ಮಾತೃದೇವೋಭವಃ ಪಿತೃದೇವೋಭವಃ ಗುರುದೇವೋಭವಃ. ಭಾರತದಲ್ಲಿ ಗುರುವಿಗೆ ತಾಯಿತಂದೆ ನಂತರ ಮೊದಲ ಸ್ಥಾನ ನೀಡಲಾಗಿದೆ. ಗುರುರ್‍ಬ್ರಹ್ಮ ಗುರುರ್‍ವಿಷ್ಣು ಗುರುದೇವೋ ಮಹೇಶ್ವರಃ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇನಮಃ. ತ್ರಿಮೂರ್ತಿಗಳ ನಂತರ ನಾಲ್ಕನೆ ಸ್ಥಾನವನ್ನೂ ನೀಡಿದ್ದೇವೆ. ಪುರಾಣ ಇತಿಹಾಸ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲೂ ವಿಶೇಷ ಮಾನ್ಯತೆ ಇದೆ. ಗುರುವಿಗೆ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಹಾಡಿ ಹೊಗಳಿದ್ದಾರೆ. ‘ಅಕ್ಷರಂ ಏವಂ ಕಲಿಸಿದಾತಂ ಗುರು’[ಒಂದೇ ಅಕ್ಷರ ಕಲಿಸಿದವನೂ ಗುರುವು ಹೌದು!] ಅಧ್ಯಾಪಕ ಆಚಾರ್ಯ ಶಿಕ್ಷಕ ಮೇಷ್ಟ್ರು ಮುಂತಾದ ವಿವಿಧ ಪದನಾಮದಿಂದ ಗುರುತಿಸುತ್ತಾರೆ. ‘ಗುರು’ ಎಂಬುದರ ನಿಜಾರ್ಥ:- ಅನಂತ ಅನನ್ಯ ಅಮೋಘ ಅಧ್ಭುತ ಅಮರ ಅಪರಿಮಿತ ಅಸಾಮಾನ್ಯ ಮುಂತಾದ ಅಗಣಿತ ವ್ಯಾಖ್ಯಾನ ನೀಡಬಹುದು. ಭೂಮಂಡಲದಲ್ಲಿ ಮಾನವನಿಗೆ ಎದುರಾಗುವ ಅನರ್ಥ ಅಪಾರ್ಥ ಅಸಮರ್ಥ ಅಸಾಧ್ಯ ಕ್ಲಿಷ್ಟ ಎಂಥದೇ ಸಮಸ್ಯೆಗಳಿಗೆ ಏಕಚಿತ್ತ, ದ್ವೈತಾದ್ವೈತ ತ್ರಿಕರಣಶುದ್ಧಿ ಚತುಷ್‍ದಿಕ್ಕು ಪಂಚಭೂತ ಅರಿಷಡ್‍ವರ್ಗ ಸಪ್ತಸ್ವರ ಅಷ್ಟಭೋಗ-ಭಾಗ್ಯ ನವ(ರಸ)ಗ್ರಹ ದಶಮಸಿರಿ-ಸೊಬಗು ಏಕಾದಶತೃಪ್ತಿ ದ್ವಾದಶಮುಕ್ತಿ ಹಾಗೂ ಶಿಷ್ಟರಕ್ಷಕ ದುಷ್ಟಶಿಕ್ಷಕ ಇವೆಲ್ಲದರ ಸಾರಾಂಶವನ್ನು ಎಳೆಎಳೆಯಾಗಿ ಕೂಲಂಕಶವಾಗಿ ಸರಳವಾಗಿ ತಿಳಿಹೇಳುವ ಪರಿಪೂರ್ಣಕುಂಭ ಸುರಭಿಯೇ ಗುರುವಿನ ಮಹಾತ್ಮೆ !

