ಸಮಾಜದ ಎಲ್ಲ ವರ್ಗಗಳನ್ನು ಪ್ರೀತಿಸುವ ದಿವಂಗತ ಸಣ್ಣ ಮೊಗೇಗೌಡರನ್ನು ಹಾಗೂ ಉಪ್ಪಾರ ಸಮಾಜವನ್ನು ನಿಂದಿಸಿರುವ ಶಾಸಕ ಕೆ ಮಹದೇವ್ ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು.ಎಂದು ಮಾಜಿ ಅರಣ್ಯ ಸಚಿವ ಸಿ ಎಚ್ ವಿಜಯಶಂಕರ್ ಆಗ್ರಹಿಸಿದರು
ತಾಲ್ಲೂಕು ಉಪ್ಪಾರ ಸಂಘ ಹಾಗೂ ಭಾರತೀಯ ಜನತಾ ಪಕ್ಷ, ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಪಿರಿಯಾಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ರಾಲಿ ಉದ್ದೇಶಿಸಿ ಮಾತನಾಡಿದರು.
ಕರ್ನಾಟಕ ಉಪ್ಪಾರ ಮಹಾಸಭಾದ ರಾಜ್ಯಾಧ್ಯಕ್ಷ ಜಿ ಎಂ ಗಾಡ್ಕರ್ ಮಾತನಾಡಿ ಶಾಸಕ ಕೆ ಮಹದೇವ್ ಜವನಿಕುಪ್ಪೆ ಗ್ರಾಮದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಉಪ್ಪಾರ ಜನಾಂಗದ ದಿವಂಗತ ಸಣ್ಣಮೇಗೌಡರ ಸಾವನ್ನು ಕುರಿತು ಈ ದರಿದ್ರ ಸಾಯದಿದ್ದರೆ ನಾನು ಅಂದೇ ಶಾಸಕ ನಾಗುತ್ತಿದ್ದೆ ಇವತ್ತು ಸತ್ತು ನನ್ನನ್ನು ಸಾಯಿಸಿದ ಎಂದು ನಿಂದಿಸಿರುವುದು ಸಮಾಜಕ್ಕೆ ಮಾಡಿದ ಅಪಮಾನ ಇಂಥ ಕೀಳು ಮಟ್ಟದ ಪದಗಳನ್ನು ಬಳಸಿ ಉಪ್ಪಾರ ಸಮಾಜವನ್ನು ನಿಂದಿಸಿರುವ ಶಾಸಕ ಕೆ ಮಹದೇವ್ ಈ ಸಮಾಜದ ಋಣವನ್ನು ಮರೆತು ಮಾತನಾಡಿದ್ದರೆ.
ಮಹದೇವ್ ಶಾಸಕರಾಗಲು ಉಪ್ಪಾರ ಸಮಾಜದ ಕೊಡುಗೆ ಅಪಾರವಾಗಿದೆ ಇದನ್ನು ಮರೆತು ಉಪ್ಪಾರ ಸಮಾಜವನ್ನು ಹಾಗೂ ಈ ಸಮಾಜದ ನಾಯಕರು ನಿಂದಿಸಿರುವ ತಾವು ಕೂಡಲೇ ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ರಾಜ್ಯಾದ್ಯದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು
ಪಿರಿಯಾ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಹತ್ತಿರದಿಂದ ಹೊರಟ ಪ್ರತಿಭಟನಕಾರರು ಬಿಎಂ ರಸ್ತೆಯ ಮೂಲಕ ಶಾಸಕ ಕೆ ಮಹದೇವ್ ವಿರುದ್ಧ ಧಿಕ್ಕಾರಗಳನ್ನು ಕೂಗುತ್ತ ಕಾಲ್ನಡಿಗೆಯಲ್ಲಿ ಸಾಗಿ ತಾಲ್ಲೂಕು ದಂಡಾಧಿಕಾರಿ ಶ್ವೇತ ರವೀಂದ್ರ ರವರ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಚ್ ಸಿ ಬಸವರಾಜ್ ‘ಮೈಸೂರು ಚಾಮರಾಜನಗರ ಜಿಲ್ಲೆಯ ಉಪ್ಪಾರ ಸಂಘದ ಕಾರ್ಯಾಧ್ಯಕ್ಷ ವಿಷಕಂಠಯ್ಯ ‘ ತಾಲ್ಲೂಕು ಅಧ್ಯಕ್ಷ ಜಯಶಂಕರ್ , ತಾಲ್ಲೂಕು ಬಿಜೆಪಿ ಅಧ್ಯಕ್ಷ ಡಾ॥ ಪ್ರಕಾಶ್ ಬಾಬುರಾವ್’ , ಜೊತೆಗೆ ಪರಿಸರ ಹೋರಾಟಗಾರ ಕೌಲನಹಳ್ಳಿ ಸೋಮಶೇಖರ್ ‘ ದಲಿತ ಸಂಘರ್ಷ ಸಮಿತಿ ಮುಖಂಡ ಕರಡಿಪುರಕುಮಾರ್ ‘ ತಾಲ್ಲೂಕು ಭೋವಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರವಿಕುಮಾರ್ ‘
ಗಿರಿಜನ ಹಾಡಿ ಮುಖಂಡ ಬಸಪ್ಪ ,ಹಾಗೂ ಬೆಮ್ಮತ್ತಿಕೃಷ್ಣ ‘ಹಾಗೂ ವಕೀಲರಾದ ಕಷ್ಣಪ್ರಸಾದ್’ ಹರೀಶ್ ,ಮಂಜು, ದೇವರಾಜ್ , ಉಪ್ಪಾರ ಸಮಾಜದ ಮುಖಂಡರಾದ ನಾರಾಯಣ್’ ಎಲೆಮಂಜು, ಲಕ್ಷ್ಮಿನಾರಾಯಣ್’ ಜಗಪಾಲ್’ ಅನಿಲ್ ಕುಮಾರ್, ಆಂಜನೇಯ’ ಸೋಮಶೇಖರ್ ಹಾಗೂ ಉಪ್ಪಾರ ಜನಾಂಗದ ಬಂಧುಗಳು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು .