ಮೈಸೂರು-16 ಆಧುನಿಕಹಾಗೂ ಅವೈಜ್ಞಾನಿಕ ಜೀವನ ಶೈಲಿಗೆ ಮೊರೆ ಹೋಗಿ ಅನಾರೋಗ್ಯಕರವಾದ ಜೀವನವನ್ನು ನಡೆಸುವಂತಾಗಿದೆ ಎಂದು ಖ್ಯಾತ ಮಧುಮೇಹ ತಜ್ಞ ವೈದ್ಯ ಡಾ. ಎ.ಆರ್. ರೇಣುಕಾಪ್ರಸಾದ್ ಅಭಿಪ್ರಾಯಪಟ್ಟರು.

ಅವರು ಏಪ್ರಿಲ್ 16 ರ ಬೆಳಗ್ಗೆ ಅರವಿಂದ ನಗರ ದ ಶ್ರೀ ಮಲೆ ಮಹದೇಶ್ವರ ವೃದ್ಧರ ಆರೈಕೆ ಕೇಂದ್ರ ಚಾರಿಟೇಬಲ್ ಫೌಂಡೇಶನ್ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯನಿಗೆ ಆರೋಗ್ಯವೇ ತುಂಬಾ ಮುಖ್ಯ. ಆರೋಗ್ಯವಿಲ್ಲದೇ ಮನುಷ್ಯ ಏನೇ ಸಂಪಾದನೆ ಮಾಡಿದರೂ ವ್ಯರ್ಥ. ಸಂಪಾದನೆ ಮಾಡಿದ ಸವಲತ್ತುಗಳನ್ನು ಅನುವಭವಿಸಲು ಆರೋಗ್ಯವಿರಬೇಕು ಎಂದು ಅವರು ಕಿವಿಮಾತು ಹೇಳಿದರು. ಮಧುಮೇಹಕ್ಕೆ ಸಂಬಂಧಪಟ್ಟ ಕಾಯಿಲೆಗಳಿಂದ ಹೆಚ್ಚಿನ ಜನರು

ಓಂ.ಶ್ರೀ. ಮಲೆಮಹದೇಶ್ವರ ವೃದ್ಧರ ಆರೈಕೆ ಕೇಂದ್ರ (ರಿ) ಅರವಿಂದನಗರ ಮೈಸೂರು ಇವರ ಸಹಯೋಗದೊಂದಿಗೆ ಹನುಮ ಜಯಂತಿ ಪ್ರಯುಕ್ತ ನಾಡಿ ಮಿಡಿತ,ಪರೀಕ್ಷೆ.ರಕ್ತದೊತ್ತಡ,ಮಧುಮೇಹ ಹಾಗೂ ಹೃದಯ್ಕಕೆ ಸಂಬಂದಪಟ್ಟಂತೆ. ಇ.ಸಿ.ಜಿ. ಮತ್ತು ಎಕೋ ಟೆಸ್ಟ್ (ವೈದ್ಯರ ಸಲಹೇ ಮೇರೆಗೆ) ಮತ್ತು ಇ.ಎನ್.ಟಿ ಪಂಚೇದ್ರೀಯಗಳ ತಪಾಸಣಾ ಶಿಬಿರವನ್ನು ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಯಿತು.

ಈ ಸಂದರ್ಭದಲ್ಲಿ ಡಾಕ್ಟರ್ ಡಾ.ನವ್ಯ ಡಾ.ಸ್ವರೂಪ್,ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯ ಮಾರ್ಕೆಟಿಂಗ್ ಮ್ಯಾನೇಜರ್ ರವಿ. ಎನ್, ಸುವರ್ಣ ಬೆಳಕು ಫೌಂಡೇಷನ್ ಅಧ್ಯಕ್ಷ ಮಹೇಶ್ ನಾಯಕ್, ರಾಷ್ಟ್ರೀಯ ಹಿಂದೂ ಸಮಿತಿ.ವಿಕಾಸ್ ಶಾಸ್ಟ್ರಿ, ಹಿಮಾಲಯಫೌಂಡೇಷನ್.ಎನ್,ಅನಂತ್,ಹರ್ಷವರ್ಧನ್,ತೇಜಸ್,ಪ್ರದೀಪ್,ಚಿದಂಬರಂ,ಗಿರೀಶ್ ಯುವ ಮುಖಂಡರು, ಹಾಜರಿದ್ದರು