ಅರ್ಹ ಆಚಾರ್ಯ ಆಗಬೇಕಾದರೆ ವಿದ್ಯೆಗಳನ್ನು ಮೊದಲು ತಾನು ಅರ್ಥೈಸಿಕೊಂಡು ನಂತರ ಶಿಷ್ಯರಿಗೆ ಬೋಧಿಸಬೇಕು. ಲಿಖಿತ-ಪ್ರಾಯೋಗಿಕ ಶಿಕ್ಷಣದ ಜತೆಗೆ ಪಠ್ಯ-ಪಠ್ಯೇತರ ಚಟುವಟಿಕೆಗಳನ್ನು ಕಲಿಸಬೇಕು. ಅದ್ಭುತ ಆಶ್ಚರ್ಯ ನವ್ಯ ಭವ್ಯ ಉನ್ನತಾಧ್ಯಯನ ಸಂಶೋಧನೆ ಬಗ್ಗೆ ಸರಿಯಾಗಿ ಮಾರ್ಗದರ್ಶನ ಮಾಡಬೇಕು. ಕಠಿಣ-ಹೊಸ ಪದ-ವಾಕ್ಯ ವ್ಯಾಕರಣ-ಅವಧಾನ ಇವುಗಳಿಗೆ ಗುರುವು ನಿಘಂಟು ಆಗಬೇಕು! ನ್ಯಾಯಾನ್ಯಾಯ ಧರ್ಮಾಧರ್ಮ ಸತ್ಯಾಸತ್ಯ ಅರ್ಥಾನರ್ಥ ಮೋಸವಂಚನೆ ಪಾಪಪುಣ್ಯ ಕಾನೂನು-ಸಂವಿಧಾನ ಪರೀಕ್ಷೆ ¥sóÀಲಿತಾಂಶ ಪ್ರಯತ್ನ-¥sóÀಲಾ¥sóÀಲಗಳ ಸದುಪಯೋಗ-ದುರುಪಯೋಗ ಅವುಗಳ ಪರಿಣಾಮ ಎಲ್ಲದರ ಬಗ್ಗೆ ವಕೀಲನಾಗಬೇಕು ಪ್ರವಾದಿಯಾಗಬೇಕು ತಾಯಿಯಾಗಬೇಕು ತಂದೆಯಾಗಬೇಕು ಗೆಳೆಯನಾಗಬೇಕು, ಶಿಕ್ಷಕ? ಜಗತ್ತಿನ ಯಾವುದೆ ಜನÀ-ದೇಶ-ಭಾಷೆ-ಸಂಸ್ಕೃತಿ-ಇತಿಹಾಸ-ಆಗುಹೋಗು ಬಗ್ಗೆ ಕನಿಷ್ಟ ಜ್ಞಾನವಿದ್ದು ಎಂಥ ವಿದ್ಯಾರ್ಥಿಯನ್ನೂ ತಿದ್ದಿ ತೀಡು ವಶಕ್ತಿ ಮನವರಿಕೆ ಮಾಡುವ ಯುಕ್ತಿ ಇರಲೇಬೇಕು. ಸರಳ-ಸಜ್ಜನಿಕೆಯನ್ನೂ ಬೆಳೆಸಿಕೊಳ್ಳಬೇಕು. ನವರಸಗಳ ಭಾವನೆಯಲ್ಲಿ ಇ[ಬ]ರುವ ಕಠಿಣ ಮತ್ತು ಮೃದು ಉಚ್ಛಾರಣೆ, ಪದಪ್ರಯೋಗ, ಉಚಿತಾನುಚಿತ ಉಪಯೋಗ ಪೂರಕ-ಮಾರಕ ಪರಿಣಾಮ-ಪರಿಮಿತಿ ಬಗ್ಗೆ ಪೂರ್ಣವಾಗಿ ಪಕ್ವವಾಗಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಮನನ ಮಾಡಿಸುವ ಮಹೋಪಾಧ್ಯಾಯ ಆಗಬೇಕು. ಯಾವುದೆ ಶಾಸ್ತ್ರ/[ವಿ]ಜ್ಞಾನ ಬೋಧಿಸಿದ ನಂತರ ಅದನ್ನು ಸರಾಗವಾಗಿ ಸರಳವಾಗಿ ಹಾಗೂ ಸಂದರ್ಭೋಚಿತವಾಗಿ ತಾತ್ಪರ್ಯಗೊಳಿಸುವ ಕಲೆಯನ್ನು ಕಲಿಸುವ ತಜ್ಞನಾಗಬೇಕು. ಗೀತ, ಸಂಗೀತ, ನಾಟ್ಯ, ನಟನೆ, ಕುಂಚ(ಶಿಲ್ಪ)ಕಲೆ, ವಾದ, ವಿವಾದ, ವಿತಂಡವಾದ, [ವಿ]ತರ್ಕ, ರೀ[ನೀ]ತಿ, ವಾಚಾಳಿ/ವಾಕ್ಪಟು ಅವಲಂಬನ-ಪರಾವಲಂಬನ, ಸ್ವಂತಿಕೆ-ಎರವಲು, ಅಸೂಯೆ-ಅನಸೂಯೆ, ಸ್ವಾತಂತ್ರ್ಯ-ಸ್ವೇಚ್ಛಾಚಾರ, ಮುಂತಾದವುಗಳನ್ನು ವಿವಿಧ ಕೋನಗಳಲ್ಲಿ ವಿಮರ್ಶಿಸುವ ಟೀಕೆಟಿಪ್ಪಣಿ ಮಾಡುವಂಥ [ಪ್ರ]ಶಿಕ್ಷಣವನ್ನು ಕಲಿಸಿಕೊಡುವ ಸಕಲ ಕಲಾವಲ್ಲಭ ಆಗಬೇಕು ಗುರು?!
