿರುತ್ತಾರೆ.ಉತ್ತಮ ಕವಿ,ಬರಹಗಾರರಾಗಿಯೂ ಹೆಸರು ಗಳಿಸಿದ್ದಾರೆ,ರಾಷ್ಟ್ರಧರ್ಮ,ಪಾಂಚಜನ್ಯ,ಸ್ವದೇಶಿನೀತಿ ಅನುಸರಿಸುವಿಕೆ ಮತ್ತು ವೀರ ಅರ್ಜುನ್‌ ಅಂತಹ ಅನೇಕ‌ ಪತ್ರಿಕೆಗಳ ಸಂಪಾದಕರಾಗಿಯೂ ಅಟಲ್ ಜೀ ರವರು ಕೆಲಸ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ನಮ್ಮ ದೇಶದಲ್ಲಿ ಉತ್ಪತ್ತಿಯಾಗುವ ಆಹಾರ ಪದಾರ್ಥಗಳು,ಅಥವಾ ಇನ್ನಿತರ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಸಿಗಬೇಕು ಮತ್ತು ನಮಗೆ ಬೇಕಾಗುವಷ್ಟು ವಸ್ತುಗಳು ಅಥವಾ ಇನ್ನಿತರ ಸರಕುಗಳು ಇಲ್ಲೇ ಉತ್ಪನ್ನವಾಗಬೇಕೆಂಬುದರ ಆತ್ಮವಿಶ್ವಾಸವನ್ನು ಭಾರತೀಯರಲ್ಲಿ ತುಂಬುವಂತಹ ಕೆಲಸ ಮಾಡಿದವರೀ ಅಟಲ್ ಬಿಹಾರಿ ವಾಜಪೇಯಿ ರವರು ಎಂಬ ಅವರ ಹೋರಾಟದ ಹಿನ್ನೆಲೆಯನ್ನು ತಿಳಿಸಿದರು.
ಭಾರತದ ಕನ್ಯಾಕುಮಾರಿಯಿಂದ ದಿಲ್ಲಿಗೆ ಚಲಿಸುವ ರೈಲಿಗೆ ‘ವಾಜಪೇಯಿ ಎಕ್ಸ್ ಪ್ರೆಸ್’ ಎಂದು ನಾಮಕರಣ ಮಾಡಿ ಸತ್ಪುರುಷ ಅಟಲ್ ಜೀ ರವರಿಗೆ ಗೌರವ ಸಮರ್ಪಿಸಬೇಕೆಂದು ಕಾರ್ಯಕ್ರಮದ ಮೂಲಕ‌ ಈ ಸಂದೇಶವನ್ನು ಸಾರಿದರು
ಇದೇ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷರಾದ ಟಿಎಸ್ ಶ್ರೀವತ್ಸ , ಕರ್ನಾಟಕ ಸರ್ಕಾರದ ಅಂದಿನ ಮೃಗಾಲಯದ ಅಧ್ಯಕ್ಷರಾದ ಎಲ್ ಆರ್ ಮಹದೇವಸ್ವಾಮಿ ,ಸದಸ್ಯರಾದ ಗೋಕುಲ್ ಗೋವರ್ಧನ್ ,ವೀರರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಲಕ್ಷ್ಮೀದೇವಿ ,ಮೃಗಾಲಯದ ಅಧಿಕಾರಿ ರಘು ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ,ಮಾಜಿ ನಗರ ಪಾಲಿಕೆ ಸದಸ್ಯರಾದ ಎಂ ಡಿ ಪಾರ್ಥಸಾರಥಿ ,ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್ ,ಜಿ ಎಂ ಪಂಚಾಕ್ಷರಿ ,ಸಿಂಡಿಕೇಟ್ ಜಗದೀಶ್ ,ಹರೀಶ್ ನಾಯ್ಡು ,ಹಾಗೂ ಇನ್ನಿತರರು ಹಾಜರಿದ್ದರು

By admin