‘ಗುರು-ಶಿಷ್ಯ’ ಕಾಲಚಕ್ರದೊಳಗೆ ನಿರಂತರವಾಗಿ ವಿದ್ಯೆಯನ್ನು ಒಬ್ಬರಿಂದ ಮತ್ತೊಬ್ಬರಿಗೆ ಕಲಿ[ತು]ಸುವ ಮನಸ್ಸು ಇ[ಬ]ರಬೇಕು. ಸಹಜ ಕ್ರಿಯೆ-ಪ್ರಕ್ರಿಯೆಗಳಿಗೆ ಸ್ಪಂದಿಸಬೇಕು. ಕಾಲಕ್ಕೆ ತಕ್ಕಂತೆ, ಭೌಗೋಳಿಕ ಲಕ್ಷಣಕ್ಕೆ ತಕ್ಕಂತೆ, [ಪ್ರ]ದೇಶಕ್ಕೆ ತಕ್ಕಂತೆ, ಭೌ[ತಿ]ದ್ಧಿಕ ಬದಲಾವಣೆಗೆ ತಕ್ಕಂತೆ ಮಾನವ ಮೌಲ್ಯಗಳನ್ನು ಹೊಂದಿಸಬೇಕು. ಜೀವನದಲ್ಲಿ ಎದುರಾಗುವ ಕಷ್ಟನಷ್ಟ ಕೋಪತಾಪ ತ್ಯಾಗಭೋಗ ಸವಾಲುಗಳನ್ನು ಸರಿಸಮನಾಗಿ ಸ್ವೀಕರಿಸುವ ಸಿದ್ಧಶಿಲೆ ಆಗಿಸಬೇಕು. ಇತಿಹಾಸದ ಘಟನೆಗಳ ಅಥವಾ ಅನುಭವದ ದೃಷ್ಟಾಂತಗಳ ಉದಾಹರಣೆ ನೀಡಿ ಧ್ಯೈರ್ಯ ಸಾಹಸದ ಮೂರ್ತಿಯಾಗಿಸಬೇಕು ದುಷ್ಟರಿಗೆ ಶಿಕ್ಷೆ ಶಿಷ್ಟರಿಗೆ ರಕ್ಷಣೆ ಸಿದ್ಧಾಂತದ ಮೇಲೆ, ನಮ್ಮ ನಾಡಿನ ವೇದಾಂತದ ಹಿನ್ನೆಲೆಯಲ್ಲಿ ಮುನ್ನುಗ್ಗುತ್ತ ಒಮ್ಮೊಮ್ಮೆ ತಲೆಬಾಗುತ್ತ, ಆತ್ಮಸಾಕ್ಷಿಯಾಗಿ ಸರಿ ಎಂಬುದನ್ನು ಬಿಡದೆ ಮುಂದುವರೆಸುತ್ತ ‘ಸೈ’ಎನಿಸಿಕೊಳ್ಳಬೇಕು.

ದಿಟ-ದಿಟ್ಟ ಗುರುವು, ಪ್ರಪಂಚದ ಪ್ರತಿಯೊಂದು ಸಾಧನೆ-ಬೋಧನೆಗಳ ಸಂಗಮವಾಗಿದ್ದು ನಿಗರ್ವಿ-ನಿಸ್ವಾರ್ಥಿ ನಿಷ್ಪಕ್ಷಪಾತಿ ಆಗಿರಲೇಬೇಕು. ಆಪತ್ಕಾಲದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳುವಂಥ ಶಸ್ತ್ರಾಸ್ತ್ರ ಕುಟಿಲೋಪಾಯದ ಜತೆಗೆ ಸಾಮ-ದಾನ-ಭೇದ-ಧಂಡ ವಿದ್ಯೆಗಳನ್ನೂ ಕಲಿ[ತಿರಬೇಕು]ಸಬೇಕು. ಇಲ್ಲದಿದ್ದರೆ ಅನ್ಯಾಯ, ವಂಚನೆ, ದ್ರೋಹಕ್ಕೆ ಗುರಿಯಾಗಿ ಅಕಾಲಮೃತ್ಯುವಿಗೆ ಬಲಿಯಾಗುವರು. ಸಮಾಜಕಂಟಕ ಗುರು(ಶಿಷ್ಯ)-ದೇಶ-ಬಂಧು-ಮಿತ್ರ ದ್ರೋಹಿಗಳಿಂದ ದೂರವಿರ[ಇರಿಸ]ಬೇಕು?!
‘ವಿದ್ಯೆ’ ಬಗ್ಗೆ ಕುವೆಂಪು ವ್ಯಾಖ್ಯಾನ:- “ವಿದ್ಯೆಯೆಂಬುದು ಪ್ರಶ್ನೆಯಿಂದ ಆಶ್ಚರ್ಯದೆಡೆಗೆ ಪುನಃ ಆಶ್ಚರ್ಯದಿಂದ ಪ್ರಶ್ನೆಯೆಡೆಗೆ ಚಲಿಪ ನಿರಂತರ ಪ್ರಕ್ರಿಯೆ” ನಿರಂತರ ಪ್ರಕ್ರಿಯೆಯಿಂದಲೆ ಪರಿಪೂರ್ಣತೆ ಪ್ರಾಪ್ತವಾಗುತ್ತದೆ ಎಂಬುದು ರಾಷ್ಟ್ರಕವಿ ಅಭಿಮತ. ಸರ್ವಪಲ್ಲಿ ರಾಧಾಕೃಷ್ಣನ್:- “ಮಿಯರ್ ಇನ್ರ್ಮೇಶನ್ ಈಸ್ ನಾಟ್ ನಾಲೆಡ್ಜ್; ಮಿಯರ್ ನಾಲೆಡ್ಜ್ ಈಸ್ ನಾಟ್ ವಿಸ್‍ಡಮ್” ಎಂದು ಘೋಷಿಸಿದ್ದಾರೆ. ಗುರುವು ಪ್ರತಿಯೊಬ್ಬ ಶಿಷ್ಯನ ಜೀವನ ಕಟ್ಟಡಕ್ಕೆ ಸರಿಯಾದ ಅಡಿಪಾಯ ಹಾಕುವ ದಕ್ಷ ಅಭಿಯಂತರನಾಗಿ, ಸಕಲ ವಿದ್ಯೆಯನ್ನು ನಿರ್ವಿವಾದಿತವಾಗಿ ನಿರ್ಭಯವಾಗಿ ಸಕಾಲದಲ್ಲಿ ಕಲಿಸುವ ಪಾರಂಗತನಾಗಬೇಕು. ಪಠ್ಯ ವಿಷಯದ ಜೊತೆಯಲ್ಲೆ ಪಶು,ಪ್ರಾಣಿ,ಪಕ್ಷಿ,ಸಂಕುಲ ಮುಂತಾದ ರಾಷ್ಟ್ರದ ಪತ್ತು-ಸಂಪತ್ತುಗಳ ಸದುಪ(ದುರುಪ)ಯೋಗ, ಅದರಿಂದಾಗುವ ಆಪತ್ತು-ವಿಪತ್ತುಗಳ ಪರಿಚಯ ಮಾಡಿಕೊಡಬೇಕು. ಸಮಾಜ ಕಾನೂನುಬಾಹಿರ ಚಟುವಟಿಕೆ ಅವುಗಳಿಂದ ಉಂಟಾಗುವ ನಷ್ಟ-ಕಷ್ಟಗಳ ಬಗ್ಗೆಯೂ ಶಿಷ್ಯರಿಗಷ್ಟೆ ಅಲ್ಲ ಇಡೀ ಸಮಾಜಕ್ಕೆ ಮನವರಿಕೆ ಮಾಡಿಕೊಡಬೇಕು. ಗುರುವಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿಯೂ ಆಗಬಹುದು ಸರ್ವನಾಶವೂ ಆಗಬಹುದು. ಗುರು-ಶಿಷ್ಯರು ಸರಿಯಿದ್ದರೆ ಮಾತ್ರ ದೇಶ-ಕೋಶವು ಸರಿಯಿರುತ್ತದೆ, ದೇಶ-ಕೋಶವು ಸರಿಯಿದ್ದರೆ ಪಾಳುಬಿದ್ದ ದೇಶವನ್ನೂ ಸಹ ಪುನರ್ ನಿರ್ಮಿಸಬಹುದು ಇಲ್ಲ ವಾದರೆ ಎಂಥ ದೇಶವಾದರೂ ಕಾಗೆಗಳ ನಾಡಾಗುತ್ತದೆ ಗೂಬೆಗಳ ಬೀಡಾಗುತ್ತದೆ! ಆದ್ದರಿಂದ, ಯಥಾಗುರು-ತಥಾಶಿಷ್ಯ, ಯಥಾರಾಜ-ತಥಾಪ್ರಜಾ ನಾಣ್ಣುಡಿಯನ್ನು ಇವತ್ತಿಗೂ ಎಲ್ಲರು ಒಪ್ಪುವುದು ಅನಿವಾರ್ಯ.

ಎಲ್ಲಕಾಲದಲ್ಲು ‘ಪರಮಗುರು-ಪವಿತ್ರಶಿಷ್ಯ’ ವರ್ಗ ಇದ್ದೇಇರುತ್ತದೆ. ಅಲ್ಲಲ್ಲಿ ‘ಚೋರ್‍ಗುರು-ಚಂಡಾಲಶಿಷ್ಯ’ ವರ್ಗ ಇರಬಹುದು?! ಇತ್ತೀಚೆಗೆ ‘ಬೋರ್‍ಗುರು-ಭಂಡಶಿಷ್ಯ’ ವರ್ಗ ಇರುವುದು ವಿಚಿತ್ರ ಆದರೂ ಸತ್ಯ! ‘ಕೇಡುಗಾಲಕ್ಕೆ ನಾಯಿಯು ಮೊಟ್ಟೆಇಟ್ಟಂತೆ’ ಯಾರು ಗುರು? ಯಾರು ಶಿಷ್ಯ? ಗುರುತಿಸಲು ಸಾಧ್ಯವಿಲ್ಲದಷ್ಟು ಹೀನಾಯಸ್ಥಿತಿ ತಲುಪಿದೆ! ಗುರು-ಶಿಷ್ಯರು ಭೇಟಿಯಾದಾಗ ಹಾಯ್ ಬಾಯ್ ಹೇಳಿದ ನಂತರ ಅವರದ್ದೇ ಕಾರ್-ಬಾರ್, ಪಿeóÁ-ಬರ್ಗರ್, ಜೆರಾಕ್ಸ್-ಈನೋಟ್ಸ್, ಲ್ಯಾಪ್‍ಟಾಪ್-ಪೆನ್‍ಡ್ರೈವ್ ಆಡಿಯೊ-ವೀಡಿಯೊ ಇಯ¥sóÉರ್Çೀನ್-ಮೊಬೈಲ್ ಟ್ಯಾಬ್ಲೆಟ್-ಇಂಟರ್‍ನೆಟ್ ಅಗತ್ಯಕ್ಕಿಂತ ಹೆಚ್ಚುಬಳಸುವಲ್ಲಿ ತಲ್ಲೀನ[ಅಡ್ಡಿಕ್ಟ್] ಆಗಿದ್ದಾರೆ. ವಿದ್ಯಾರ್ಜನೆಗೆ ಅವಶ್ಯವಾದ ಸುಧೀರ್ಘ ಬಾಳಿಕೆಯ ಎಲ್ಲರಿಗೂ ಎಟುಕುವ ಆರೋಗ್ಯಕರವಾದ ಪೆನ್ನುಹಾಳೆ ನೋಟ್‍ಬುಕ್ ಟೆಕ್ಸ್ಟ್‍ಬುಕ್ ಡಿಕ್ಷನರಿ ಗೈಡ್ ಜಾಮಿಟ್ರಿ ಕಾಪಿಪುಸ್ತಕ ಮಾಯವಾದವು?! ಮುಂಜಾನೆ ಮತ್ತು ಸಂಜೆಯಲ್ಲಿ ಓದುವ ಅಭ್ಯಾಸ ಕಾಗುಣಿತ ಮಗ್ಗಿ ಪದ್ಯ ಕಂಠ[ಮನೆ]ಪಾಠ ಸಮೂಹ ಅಧ್ಯಯನ! ಸಕಾಲದಲ್ಲಿ ವಿದ್ಯೆಬುದ್ಧಿ ನಡೆನುಡಿ ಕಲಿತು ತಾಯಿತಂದೆ ಗುರುಹಿರಿಯರ, ಸೋದ[ರ]ರಿ ಬಂಧುಬಳಗ ನೆರೆಹೊರೆ ನೆಂಟರಿಷ್ಟರ, ಶುಭಾಶುಭ ಕಾರ್ಯಗಳಲ್ಲಿ ಭಾಗವಹಿಸುವುದು. ಅವರ ಒಡನಾಟ ಸಲಹೆ ಬುದ್ಧಿವಾದ ಸಹಜೀವನ ಸಹಭೋಜನ ದೇಶಸುತ್ತಿ ಕೋಶಓದುವ ಸು[ವಿ]ಜ್ಞಾನ. ಸೂರ್ಯೋದಯಕ್ಕೆ ಮುನ್ನ ಎದ್ದು ವ್ಯಾಯಾಮ/ಯೋಗಾಭ್ಯಾಸ, ಗಾಯನ/ವಾದ್ಯ ಸಂಗೀತಾಭ್ಯಾಸ, ಮನೆಗೆಲಸದಲ್ಲಿ ನೆರವಾಗು, ಇನ್ನುಮುಂತಾದ ಸುಬುದ್ಧಿ-ಸನ್ನಡತೆಗಳು ಸ್ಮಶಾನ ಸೇರಿದವೇನೋ?! ವಯೋಧರ್ಮಕ್ಕೆ ಅನುಗುಣವಾಗಿ ಕಲಿಕೆ-ಗಳಿಕೆ ಮಾಡಲು ಆಗುತ್ತಿಲ್ಲವಾದ್ದರಿಂದ, ಸಕಾಲಕ್ಕೆ ವಿವಾಹ/ಮಕ್ಕಳ ಭಾಗ್ಯ ದೊರಕುತ್ತಿಲ್ಲ. ಅಕಾಲಮರಣ ಅಂಗಾಂಗವೈ¥sóÀಲ್ಯ ಇತ್ಯಾದಿ ದು[ಷ್ಪ]ರಂತಕ್ಕೆ ತುತ್ತಾಗುತ್ತಿದ್ದಾರೆ! ಗುರು-ಶಿಷ್ಯರು ಸಮಾಜದ ಉದ್ಧಾರಕರೂ ಆಗಬಹುದು ವಿನಾಶಕರೂ ಆಗಬಹುದು. ಇವರಿಬ್ಬರೂ ಜಗತ್ತಿಗೆ ‘ವರ’ ವಾಗಬೇಕೆ ಹೊರತು ‘ಶಾಪ’ ವಾಗಬಾರದು.

ಗುರುವು ಹೀಗಿರಬೇಕು?:- ತ್ರಿಕರಣ ಶುದ್ಧಿಯಿಂದ ವಿದ್ಯೆಯನ್ನು ಕಲಿಸಬೇಕು. ವಿದ್ಯಾಸಕ್ತರಿಗೆ ಸಹೋದ್ಯೋಗಿಗೆ ಅವಶ್ಯಕತೆ ಇದ್ದವರಿಗೆ ಬಯಸಿಬಂದವರಿಗೆ ಸಾರ್ಥಕರೀತಿ ಪ್ರತಿಫಲಾಪೇಕ್ಷೆ ಬಯಸದೆ ಪ್ರಾಮಾಣಿಕ ವಿದ್ಯಾದಾನ ಮಾಡಬೇಕು. ಸದಭಿರುಚಿ ಸಮರ್ಥತೆ ಬೋಧನೆ ಸಂಶೋಧನೆ ಸಾಮಾಜಿಕನಡವಳಿಕೆ ಸಚ್ಚ್ಯಾರಿತ್ರ್ಯದ ಬಗ್ಗೆ ‘ರೋಲ್‍ಮಾಡಲ್’ ಆಗಬೇಕು.
ಶಿಷ್ಯನು ಹೀಗಿರಬೇಕು?:- ದಿನಚರಿಗೆ ಅನುಗುಣವಾಗಿ ಸ-ಸಮಯಕ್ಕೆ ಎದ್ದು ದೇವರನ್ನು ಸ್ಮರಿಸಿ ತಾಯಿತಂದೆ ಗುರುಹಿರಿಯರಿಗೆ ನಮಸ್ಕರಿಸಿ ಅಭ್ಯಾಸ ಪ್ರಾರಂಭಿಸಬೇಕು. ನಿಷ್ಠೆಯಿಂದ ಪ್ರತಿತರಗತಿಗೂ ಹಾಜರಾಗಿ ನಿಶ್ಯಬ್ಧ ಶ್ರದ್ಧೆಯಿಂದ ಉಪನ್ಯಾಸ ಆಲಿಸಬೇಕು. ಪ್ರತಿಯೊಬ್ಬ ಗುರುವಿಗೂ ಸಮಾನಗೌರವ ತೋರಿಸಿ ಪಾಠ ಅರ್ಥವಾಗದಿದ್ದರೆ ಕೇಳಿ ತಿಳಿದುಕೊಳ್ಳಬೇಕು. ಶೀಲ, ವಿನಯ, ನಂಬಿಕೆ, ಚಾರಿತ್ರ್ಯ, ಸ್ವಚ್ಚವಿರಬೇಕು. ‘ವಿದ್ಯಾತುರಾಣಾಂ ನ ನಿದ್ರಾಹಾರಂ’ ‘ಹಿಂದೆಗುರು ಮುಂದೆಗುರಿ’ “ಸ್ಟೂಡೆಂಟ್‍ಲೈ¥sóï ಈಸ್ ಎ ಗೋಲ್ಡನ್‍ಲೈ¥sóï” ಅನ್ವರ್ಥವಾಗುವಂತೆ ಪೆÇೀಷಕರು ಶಾಲಾಕಾಲೇಜು ಸರ್ಕಾರ ಸಮಾಜ ಗೆಳೆಯರು ಸಹಪಾಠಿ ಗ್ರಂಥಾಲಯ ಮಾಧ್ಯಮ ಇವರೆಲ್ಲರಿಂದ ಸಿಗುವ ಸವಲತ್ತುಗಳನ್ನು ಸದುಪಯೋಗಿಸಿಕೊಳ್ಳಬೇಕು. ಒಂದುವೇಳೆ ಈಹಂತದಲ್ಲಿ ವಿದ್ಯೆ ನೈವೇದ್ಯ ಆದಾಗ ಕೆಳದರ್ಜೆ ನೌಕರನಾಗಿ ಹೀನಾಯ ಜೀವನ ನಡೆಸಬೇಕಾಗುತ್ತದೆ ಎಚ್ಚರಿಕೆ?! ಅಥವಾ ಅಡ್ಡದಾರಿ ಹಿಡಿದು ಕಾನೂನುಬಾಹಿರ ಚಟುವಟಿಕೆಗಳ ದಾಸನಾಗಿ, ಅಪರಾಧಿಯಾಗಿ ಸೆರೆಮನೆ ಸೇರಿ ಜೀವಂತ ಶವವಾಗಿ ಬದುಕಬೇಕಾಗುತ್ತದೆ ಜೋಕೆ?!

ಕಡೆಯದಾಗಿ ವಿದ್ಯಾರ್ಥಿಸಮೂಹಕ್ಕೆ ಕಾಮನ್ ಗೈಡ್‍ಲೈನ್ಸ್:-
ಯಾವುದೆ ಕಾರಣಕ್ಕು ಹೇಡಿಯಂತೆ ಆತ್ಮಹತ್ಯೆ ಮಾಡಿಕೊಳ್ಳದೆ ಬದುಕಲು ಕಲಿಯಿರಿ. ಕಷ್ಟಪಟ್ಟು ಓದುವಬದಲು ಇಷ್ಟಪಟ್ಟು ಅಭ್ಯಾಸಮಾಡಿರಿ. ರ್ಯಾಂಕ್‍ಗೋಸ್ಕರ ಅಂಕಗಳಿಕೆ ಬದಲು ಅರ್ಥೈಸಿಕೊಂಡು ಅಂಕಗಳಿಸಿರಿ. ತಡರಾತ್ರಿ ಹಾಸ್ಟೆಲ್/ಮನೆ ತಲುಪಿ ನಿಮ್ಮ ವಾರ್ಡನ್/ಪೆÇೀಷಕರನ್ನು ಬಲಿಕೊಡದಿರಿ. ಸ್ವಯಂಕೃತ ಅಪರಾಧಕ್ಕೆ ‘ಶಾಪ’ ‘ಹಣೆಬರಹ’ ಮುಂತಾದ ಮೂಢ/ಅಪನಂಬಿಕೆ ಹೆಸರಿಟ್ಟು ಸು[ಪೆÇ]ಳ್ಳು ನೆಪವೊಡ್ಡಿ ಜಾರಿಕೊಳ್ಳದಿರಿ. ‘ರ್ಯಾಗಿಂಗ್’ ಶಿಕ್ಷಾರ್ಹ ಅಪರಾಧ, ಇದನ್ನು ಬುಡಸಹಿತ ಕಿತ್ತೊಗೆಯಿರಿ. ಲವ್- ಲವಿಕೆಯಿಂದ ಇರಲು ಪಠ್ಯೇತರ ಚಟುವಟಿಕೆ/ಸ್ಫರ್ಧೆಗಳಲ್ಲಿ ಭಾಗವಹಿಸಿರಿ. ಶ್ರವಣ-ದೃಶ್ಯ ಮಾಧ್ಯಮದ ಮೂಲಕ ಶೈಕ್ಷಣಿಕ ಜ್ಞಾನ ಪಡೆವ ಪ್ರವೃತ್ತಿ ಜತೆಗೆ ಮನರಂಜನಾತ್ಮಕ ಹಾಸ್ಯಪ್ರಜ್ಞೆ ಬೆಳೆಸಿಕೊಳ್ಳಿರಿ. ಅಂದಾಭಿಮಾನ ದ್ವೇಷಾಸೂಯೆ ಪ್ರೇ[ಕಾ]ಮ ಚಾ[ಡೇ]ಟಿಂಗ್ ಮುಂತಾದ ಅ[ತೀ]ನಾಗರಿಕತೆ ವರ್ಜಿಸಿ. ದ್ವೇಷವನ್ನು ಪ್ರೀತಿಯಿಂದಲೂ ಕ್ರಾಂತಿಯನ್ನು ಶಾಂತಿಯಿಂದಲೂ ಗೆಲ್ಲುವ ಸಹನಾಶೀಲತೆ ಬೆಳಿಸಿಕೊಳ್ಳಿರಿ. ಕಳೆದುಹೋದರೆ ಮತ್ತೆಸಿಗದ ಸಮಯ-ಹಣ-ಜ್ಞಾನ-ಪ್ರವಚನ-ಸ್ನೇಹ-ವಿಶ್ವಾಸ-ಸೌಲಭ್ಯ-ಅವಕಾಶ; ವ್ಯರ್ಥ ಮಾಡದಿರಿ. “ತಪ್ಪು”ಯಾರೆ ಮಾಡಲಿ ಧೈರ್ಯವಾಗಿ ಪ್ರಶ್ನಿಸಿ ತಿದ್ದುಕೊಳ್ಳಲು ಅವಕಾಶ ನೀಡಿರಿ. ಪುನರಾವರ್ತನೆ ಆಗದಂತೆ ಸರಿಪಡಿಸಿಕೊಳ್ಳಲು ಶ್ರಮವಹಿಸಿ ಪ್ರಯತ್ನಿಸಿರಿ. ಯಾವಕಾರಣಕ್ಕು ಯಾರನ್ನೂ ನೋಯಿಸದಿರಿ. ತಾಯಿತÀಂದೆ ಗುರುಹಿರಿಯರ ಬಗ್ಗೆ ಭಯಭಕ್ತಿ ಬದಲು ಗೌರವ-ವಿಧೇಯತೆ ಇರಿಸಿಕೊಳ್ಳಿರಿ. ಅಮಾನವೀಯತೆ ಅಶ್ಲೀಲತೆ ಜಾತೀಯತೆ ಕೊಳಕುರಾಜಕೀಯ ಅನಿಷ್ಟಗಳಿಂದ ದೂರವಿರಿ. ಧೂಮಪಾನ ಮದ್ಯಪಾನ ಡ್ರಗ್ಸ್ ವ್ಯಸನಿಯಾಗಿ ಕುಟುಂಬಕ್ಕೆ-ಸಮಾಜಕ್ಕೆ-ರಾಷ್ಟ್ರಕ್ಕೆ ಕಂಟಕರಾಗಬೇಡಿ. ಬ್ಲೂಫಿûಲಂ ಡಿಸ್ಕೊತೆಕ್-ಕ್ಲಬ್ ಮುಂತಾದ ಅಶ್ಲೀಲ-ಅಸಭ್ಯ ದುಶ್ಚಟ ದಾಸರಾಗದಿರಿ. ಎನ್‍ಎಸ್‍ಎಸ್, ಎನ್‍ಸಿಸಿ, ಸ್ಕೌಟ್-ಗೈಡ್, ರೆಡ್‍ಕ್ರಾಸ್, ಸಂಚಾರಿಪೆÇಲೀಸ್, ಸಹಾಯವಾಣಿ ಮೂಲಕ ಅಂಗವಿಕಲರಿಗೆ ಅಬಲರಿಗೆ ವಯೋವೃದ್ಧರಿಗೆ ಆರ್ಥಿಕ ಸಾಮಾಜಿಕ ಶೈಕ್ಷಣಿಕವಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿರಿ. ದೇಶದ್ರೋಹ/ನಕ್ಸಲೈಟ್/ಭಯೋತ್ಪಾದನೆ ವಿರುದ್ಧ ಸಿಡಿದೆದ್ದು ಸಂಸ್ಕೃತಿ ಪರಂಪರೆ ರಾಷ್ಟ್ರಾಭಿಮಾನ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ನೀವೂ ಬದುಕಿರಿ, ಇತರರನ್ನೂ ಬದುಕಲು ಬಿಡಿ! ವಿದ್ಯಾರ್ಥಿ ಜೀವನ ಸರಿಯಾಗಿದ್ದರೆ ಮಾತ್ರ ‘ಗುರಿ’ ತಲುಪಿ ಪದವಿ ಹುದ್ದೆ ಕೀರ್ತಿ ಹಣ ಉನ್ನತ ಸ್ಥಾನಮಾನ ಬಾಳಸಂಗಾತಿ, ಎಲ್ಲವೂ ಹುಡುಕಿಕೊಂಡು ಬರುತ್ತವೆ! ಅದು ಸರಿಯಿಲ್ಲವಾದರೆ ವೈಸಾ-ವರ್ಸಾ! ಆಯ್ಕೆ ನಿಮ್ಮದು?

ಕುಮಾರಕವಿ ಬಿ.ಎನ್.ನಟರಾಜ್ [9036976471] #29,3ನೇಮೇನ್,3ನೇಕ್ರಾಸ್,ಕಲ್ಯಾಣನಗರ,ಮೂಡಲಪಾಳ್ಯ
ನಾಗರಬಾವಿ, ಬೆಂಗಳೂರು-560072

By admin